ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಕಾಡು ಪ್ರಾಣಿಗಳು ಜನರ ಮೇಲೆ ದಾಳಿ ಮಾಡುವ ಪ್ರಕರಣಗಳು ನಿತ್ಯ ವಿಶ್ವದ ಎಲ್ಲೋ ಒಂದು ಮೂಲೆಯಲ್ಲಿ ವರದಿಯಾಗುತ್ತಲೇ ಇರುತ್ತವೆ. ಆದರೆ ಪ್ರಾಣಿಗಳು ದಾಳಿ ಮಾಡುವ ವಿಡಿಯೋಗಳು ಸಿಗುವುದು ಅತಿ ವಿರಳವೆಂದೇ ಹೇಳಬಹುದು. ಅಂತಹ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಆನೆಗಳು ಜನರ ಮೇಲೆ ದಾಳಿ ಮಾಡುವುದು ಅತಿ ಕಡಿಮೆ ಆದರೆ ಅವಕ್ಕೆ ಮದವೇರಿದರೆ ತನ್ನ ದಾರಿಯಲ್ಲಿ ಅಡ್ಡ ಬಂದ ವಸ್ತುಗಳನ್ನು ನುಜ್ಜುಗುಜ್ಜು ಮಾಡುತ್ತವೆ. ಅದೇ ರೀತಿ ಕಾಡಾನೆಯೊಂದು ಮಹೀಂದ್ರಾ ಬೊಲೆರೊವನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಮಹೀಂದ್ರಾ ಬೊಲೆರೊ ಚಾಲಕನು ಡ್ರೈವಿಂಗ್‌ನಲ್ಲಿ ಎಷ್ಟು ನುರಿತನಾಗಿದ್ದ ಎಂಬುದನ್ನು ಈ ವಿಡಿಯೋ ತೊರುತ್ತದೆ. ಅವನ ಸಮಯ ಪ್ರಜ್ಞೆ ಮತ್ತು ಚಾಲಾಕಿತನದ ವಾಹನ ಚಾಲನೆಯಿಂದ ಕಾರಿನಲ್ಲಿದ್ದವರ ಪ್ರಾಣವನ್ನು ಹೇಗೆ ಉಳಿಸಿದ್ದಾನೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈತನ ಡ್ರೈವಿಂಗ್ ಶೈಲಿಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಈ ವಿಡಿಯೋವನ್ನು ಸುಪ್ರಿಯಾ ಸಾಹು ಐಎಎಸ್ ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಆಕೆ ಪೋಸ್ಟ್ ಮಾಡಿರುವ ವಿಡಿಯೋವನ್ನು ಆಕೆಯ ಸ್ನೇಹಿತೆ ಶೇರ್ ಮಾಡಿದ್ದು, ಮೈಸೂರು ಸಮೀಪದ ಕಬಿನಿ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋದಲ್ಲಿ ಗಂಡು ಆನೆಯೊಂದು ಸಫಾರಿ ಜೀಪಿನತ್ತ ಬರುತ್ತಿರುವುದು ಕಂಡು ಬಂದಿದೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ವೀಡಿಯೊದಲ್ಲಿ ಕಂಡುಬರುವ ಸಫಾರಿ ಜೀಪ್ ಮಹೀಂದ್ರಾ ಬೊಲೆರೊದಂತೆ ಕಾಣುತ್ತದೆ. ಟೂರಿಸ್ಟ್‌ಗಳಿಗಾಗಿ ರಾಷ್ಟ್ರೀಯ ಉದ್ಯಾನವನದೊಳಗೆ ಒಂದು ಮಾರ್ಗವನ್ನು ನಿರ್ಮಿಸಲಾಗಿದೆ. ಬೊಲೆರೊ ಘಟನಾ ಸ್ಥಳಕ್ಕೆ ತಲುಪಿದಾಗ ಆನೆ ರಸ್ತೆ ಮಧ್ಯೆ ನಿಂತಿತ್ತು. ಈ ವೇಳೆ ಆನೆ ಕಡಗೆ ನಿಧಾನವಾಗಿ ಜೀಪ್ ಮುಂದೆ ಸಾಗುವಾಗ ಆನೆಯು ವಾಹನದ ಶಬ್ದವನ್ನು ಕೇಳಿದೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಆನೆ ಜೀಪನ್ನು ನೋಡಿದ ಕೂಡಲೇ ಜೀಪಿನತ್ತ ಓಡಿಬರುತ್ತಿದ್ದ ಆನೆಯನ್ನು ಕಂಡ ಚಾಲಕ ಕೂಡಲೇ ರಿವರ್ಸ್‌ ಗೇರ್‌ ಹಾಕಿ ರಿವರ್ಸ್‌ ಓಡಿಸಲು ಆರಂಭಿಸಿದ. ಆನೆಯು ಅಪಾಯಕಾರಿಯಾಗಿ ವಾಹನದ ಸಮೀಪಕ್ಕೆ ತಲುಪಲು ಅತಿ ಹೆಚ್ಚು ವೇಗದಲ್ಲಿ ಓಡುತ್ತಿತ್ತು. ಆದರೆ, ಚಾಲಕ ತನ್ನ ಶಾಂತತೆಯನ್ನು ಕಳೆದುಕೊಳ್ಳದೇ ಬೊಲೆರೊವನ್ನು ಹಿಮ್ಮುಖವಾಗಿ ಬಹು ದೂರ ಓಡಿಸಿದ್ದಾನೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಈ ವಿಡಿಯೋವು ಚಾಲಕ ನಿಜವಾಗಿ ಡ್ರೈವಿಂಗ್‌ನಲ್ಲಿ ಎಷ್ಟು ನುರಿತ ಎಂಬುದನ್ನು ತೋರಿಸುತ್ತದೆ. ಪರಿಸ್ಥಿತಿ ಎಷ್ಟು ಅಪಾಯಕಾರಿ ಎಂದು ಗ್ರಹಿಸಿದರೂ ಗಾಬರಿಯಾಗದೆ ಕಾರನ್ನು ಹಿಮ್ಮುಖವಾಗಿ ಓಡಿಸಿದ್ದಾನೆ. ಅಂತಹ ಸಫಾರಿ ವಾಹನಗಳ ಚಾಲಕರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ತರಬೇತಿ ನೀಡಲಾಗುತ್ತದೆ. ಅವರು ನಿತ್ಯ ಕಾಡು ಪ್ರಾಣಿಗಳ ಪ್ರದೇಶದಲ್ಲಿ ಚಾಲನೆ ಓಡಾಡುವುದರಿಂದ ಎಲ್ಲಾ ಪ್ರದೇಶಗಳ ಅರಿವಿರುತ್ತದೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಈ ವೀಡಿಯೋದಲ್ಲಿ ಆನೆಯು ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಆನೆಯ ಸೊಂಡಿಲು ಮತ್ತು ದಂತವು ವಾಹನದ ಬಾನೆಟ್‌ಗೆ ತಾಗುವುದನ್ನು ಗಮನಿಸಬಹುದು. ಸ್ವಲ್ಪ ದೂರದವರೆಗೆ ಬೊಲೆರೊವನ್ನು ಬೆನ್ನಟ್ಟಿದ ನಂತರ, ಕಾರನ್ನು ಹಿಡಿಯಲು ವಿಫಲವಾದಾಗ ಆನೆಯು ವಾಹನವನ್ನು ಬೆನ್ನಟ್ಟುವುದನ್ನು ನಿಲ್ಲಿಸಲು ನಿರ್ಧರಿಸುತ್ತದೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ತಕ್ಷಣವೇ ಆನೆ ಕಾಡಿನೊಳಗೆ ಓಡುತ್ತದೆ. ಬಳಿಕ ಆನೆಯು ನಿಜವಾಗಿಯೂ ದೂರ ಹೋಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಚಾಲಕ ತಕ್ಷಣವೇ ಜೀಪ್ ಅನ್ನು ನಿಲ್ಲಿಸುತ್ತಾನೆ. ಈ ಘಟನೆ ಸಂಭವಿಸಿದಾಗ, ವಾಹನದಲ್ಲಿ ಪ್ರವಾಸಿಗರು ಕುಳಿತಿರುವುದು ವಿಡಿಯೋದಲ್ಲಿ ನಾವು ಕಾಣಬಹುದು. ಅಲ್ಲದೇ ಈ ಘಟನೆಯಿಂದ ಅವರು ಭಯಭೀತರಾಗಿರುವುದನ್ನು ಸ್ಪಷ್ಟವಾಗಿ ನಾವು ನೋಡಣಬಹುದು.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕ ಗಂಡು ಆನೆಗಳಿಗೆ ಈ ರೀತಿಯ ಮದವಿರುತ್ತದೆ. ಹಾಗಾಗಿ ವಿಡಿಯೋದಲ್ಲಿನ ಆನೆ ಕೂಡ ಪ್ರಯಾಣಿಕರಿದ್ದ ಬೊಲೆರೊವನ್ನು ಅಟ್ಟಿಸಿಕೊಂಡು ಬಂದಿದೆ. ಈ ಆನೆಯು ಇದೊಂದೆ ಸಫಾರಿ ವಾಹನವನ್ನು ಹಿಂಬಾಲಿಸಿಲ್ಲ, ಬದಲಾಗಿ ಈ ಹಿಂದೆಯೂ ಹಲವು ಸಫಾರಿ ವಾಹನಗಳನ್ನು ಅಟ್ಟಿಸಿಕೊಂಡು ಬಂದಿರುವುದಾಗಿ ತಿಳಿದುಬಂದಿದೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಆರೋಗ್ಯವಂತ ವಯಸ್ಕ ಗಂಡು ಆನೆಗಳಲ್ಲಿ ಕಂಡುಬರುವ ಸಂಪೂರ್ಣ ನೈಸರ್ಗಿಕ ವಿದ್ಯಮಾನವಾಗಿದೆ. ಸಾಮಾನ್ಯವಾಗಿ ತಾತ್ಕಾಲಿಕ ಗ್ರಂಥಿಯಿಂದ (ಆನೆಯ ತಲೆಯ ಎರಡೂ ಬದಿಯಲ್ಲಿ) ಟೆಂಪೊರಿನ್ ಎಂಬ ಹಾರ್ಮೋನ್ ಸಮೃದ್ಧ ವಸ್ತುವಿನ ಸ್ರವಿಸುವಿಕೆಯಿಂದ ಮತ್ತು ಆನೆಯ ಹಿಂಭಾಗದ ಕಾಲುಗಳ ಕೆಳಗೆ ಮೂತ್ರದ ಸ್ಥಿರವಾದ ಹರಿವುಗಳಿಂದ ಇದು ನಿರೂಪಿಸಲ್ಪಟ್ಟಿದೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಆನೆ ದೇಹವು ಸಂತಾನೋತ್ಪತ್ತಿ ಹಾರ್ಮೋನುಗಳ ಹೆಚ್ಚಳವನ್ನು ಒಳಗೊಂಡಿರುತ್ತದೆ. ಇದು ಪ್ರಾಣಿಯು ಹೆಚ್ಚು ಪ್ರಕ್ಷುಬ್ಧ, ಶಕ್ತಿಯುತ, ಆಕ್ರಮಣಕಾರಿ ಅಥವಾ ಅನಿರೀಕ್ಷಿತ ಭಾವನೆಯನ್ನು ಉಂಟುಮಾಡಲು ಕಾರಣವಾಗುತ್ತದೆ. ಸಾಮಾನ್ಯವಾಗಿ ಕೆರಳಿಸುವ ಮತ್ತು ಶಬ್ದಗಳು ಮತ್ತು ಚಲನೆಗಳಿಗೆ ಅತಿಸೂಕ್ಷ್ಮವಾಗಿ ವಯಸ್ಕ ಗಂಡು ಆನೆಗಳು ಪ್ರತಿಕ್ರಿಯಿಸುತ್ತವೆ.

ಕಬಿನಿ ಬಳಿ ಬೊಲೆರೊವನ್ನು ಬೆನ್ನಟ್ಟಿದ ಮದಗಜ: ಪ್ರಯಾಣಿಕರ ಜೀವ ಉಳಿಸಿದ ಚಾಲಾಕಿ ಚಾಲಕ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಾಮಾನ್ಯವಾಗಿ ಕಾರು ಓಡಿಸುವಾಗ ಕಾಡು ಪ್ರಾಣಿಗಳ ದಾಳಿಯಾದಲ್ಲಿ ಹಲವರು ಗಾಬರಿಗೊಳಗಾಗಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಆದರೆ ಇಂತಹ ಯಾವುದೇ ಅಪಘಾತಕ್ಕೆ ಕಾರು ಚಾಲಕ ಕಾರಣವಾಗದೇ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾನೆ. ಇನ್ನು ಬೊಲೆರೊ ಬಗ್ಗೆ ಮಾತನಾಡುವುದಾದರೆ, ಈ ವಾಹನವು ಹೆಚ್ಚು ಶಕ್ತಿಯುತ ಎಂಜಿನ್ ಹೊಂದಿದ್ದು ಆಕ್ರಮಣಕಾರಿ ಪವರ್ ಉತ್ಪಾದಿಸುವಲ್ಲಿ ಸೈ ಎನಿಸಿಕೊಂಡಿದೆ.

Most Read Articles

Kannada
English summary
Elephant chased the Bolero near Kabini the smart driver who saved the passengers life
Story first published: Saturday, September 10, 2022, 15:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X