Just In
Don't Miss!
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಖಾಲಿ ಜಾಗಗಳಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು
ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ದಕ್ಷಿಣ ದೆಹಲಿ ನಿಗಮವು ಆಯ್ದ ಖಾಲಿ ಇರುವ ಸ್ಥಳಗಳಲ್ಲಿ ಹಸಿರು ವಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಐಜಿಎಲ್ ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.

ಸಿಎನ್‌ಜಿ ಫ್ಯೂಯಲ್ ಡಿಸ್'ಪೆನ್ಸಿಂಗ್ ಮಿಷಿನ್, ಬ್ಯಾಟರಿ ಬದಲಿ ಯಂತ್ರ ಹಾಗೂ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳು ಒಂದೇ ಸ್ಥಳದಲ್ಲಿರಲಿವೆ. ಈಯೋಜನೆಗೆ ಈಗ ಅನುಮೋದನೆ ನೀಡಲಾಗಿದೆ. ದಕ್ಷಿಣ ದೆಹಲಿ ನಿಗಮದ ಅಧಿಕಾರಿಗಳು ಈ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದ್ದಾರೆ.

ಸಾಂಪ್ರದಾಯಿಕ ಸಿಎನ್‌ಜಿ ಡಿಸ್'ಪೆನ್ಸಿಂಗ್ ಮಿಷಿನ್'ಗಳಿಗಿಂತ ಭಿನ್ನವಾಗಿ, ಸಂಯೋಜಿತ ಸಿಎನ್‌ಜಿ ಡಿಸ್'ಪೆನ್ಸಿಂಗ್ ಮಿಷಿನ್'ಗಳು ಚಿಕ್ಕ ಗಾತ್ರವನ್ನು ಹೊಂದಿರುತ್ತವೆ. ಆದರೆ ಇದು ರಿಫ್ಯೂಯಲ್ ಮಾಡುವ ವಿಷಯವಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಹಸಿರು ವಲಯಗಳಲ್ಲಿ ಬ್ಯಾಟರಿ ಬದಲಿ ಯಂತ್ರಗಳು ಹಾಗೂ ಚಾರ್ಜಿಂಗ್ ಪಾಯಿಂಟ್‌ಗಳು ಸಹ ಇರಲಿವೆ. ಈ ಯೋಜನೆಯು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲಿದೆ.

ಜೊತೆಗೆ ವಾಯು ಮಾಲಿನ್ಯದ ಸಮಸ್ಯೆಯನ್ನು ಕಡಿಮೆ ಮಾಡಲಿದೆ. ಈ ಹಸಿರು ವಲಯಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವುದರ ಬಗ್ಗೆ ಪರಿಶೀಲಿಸಲಾಗುತ್ತಿದೆ.ಇದರಿಂದ ಆದಾಯ ಗಳಿಸಲು ಸಾಧ್ಯವಾಗಲಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ದಕ್ಷಿಣ ದೆಹಲಿ ಕಾರ್ಪೊರೇಷನ್ ಆಡಳಿತದ ಪರವಾಗಿ 93 ತಾಣಗಳನ್ನು ಇತ್ತೀಚೆಗೆ ಐಜಿಎಲ್‌ಗೆ ಶಿಫಾರಸು ಮಾಡಲಾಗಿದೆ. ಈ ಪೈಕಿ ಐಜಿಎಲ್ 40 ಸ್ಥಳಗಳಲ್ಲಿ ಹಸಿರು ವಲಯಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಹಸಿರು ವಲಯದಲ್ಲಿ 2 ಸಿಎನ್‌ಜಿ ಕೇಂದ್ರಗಳು, ಎಲೆಕ್ಟ್ರಿಕ್ ವಾಹನಗಳಿಗಾಗಿ 2 ಚಾರ್ಜಿಂಗ್ ಸ್ಟೇಷನ್'ಗಳು ಹಾಗೂ ಬ್ಯಾಟರಿ ಬದಲಿ ಯಂತ್ರ ಇರಲಿದೆ ಎಂದು ದಕ್ಷಿಣ ದೆಹಲಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ದೆಹಲಿ ನಿಗಮದ ಈ ಹೊಸ ಯೋಜನೆ ಜನರ ಗಮನ ಸೆಳೆಯುತ್ತಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವಲ್ಲಿ ದೆಹಲಿ ರಾಜ್ಯವು ಇತರ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಿದೆ. ದೆಹಲಿಯಲ್ಲಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಜನರಲ್ಲಿ ಚಾರ್ಜಿಂಗ್ ಕೇಂದ್ರಗಳ ಬಗ್ಗೆ ಇರುವ ಆತಂಕವನ್ನು ನಿವಾರಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.

ದಕ್ಷಿಣ ದೆಹಲಿ ನಿಗಮದ ಹೊಸ ಯೋಜನೆ ಕೂಡ ಇದರ ಒಂದು ಭಾಗವಾಗಿದೆ. ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಯಡಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ.
ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.