E85 ಇಂಧನ ಅಗ್ಗ ಅಂತ ಹಾಕಬೇಡಿ: ನಿಮ್ಮ ಕಾರಿನ ಇಂಜಿನ್ ಹಾಳಾಗಬಹುದು, ಎಚ್ಚರ!

ದೇಶದಾದ್ಯಂತ E85 ಫ್ಯುಯೆಲ್ ಪಂಪ್‌ಗಳು ವಿಸ್ತರಣೆಯಾಗುತ್ತಿದ್ದು, ವಾಹನ ಸವಾರರಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೀತಿದೆ. ದೆಹಲಿಯಲ್ಲಿ ಅಧಿಕ ಎಥನಾಲ್ ಮಿಶ್ರಿತ ಈ ಇಂಧನದ ಬೆಲೆ ಲೀಟರ್‌ಗೆ ₹82.12 ಇದ್ದರೆ, ಮುಂಬೈನಲ್ಲಿ ₹91.18 ಇದೆ. ಅಂದರೆ, ಈ ಎರಡೂ ಮೆಟ್ರೋ ನಗರಗಳ ನಡುವೆ ಲೀಟರ್‌ಗೆ ಸುಮಾರು 9 ರೂಪಾಯಿ ವ್ಯತ್ಯಾಸವಿದೆ. ಪೆಟ್ರೋಲ್‌ಗೆ ಹೋಲಿಸಿದರೆ E85 ದರ ಕಡಿಮೆಯಿದ್ದರೂ, ಪ್ರಮಾಣೀಕೃತ ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ ಮಾತ್ರ ಇದನ್ನು ಸುರಕ್ಷಿತವಾಗಿ ಬಳಸಲು ಸಾಧ್ಯ.

E20 ಪೆಟ್ರೋಲ್‌ಗೆ ತಕ್ಕಂತೆ ತಯಾರಿಸಿದ ಸಾಮಾನ್ಯ ಕಾರುಗಳಿಗೆ ಹೆಚ್ಚು ಎಥನಾಲ್ ಇರುವ ಇಂಧನ ಹಾಕಿದರೆ ಇಂಜಿನ್ ಸಂಪೂರ್ಣ ಹಾಳಾಗುವ ಅಪಾಯವಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಇಂತಹ ಇಂಧನ ಬೆಂಬಲಿಸುವ ವಾಹನಗಳ ಸಂಖ್ಯೆ ಬೆರಳಣಿಕೆಯಷ್ಟೇ ಇದೆ. ಇದರಲ್ಲಿ ಮಾರುತಿ ಸುಜುಕಿ ವ್ಯಾಗನ್‌ಆರ್ ಬಯೋಫ್ಲೆಕ್ಸ್ (Maruti Suzuki WagonR Bioflex) ಮತ್ತು ಹೀರೋ ಸ್ಪೆಂಡರ್ ಪ್ಲಸ್ ಫ್ಲೆಕ್ಸ್ ಫ್ಯುಯೆಲ್ (Hero Splendor Plus Flex Fuel) ಪ್ರಮುಖವಾಗಿವೆ. ಮತ್ತೊಂದು ಮುಖ್ಯ ವಿಷಯವೆಂದರೆ, ಪೆಟ್ರೋಲ್‌ಗೆ ಹೋಲಿಸಿದರೆ ಎಥನಾಲ್‌ನಲ್ಲಿ ಎನರ್ಜಿ ಡೆನ್ಸಿಟಿ ಕಡಿಮೆ. ಇದರಿಂದ ಮೈಲೇಜ್ ಶೇಕಡಾ 20ರಷ್ಟು ಕುಸಿಯುತ್ತದೆ. ಹಾಗಾಗಿ ದಿನನಿತ್ಯದ ಚಾಲಕರಿಗೆ ಕಿಲೋಮೀಟರ್‌ಗೆ ಸಿಗುವ ಉಳಿತಾಯ ಅಷ್ಟೇನೂ ದೊಡ್ಡದಾಗಿರುವುದಿಲ್ಲ.

E85 Fuel Risks: Why You Should Avoid It for Non-Flex-Fuel Vehicles in India 2026

E85 ಪಂಪ್‌ಗಳು ಮತ್ತು ಅನಧಿಕೃತ ಫ್ಲೆಕ್ಸ್-ಫ್ಯುಯೆಲ್ ಮಾರ್ಪಾಡು

ಇಂಧನದ ಬೆಲೆ ಕಡಿಮೆ ಎಂಬ ಕಾರಣಕ್ಕೆ ಕೆಲ ವಾಹನ ಪ್ರಿಯರು ಆಫ್ಟರ್‌ಮಾರ್ಕೆಟ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ (ECU) ರಿಮ್ಯಾಪಿಂಗ್ ಮಾಡಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಸಾಮಾನ್ಯ ವಾಹನಗಳನ್ನು E85 ಇಂಧನಕ್ಕೆ ತಕ್ಕಂತೆ ಬಲವಂತವಾಗಿ ಆಲ್ಟರ್ ಮಾಡುವುದು ಕಾನೂನುಬಾಹಿರ ಅಷ್ಟೇ ಅಲ್ಲ, ಜೇಬಿಗೂ ದೊಡ್ಡ ಕನ್ನ ಹಾಕಬಹುದು. ಫ್ಯುಯೆಲ್ ಸಿಸ್ಟಮ್ ಆಲ್ಟರ್ ಮಾಡುವುದು ಆರ್‌ಟಿಒ (RTO) ನಿಯಮಗಳಿಗೆ ವಿರುದ್ಧವಾಗಿದ್ದು, ಕಂಪನಿ ನೀಡುವ ವಾರಂಟಿಯೂ ರದ್ದಾಗುತ್ತದೆ. ಇಷ್ಟೇ ಅಲ್ಲ, ಅನಧಿಕೃತ ಮಾರ್ಪಾಡಿನಿಂದ ವಾಹನಕ್ಕೆ ಹಾನಿಯಾದರೆ ಇನ್ಶೂರೆನ್ಸ್ ಕಂಪನಿಗಳು ಕ್ಲೈಮ್‌ ತಿರಸ್ಕರಿಸುವ ಪೂರ್ಣ ಹಕ್ಕನ್ನು ಹೊಂದಿರುತ್ತವೆ.

ನಗರ E85 ಲೀಟರ್ ಬೆಲೆ E20 ಪೆಟ್ರೋಲ್ ಲೀಟರ್ ಬೆಲೆ
ದೆಹಲಿ ₹82.12 ₹102.12
ಮುಂಬೈ ₹91.18 ₹111.33

E85 ಇಂಧನ ಬಳಸುವ ಮುನ್ನ ವಾಹನ ಸವಾರರು ಗಮನಿಸಬೇಕಾದ ಸಂಗತಿಗಳು

ಶೀಘ್ರದಲ್ಲೇ E85 ಇಂಧನ ಸಿಗಲಿರುವ ಬೆಂಗಳೂರು ಹಾಗೂ ಹೈದರಾಬಾದ್‌ ಮುಂತಾದ ನಗರಗಳ ವಾಹನ ಸವಾರರು ಫ್ಯುಯೆಲ್ ಪಂಪ್‌ಗಳನ್ನು ಗಮನಿಸಿ ಇಂಧನ ತುಂಬಿಸಬೇಕು. ಹೆಚ್ಚು ಎಥನಾಲ್ ಹೊಂದಿರುವ ಇಂಧನವು ತೇವಾಂಶವನ್ನು ಬಹಳ ಬೇಗನೆ ಹೀರಿಕೊಳ್ಳುತ್ತದೆ. ನೀರಿನ ಅಂಶ ಇಂಧನಕ್ಕೆ ಸೇರಿದರೆ ಇಂಜಿನ್ ಆರೋಗ್ಯಕ್ಕೆ ದೊಡ್ಡ ಅಪಾಯ ತಪ್ಪಿದ್ದಲ್ಲ. ಕಂಪನಿಯಿಂದಲೇ ಪ್ರಮಾಣೀಕರಿಸಲ್ಪಟ್ಟ ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ ಮಾತ್ರ ಸೂಕ್ತ ನೋಸಲ್ ಗುರುತು ನೋಡಿ E85 ಬಳಸಬೇಕು. ವಾಹನ ತಯಾರಕರ (OEM) ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿದರೆ ಇಂಜಿನ್ ಸುರಕ್ಷಿತವಾಗಿರುವುದಲ್ಲದೆ ದುಬಾರಿ ರಿಪೇರಿ ವೆಚ್ಚದಿಂದ ಬಚಾವ್ ಆಗಬಹುದು.

ಸರ್ಕಾರ ಪ್ರಮುಖ ಹೆದ್ದಾರಿಗಳಲ್ಲೂ E85 ಪಂಪ್‌ಗಳನ್ನು ವಿಸ್ತರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಫ್ಲೆಕ್ಸ್-ಫ್ಯುಯೆಲ್ ತಂತ್ರಜ್ಞಾನ ಇನ್ನಷ್ಟು ಪಕ್ವಗೊಳ್ಳಲಿದೆ. ಲೀಟರ್ ಆಧಾರದ ಮೇಲೆ ಆರಂಭಿಕ ಬೆಲೆ ಅಗ್ಗವಾಗಿ ಕಂಡರೂ, ನಿಮ್ಮ ವಾಹನ ಈ ಇಂಧನವನ್ನು ಬೆಂಬಲಿಸುತ್ತದೆಯೇ ಎಂಬುದು ಮುಖ್ಯ. ಹಾಗಾಗಿ, E85 ಇಂಧನಕ್ಕೆ ಬದಲಾಗುವ ಮುನ್ನ ವಾಹನದ ಒಟ್ಟು ಚಾಲನಾ ವೆಚ್ಚ ಮತ್ತು ಕಂಪನಿಯ ವಾರಂಟಿ ಷರತ್ತುಗಳನ್ನು ಪರಿಶೀಲಿಸುವುದು ಜಾಣತನ.

Article Published On: Thursday, August 20, 2026, 12:05 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+