Just In
- 47 min ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 1 hr ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 2 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 3 hrs ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Movies
ಜನ್ನತ್ ಟು ಮನ್ನತ್: ಬಾಲಿವುಡ್ ಬಾದ್ ಶಾ ಶಾರುಖ್ ಬಳಿಯಿರುವ 6 ಐಷಾರಾಮಿ ಮನೆಗಳಿವು!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾರಿಗೆ ತಾಗಿದ ರಿಕ್ಷಾ: ತಪ್ಪೊಪ್ಪಿಕೊಂಡರು ಚಾಲಕನನ್ನು ಮನಬಂದಂತೆ ಥಳಿಸಿ ಜೈಲು ಸೇರಿದ ಮಹಿಳೆ
ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹಿಳೆಯೊಬ್ಬರ ಕಾರನ್ನು ತಾಗಿಸಿಕೊಂಡುಹೋದ ಇ-ರಿಕ್ಷಾ ಚಾಲಕನನ್ನು ಮಹಿಳೆ ಅಮಾನುಷವಾಗಿ ಥಳಿಸಿದ್ದಾರೆ. ಚಾಲಕನ ಷರ್ಟ್ ಹಿಡಿದು ಎಳೆದಾಡಿ ಒಂದೇ ಸಮನೆ ಆತನ ಕೆನ್ನೆಗೆ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆಯು ಕಳೆದ ಶನಿವಾರ ನೋಯ್ಡಾದ 2ನೇ ಹಂತದ ಸೆಕ್ಟರ್ 110ರ ಮಾರುಕಟ್ಟೆ ಸಮೀಪ ನಡೆದಿದೆ. ಘಟನೆಯಲ್ಲಿ ಹಲ್ಲೆ ಮಾಡಿದ ಮಹಿಳೆಯನ್ನು ಆಗ್ರಾ ಮೂಲದ ನೋಯ್ಡಾ ನಿವಾಸಿ ಕಿರಣ್ ಸಿಂಗ್ ಎಂದು ಗುರುತಿಸಲಾಗಿದೆ. ಇಕ್ಕಿಟ್ಟಿನ ರಸ್ತೆಯಲ್ಲಿ ಇ-ರಿಕ್ಷಾ ಚಾಲಕ ಮಹಿಳೆಯ ಕಾರು ನಿಂತಿದ್ದರೂ ವಾಹನ ಮುಂದೆ ಹೋಗುವಷ್ಟು ಸ್ಥಳವಿದೆ ಎಂದು ಭಾವಿಸಿ ಮುಂದೆ ಸಾಗಿದ್ದಾನೆ.

ಈ ವೇಳೆ ರಿಕ್ಷಾ ಕಾರಿಗೆ ತಾಗಿ ವಿರೂಪಗೊಂಡಿದೆ (ಸ್ಕ್ರಾಚ್). ಕೂಡಲೇ ಕುಪಿತಗೊಂಡ ಮಹಿಳೆ ರಿಕ್ಷಾ ಬಳಿ ತೆರಳಿ ಚಾಲಕನ ಷರ್ಟ್ ಹಿಡಿದು ಎಳೆದುಕೊಂಡು ಬಂದಿದ್ದಾಳೆ. ರಸ್ತೆಯಲ್ಲೇ ಕಪಾಳಮೋಕ್ಷ ಮಾಡುತ್ತಾ ಕೆಟ್ಟ ಪದಗಳಲ್ಲಿ ನಿಂಧಿಸಿ ಆತನನ್ನು ಮನಬಂದಂತೆ ಥಳಿಸಿದ್ದಾಳೆ. ಸುಮಾರು 90 ಸೆಕೆಂಡುಗಳ ವಿಡಿಯೋದಲ್ಲಿ ಮಹಿಳೆ ಇ-ರಿಕ್ಷಾ ಚಾಲಕನಿಗೆ 17 ಬಾರಿ ಕೆನ್ನೆಗೆ ಬಾರಿಸಿದ್ದಾಳೆ.

ವೈರಲ್ ವೀಡಿಯೊದಲ್ಲಿ, ಮಹಿಳೆ ಇ-ರಿಕ್ಷಾ ಚಾಲಕನ ಕಾಲರ್ ಹಿಡಿದುಕೊಂಡು ತನ್ನ ಕಾರಿನ ಬಳಿ ಎಳೆದೊಯ್ದು ಕಾರಿಗೆ ಆಗಿರುವ ಸ್ಕ್ರಾಚ್ ಅನ್ನು ತೋರಿಸುತ್ತಿರುವುದನ್ನು ಕಾಣಬಹುದು. "ಇದು ನಿಮ್ಮಪ್ಪನ ಕಾರೇ?" ಎಂದು ನಿಂದಿಸುತ್ತಾ ಎಡೆಬಿಡದೆ ಕಪಾಳಕ್ಕೆ ಬಾರಿಸಿದ್ದಾಳೆ. ಈ ವಾಗ್ವಾದದ ಸಂದರ್ಭದಲ್ಲಿ ಮಹಿಳೆ ರಿಕ್ಷಾ ಚಾಲಕನ ಅಂಗಿಯನ್ನು ಹರಿದು ಹಾಕುವ ಪ್ರಯತ್ನವನ್ನೂ ಮಾಡಿದ್ದಾಳೆ.

ವಿಡಿಯೋ ವ್ಯಾಪಕವಾಗಿ ಗಮನ ಸೆಳೆದಿದ್ದು, ಮಹಿಳೆ ಎಷ್ಟೇ ಹೊಡೆದರೂ ಸುಮ್ಮನಿದ್ದ ಚಾಲಕ ಆಕೆಯ ಮೇಲೆ ಯಾವುದೇ ನಿಂಧನೆ ಅಥವಾ ಹಲ್ಲೆಗೆ ಮುಂದಾಗಿಲ್ಲ. ಆತನ ತಾಳ್ಮೆ ವರ್ತನೆಯು ನೆಟ್ಟಿಗರನ್ನು ಆತನ ಪರ ನಿಲ್ಲುವಂತೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಹಲವರು ಮಹಿಳೆಯನ್ನು ಟೀಕಿಸುತ್ತಿದ್ದು, ಆಕೆಯ ವಿರುದ್ಧ ಧನಿ ಎತ್ತಿದ್ದಾರೆ.

ರಿಕ್ಷಾ ಚಾಲಕನ ಮೇಲೆ ಕೈ ಹಾಕಿದ್ದಲ್ಲದೇ ಆತನ ಇಚ್ಛೆ ಇಲ್ಲದೆ ಜೇಬಿನಿಂದ ಹಣವನ್ನೂ ತೆಗೆದಿದ್ದಾಳೆ. ನಡುರಸ್ತೆಯಲ್ಲಿ ಹಲ್ಲೆ ಮಾಡಿರುವುದೇ ಅಪರಾಧ ಅದರಲ್ಲೂ ಆತನ ಪ್ರಮೇಯವಿಲ್ಲದೇ ಹಣ ಕಿತ್ತುಕೊಳ್ಳುವ ಅಧಿಕಾರ ಯಾರು ಕೊಟ್ಟರು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜನರು ವಿಡಿಯೋವನ್ನು ನೋಯ್ಡಾ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಸಂತ್ರಸ್ತನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯನ್ನು ಠಾಣೆಗೆ ಕರೆಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆಯ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ನಿರ್ಧಯವಾಗಿ ಹಲ್ಲೆ
ಪ್ರಸ್ತುತ ಕಾನೂನು ಮಹಿಳೆಯರ ಕಡೆ ಬಲವಾಗಿ ನಿಲ್ಲುತ್ತಿದ್ದು, ದೂರು ನೀಡಿದರೆ ಸಾಕು ಪುರುಷರ ವಿರುದ್ಧ ಕಠಿಣ ಶಿಕ್ಷೆಯಾಗುತ್ತಿದೆ. ಇದೇ ಕಾರಣಕ್ಕೆ ಯುವಕರು ತಮ್ಮ ತಪ್ಪಿಲ್ಲದಿದ್ದರೂ ಯುವತಿಯರು ಹಲ್ಲೆ ಮಾಡಿದ್ರೂ ಸುಮ್ಮನಿದ್ದ ಪ್ರಸಂಗಗಳು ಈ ಹಿಂದೆಯೂ ಹಲವು ನಡೆದಿವೆ. ನಡು ರಸ್ತೆಗಳಲ್ಲಿ ಮಹಿಳೆಯರು ಯುವಕರನ್ನು ಮನಬಂದಂತೆ ಥಳಿಸಿರುವ ಉದಾಹರನೆಗಳೂ ಇವೆ.

ಒಂದು ವೇಳೆ ಯುವತಿಯರ ಮೇಲೆ ಕೈ ಮಾಡಿದರೆ ಜೈಲು ಸೇರುವುದು ಖಚಿತ. ಈ ಹಿಂದೆಯೂ ಡೆಲಿವರಿ ಬಾಯ್, ಟ್ಯಾಕ್ಸಿ ಡ್ರೈವರ್, ಆಟೋ ಚಾಲಕರು ಹೀಗೆ ಹಲವರ ಮೇಲೆ ಮಹಿಳೆಯರು ನಡು ರಸ್ತೆಯಲ್ಲಿ ಹಲ್ಲೆ ಮಾಡಿ ನಿಂಧಿಸಿರುವ ಉದಾಹರಣೆಗಳಿವೆ. ಈ ಎಲ್ಲಾ ಪ್ರಕರಣಗಳಲ್ಲೂ ಮಹಿಳೆಯರೇ ಮೇಲೆ ಬಿದ್ದು ಹಲ್ಲೆ ಮಾಡಿದ್ದಾರೆ.

ದೂರು ನೀಡಿ
ಮಹಿಳೆಯರಿಗೆ ಇಂತಹ ಪರಿಸ್ಥಿತಿಗಳು ಎದುರಾದಲ್ಲಿ ಮೊದಲು ದೂರು ನೀಡಬೇಕು. ಇಲ್ಲವೇ ತಾಳ್ಮೆಯಿಂದ ವ್ಯವಹರಿಸಿ ಆತನಿಂದ ಪರಿಹಾರವನ್ನು ಕಂಡುಕೊಳ್ಳಬೇಕು. ಇದೆಲ್ಲವನ್ನು ಬಿಟ್ಟು ಈ ರೀತಿ ಹಲ್ಲೆ ಮಾಡಿದ್ರೆ ಕಾನೂನು ಎಲ್ಲರಿಗೂ ಒಂದೇ ಎಂಬುದು ತಿಳಿದುಬರುವಂತೆ ಮಾಡುತ್ತಾರೆ ಪೊಲೀಸರು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಅಪರಿಚಿತ ಪುರುಷನೊಬ್ಬನ ಜೊತೆಗೆ ವಾಗ್ವಾದವಾದ ಪರಿಸ್ಥಿತಿಗಳಲ್ಲಿ ಸಮಾಜ ನಮ್ಮ ಪರ ನಿಲ್ಲುತ್ತದೆ ಎಂಬ ಕೆಲವರು ಮಹಿಳೆಯರ ಚಿಂತನೆಯು ಸಂಪೂರ್ಣ ಹಳೆಯದ್ದಾಗಿದೆ. ಜನರು ಕೂಡ ಆಧಾರಗಳಿದ್ದರೇ ಸತ್ಯಕ್ಕೆ ತಲೆ ಬಾಗುತ್ತಾರೆ ಎಂಬುದನ್ನು ಇದೀಗ ವೈರಲ್ ಆಗಿರುವ ವಿಡಿಯೋ ಸಾಭೀತುಪಡಿಸಿದೆ.