ಮಡಚುವ ಸೈಕಲ್ ನೋಡಿದ್ರಾ? ಏನಿದರ ವೈಶಿಷ್ಟ್ಯ?

ಜನಸಾಮಾನ್ಯರ ಜೀವನದಲ್ಲಿ ಸೈಕಲ್ ಅವಿಭಾಜ್ಯ ಅಂಗ. ಇನ್ನು ಆಟೋ ಜಗತ್ತಿನಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬರುತ್ತಿರುವಂತೆಯೇ ನೂತನ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ.

ಇದರಿಂದ ಸೈಕಲ್ ಕೂಡಾ ಹೊರತಾಗಿಲ್ಲ. ಆಟೋ ಜಗತ್ತಿನಲ್ಲಿ ಎಂಜಿನಿಯರ್‌ಗಳು ಹಲವು ನೂತನ ಸಂಶೋಧನೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ. ಅಂತಹ ಪ್ರಯತ್ನದ ಫಲವೇ ಮಡಚುವ ಅಥವಾ ಫೋಲ್ಡಿಂಗ್ ಸೈಕಲ್. ಡುಬೈಕ್ ಫೋಲ್ಡಿಂಗ್ ಬೈಸಿಕಲ್ ಅಭಿವೃದ್ಧಿಪಡಿಸಿದೆ.

ಹೆಸರಿನಲ್ಲೇ ಸೂಚಿಸಿರುವಂತೆಯೇ ಈ ಸೈಕಲನ್ನು ಮಡಚಬಹುದಾಗಿದ್ದರಿಂದ ಮಾಲಿಕ ಬಯಸಿದ ಹಾಗೆ ಎಲ್ಲಿಗೆ ಬೇಕಾದರೂ ಹೊತ್ತೊಯ್ಯಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಫೋಟೊ ಫೀಚರ್ ಮೂಲಕ ಪಡೆಯೋಣ ಬನ್ನಿ...

Dubike Folding Bicycle

Dubike Folding Bicycle

ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ಸೈಕಲ್ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ಕಂಪನಿ. ಯಾಕೆಂದರೆ ಇದು ಸ್ಥಳಾವಕಾಶದ ಕೊರತೆಯನ್ನು ನೀಗಿಸುತ್ತದೆ.

Dubike Folding Bicycle

Dubike Folding Bicycle

ನಿಮ್ಮ ಅಗತ್ಯಕ್ಕಾನುಸಾರವಾಗಿ ಸೈಕಲನ್ನು ಮಡಚಿಕೊಳ್ಳಬಹುದಾಗಿದೆ. ಮಡಚಿದ ಸೈಕಲನ್ನು ಅತಿ ಬೇಗನೇ ಸೈಕಲ್ ರೂಪಕ್ಕೆ ತರಬಹುದು.

Dubike Folding Bicycle

Dubike Folding Bicycle

ಪ್ರವಾಸದ ವೇಳೆಯಲ್ಲೂ ಸೈಕಲ್ ರೈಡಿಂಗ್ ಇಷ್ಟಪಡುವವರಿಗೆ ಇದು ತುಂಬಾ ಉಪಯುಕ್ತ ಎನಿಸಲಿದೆ. ಯಾಕೆಂದರೆ ದೂರ ಪ್ರಯಾಣದ ವೇಳೆ ಕಾರಿನ ಢಿಕ್ಕಿಯಲ್ಲಿ ಮಡಚಿಕೊಂಡು ಇಡಬಹುದಾಗಿದೆ.

Dubike Folding Bicycle

Dubike Folding Bicycle

ಗ್ರಾಹಕರ ಆರಾಮದಾಯಕ ಪಯಣಕ್ಕಾಗಿ ಶಾಕ್ ಅಬ್ಸಾರ್ಬರ್ ಆಳವಡಿಸಲಾಗಿದೆ. ಇದು ನಿಶಬ್ದ ರೈಡಿಂಗ್ ವಿನ್ಯಾಸವನ್ನು ಪಡೆದುಕೊಂಡಿದೆ. ಇದರಿಂದ ಶಬ್ದ ಮಾಲಿನ್ಯ ತಪ್ಪಿಸಬಹುದು.

Dubike Folding Bicycle

Dubike Folding Bicycle

ಅಂದ ಹಾಗೆ ಡುಬೈಕ್ ಇನ್ನು ಅಭಿವೃದ್ಧಿ ಹಂತದಲ್ಲಿದ್ದು, ಮಾರುಕಟ್ಟೆ ಪ್ರವೇಶಿಸಲಿಲ್ಲ. ಹಾಗಿದ್ದರೂ ಸದ್ಯದಲ್ಲೇ ಮಾರುಕಟ್ಟೆ ಅಪ್ಪಳಿಸುವ ನಿರೀಕ್ಷೆಯಿದೆ.

Dubike Folding Bicycle

Dubike Folding Bicycle

ನಿಮ್ಮ ಬಳಿಯಿರುವ ಹಳೆಯ ಸೈಕಲ್‌ಗಳನ್ನು ಇಡಲು ಸ್ಥಳಾವಕಾಶದ ಕೊರತೆಯಿದ್ದರೆ ಈ ಡುಬೈಕ್ ಉತ್ತಮ ಪರಿಹಾರವಾಗಲಿದೆ.

Dubike Folding Bicycle

Dubike Folding Bicycle

ಇದೀಗ ಮಡಚುವ ಸೈಕಲ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Wednesday, May 22, 2013, 9:42 [IST]
English summary
For those who are increasingly becoming eco-conscious there are a number of different areas in which they are trying to leave a smaller eco-footprint. One great new product that has been discovered is the Dubike Folding Bicycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+