ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಟಯರ್‌ಗಳು ವಾಹನದ ಪ್ರಮುಖ ಭಾಗಗಳಲ್ಲಿ ಒಂದು. ಸರಿಯಾದ ಸಮಯಕ್ಕೆ ಟಯರ್‌ಗಳನ್ನು ಬದಲಿಸದಿದ್ದರೆ ಪ್ರಯಾಣದ ಸಮಯದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಟಯರ್‌ಗಳಿಗೆ ವಯಸ್ಸಾಗುತ್ತಿದೆ ಎಂದು ತಿಳಿಯದಿದ್ದರೆ ಈ ರೀತಿಯ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಟಯರ್‌ಗಳ ವಯಸ್ಸನ್ನು ತಿಳಿದುಕೊಂಡು ತಕ್ಷಣ ಬದಲಿಸುವುದರಿಂದ ವಾಹನದ ಮೈಲೇಜ್ ಸಹ ಹೆಚ್ಚುತ್ತದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಅನೇಕ ಜನರು ವಾಹನದ ಮೈಲೇಜ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಹೆಚ್ಚು ಮೈಲೇಜ್ ಪಡೆಯಲು ಜನರು ವಿವಿಧ ತಂತ್ರಗಳನ್ನು ಅನುಸರಿಸುತ್ತಾರೆ.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಆದರೆ ಸಕಾಲಕ್ಕೆ ಟಯರ್‌ಗಳನ್ನು ಬದಲಿಸಿದರೆ ಹೆಚ್ಚು ಮೈಲೇಜ್ ಪಡೆಯಬಹುದು ಎಂದು ಅವರಿಗೆ ತಿಳಿದಿರುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಸಮಯಕ್ಕೆ ಸರಿಯಾಗಿ ಟಯರ್‌ಗಳನ್ನು ಬದಲಾಯಿಸಬೇಕಾಗುತ್ತದೆ.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಟಯರ್‌ಗಳನ್ನು ಯಾವಾಗ ತಯಾರಿಸಲಾಗಿದೆ ಎಂಬುದನ್ನು ಕಂಡುಹಿಡಿಯುವುದು ಹೇಗೆಂದು ಹಲವಾರು ಜನರಿಗೆ ತಿಳಿದಿಲ್ಲ. ಈ ಲೇಖನದಲ್ಲಿ ಟಯರ್‌ಗಳನ್ನು ಯಾವಾಗ ತಯಾರಿಸಲಾಗಿದೆ ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ನೋಡೋಣ.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ವಾಹನದ ಕಾರ್ಯಕ್ಷಮತೆ ಟಯರ್‌ಗಳ ವಯಸ್ಸನ್ನು ಅವಲಂಬಿಸಿರುತ್ತದೆ. ಟಯರ್ ತುಂಬಾ ಹಳೆಯದಾದರೆ, ಅದು ವಾಹನದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಟಯರ್‌ಗಳನ್ನು 4 ವರ್ಷಗಳಿಗೊಮ್ಮೆ ಬದಲಾಯಿಸಬೇಕು ಎಂದು ಹೇಳಲಾಗುತ್ತದೆ.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಆದರೆ ಇದು ಗರಿಷ್ಠ ಅವಧಿ ಎಂಬುದು ಗಮನಾರ್ಹ ಸಂಗತಿ. ಟಯರ್‌ಗಳನ್ನು 2 ರಿಂದ 4 ವರ್ಷಗಳ ಒಳಗೆ ಬದಲಿಸಿದರೆ ಇನ್ನೂ ಉತ್ತಮ. ಮುಂಚಿತವಾಗಿ ಟಯರ್ ಬದಲಿಸುವ ಮೂಲಕ ಅನಗತ್ಯ ಸಮಸ್ಯೆಗಳನ್ನು ತಪ್ಪಿಸಬಹುದು.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಹಲವು ಟಯರ್ ತಯಾರಕ ಕಂಪನಿಗಳು ತಮ್ಮ ಟಯರ್‌ಗಳಿಗೆ 4 ರಿಂದ 5 ವರ್ಷಗಳ ವಾರಂಟಿ ನೀಡುತ್ತವೆ. 2018 ರಲ್ಲಿ ಖರೀದಿಸುವ ಟಯರ್‌ಗಳನ್ನು 2022 ರಲ್ಲಿ ಬದಲಿಸಿದರೆ ಸಾಕು ಎಂಬ ಅಭಿಪ್ರಾಯ ಮೂಡಬಹುದು.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಆದರೆ 2018 ರಲ್ಲಿ ತಯಾರಾದ ಟಯರ್‌ಗಳನ್ನು 2018 ರಲ್ಲಿ ಖರೀದಿಸಿದರೆ ಈ ಅಭಿಪ್ರಾಯ ಸರಿಯಾಗಿದೆ. ಆದರೆ 2017 ರಲ್ಲಿ ತಯಾರಾದ ಟಯರ್‌ಗಳನ್ನು 2018 ರಲ್ಲಿ ಖರೀದಿಸಿದರೆ ಅವುಗಳನ್ನು 2021 ರವರೆಗೆ ಮಾತ್ರ ಬಳಸಬೇಕು.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಈ ಕಾರಣಕ್ಕೆ ಟಯರ್‌ಗಳನ್ನು ಖರೀದಿಸುವಾಗ ಯಾವಾಗ ತಯಾರಿಸಲಾಗಿದೆ ಎಂದು ತಿಳಿಯುವುದು ಬಹಳ ಮುಖ್ಯ. ತಯಾರಾದ ವರ್ಷಗಳನ್ನು ಸುಲಭವಾಗಿ ಕಂಡು ಹಿಡಿಯಬಹುದು.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಎಲ್ಲಾ ಟಯರ್‌ಗಳು ಬದಿಯಲ್ಲಿ 4 ಅಂಕಿಯ ಸಂಖ್ಯೆಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಮೊದಲ 2 ಅಂಕಿಗಳು ಟಯರ್ ತಯಾರಿಸಿದ ವಾರವನ್ನು ಸೂಚಿಸಿದರೆ ಕೊನೆಯ ಎರಡು ಅಂಕಿಗಳು ಟಯರ್ ತಯಾರಾದ ವರ್ಷವನ್ನು ಸೂಚಿಸುತ್ತವೆ.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಉದಾಹರಣೆಗೆ ಟಯರ್‌ಗಳಲ್ಲಿ 0918 ಎಂಬ ಅಂಕಿಗಳಿದ್ದರೆ, ಮೊದಲ ಎರಡು ಅಂಕಿಗಳಾದ 09 ಟಯರ್ ತಯಾರಿಸಿದ ವಾರವನ್ನು ಸೂಚಿಸುತ್ತವೆ. ಕೊನೆಯ ಎರಡು ಅಂಕಿಗಳಾದ 18 ಟಯರ್ ತಯಾರಿಸಿದ ವರ್ಷವನ್ನು ಸೂಚಿಸುತ್ತವೆ.

ಟಯರ್ ತಯಾರಾದ ದಿನಾಂಕಗಳನ್ನು ಕಂಡು ಹಿಡಿಯುವ ಸರಳ ವಿಧಾನಗಳಿವು

ಈ ವಿಧಾನದ ಮೂಲಕ ಟಯರ್‌ಗಳು ಉತ್ಪಾದನೆಯಾದ ವರ್ಷವನ್ನು ತಿಳಿದು ಸೂಕ್ತ ಕಾಲಕ್ಕೆ ಟಯರ್‌ಗಳನ್ನು ಬದಲಿಸಿ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಬಹುದು.

Most Read Articles

Kannada
English summary
Easiest ways to find out manufacturing date of vehicle tyres. Read in Kannada.
Story first published: Friday, July 30, 2021, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X