ಬೇಡುವುದೇ ಭಿಕ್ಷೆ... ಅದರಲ್ಲೂ ದಬ್ಬಾಳಿಕೆ! ಆನೆಗಳನ್ನು ಬಳಸಿಕೊಂಡು ಹಣ ಸುಲಿಗೆ

ಭಾರತದಲ್ಲಿನ ಪವಿತ್ರ ಪ್ರಾಣಿಗಳೆಂದು ಭಾವಿಸುವ ಕೆಲವೇ ಜೀವಿಗಳಲ್ಲಿ ಆನೆ ಕೂಡ ಒಂದು. ಮೆರವಣಿಗೆಗಳು ಮತ್ತು ಉತ್ಸವಗಳಲ್ಲಿ ದೇವರುಗಳನ್ನು ಹೊತ್ತು ಸಂಸ್ಕೃತಿಯನ್ನು ಸಾರುವ ಈ ಪ್ರಾಣಿಗಳನ್ನು ಮೊದಲಬಾರಿಗೆ ಭಿಕ್ಷೆ ಬೇಡಲು ಬಳಸಿಕೊಂಡಿರುವ ದೃಷ್ಯುಗಳು ಈಗ ವೈರಲ್ ಆಗಿವೆ. ಇದು ನೋಡಲು ಹೈಟೆಕ್ ಹಣ ಸುಲಿಗೆಯಂತೆ ಕಾಣುತ್ತಿದೆ.

ಆನೆಯ ಮೇಲೆ ಸವಾರಿ ಮಾಡುತ್ತಿರುವವರು ತಮ್ಮ ಸ್ವಂತ ಲಾಭಕ್ಕಾಗಿ ಆನೆಯನ್ನು ಹೀಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಪೊಲೀಸರು ಏಕೆ ಕ್ರಮ ಕೈಗೊಂಡಿಲ್ಲ ಎಂಬುದರ ಬಗ್ಗೆ ನಮಗೆ ಖಚಿತವಿಲ್ಲ. ಆನೆಗಳನ್ನು ಪಳಗಿಸಲಾಗಿದೆ ಎಂದು ತೋರುತ್ತದೆಯಾದರೂ, ಅವು ಜನರಿಗೆ ಹಾನಿ ಮಾಡುವುದಿಲ್ಲ ಎಂದು ಅರ್ಥವಲ್ಲ. ಪಳಗಿದ ಆನೆಗಳು ಕೂಡ ಪ್ರಕ್ಷುಬ್ಧಗೊಂಡಾಗ ಜನರ ಮೇಲೆ ದಾಳಿ ಮಾಡಿದ ಹಲವು ಉದಾಹರಣೆಗಳಿವೆ.

elephants-mahouts-extort-money-blocking-road

ಈ ಕುರಿತ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದು ನಿಖರವಾಗಿ ಯಾವ ಸ್ಥಳದಲ್ಲಿ ನಡೆದಿದೆ ಎಂಬುದರ ಬಗ್ಗೆ ತಿಳಿದಿಲ್ಲವಾದರೂ ಖಂಡಿತ ಭಾರತದಲ್ಲೇ ನಡಿದಿದೆ. ಈ ವಿಡಿಯೋದಲ್ಲಿ ಮಾವುತರು ಆನೆಗಳನ್ನು ಬಳಸಿ ದಾರಿಯನ್ನು ತಡೆದು ವಾಹನ ಸವಾರರಿಂದ ಹಣ ಕೇಳುವುದನ್ನು ನೋಡಬಹುದು. ಬಹುಶಃ ಇಂತಹ ಘಟನೆಯನ್ನು ನೋಡುತ್ತಿರುವುದು ಇದೇ ಮೊದಲಾಗಿರಬಹುದು. ಕಾಡು ಪ್ರಾಣಿಗಳನ್ನು ರಸ್ತೆಗಿಳಿಸಿ ದಬ್ಬಾಳಿಕೆಯಿಂದ ಹಣ ಸುಲಿಗೆ ಮಾಡುವುದು ಭಾರತದಲ್ಲಿ ಕಾನೂನು ಬಾಹಿರ.

ಮಾವುತರು ಇದನ್ನು ಏಕೆ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಬಸ್‌ಗಳನ್ನು ತಡೆದು ಚಾಲಕರು ಮತ್ತು ಪ್ರಯಾಣಿಕರಿಂದ ಹಣ ಕೇಳುತ್ತಿದ್ದಾರೆ. ಆನೆಗಳ ಬೃಹತ್ ಗಾತ್ರದಿಂದ ಸುಲಭವಾಗಿ ಬೆದರುವ ಸವಾರರು, ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಇದನ್ನು ಮಾಡಲಾಗುತ್ತಿದೆ. ಆನೆಗಳು ತರಬೇತಿ ಪಡೆದಿದ್ದರಿಂದ ವಾಹನಗಳಿಗೆ ತೊಂದರೆ ನೀಡುತ್ತಿಲ್ಲ. ಹಣ ನೀಡಲು ಮನಸ್ಸಿಲ್ಲದವರಿಗೆ ಮಾವುತರು ಆನೆಗಳಿಂದ ಬೆದರಿಸುತ್ತಿದ್ದಾರೆ.

elephants-mahouts-extort-money-blocking-road

ಆನೆಗಳು ತಮ್ಮ ಸೊಂಡಿಲನ್ನು ಎತ್ತಿ ವಾಹನ ಸವಾರರನ್ನು ಭಯಭೀತಗೊಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ಎರಡು ಆನೆಗಳಿದ್ದು, ಇದ್ದಕ್ಕಿದ್ದಂತೆ ಅವು ಚಂಚಲಗೊಳ್ಳುವುದನ್ನು ಮತ್ತು ವಿಚಿತ್ರವಾಗಿ ವರ್ತಿಸುವುದನ್ನು ನಾವು ನೋಡಬಹುದು. ಬೈಕ್‌ನಲ್ಲಿದ್ದ ವ್ಯಕ್ತಿ ಭಯಗೊಂಡು ದೂರ ಹೋಗುವಂತೆ ಹೇಳಿ ಹಣ ನೀಡಿರಲಿಲ್ಲ. ಆದ್ರೂ ಮಾವುತರು ಪಟ್ಟುಬಿಡದೆ ಆನೆಗಳನ್ನು ಆತನ ಮೇಲೆ ಪ್ರಚೋದಿಸಿದ್ದಾರೆ.

ಪ್ರಾಣಿ ಸಂರಕ್ಷಣಾ ಸಂಘಗಳು ಈ ಬಗ್ಗೆ ತನಿಖೆ ನಡೆಸಬೇಕು, ಮಾವುತರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಆನೆಯಂತಹ ಕಾಡು ಪ್ರಾಣಿಯನ್ನು ಸಾರ್ವಜನಿಕ ರಸ್ತೆಗಳಿಗೆ ಕರೆತಂದು ಮಾವುತರು ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸುವುದು ಮಾತ್ರವಲ್ಲದೆ ಇತರ ರಸ್ತೆ ಬಳಕೆದಾರರಿಗೆ ಅಪಾಯವನ್ನುಂಟುಮಾಡುತ್ತಿದ್ದಾರೆ. ಸಾಕು ಪ್ರಾಣಿಗಳು ರಸ್ತೆಯಲ್ಲಿ ಸಮಸ್ಯೆ ಉಂಟು ಮಾಡಿರುವ ಹಲವು ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ ಆನೆಗಳು ಈ ರೀತಿ ಕಾಣಿಸಿಕೊಂಡಿರುವುದು ಇದೇ ಮೊದಲು.

ಭಾರತದಲ್ಲಿ, ಪ್ರತಿಯೊಂದು ಟ್ರಾಫಿಕ್ ಸಿಗ್ನಲ್‌ನಲ್ಲಿಯೂ ಭಿಕ್ಷುಕರ ದೊಡ್ಡ ರಾಕೆಟ್ ಇದೆ. ಅವರಲ್ಲಿ ಕೆಲವರು ನಿಜವಾಗಿಯೂ ಅಸಹಾಯಕರಾಗಿದ್ದರೆ, ಇತರರು ಇದನ್ನು ತಮ್ಮ ಅನುಕೂಲಕ್ಕೆ ಹಣವನ್ನು ಗಳಿಸುವ ಸುಲಭ ಮಾರ್ಗವಾಗಿಸಿಕೊಂಡಿದ್ದಾರೆ. ನಮ್ಮಿಂದ ಹಣ ಕೇಳಲು ಅಥವಾ ಬೇಡಿಕೊಳ್ಳಲು ಹೊಸ ತಂತ್ರಗಳನ್ನು ಕಂಡುಕೊಂಡಿದ್ದಾರೆ. ಈಗ ಆನೆಗಳನ್ನು ಬಳಸಿಕೊಂಡು ದಬ್ಬಾಳಿಕೆಗೆ ಮುಂದಾಗಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, October 13, 2023, 15:16 [IST]
English summary
Elephants mahouts extort money blocking road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+