ನಜ್ಜುಗುಜ್ಜುಗೊಂಡ ಪ್ರಮುಖ ಕಂಪನಿ ಕಾರು: ಹೀಗೂ ಆಗುತ್ತಾ.. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಸಾಮಾನ್ಯವಾಗಿ ಅರಣ್ಯ ಪ್ರದೇಶದ ರಸ್ತೆಗಳಲ್ಲಿ ಕಾರಿನಲ್ಲಿ ಸಂಚರಿಸಬೇಕಾದರೆ, ಹಲವು ಬಾರಿ ಕಾಡು ಪ್ರಾಣಿಗಳನ್ನು ನೋಡುತ್ತೇವೆ. ಆಗೊಮ್ಮೆ ನಾವು ಅವುಗಳನ್ನು ಪ್ರಚೋದಿಸಿದರೆ, ನಮ್ಮ ಮೇಲೆಯೇ ದಾಳಿ ಮಾಡುವ ಸಂಭವವಿರುತ್ತದೆ. ಇಂತಹ ಸಂದರ್ಭದಲ್ಲಿ ನಮಗೂ ಹಾಗೂ ಆ ಪ್ರಾಣಿಗಳಿಗೂ ಸಾಕಷ್ಟು ಹಾನಿಯಾಗಿ ಬಿಡುತ್ತದೆ.
ಸದ್ಯ ಅಂತಹದ್ದೇ ಘಟನೆ ನಡೆದಿದೆ. ಅದು ನಮ್ಮ ಕರ್ನಾಟಕದಲ್ಲಿ ಅಲ್ಲ. ಪಕ್ಕದ ಕೇರಳದಲ್ಲಿ.. ಕೊಚ್ಚಿ - ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ, ಅಲ್ಲಿನ ಹಳ್ಳಿಗಳ ತೋಟಗಳಲ್ಲಿ ಆಗಾಗ ದಾಂದಲೇ ನಡೆಸುವ 'ಚಕ್ಕೊಂಬನ್' ಎಂಬ ಹೆಸರಿನ ಒಂಟಿಸಲಗ 'ಹುಂಡೈ ಐ20' ಕಾರಿನ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ.

ದಾಳಿಗೆ ಕಾರಣವೇನು ಎಂಬುದು ಸದ್ಯ ತಿಳಿದುಬಂದಿಲ್ಲ. ಆದರೆ, ಏಕಾಏಕಿ ಕಾಡಾನೆ ರಸ್ತೆಗೆ ನುಗ್ಗಿದ್ದು, ಕಾರಿನ ಮೇಲೆ ಎರಗಿತು. ಬಳಿಕ ವಾಹನವನ್ನು ತುಳಿದು, ದಂತದಿಂದ ವಿಂಡ್ ಶೀಲ್ಡ್ ಅನ್ನು ಚುಚ್ಚಿದೆ ಎಂದು ಕಾರಿನಲ್ಲಿದ್ದವರೂ ಹೇಳಿದ್ದಾರೆ. ವಿಂಡ್ ಶೀಲ್ಡ್ ಒಡೆದ ಹಿನ್ನೆಲೆ ಪ್ರಯಾಣಿಕರಿಗೆ ಗಾಯಗಳಾಗಿವೆ. ಕೆಲವೇ ನಿಮಿಷಗಳಲ್ಲಿ ಆನೆಯು ಅಲ್ಲಿಂದ ಕಾಡಿನೊಳಗೆ ವಾಪಸ್ ಹೋಗಿದೆ.
ಆನೆಗೆ ಗಾಯಗಳಾಗಿರುವ ಬಗ್ಗೆ ಪರಿಶೀಲನೆ ನಡೆಸುತ್ತವೆ ಎಂದು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲ ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲಿನ ಸ್ಥಳೀಯರ ಪ್ರಕಾರ, ಈ ಒಂಟಿಸಲಗ ಎರಡು ವರ್ಷಗಳಿಂದ ಇಲ್ಲಿದ್ದು, ಆಗಾಗ ರೈತರ ತೋಟಗಳಿಗೆ ದಾಳಿ ಮಾಡುತ್ತಲೇ ಇರುತ್ತದೆಯಂತೆ.
ಕಾಡು ಪ್ರಾಣಿಗಳಲ್ಲಿ ವಿಶೇಷವಾಗಿ ಆನೆಗಳು ಶಾಂತವಾಗಿರುತ್ತವೆ. ಅವುಗಳನ್ನು ಪ್ರಚೋದಿಸದ ಹೊರತು ದಾಳಿ ಮಾಡುವುದಿಲ್ಲ. ಮನುಷ್ಯನಿಂದ ಅಪಾಯವಾಗುತ್ತದೆ ಎಂದಾಗಲೇ ಮೇಲೆ ಎರಗುತ್ತವೆ. ನಮ್ಮ ದೇಶದಲ್ಲಿ ರಾಷ್ಟ್ರೀಯ ಉದ್ಯಾನವನಗಳು ಹೆಚ್ಚು. ಇಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟುವುದನ್ನು ಸಾಮಾನ್ಯವಾಗಿ ನೋಡಬಹುದು. ಈ ಸಂದರ್ಭದಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ, ಅವುಗಳು ಹೋಗುವ ತನಕ ತೊಂದರೆ ನೀಡದಿರುವುದು ಉತ್ತಮ.
ಇನ್ನು, ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕೇರಳದಲ್ಲಿ ಇಂತಹದ್ದೇ ಘಟನೆಯೊಂದು ವರದಿಯಾಗಿತ್ತು. ಕಾಡಾನೆಯೊಂದು ರಸ್ತೆಯಲ್ಲಿ ನಿಂತಿದ್ದ ಕಾರಿಗೆ ತೀವ್ರ ಹಾನಿ ಮಾಡಿತ್ತು. ಕಾಡು ಪ್ರಾಣಿಗಳ ದಾಳಿ, ಕೇವಲ ಈ ಪ್ರದೇಶದಲ್ಲಿಯೇ ನಡೆಯುತ್ತದೆ ಎಂದು ಹೇಳಲು ಬರುವುದಿಲ್ಲ. ಅವು ಕೆಲವೊಮ್ಮೆ ನಗರಗಳಿಗೂ ಬರಬಹುದು. ಸುಮಾರು ಆರು ತಿಂಗಳ ಹಿಂದೆ, ಬೆಳಗಾವಿ ನಗರಕ್ಕೆ ಚಿರತೆ ಎಂಟ್ರಿ ನೀಡಿದ್ದನ್ನು ಮರೆಯಲು ಸಾಧ್ಯವೇ.
ಕೇರಳದಲ್ಲಿ ನಡೆದಿರುವ ಆನೆ ದಾಳಿಗೆ ನಿಖರವಾದ ಕಾರಣವೇನೆಂಬುದು ತಿಳಿದುಬಂದಿಲ್ಲ. ಆದರೂ ಈ ಪರಿಪ್ರಮಾಣದಲ್ಲಿ ದಾಳಿ ಮಾಡಿದರೂ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲಿ ಹುಂಡೈ ಕಾರಿನ ಗುಣಮಟ್ಟವನ್ನು ಮೆಚ್ಚಲೇ ಬೇಕು. ಸಾಮಾನ್ಯವಾಗಿ ಅರಣ್ಯ ಪ್ರದೇಶದ ರಸ್ತೆಗಳಲ್ಲಿ ವಾಹನದಲ್ಲಿ ಪ್ರಯಾಣಿಸುವಾಗ ಆದಷ್ಟು ಬೆಳಗಿನ ಸಮಯ ಹೋಗುವುದೇ ಉತ್ತಮ. ಆಗ ಅನಾಹುತಗಳನ್ನು ತಪ್ಪಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications