ನವ ವಿವಾಹಿತ ಕಾರ್ತಿಕ್ ಗೌಡಗೆ ಡಿವಿಎಸ್ ಕೋಟಿ ಬೆಲೆಬಾಳುವ ಉಡುಗೊರೆ
ಉದ್ಯಮಿ ಕೂಡಕಂಡಿ ನಾಣಯ್ಯ ಅವರ ಪುತ್ರಿ ರಾಜಶ್ರೀ ಅವರನ್ನು ವರಿಸಿರುವ ಪುತ್ರ ಕಾರ್ತಿಕ್ ಗೌಡ ಅವರಿಗೆ ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಇತ್ತೀಚೆಗಷ್ಟೇ ಕೋಟಿ ಬೆಲೆಬಾಳುವ ಆಡಿ ಎ6 ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ನಟಿ ಮೈತ್ರಿಯಾ ಗೌಡ ಮೇಲಿನ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ಸಾಕಾಷ್ಟು ವಿವಾದ ಸೃಷ್ಟಿಸಿದ ಬಳಿಕ ಕಾರ್ತಿಕ್ ಅವರು ರಾಜಶ್ರೀ ಅವರನ್ನು ವರಿಸಿರುವುದು ಹೆಚ್ಚಿನ ಸುದ್ದಿಗೆ ಗ್ರಾಸವಾಗಿತ್ತು. ಪ್ರಸ್ತುತ ನೀಡಿರುವ ಆಡಿ ಎ6 ಕಾರು 1.25 ಕೋಟಿ ರು.ಗಳಷ್ಟು ಬೆಲೆ ಬಾಳುತ್ತದೆ.

ನಿಮ್ಮ ಮಾಹಿತಿಗಾಗಿ, ಆಡಿ ಎ6 ತಲಾ ಮೂರು ಮಾದರಿ ಹಾಗೂ ಎಂಜಿನ್ ಗಳಲ್ಲಿ, ಎರಡು ಇಂಧನ ಆಯ್ಕೆ ಹಾಗೂ ಟ್ರಾನ್ಸ್‌ಮಿಷನ್ ಗಳಲ್ಲಿ ಲಭ್ಯವಾಗಲಿದೆ.

ಎಂಜಿನ್ ಮಾಹಿತಿ
- 1798 ಸಿಸಿ ಪೆಟ್ರೋಲ್, 190 ಅಶ್ವಶಕ್ತಿ
- 1968 ಸಿಸಿ, ಡೀಸೆಲ್, 190 ಅಶ್ವಶಕ್ತಿ
- 3993 ಸಿಸಿ, ಪೆಟ್ರೋಲ್, 420 ಅಶ್ವಶಕ್ತಿ
ಗೇರ್ ಬಾಕ್ಸ್
7 ಸ್ಪೀಡ್ ಆಟೋಮ್ಯಾಟಿಕ್, ಸಿವಿಟಿ ಸ್ಪೀಡ್ ಆಟೋಮ್ಯಾಟಿಕ್

ಈ ಪೈಕಿ ಟಾಪ್ ಆಡಿ ಎ6 ಮ್ಯಾಟ್ರಿಕ್ ಕಳೆದ ಆಗಸ್ಟ್ ತಿಂಗಳಿನಲ್ಲಷ್ಟೇ ಮಾರುಕಟ್ಟೆ ಪ್ರವೇಶಿಸಿತ್ತು. ಇದರಲ್ಲಿ ಮ್ಯಾಟ್ರಿಕ್ ಎಲ್ ಇಡಿ ಹೆಡ್ ಲೈಟ್ ಪ್ರಮುಖ ಆಖರ್ಷಣೆಯಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಆಡಿ ಎ6 35 ಟಿಡಿಐ: 44.10 ಲಕ್ಷ ರು.
ಆಡಿ ಎ6 35 ಟಿಎಫ್‌ಎಸ್‌ಐ: 45.28 ಲಕ್ಷ ರು.
ಆಡಿ ಎ6 ಎಸ್6 4.0 ಟಿಎಫ್‌ಎಸ್‌ಐ: 95.25 ಲಕ್ಷ ರು.

ಭಾರತ ಮಾರುಕಟ್ಟೆಯಲ್ಲಿ ಆಡಿ ಎ6 ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಇ ಕ್ಲಾಸ್, ಬಿಎಂಡಬ್ಲ್ಯು 5 ಸಿರೀಸ್ ಮತ್ತು ಜಾಗ್ವಾರ್ ಎಕ್ಸ್ ಇ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.


Click it and Unblock the Notifications