ಬೈಕ್ ಕನ್ಯತ್ವ ಕಳೆದುಕೊಂಡ ಏಕ್ತಾ ಕಪೂರ್
ಬಾಲಿವುಡ್‌ನ ಮುಂಬರುವ ರೋಮ್ಯಾಂಟಿಕ್ ಆಕ್ಷನ್ ಕಾಮಿಡಿ ಚಿತ್ರವಾಗಿರುವ 'ಮೈ ತೇರಾ ಹೀರೊ' ಪ್ರಚಾರಾರ್ಥ ಅಂಗವಾಗಿ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಹಾಗೂ ನಟ ವರುಣ್ ಧವನ್ ಬೈಕ್ ರೈಡಿಂಗ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.
ಎಪ್ರಿಲ್ 4, ಶುಕ್ರವಾರದಂದು ತೆರೆಗೆ ಅಪ್ಪಳಿಸಲಿರುವ 'ಮೈ ತೇರಾ ಹೀರೊ' ಚಿತ್ರದಲ್ಲಿ ವರುಣ್‌ಗೆ ಜತೆಗಾರ್ತಿಯಾಗಿ ಇಲಿಯಾನಾ ಡಿಕ್ರೂಜ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮೊದಲ ಬೈಕ್ ಅನುಭವವನ್ನು ಏಕ್ತಾ ಕಪೂರ್ ಹಂಚಿಕೊಂಡಿದ್ದಾರೆ.

ಸಾಮ್ಯಾನವಾಗಿ ಐಷಾರಾಮಿ ಕಾರುಗಳಲ್ಲಿ ಪಯಣಿಸುವ ಇದೇ ಮೊದಲ ಬಾರಿಗೆ ದ್ವಿಚಕ್ರ ವಾಹನದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಪತ್ರಿಕೆಗಳು ಕನ್ಯತ್ವ ಕಳೆದುಕೊಂಡಿರುವ ಏಕ್ತಾ ಕಪೂರ್ ಎಂದು ಬಣ್ಣಿಸಿವೆ.

ಕಾರ್ಯಕ್ರಮದಲ್ಲಿ ನಟಿ ಇಲಿಯಾನಾ ಡಿಕ್ರೂಜ್ ಅಭಾವ ಎದ್ದು ಕಾಣಿಸುತ್ತಿತ್ತು. ಆದರೆ ನಿರ್ಮಾಪಕಿ ಸಾನಿಧ್ಯದಲ್ಲಿ ಚಿತ್ರದ ಪ್ರಚಾರಕ್ಕೆ ರಂಗು ನೀಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಈ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಏಕ್ತಾ ಕಪೂರ್, ಜೀವನದಲ್ಲಿ ಎಂದೂ ಬೈಕ್ ಬಿಟ್ಟು ಕನಿಷ್ಠ ಸೈಕಲ್‌ನಲ್ಲಾದರೂ ಕುಳಿತುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಚಿಕ್ಕವಳಿರುವಾಗ ಎರಡು ಬಾರಿ ಸೈಕಲ್‌ನಲ್ಲಿ ಕುಳಿತುಕೊಳ್ಳುವ ಪ್ರಯತ್ನ ಮಾಡಿದರೂ ಎರಡು ಸಂದರ್ಭಗಳಲ್ಲೂ ಕೆಳಕ್ಕೆ ಜಾರಿ ಬಿದ್ದಿರುವುದಾಗಿ ಅನುಭವ ಹಂಚಿಕೊಳ್ಳುತ್ತಾರೆ.

ಸೈಕಲ್ ಸಮತೋಲನ ಕಾಪಾಡಿಕೊಳ್ಳಲು ತಂದೆ ನೆರವಾಗುತ್ತಿದ್ದರು. ಆದರೆ ಯಾವಾಗ ಅಪ್ಪ ಸೈಕಲ್‌ನಿಂದ ಕೈ ಬಿಡುತ್ತಿದ್ದರೋ ಆವಾಗ ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುತ್ತಿರುವುದಾಗಿ ವಿವರಿಸಿದ್ದಾರೆ.

ಸದ್ಯ ವರುಣ್ ಜತೆ ಬೈಕ್ ಸವಾರಿ ಮಾಡಿಕೊಳ್ಳಲು ಸಾಧ್ಯವಾಗಿರುವುದಕ್ಕೆ ಏಕ್ತಾ ಸಂತೋಷ ವ್ಯಕ್ತಪಡಿಸಿದ್ದಾರೆ.

ಬಳಿಕ ತಮ್ಮ ಮೊದಲ ಬೈಕ್ ರೈಡಿಂಗ್ ಬಗ್ಗೆ ವಿವರಿಸಿರುವ ಏಕ್ತಾ, ನಟ ವರುಣ್ ಜತೆ ಚಂದ್ರನಲ್ಲಿಗೂ ತೆರಳಲು ಸಿದ್ಧವಾಗಿದ್ದೇನೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಇನ್ನೊಂದೆಡೆ ಏಕ್ತಾ ಕಪೂರ್ ಮಾತ್ರವಲ್ಲದೆ ಕೆಲವು ಅದೃಷ್ಟ ಯುವತಿಯರಿಗೂ ತಮ್ಮ ಜತೆ ಸವಾರಿ ಮಾಡಲು ವರುಣ್ ಅವಕಾಶ ಮಾಡಿಕೊಟ್ಟಿದ್ದರು. ಇವೆಲ್ಲವೂ ಸಿನೆಮಾದ ಪ್ರಚಾರಾರ್ಥವಾಗಿ ನೆರವೇರಿತ್ತು.

ಈ ಸಂದರ್ಭದಲ್ಲಿ ಬಜಾಜ್ ಅವೆಂಜರ್, ರಾಯಲ್ ಎನ್‌ಫೀಲ್ಡ್ ಬುಲೆಟ್ ಹಾಗೂ ಕೆಟಿಎಂ ಡ್ಯೂಕ್ ಬೈಕ್‌ಗಳಲ್ಲಿ ನಟ ವರುಣ್ ಧವನ್ ಜತೆ ನಿರ್ಮಾಪಕಿ ಏಕ್ತಾ ಸವಾರಿ ನಡೆಸಿದ್ದರು.


Click it and Unblock the Notifications








