ಪೆಟ್ರೋಲ್ ಕಾರುಗಳ ಅಭಿಮಾನಿಯಾಗಿದ್ದ ಈತ ಈಗ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಟೆಸ್ಲಾ ಕಾರು ತಯಾರಕ ಕಂಪನಿಯ ಸಿಇಒ ಎಲಾನ್ ಮಸ್ಕ್, ಇಂದು ತಾವು ಬಯಸುವ ಕಾರನ್ನು ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು 20 ವರ್ಷಗಳಿಂದ ಕಾರುಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.

ಪೆಟ್ರೋಲ್ ಕಾರುಗಳ ಅಭಿಮಾನಿಯಾಗಿದ್ದ ಈತ ಈಗ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ

ಎಲಾನ್ ಮಸ್ಕ್ 1999ರಲ್ಲಿ ತಮ್ಮ ಮೊದಲ ಸೂಪರ್ ಕಾರ್ ಆದ ಮೆಕ್ಲಾರೆನ್ ಎಫ್ 1 ಕಾರನ್ನು ಖರೀದಿಸಿದ್ದರು. ಆ ಸಮಯದಲ್ಲಿ ಈ ಕಾರು ವಿಶ್ವದ ಅತಿ ವೇಗದ ಕಾರ್ ಆಗಿತ್ತು. ಸಿಎನ್ಎನ್ ಚಾನೆಲ್ ವೀಡಿಯೊವೊಂದನ್ನು ಪೋಸ್ಟ್ ಮಾಡಿದೆ. ಈ ವೀಡಿಯೊದಲ್ಲಿ ಎಲಾನ್ ಮಸ್ಕ್ ಸಿಲಿಕಾನ್ ವ್ಯಾಲಿಯಲ್ಲಿ ಈ ಕಾರಿನ ವಿತರಣೆಯನ್ನು ಪಡೆಯುತ್ತಿರುವುದನ್ನು ಕಾಣಬಹುದು. ಹೊಸ ಮೆಕ್ಲಾರೆನ್ ಎಫ್ 1 ಕಾರಿನ ವಿತರಣೆ ಪಡೆಯುವಾಗ ಎಲಾನ್ ಮಸ್ಕ್ ಹಾಗೂ ಅವರ ಮ್ಯಾನೇಜರ್ ಉತ್ಸುಕರಾಗಿರುವುದನ್ನು ಕಾಣಬಹುದು.

ಪೆಟ್ರೋಲ್ ಕಾರುಗಳ ಅಭಿಮಾನಿಯಾಗಿದ್ದ ಈತ ಈಗ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ

ಈ ಮಿಲಿಯನ್ ಡಾಲರ್ ಕಾರು ತಮ್ಮ ಕನಸಿನ ಕಾರು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಈ ಸೂಪರ್ ಕಾರಿನ 62 ಯೂನಿಟ್'ಗಳನ್ನು ಮಾತ್ರ ವಿಶ್ವಾದ್ಯಂತ ಮಾರಾಟ ಮಾಡಲಾಗಿತ್ತು. ಈ ಅಪರೂಪದ ಸೂಪರ್ ಕಾರ್ ಖರೀದಿಸಿದವರ ಪಟ್ಟಿಗೆ ಎಲಾನ್ ಮಸ್ಕ್ ಸಹ ಸೇರಿದ್ದಾರೆ. ಈ ಕಾರಿನ ವಿತರಣೆ ಪಡೆದ ನಂತರ ಅವರು ಭಾವುಕರಾಗುತ್ತಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪೆಟ್ರೋಲ್ ಕಾರುಗಳ ಅಭಿಮಾನಿಯಾಗಿದ್ದ ಈತ ಈಗ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ

3 ವರ್ಷಗಳ ಹಿಂದೆ ನಾನು ವೈಎಂಸಿಯಲ್ಲಿ ಸ್ನಾನ ಮಾಡುತ್ತಿದ್ದೆ. ನನ್ನ ಕಚೇರಿಯ ಮಹಡಿಯಲ್ಲಿ ರಾತ್ರಿ ಮಲಗುತ್ತಿದ್ದೆ. ಆದರೆ ಈಗ ನಾನು ಒಂದು ಮಿಲಿಯನ್ ಡಾಲರ್ ಕಾರನ್ನು ಖರೀದಿಸಿದ್ದೇನೆ. ಈ ಕ್ಷಣ ನನಗೆ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಪೆಟ್ರೋಲ್ ಕಾರುಗಳ ಅಭಿಮಾನಿಯಾಗಿದ್ದ ಈತ ಈಗ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ

ಮೆಕ್ಲಾರೆನ್ ಎಫ್ 1 ಕಾರಿನಲ್ಲಿ ನ್ಯಾಚುರಲಿ ಆಸ್ಪಿರೇಟೆಡ್ ವಿ 12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 618 ಬಿಹೆಚ್‌ಪಿ ಪವರ್ ಹಾಗೂ 627 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮೆಕ್ಲಾರೆನ್ ಎಫ್ 1 ಸೂಪರ್ ಕಾರು 3.2 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪೆಟ್ರೋಲ್ ಕಾರುಗಳ ಅಭಿಮಾನಿಯಾಗಿದ್ದ ಈತ ಈಗ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ

ಈ ಕಾರು ಆ ಕಾಲದ ಅತಿ ವೇಗದ ಕಾರುಗಳಲ್ಲಿ ಒಂದಾಗಿತ್ತು. ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ತಯಾರಿಸುವ ಕಂಪನಿಯ ಸಿಇಒ ಆಗಿರುವ ಎಲಾನ್ ಮಸ್ಕ್ ಕೆಲವು ವರ್ಷಗಳ ಹಿಂದೆ ಪೆಟ್ರೋಲ್ ಕಾರುಗಳ ಅಭಿಮಾನಿಯಾಗಿದ್ದರು ಎಂಬುದು ಗಮನಾರ್ಹ.

ಪೆಟ್ರೋಲ್ ಕಾರುಗಳ ಅಭಿಮಾನಿಯಾಗಿದ್ದ ಈತ ಈಗ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ

ವೀಡಿಯೊದಲ್ಲಿ ಎಲಾನ್ ಮಸ್ಕ್ ಇದು ವಿಶ್ವದ ಅತಿ ವೇಗದ ಕಾರು ಎಂದು ಹೇಳಿದ್ದಾರೆ. ಈ ಕಾರು ಖರೀದಿಸುವ ಸಮಯದಲ್ಲಿ ಎಲಾನ್ ಮಸ್ಕ್ ಎಕ್ಸ್ ಡಾಟ್ ಕಾಮ್ ನ ಸಿಇಒ ಆಗಿದ್ದರು. ಈಗ ಆ ಕಂಪನಿಯನ್ನು ಪೇಪಾಲ್ ಎಂದು ಕರೆಯಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೆಕ್ಲಾರೆನ್ ಎಫ್ 1 ಕಾರಿನ ಉತ್ಪಾದನೆಯನ್ನು 1992ರಲ್ಲಿ ಆರಂಭಿಸಲಾಯಿತು. ಈ ಕಾರು ಆ ಕಾಲದ ಅತ್ಯಂತ ಆಧುನಿಕ ಕಾರು ಎಂದು ಪರಿಗಣಿಸಲ್ಪಟ್ಟಿತು. ಈ ಕಾರಿಗೆ ರೇಸಿಂಗ್ ವಿನ್ಯಾಸವನ್ನು ನೀಡಲಾಗಿತ್ತು. ಮೂರು ಸೀಟುಗಳ ಮಾದರಿಯ ಈ ಕಾರಿನ ಮಧ್ಯದಲ್ಲಿ ಚಾಲಕನ ಆಸನವಿದೆ.

ಪೆಟ್ರೋಲ್ ಕಾರುಗಳ ಅಭಿಮಾನಿಯಾಗಿದ್ದ ಈತ ಈಗ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಸಿಇಒ

ಈ ಸೂಪರ್ ಕಾರಿನ ಚಾಸಿಸ್ ಹಾಗೂ ಎಕ್ಸ್ ಟಿರಿಯರ್ ಅನ್ನು ಕಾರ್ಬನ್ ಫೈಬರ್ ಹಾಗೂ ಟಿಟಾನಿಯಂನಂತಹ ವಸ್ತುಗಳಿಂದ ತಯಾರಿಸಲಾಗಿದೆ. ಕಾರಿನ ಇಂಟಿರಿಯರ್'ಗೆ ಕೆವ್ಲರ್ ಕೋಟಿಂಗ್ ನೀಡಲಾಗಿದೆ.

Most Read Articles

Kannada
English summary
Elon Musk took delivery of Mclaren F1 Supercar in 1999. Read in Kannada.
Story first published: Tuesday, January 12, 2021, 16:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X