ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ವಿಮಾನ ಪ್ರಯಾಣವು ಸಹಜ ಎನ್ನುವ ಪರಿಸ್ಥಿತಿಯಿದ್ದರೂ ಕೆಲವರಿಗೆ ವಿಮಾನಗಳಲ್ಲಿ ಪ್ರಯಾಣಿಸಬೇಕೆಂಬ ಮಹಾದಾಸೆಯಿರುತ್ತದೆ. ಕೆಲವರು ಪ್ರೀಮಿಯಂ ವಿಮಾನಗಳಲ್ಲಿ ಪ್ರಯಾಣಿಸಬೇಕೆಂಬ ಕನಸು ಕಾಣುತ್ತಾರೆ.

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ಪ್ರೀಮಿಯಂ ವಿಮಾನಗಳಲ್ಲಿ ಹಲವಾರು ಸೌಲಭ್ಯಗಳಿರುತ್ತವೆ. ಈ ವಿಮಾನಗಳಲ್ಲಿ ಪ್ರಯಾಣಿಸುವಾಗ ಸ್ಟಾರ್ ಹೋಟೆಲ್‌ನಲ್ಲಿರುವಂತಹ ಅನುಭವ ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ಮಿಲಿಯನೇರ್‌ಗಳು ತಮ್ಮ ಪ್ರವಾಸಗಳಿಗೆ ಪ್ರೀಮಿಯಂ ವಿಮಾನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ತನ್ನ ಪ್ರೀಮಿಯಂ ಎ 380 ವಿಮಾನದ ಫೋಟೋಗಳನ್ನು ಬಿಡುಗಡೆಗೊಳಿಸಿದೆ. ಈ ಫೋಟೋಗಳನ್ನು ಉದ್ಯಮಿಗಳನ್ನು ಹಾಗೂ ಶ್ರೀಮಂತರನ್ನು ಆಕರ್ಷಿಸಲು ಬಿಡುಗಡೆಗೊಳಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ಈ ವಿಮಾನವು ಎಲ್ಲಾ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದೆ. ಈ ವಿಮಾನದಲ್ಲಿರುವ ಸೌಲಭ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಈ ವಿಮಾನದ ಪ್ರತಿ ಸೀಟಿನಲ್ಲೂ ಪ್ರತ್ಯೇಕ ಟಿವಿ ಸ್ಕ್ರೀನ್ ಸೇರಿದಂತೆ ಹಲವಾರು ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿದೆ.

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ಈ ವಿಮಾನವು ಒಟ್ಟು 56 ಸೀಟುಗಳನ್ನು ಹೊಂದಿದೆ. ಕೆಲವು ವಿಶೇಷ ರೈಲುಗಳಲ್ಲಿರುವಂತೆ ಈ ವಿಮಾನವು ಖಾಸಗಿ ಕೊಠಡಿ ಹಾಗೂ ಕ್ಯಾಪ್ಟನ್ ಸೀಟ್ ಅನ್ನು ಸಹ ಹೊಂದಿದೆ. ಈ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರಶಾಂತವಾದ ಹಾಗೂ ಏಕಾಂಗಿಯಾದ ಭಾವನೆಯನ್ನು ಪಡೆಯಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ಈ ವಿಮಾನದಲ್ಲಿ ಪ್ರತ್ಯೇಕವಾದ ಶೌಚಾಲಯ ಹಾಗೂ ವಾಶ್‌ಬಾಸಿನ್‌ಗಳಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಐಷಾರಾಮಿ ಸ್ಟಾರ್ ಹೋಟೆಲ್‌ಗಳಲ್ಲಿರುವಂತಹ ಮಿನಿ ಬಾರ್ ಸೌಲಭ್ಯವನ್ನು ಈ ವಿಮಾನದಲ್ಲಿ ನೀಡಲಾಗಿದೆ.

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ಪ್ರಯಾಣಿಕರನ್ನು ಅತಿಥಿಗಳ ರೀತಿ ಉಪಚರಿಸಲು ಏರ್ ಹೊಸ್ಟೆಸ್'ಗಳನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ಪ್ರತಿ ಸೀಟಿನಲ್ಲೂ ಆಹಾರವನ್ನು ಸಂಗ್ರಹಿಸಲು ಟೇಬಲ್'ಗಳನ್ನು ಒದಗಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ಖಾಸಗಿ ಆಸನಗಳಿಗೆ ವಿಶೇಷ ಟೇಬಲ್ ಹಾಗೂ ಟಿವಿ ಸೆಟ್ ಸೌಲಭ್ಯವನ್ನು ನೀಡಲಾಗಿದೆ. 13.3 ಇಂಚುಗಳ ಈ ಟಿವಿ ಸ್ಕ್ರೀನ್ ಮೂಲಕ ಪ್ರಯಾಣಿಕರು ಸಂಗೀತ, ಸಿನಿಮಾ ಹಾಗೂ ಸುದ್ದಿ ಸೇರಿದಂತೆ ವಿವಿಧ ಮನರಂಜನಾ ಸೌಲಭ್ಯಗಳನ್ನು ಪಡೆಯಬಹುದು.

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ಮೊಬೈಲ್ ಫೋನ್, ಎಸಿ ಕಂಟ್ರೋಲ್ ಹಾಗೂ ಲ್ಯಾಪ್ ಟಾಪ್ ಗಳನ್ನು ಚಾರ್ಜ್ ಮಾಡಲು ಪ್ಲಗ್ ಪಾಯಿಂಟ್'ಗಳನ್ನು ನೀಡಲಾಗಿದೆ. ಈ ವಿಮಾನದಲ್ಲಿರುವ ಸೀಟುಗಳನ್ನು 6 ರೀತಿಯಲ್ಲಿ ಅಡ್ಜಸ್ಟ್ ಮಾಡಬಹುದು ಎಂದು ಹೇಳಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ಈ ವಿಮಾನದಲ್ಲಿ ಲೆದರ್ ಬ್ಲಾಂಕೆಟ್ ಸೀಟುಗಳನ್ನು ಅಳವಡಿಸಲಾಗಿದೆ. ಈ ಸೀಟುಗಳಲ್ಲಿ ತಲೆ, ತೋಳು ಹಾಗೂ ಕಾಲುಗಳ ವಿಶ್ರಾಂತಿಗಾಗಿಯೇ ವಿಶೇಷವಾದ ಸ್ಪಂಜು ಹಾಗೂ ದಿಂಬುಗಳನ್ನು ನೀಡಲಾಗಿದೆ.

ಸ್ಟಾರ್ ಹೊಟೇಲ್ ಅನುಭವವನ್ನು ನೀಡುತ್ತದೆ ಈ ಪ್ರೀಮಿಯಂ ವಿಮಾನದ ಪ್ರಯಾಣ

ಈ ವಿಮಾನದಲ್ಲಿ ಪ್ರಯಾಣಿಸುವವರು ಸ್ಟಾರ್ ಹೊಟೇಲ್ ಅನುಭವವನ್ನು ಪಡೆಯುವುದು ಖಚಿತ. ಈಗ ಬಿಡುಗಡೆಯಾಗಿರುವ ಫೋಟೋಗಳನ್ನು ನೋಡಿದರೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ವಿಮಾನದಲ್ಲಿ ಹೋಗಬೇಕೆಂದು ಅನಿಸದೇ ಇರಲಾರದು.

Most Read Articles

Kannada
English summary
Emirates Airlines releases photos of Airbus A 380. Read in Kannada.
Story first published: Wednesday, December 30, 2020, 17:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X