ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಮೋನೊವ್ಹೀಲ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಅಮೆರಿಕಾದ ಡ್ಯೂಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡವು ತಮ್ಮ ಪ್ರಾಜೆಕ್ಟ್‌ನ ಭಾಗವಾಗಿ ವ್ಹೀಲ್‌ನಿಂದ ಚಾಲನೆಯಾಗುವ ಬೈಕ್ ಅನ್ನು ಅಭಿವೃದ್ಧಿಪಡಿಸಿದೆ. ಈ ಬೈಕ್ ಒಂದು ಚಕ್ರದಲ್ಲಿ ಚಲಿಸುವ ಕಾರಣ, ಇದಕ್ಕೆ ಮೋನೊವ್ಹೀಲ್ ಇವಿ 360 ಎಂಬ ಹೆಸರನ್ನಿಡಲಾಗಿದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಮೋನೊವ್ಹೀಲ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಈ ಮೋನೊವ್ಹೀಲ್ ಇದುವರೆಗಿನ ಅತಿ ವೇಗದ ಎಲೆಕ್ಟ್ರಿಕ್ ಮೋನೊವ್ಹೀಲ್ ಆಗಿದೆ. ಈ ಮೋನೊವ್ಹೀಲ್‌ನ ಗರಿಷ್ಠ ವೇಗ ಪ್ರತಿ ಗಂಟೆಗೆ 70 ಕಿ.ಮೀಗಳಾಗಿದೆ. ವೇಗದ ಕಾರಣಕ್ಕಾಗಿ, ಈ ಮೋನೊವ್ಹೀಲ್ ಹೆಸರನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿಸಲಾಗಿದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಮೋನೊವ್ಹೀಲ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಕರೋನಾ ವೈರಸ್ ಕಾರಣದಿಂದಾಗಿ ಈ ಮೋನೊವ್ಹೀಲ್ ಅನ್ನು ಅಭಿವೃದ್ಧಿಪಡಿಸಲು ಹೆಚ್ಚು ಸಮಯ ಹಿಡಿಯಿತು ಎಂದು ಈ ತಂಡ ಹೇಳಿದೆ. ಪರಿಸ್ಥಿತಿ ಸಹಜ ಮರಳಿದ ನಂತರ, ಈ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಲಾಗುವುದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಮೋನೊವ್ಹೀಲ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಯೋಜನೆ ಪೂರ್ಣಗೊಂಡ ನಂತರ, ಈ ಮೋನೊವ್ಹೀಲ್ ಅನ್ನು ಕಮರ್ಷಿಯಲ್ ಆಗಿ ನಿರ್ಮಿಸಲಾಗುತ್ತದೆ. ಮೋನೊವ್ಹೀಲ್ 360ಯನ್ನು ಡ್ಯೂಕ್ ವಿಶ್ವವಿದ್ಯಾಲಯದ ಕೋ-ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಿ, ನಿರ್ಮಿಸಲಾಗಿದೆ.

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಮೋನೊವ್ಹೀಲ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಈ ಮೋನೊವ್ಹೀಲ್‌ನಲ್ಲಿ ಬಳಸಲಾಗುವ ಬಿಡಿಭಾಗ ಹಾಗೂ ಎಕ್ವಿಪ್‌ಮೆಂಟ್‌ಗಳನ್ನು 3ಡಿ ತಂತ್ರಜ್ಞಾನದಿಂದ ತಯಾರಿಸಲಾಗುತ್ತದೆ. ಮೋನೊವ್ಹೀಲ್‌ನಲ್ಲಿ 1.58 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಮೋನೊವ್ಹೀಲ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಇದರಲ್ಲಿರುವ ಎಲೆಕ್ಟ್ರಿಕ್ ಮೋಟರ್ 23 ಕಿ.ವ್ಯಾ ಪವರ್ ಉತ್ಪಾದಿಸುತ್ತದೆ. ಈ ಮೋನೊವ್ಹೀಲ್ ಅನ್ನು ಗಂಟೆಗೆ 112 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಈ ವೇಗದಲ್ಲಿ ಚಲಿಸಲು ಅನೇಕ ಪ್ರಯೋಗಗಳನ್ನು ಮಾಡಬೇಕಾಗಿದೆ. ಈ ಮೋನೊವ್ಹೀಲ್‌ನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ಮೋನೊವ್ಹೀಲ್ 14 ಕಿ.ಮೀಗಳವರೆಗೆ ಚಲಿಸುತ್ತದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಮೋನೊವ್ಹೀಲ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಈ ಮೋನೊವ್ಹೀಲ್ ಅನ್ನು ಕಂಟ್ರೋಲ್ ಮಾಡಲು ಬೈಕಿನಲ್ಲಿರುವಂತಹ ಹ್ಯಾಂಡಲ್ ಅಳವಡಿಸಲಾಗಿದೆ. ಜೊತೆಗೆ ಡಿಸ್ಕ್ ಬ್ರೇಕ್ ಸಹ ನೀಡಲಾಗಿದೆ. ಈ ರೀತಿಯ ಮೋನೊವ್ಹೀಲ್ ಮೆನ್ ಇನ್ ಬ್ಲ್ಯಾಕ್ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಲ್ಲಿ ಕಾಣಿಸಿಕೊಂಡಿತ್ತು.

Most Read Articles

Kannada
English summary
Duke University students develops worlds fastest electric Monowheel EV360. Read in Kannada.
Story first published: Thursday, June 25, 2020, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X