ಇದಲ್ಲವೇ ಭಾರತದ ತಾಕತ್ತು! ಯಾರನ್ನು ಒಪ್ಪದ ವಿಶ್ವದ ಶ್ರೀಮಂತ Chandrayaan-3 ಬಗ್ಗೆ ಹೀಗಂದ್ರು ನೋಡಿ
ಭಾರತದ ತಾಕತ್ತು ಈಗ ವಿಶ್ವ ದೇಶಗಳಿಗೆ ತಿಳಿದಿದೆ, ಕಡಿಮೆ ಬಜೆಟ್‌ನಲ್ಲಿ ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಚಿಮ್ಮಿಸಿ ಮಿಷನ್‌ಗಳನ್ನು ಯಶಸ್ವಿಯಾಗಿಸುವಲ್ಲಿ ಭಾರತವು ತನ್ನ ಸಾಮರ್ಥ್ಯವನ್ನು ಸಾಭೀತುಪಡಿಸಿದೆ. ಹಲವು ದೇಶಗಳ ಗಣ್ಯರು ಇದನ್ನೇ ಹಾಡಿಹೊಗಳುತ್ತಿದ್ದು, ಸ್ಪೇಸ್‌ಎಕ್ಸ್ ಮುಖ್ಯಸ್ಥ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ ಅವರು ಭಾರತವನ್ನು ಶ್ಲಾಘಿಸಿದ್ದಾರೆ.
ಹಾಲಿವುಡ್ ಸಿನಿಮಾವೊಂದರ ಬಜೆಟ್‌ಗಿಂತ ಕಡಿಮೆ ವೆಚ್ಚದಲ್ಲಿ ಭಾರತ chandrayaan-3 ಮಿಷನ್ ಅನ್ನು ಯಶಸ್ವಿಯಾಗಿ ಮಾಡಿರುವುದನ್ನು ಕಂಡು ಶ್ಲಾಘಿಸಿದ್ದಾರೆ. ವಿವರವಾಗಿ ಹೇಳುವುದಾದ್ರೆ ಹಾಲಿವುಡ್ ಸೈಫೈ ಸಿನಿಮಾ ಇಂಟರ್‌ಸ್ಟೆಲ್ಲರ್‌ನ 165 ಮಿಲಿಯನ್ ನಿರ್ಮಾಣ ವೆಚ್ಚಕ್ಕೆ ಹೋಲಿಸಿದರೆ, ಭಾರತದ ಚಂದ್ರಯಾನ-3 ಚಂದ್ರನ ಮಿಷನ್ ಬಜೆಟ್ 75 ಮಿಲಿಯನ್ ಆಗಿದೆ. ಈ ಕುರಿತ ಪೋಸ್ಟ್ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಇದಕ್ಕೆ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.

ಟ್ವೀಟ್‌ನಲ್ಲಿ ಏನಿತ್ತು? "ಚಂದ್ರಯಾನ-3 ಗಾಗಿ ಭಾರತ ವೆಚ್ಚಿಸಿದ್ದಕ್ಕಿಂತ ಇಂಟರ್‌ಸ್ಟೆಲ್ಲರ್ ಸಿನಿಮಾಗಾಗಿ ಎರಡು ಪಟ್ಟು ಹೆಚ್ಚು ಖರ್ಚು ಮಾಡಲಾಗಿದೆ. ಕಂಡಿತ ಇದು ಆಶ್ಚರ್ಯಕ್ಕೊಳಗಾಗುವ ವಿಚಾರ ಎಂದು ಟ್ವಿಟರ್‌ನಲ್ಲಿ ನ್ಯೂಸ್‌ಥಿಂಕ್ ಪೋಸ್ಟ್ ಮಾಡಿತ್ತು. ಮಸ್ಕ್ ಅವರು ಪೋಸ್ಟ್‌ಗೆ ಪ್ರತಿಕ್ರಿಯಿಸಿ ಭಾರತವನ್ನು ಶ್ಲಾಘಿಸಿದ್ದಾರೆ. ಭಾರತದ ತ್ರಿವರ್ಣ ಧ್ವಜದ ಇಮೋಜಿಯೊಂದಿಗೆ ಮುಕ್ತಾಯಗೊಳಿಸುತ್ತಾ, "ಭಾರತಕ್ಕೆ ಒಳ್ಳೆಯದು" ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವದ ಶ್ರೀಮಂತ ವ್ಯಕ್ತಿ ಭಾರತದ ಸಾಧನೆಯನ್ನು ಗುರ್ತಿಸಿ ಶ್ಲಾಘಿಸಿರುವುದು ಸಾಮಾನ್ಯದ ವಿಷಯವಲ್ಲ. ಈತ ಟ್ವಿಟ್ಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ವ್ಯಕ್ತಿ ಹಾಗೂ ಭಾರತದಲ್ಲಿ ತನ್ನ ಟೆಸ್ಲಾ ಕಾರುಗಳನ್ನು ಪರಿಚಯಿಸಲು ಮುಂದಾಗಿ ವಿಫಲವಾದವರು. ಎಲ್ಲದಕ್ಕೂ ಮಿಗಿಲಾಗಿ ಇವರದ್ದೇ ಆದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಿದೆ. ಇವರು ಕೂಡ ರಾಕೆಟ್‌ಗಳನ್ನು ತಯಾರಿಸಿ ನಭಕ್ಕೆ ಚಿಮ್ಮಿಸಿದ್ದಾರೆ.
ಹಾಗಾಗಿ ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಯಶಸ್ವಿಯಾಗಿ ಚಿಮ್ಮಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದರ ಬಗ್ಗೆ ಇವರಿಗೆ ತುಂಬಾನೆ ಅರಿವಿದೆ. ಹಾಗಾಗಿಯೇ ಭಾರತದ ಕಡೆಮೆ ಬಜೆಟ್‌ನ ಚಂದ್ರಯಾನ್-3 ಯಶಸ್ವಿಯನ್ನು ಶ್ಲಾಘಿಸಿದ್ದಾರೆ. ಇವರ ಟೆಸ್ಲಾ ಕಾರುಗಳು ಭಾರತಕ್ಕೆ ಬರುವ ಕುರಿತು ಇನ್ನು ಚರ್ಚೆಗಳು ಮುಂದುವರೆದಿವೆ. ಭಾರತ ಸರ್ಕಾರದ ನಿಯಮಗಳು, ಮಾನದಂಡಗಳನ್ನು ಒಪ್ಪಿಕೊಂಡಲ್ಲಿ ಟೆಸ್ಲಾ ಕಾರುಗಳು ಆದಷ್ಟು ಬೇಗ ಭಾರತಕ್ಕೆ ಎಂಟ್ರಿ ಕೊಡಲಿವೆ.
ಇಲ್ಲಿ ಹಾಲಿವುಡ್ ಸಿನಿಮಾ ಇಂಟರ್‌ಸ್ಟೆಲ್ಲರ್ ಬಗ್ಗೆಯೂ ಹೇಳಲೇಬೇಕು ಇದು ಹಾಲಿವುಡ್ ಸೈಫೈ ಸಿನಿಮಾಗಳಲ್ಲಿಯೇ ಹೆಚ್ಚು ಗುರ್ತಿಸಿಕೊಂಡಿದ್ದ ಚಿತ್ರವಾಗಿದೆ. ಜನಪ್ರಿಯ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್‌ನ ಅವರು ಇಂಟರ್‌ಸ್ಟೆಲ್ಲರ್ ಸಿನಿಮಾದ ನಿರ್ದೇಶಕರು, ಇದು ಬಾಹ್ಯಾಕಾಶ ಸಾಹಸದ ಕುರಿತಾದ ಸಿನಿಮಾವಾಗಿದ್ದು ಈ ಚಿತ್ರವನ್ನು ಒಟ್ಟು $165 ಮಿಲಿಯನ್ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ.

ಯಾರೂ ಮಾಡದ ಸಾಧನೆ: ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಐತಿಹಾಸಿಕ ಘಟನೆಯು ಆಗಸ್ಟ್ 23 ರಂದು ಸಂಜೆ 6:04 IST ಕ್ಕೆ ನಡೆಯಿತು. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಬಳಿ ರೋವರ್ ಅನ್ನು ನಿಯೋಜಿಸಲು ವಿನ್ಯಾಸಗೊಳಿಸಲಾದ 2-ಮೀಟರ್ ಎತ್ತರದ ಲ್ಯಾಂಡರ್ ಅನ್ನು ಒಳಗೊಂಡಿದೆ.
ಇದು ಎರಡು ವಾರಗಳವರೆಗೆ ಪ್ರಯೋಗಗಳ ಸರಣಿಯಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಚಂದ್ರಯಾನ-3 ರ ಮುಖ್ಯ ಉದ್ದೇಶಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುವುದು, ಮಣ್ಣಿನ ರಚನೆಯನ್ನು ನಿರ್ಧರಿಸುವುದು ಮತ್ತು ಚಂದ್ರನ ಭೌಗೋಳಿಕತೆಯನ್ನು ಪರಿಶೀಲಿಸುವುದು. ಚಂದ್ರನ ಮೆಲಿನ ಸಂಭಾವ್ಯ ಸಂಪನ್ಮೂಲಗಳ ಕುರಿತು ಪ್ರಮುಖ ವಿವರಗಳನ್ನು ಮಿಷನ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications