ನಾನು ಮೋದಿಯವರ ಅಭಿಮಾನಿ, ಭಾರತದಲ್ಲಿ ಹೂಡಿಕೆ ಮಾಡಲಿದೆ ಟೆಸ್ಲಾ: ಮೋದಿ ಭೇಟಿ ಮಾಡಿ ಎಲಾನ್ ಮಸ್ಕ್ ಹೇಳಿಕೆ
ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರನ್ನು (Narendra Modi) ಭೇಟಿಯಾದ ಟೆಸ್ಲಾ ಸಂಸ್ಥೆಯ ಸ್ಥಾಪಕ ಎಲಾನ್ ಮಸ್ಕ್, ಭಾರತದಲ್ಲಿ ಟೆಸ್ಲಾವು ಹೂಡಿಕೆ ಮಾಡುವ ಯೋಜನೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ. ಇದರಿಂದ ಭಾರತಕ್ಕೆ ಟೆಸ್ಲಾ ಬರಬೇಕೆಂಬ ಬಹುಕಾಲದ ಭಾರತೀಯರ ಕನಸು ನನಸಾಗುವಂತೆ ಕಾಣುತ್ತಿದೆ ಎಂದು ಆಟೋಮೊಬೈಲ್ ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.
ಮೋದಿಯವರನ್ನು ಭೇಟಿ ಮಾಡಿ ಮಾತನಾಡಿದ ಟೆಲಾನ್ ಮಸ್ಕ್, ಭಾರತದಲ್ಲಿ ಟೆಸ್ಲಾವು ಹೂಡಿಕೆಯನ್ನು ನಡೆಸಲು ಬಹಳ ದಿನಗಳಿಂದ ಯೋಜನೆಗಳನ್ನು ರೂಪಿಸುತ್ತಿದ್ದು, ಆದಷ್ಟು ಬೇಗ ನಾವು ಭಾರತದಲ್ಲಿ ಉತ್ಪಾದಕಾ ಘಟಕವನ್ನು ಸ್ಥಾಪಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಮಾಹಿತಿಗಳ ಪ್ರಕಾರ ಎಲಾನ್ ಮಸ್ಕ್ ಸದ್ಯದಲ್ಲೇ, ಟೆಸ್ಲಾ ಭಾರತಕ್ಕೆ ಆಗಮಿಸುವ ಕುರಿತಾಗಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಟೆಸ್ಲಾವು ಭಾರತಕ್ಕೆ ಬಂದದ್ದೇ ಆದಲ್ಲಿ ಭಾರತೀಯ ಎಲೆಕ್ಟ್ರಿಕ್ ಆಟೋಮೊಬೈಲ್ ಕ್ಷೇತ್ರಕ್ಕೆ ಅದೊಂದು ದೊಡ್ಡ ಬಲವಾಗಲಿದೆ. ಮಾಹಿತಿಗಳ ಪ್ರಕಾರ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾತುಕತೆಯ ವೇಳೆ ಟೆಸ್ಲಾ ಬಳಿ, ಭಾರತದಲ್ಲಿ ಗಮನಾರ್ಹವಾದ ಹೂಡಿಕೆಯನ್ನು ಮಾಡಬೇಕೆಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಸಂವಾದದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಭಾರತಕ್ಕೆ ಟೆಸ್ಲಾ ಸದ್ಯದಲ್ಲೇ ಆಗಮಿಸುವ ಕುರಿತಾಗಿ ಹೇಳಿದ್ದಾರೆ. ಇನ್ನು ಅವರು ಇದೇ ವೇಳೆ, ಟೆಸ್ಲಾ ಭಾರತಕ್ಕೆ ಕಾಲಿಡಲು ಬೆಂಬಲ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಸ್ತುತ ಭಾರತ ವಿಶ್ವದ ಇತರ ಯಾವುದೇ ದೊಡ್ಡ ದೇಶಗಳಿಗಿಂತ ವೇಗದಲ್ಲಿ ಮುನ್ನುಗ್ಗುತ್ತಿದೆ. ಭಾರತದ ಬೆಳವಣಿಗೆಯಲ್ಲಿ ಪ್ರಧಾನಿ ಮೋದಿಯವರು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. ಹೀಗಾಗಿ ನಾನು ಮೋದಿಯವರ ಅಭಿಮಾನಿ ಎಂದು ಪತ್ರಕರ್ತರೊಂದಿಗೆ ತಮ್ಮ ಮನದಾಳದ ಅಭಿಪ್ರಾಯಗಳನ್ನು ಮಸ್ಕ್ ಎಲಾನ್ ಇದೇ ಸಂಧರ್ಭದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಪ್ರಧಾನಿ ಮೋದಿಯವರ ಅಮೇರಿಕಾ ಪ್ರವಾಸಕ್ಕೂ ಒಂದು ತಿಂಗಳು ಮೊದಲು ಎಲಾನ್ ಮಸ್ಕ್, ನಾವು ಈ ವರ್ಷದ ಕೊನೆಯಲ್ಲಿ ಆರಂಭಿಸಬೇಕು ಎಂದಿರುವ ಟೆಸ್ಲಾದ ಹೊಸ ಫ್ಯಾಕ್ಟರಿಯನ್ನು ಆರಂಭಿಸಲು ಸೂಕ್ತ ಜಾಗದ ಹುಡುಕಾಟದಲ್ಲಿದ್ದೇವೆ. ಈಗಾಗಲೇ ಕೆಲವು ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದರು ಎಂಬುದನ್ನು ನಾವು ಈ ಸಂಧರ್ಭದಲ್ಲಿ ಗಮನಿಸಬೇಕು.
ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ವಿಶ್ವದ ಪ್ರಸಿದ್ದ ಕಾರುಗಳಲ್ಲಿ ಒಂದು. ಈ ಹಿಂದೆ ಹಲವು ಬಾರಿ ಭಾರತಕ್ಕೆ ಟೆಸ್ಲಾ ಬರಲಿದೆ ಎಂಬ ಎಂದು ವದಂತಿಗಳು ಹರಿದಾಡಿದ್ದರೂ ಅದ್ಯಾವುದೂ ನಿಜವಾಗಿರಲಿಲ್ಲ. ಇದೀಗ ಟೆಸ್ಲಾ ಮುಖ್ಯಸ್ಥನೇ ಭಾರತದಲ್ಲಿ ಟೆಸ್ಲಾ ಆಗಮಿಸಲಿದೆ ಎಂದು ಹೇಳಿದ್ದು, ಇದು ನಿಜವಾಗುವ ಕಾಲ ಬಹಳ ದೂರವಿಲ್ಲ ಎಂದು ಕಾಣುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications