ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ಕರೋನಾ ಸಂಕಷ್ಟದ ನಡುವೆ ಹಲವು ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಹಾಗೂ ವಿವಿಧ ರಾಜ್ಯ ಸರ್ಕಾರಗಳಿಗೆ ನೆರವು ನೀಡುತ್ತಿವೆ. ಈಗ ದೇಶದ ಖ್ಯಾತ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐ‌ಎಲ್) ಸಹ ನೆರವು ನೀಡಲು ಮುಂದಾಗಿದೆ.

ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್ ಇಂಡಸ್ಟ್ರೀಸ್'ನ ಇಂಧನ ಮಾರಾಟ ಅಂಗವಾದ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (ಆರ್‌ಬಿಎಂಎಲ್) ತುರ್ತು ಸೇವೆಗಳಲ್ಲಿ ತೊಡಗಿರುವ ವಾಹನಗಳಿಗೆ ಉಚಿತ ಪೆಟ್ರೋಲ್, ಡೀಸೆಲ್ ಒದಗಿಸಲು ಮುಂದಾಗಿದೆ. ಕಂಪನಿಯು ರಿಲಯನ್ಸ್ ಫೌಂಡೇಶನ್ ಸಹಯೋಗದೊಂದಿಗೆ ಕಳೆದ ಮಾರ್ಚ್‌ನಲ್ಲಿ ದೇಶಾದ್ಯಂತ ಕೋವಿಡ್ 19 ತುರ್ತು ಸೇವೆ ನೀಡುತ್ತಿರುವ ವಾಹನಗಳಿಗೆ ಉಚಿತ ಇಂಧನ ಒದಗಿಸಲು ಮುಂದಾಗಿತ್ತು.

ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್‌ನ ಉಚಿತ ಇಂಧನ ಯೋಜನೆಯನ್ನು ಈಗ ದೇಶದ ಹಲವು ನಗರಗಳಿಗೆ ವಿಸ್ತರಿಸಲಾಗುತ್ತಿದೆ. ಮುಂಬೈನಲ್ಲಿರುವ ಕಂಪನಿಯ ಇಂಧನ ಕೇಂದ್ರಗಳು ನಗರದ ಹೊರಗಿವೆ. ಇದರಿಂದ ಕೋವಿಡ್ 19 ಸೇವೆಗಳಿಗೆ ನಿಯೋಜಿಸಲಾದ ನಗರದ ಆಂಬುಲೆನ್ಸ್‌ಗಳಿಗೆ ಇಂಧನವನ್ನು ಒದಗಿಸಲು ಕಂಪನಿಯು ಇಂದು ಮೊಬೈಲ್ ಫ್ಯೂಯಲ್ ಬೌಸರ್'ಗೆ ಚಾಲನೆ ನೀಡಿದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ಈ ಬೌಸರ್ ಅನ್ನು ಎಂಸಿಜಿಎಂ ವರ್ಲಿಯಲ್ಲಿ ನಿಯೋಜಿಸಲಾಗುವುದು. ಈ ಯೋಜನೆಯಡಿ ಮೇ ತಿಂಗಳಿನಲ್ಲಿ ಭಾರತದಾದ್ಯಂತವಿರುವ 21,080 ತುರ್ತು ವಾಹನಗಳಿಗೆ ರೂ.7.30 ಕೋಟಿ ಮೌಲ್ಯದ 811.07 ಕಿ.ಲೀ (ಕೆಎಲ್) ಇಂಧನವನ್ನು ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.

ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ಈ ಯೋಜನೆಯು ಜೂನ್ ತಿಂಗಳ 30ರವರೆಗೆ ಮುಂದುವರೆಯಲಿದೆ ಎಂದು ಕಂಪನಿ ತಿಳಿಸಿದೆ. ಈ ಅವಧಿಯಲ್ಲಿ ತುರ್ತು ವಾಹನಗಳಿಗೆ ಪ್ರತಿ ದಿನ 50ರಿಂದ 60 ಕಿ.ಲೀ ಉಚಿತ ಇಂಧನವನ್ನು ಒದಗಿಸಲಾಗುವುದು ಎಂದು ಕಂಪನಿ ತಿಳಿಸಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ಈ ಯೋಜನೆಯಡಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ನೋಂದಾಯಿತ ತುರ್ತು ವಾಹನಗಳು ಯಾವುದೇ ಶುಲ್ಕ ಪಾವತಿಸದೇ ದೇಶಾದ್ಯಂತವಿರುವ ರಿಲಯನ್ಸ್‌ನ 1,421 ಇಂಧನ ಕೇಂದ್ರಗಳಲ್ಲಿ ಇಂಧನ ತುಂಬಿಸಿ ಕೊಳ್ಳಬಹುದು.

ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ಈ ವಾಹನಗಳಿಗೆ ಉಚಿತ ಇಂಧನ ನೀಡಲಾಗುತ್ತದೆ

ಕೋವಿಡ್ 19 ರೋಗಿಗಳನ್ನು ಸಾಗಿಸಲು ಬಳಸುವ ಆಂಬುಲೆನ್ಸ್‌ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ವಾಹನಗಳು

ಮೆಡಿಕಲ್ ಆಕ್ಸಿಜನ್ ಸಾಗಿಸುವ ಸರ್ಕಾರಿ ಹಾಗೂ ಖಾಸಗಿ ವಾಹನಗಳು

ಕೋವಿಡ್ ಆರೈಕೆ ತುರ್ತು ಸೇವೆಗಾಗಿ ಮುಖ್ಯಮಂತ್ರಿಗಳ ಕಚೇರಿಯಿಂದ ನಿಯೋಜಿಸಲಾದ ಎಲ್ಲಾ ಅಧಿಕೃತ ವಾಹನಗಳು

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ಹಗಲು ರಾತ್ರಿ ಕೆಲಸ ಮಾಡುವ ಜನರನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ ಎಂದು ಆರ್‌ಬಿಎಂಎಲ್ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕರೋನಾ ವೈರಸ್ ಸಾಂಕ್ರಾಮಿಕ ರೋಗವು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ಈ ಪರಿಸ್ಥಿತಿಯಲ್ಲಿ ದೇಶಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ. ನಾವು ನಮ್ಮ ಸಂಪನ್ಮೂಲಗಳನ್ನು ಆರೋಗ್ಯ ಸೇವೆಗಳಿಗೆ ಬಳಸುತ್ತೇವೆ. ಈ ಕಷ್ಟದ ಸಮಯದಲ್ಲಿ ದೇಶದ ಜನರ ಸುರಕ್ಷತೆಗಾಗಿ ದುಡಿಯುವ ಜನರಿಗೆ ಬೆಂಬಲ ನೀಡುತ್ತೇವೆ ಎಂದು ಕಂಪನಿ ಹೇಳಿದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ತುರ್ತು ಸೇವೆ ವಾಹನಗಳಿಗೆ ಉಚಿತ ಇಂಧನ ನೀಡಲಿದೆ ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್ ಕಂಪನಿಯು ಕರೋನಾ ಸಂಕಷ್ಟದ ಸಮಯದಲ್ಲಿ ಆಕ್ಸಿಜನ್ ಪೂರೈಕೆಯಿಂದ ಕೋವಿಡ್ ಆಸ್ಪತ್ರೆಯನ್ನು ತೆರೆಯುವವರೆಗೆ ಸಾಧ್ಯವಿರುವ ಎಲ್ಲ ನೆರವನ್ನು ಸರ್ಕಾರಗಳಿಗೆ ನೀಡಿದೆ. ಮುಂದಿನ ಐದು ವರ್ಷಗಳಲ್ಲಿ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ ತನ್ನ ಇಂಧನ ವ್ಯಾಪಾರ ಜಾಲವನ್ನು 5500ಕ್ಕೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಸಹಭಾಗಿತ್ವವು ಮುಂಬರುವ ದಿನಗಳಲ್ಲಿ 45 ವಿಮಾನ ನಿಲ್ದಾಣಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ರಿಲಯನ್ಸ್ ಫೌಂಡೇಶನ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಲೋಕೋಪಕಾರಿ ಅಂಗವಾಗಿದೆ.

Most Read Articles

Kannada
English summary
Emergency vehicles to get free fuel from Reliance BP Mobility. Read in Kannada.
Story first published: Wednesday, June 2, 2021, 20:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X