Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದೇ ಬಾರಿಗೆ ಬರೋಬ್ಬರಿ 11 ವಿಮಾನಗಳನ್ನು ಖರೀದಿಸಿದ ಅಮೆಜಾನ್
ಪ್ರಮುಖ ಇ-ಕಾಮರ್ಸ್ ಕಂಪನಿಯೊಂದು 11 ಬೋಯಿಂಗ್ 767-300 ಜೆಟ್‌ಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಎ ಟು ಝಡ್ ವರೆಗೆ ಬಹುತೇಕ ಎಲ್ಲಾ ಉತ್ಪನ್ನಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್ ಈ ವಿಮಾನಗಳನ್ನು ಖರೀದಿಸಿದೆ.

ಕಂಪನಿಯು ಒಂದೇ ಬಾರಿಗೆ 11 ವಿಮಾನಗಳನ್ನು ಖರೀದಿಸಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. ಅಮೆಜಾನ್ ವಿಮಾನಯಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಇಷ್ಟು ದೊಡ್ಡ ಸಂಖ್ಯೆಯ ವಿಮಾನಗಳನ್ನು ಖರೀದಿಸಿದೆಯೇ ಎಂಬ ಪ್ರಶ್ನೆಯನ್ನೂ ಈ ಬೆಳವಣಿಗೆ ಹುಟ್ಟುಹಾಕಿದೆ. ಇತ್ತೀಚೆಗೆ ಓಲಾ ಕ್ಯಾಬ್ ಕಂಪನಿಯು ಶೀಘ್ರದಲ್ಲೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟವನ್ನು ಆರಂಭಿಸುವುದಾಗಿ ಘೋಷಿಸಿತ್ತು.

ಓಲಾ ಕಂಪನಿಯ ಈ ಘೋಷಣೆಯು ಯಾವುದೇ ಕಂಪನಿಯು ಯಾವುದೇ ವ್ಯವಹಾರವನ್ನು ಆರಂಭಿಸಬಹುದು ಎಂಬ ಸ್ಥಿತಿಯನ್ನು ಸೃಷ್ಟಿಸಿದೆ. ಈ ಬೆಳವಣಿಗೆಯ ನಡುವೆಯೇ ಅಮೆಜಾನ್ ಕಂಪನಿಯು 11 ವಿಮಾನಗಳನ್ನು ಖರೀದಿಸಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತಾನು ಮಾರಾಟ ಮಾಡುವ ಉತ್ಪನ್ನಗಳನ್ನು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲು ಅಮೆಜಾನ್ ಕಂಪನಿಯು ಈ ವಿಮಾನಗಳನ್ನು ಖರೀದಿಸಿದೆ ಎಂದು ಹೇಳಲಾಗಿದೆ. ಈ ವಿಮಾನಗಳನ್ನು ಡೆಲ್ಟಾ ಹಾಗೂ ವೆಸ್ಟ್ ಜೆಟ್ ನಿಂದ ಖರೀದಿಸಲಾಗಿದೆ.

ಈ ವಿಮಾನಗಳು ಶೀಘ್ರದಲ್ಲೇ ಅಮೆಜಾನ್‌ನ ಸರಕು ಸಾಗಣೆಯಲ್ಲಿ ಭಾಗಿಯಾಗಲಿವೆ. ಈ ವಿಮಾನಗಳು 2021 ಅಥವಾ 2022ರಲ್ಲಿ ಬಳಕೆಗೆ ಬರಲಿವೆ ಎಂದು ತಿಳಿದುಬಂದಿದೆ. ಅಮೆಜಾನ್ ಆನ್‌ಲೈನ್ ಕಂಪನಿಯು ಸದ್ಯಕ್ಕೆ ಕೆಲವು ವಸ್ತುಗಳನ್ನು ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಗ್ರಾಹಕರಿಗೆ ತಲುಪಿಸುತ್ತಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಇನ್ನು ಕೆಲವು ಸಂದರ್ಭಗಳಲ್ಲಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಮೂರರಿಂದ ಐದು ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಹೊಸ ವಿಮಾನಗಳನ್ನು ಖರೀದಿಸಲಾಗಿದೆ.

ಸರಕು ಸಾಗಾಣಿಕೆಯಲ್ಲಿ ಅವುಗಳನ್ನು ಒಂದೊಂದಾಗಿ ಬಳಸಿಕೊಳ್ಳಬಹುದು. ಈ ವಿಮಾನಗಳ ಆಗಮನದೊಂದಿಗೆ ವಸ್ತುಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬವು ಹಲವು ಪಟ್ಟು ಕಡಿಮೆಯಾಗುತ್ತದೆ. ಆರ್ಡರ್ ಮಾಡಿದ ವಸ್ತುಗಳನ್ನು ಗ್ರಾಹಕರು ತ್ವರಿತವಾಗಿ ಪಡೆಯಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಮೆಜಾನ್ ಕಂಪನಿಯು ವೆಸ್ಟ್ ಜೆಟ್‌ನಿಂದ ನಾಲ್ಕು ವಿಮಾನಗಳನ್ನು ಹಾಗೂ ಡೆಲ್ಟಾದಿಂದ ಏಳು ವಿಮಾನಗಳನ್ನು ಖರೀದಿಸಿದೆ. ಈ ಪೈಕಿ ವೆಸ್ಟ್ ಜೆಟ್‌ನಿಂದ ಖರೀದಿಸಿರುವ ವಿಮಾನವನ್ನು ಪ್ರಯಾಣಿಕರ ವಿಮಾನವಾಗಿ ಬಳಸಲಾಗುತ್ತಿತ್ತು.

ಸರಕು ಸಾಗಣೆ ಕೆಲಸಕ್ಕೆ ಇವುಗಳನ್ನು ಬಳಸಲಾಗುತ್ತದೆ. ವೆಸ್ಟ್ ಜೆಟ್‌ನಿಂದ ಖರೀದಿಸಿರುವ ವಿಮಾನಗಳು 2021ರ ವೇಳೆಗೆ ಸೇವೆಗೆ ಬರುವ ನಿರೀಕ್ಷೆಗಳಿವೆ. ಅಂತೆಯೇ ಡೆಲ್ಟಾದಿಂದ ಖರೀದಿಸಿರುವ ಸರಕು ವಿಮಾನಗಳು 2022ರಲ್ಲಿ ಬಳಕೆಗೆ ಬರುವ ನಿರೀಕ್ಷೆಗಳಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅಮೆಜಾನ್ ಕಂಪನಿಯು ಈ ವಿಮಾನಗಳ ಜೊತೆಗೆ ಇನ್ನಷ್ಟು ವಿಮಾನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಈ ಚಿತ್ರಗಳನ್ನು ಬೋಯಿಂಗ್, ಡೆಲ್ಟಾ ಹಾಗೂ ವೆಸ್ಟ್ ಜೆಟ್‌ಗಳಿಂದ ಪಡೆಯಲಾಗಿದೆ.