ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ಪೊಲೀಸ್ ಠಾಣೆಗಳಿಗೆ ವಿದ್ಯುತ್ ಸರಬರಾಜು ಕಡಿತ ಮಾಡಿದ್ದಕ್ಕಾಗಿ ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ಮಂಡಳಿಯ ಉದ್ಯೋಗಿ ರಮೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ದಂಡ ವಿಧಿಸಿದ್ದರಿಂದ ಕೋಪಗೊಂಡಿದ್ದ ರಮೇಶ್ 2 ಪೊಲೀಸ್ ಠಾಣೆಗಳಿಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದ.

ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ಘಟನೆಯ ನಂತರ ಸೈಬರಾಬಾದ್ ಪೊಲೀಸರು ರಮೇಶ್'ನನ್ನು ಬಂಧಿಸಿದ್ದಾರೆ. ರಮೇಶನ ಬೈಕ್ ಅನ್ನು ಬಾಲಕನೊಬ್ಬ ಚಲಾಯಿಸಿದ್ದಾನೆ. ಅಪ್ರಾಪ್ತ ವಯಸ್ಕರಿಗೆ ಬೈಕ್ ಸವಾರಿ ಮಾಡುವುದು ಕಾನೂನುಬಾಹಿರವಾದ್ದರಿಂದ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ. ಇದರಿಂದ ರಮೇಶ್ ಸಂಚಾರ ಪೊಲೀಸರ ಮೇಲೆ ಆಕ್ರೋಶಗೊಂಡಿದ್ದಾನೆ.

ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ದಂಡ ವಿಧಿಸಲಾಗಿದೆ ಎಂದು ತಿಳಿದ ತಕ್ಷಣ ರಮೇಶ್ ಘಟನಾ ಸ್ಥಳಕ್ಕೆ ತೆರಳಿ ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾನೆ. ಸಂಚಾರ ನಿಯಮ ಉಲ್ಲಂಘನೆಯ ಗಂಭೀರತೆಯನ್ನು ಪರಿಗಣಿಸಿ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ಘಟನಾ ಸ್ಥಳದಿಂದ ತೆರಳಿದ ರಮೇಶ್ ಪೊಲೀಸ್ ಠಾಣೆಗಳಿಗೆ ವಿದ್ಯುತ್ ಸರಬರಾಜು ಕಡಿತಗೊಳಿಸಲು ನಿರ್ಧರಿಸಿದ್ದಾನೆ. ಅದರಂತೆ ಜುಡಿಮೆಟ್ಲಾ ಸಂಚಾರ ಹಾಗೂ ಕಾನೂನು ಜಾರಿ ಪೊಲೀಸ್ ಠಾಣೆಗಳ ವಿದ್ಯುತ್ ಕಡಿತಗೊಳಿಸಿದ್ದಾನೆ.

ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ವಿದ್ಯುತ್ ಕಡಿತಗೊಳಿಸಿದ ನಂತರವೂ ಆತ ಸುಮ್ಮನಾಗಿಲ್ಲ. ಟ್ರಾಫಿಕ್ ಪೊಲೀಸರಿಗೆ ಮತ್ತಷ್ಟು ತೊಂದರೆ ನೀಡಲು ತೀರ್ಮಾನಿಸಿದ್ದಾನೆ. ರಮೇಶ್ ತನ್ನ ಬೈಕ್ ಅನ್ನು ಟ್ರಾಫಿಕ್ ಪೊಲೀಸರು ನಿಲ್ಲಿಸಿದ್ದ ಸ್ಥಳಕ್ಕೆ ಹೋಗಿ ಟ್ರಾಫಿಕ್ ಸಿಗ್ನಲ್'ನ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ಇದರಿಂದಾಗಿ ಟ್ರಾಫಿಕ್ ಸಿಗ್ನಲ್ 2 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಲಿಲ್ಲ. ಘಟನೆಯ ನಂತರ ಪೊಲೀಸರು ವಿದ್ಯುತ್ ಇಲಾಖೆಯವರನ್ನು ಸಂಪರ್ಕಿಸಿದ್ದಾರೆ. ವಿದ್ಯುತ್ ಇಲಾಖೆ ಅಧಿಕಾರಿಗಳು ಆಗಮಿಸಿದ ನಂತರ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣೆಗಳಿಗೆ ವಿದ್ಯುತ್ ಸರಬರಾಜನ್ನು ಪುನಃ ನೀಡಲಾಗಿದೆ.

ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ಅದೇ ರೀತಿ ಟ್ರಾಫಿಕ್ ಸಿಗ್ನಲ್'ಗೂ ಸಹ ವಿದ್ಯುತ್ ಸರಬರಾಜು ನೀಡಲಾಗಿದೆ. ಆರಂಭದಲ್ಲಿ ಯಾವ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಕಂಡು ಬಂದಿರಲಿಲ್ಲ. ಆದರೆ ತನಿಖೆಯ ನಂತರ ರಮೇಶ್ ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿ ರಮೇಶ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ವರದಿಗಳು ತಿಳಿಸಿವೆ.

ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ಭಾರತದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇದೇ ರೀತಿಯ ಘಟನೆ 2019ರಲ್ಲಿ ಉತ್ತರಪ್ರದೇಶದಲ್ಲಿ ನಡೆದಿತ್ತು. ಹೆಲ್ಮೆಟ್ ಧರಿಸದ ಕಾರಣಕ್ಕೆ ಪೊಲೀಸರು ಎಲೆಕ್ಟ್ರಿಕ್ ಬೋರ್ಡ್ ಲೈನ್‌ಮ್ಯಾನ್‌ಗೆ ರೂ.500 ದಂಡ ವಿಧಿಸಿದ್ದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದಂಡ ವಿಧಿಸಿದ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಎಲೆಕ್ಟ್ರಿಕ್ ಬೋರ್ಡ್ ಉದ್ಯೋಗಿ

ಇದರಿಂದ ಆಕ್ರೋಶಗೊಂಡಿದ್ದ ಲೈನ್‌ಮ್ಯಾನ್ ಪೊಲೀಸ್ ಠಾಣೆಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದ. ಆದರೆ ಲೈನ್‌ಮ್ಯಾನ್ ಕೆಲಸ ಮಾಡುತ್ತಿದ್ದ ಎಲೆಕ್ಟ್ರಿಕ್ ಬೋರ್ಡ್, ಸಂಬಂಧ ಪಟ್ಟ ಪೊಲೀಸ್ ಠಾಣೆ 2016ರಿಂದ ವಿದ್ಯುತ್ ಬಿಲ್ ಪಾವತಿಸದ ಕಾರಣ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ ಎಂದು ಹೇಳಿಕೆ ನೀಡಿತ್ತು. ಈ ಘಟನೆಯು ಆ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

Most Read Articles

Kannada
English summary
Electric board employee disconnects power supply of two police stations. Read in Kannada.
Story first published: Thursday, February 11, 2021, 17:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X