25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯವು (ಇಡಿ) ಚೆನ್ನೈನಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಭವ್ಯ ಬಂಗಲೆಯ ಮೇಲೆ ದಾಳಿ ನಡೆಸಿ ಹಲವಾರು ಅತ್ಯಾಧುನಿಕ ಐಷಾರಾಮಿ ಕಾರು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದೆ. ಜಾರಿ ನಿರ್ದೇಶನಾಲಯವು ಬೇನಾಮಿ ಆಸ್ತಿ ಎಂದು ಪರಿಗಣಿಸಿರುವ ಈ ಬಂಗಲೆಯು ಸುಖೇಶ್ ಚಂದ್ರಶೇಖರ್ ಎಂಬುವವರಿಗೆ ಸೇರಿದೆ.

25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಈ ಬಂಗಲೆಯಲ್ಲಿದ್ದ ದುಬಾರಿ ಬೆಲೆಯ ರಗ್ಗು, ಇಟಾಲಿಯನ್ ಮಾರ್ಬಲ್, ಅಲಂಕೃತ ದೀಪಗಳಂತಹ ಐಷಾರಾಮಿ ವಸ್ತುಗಳನ್ನು ಹೊರತುಪಡಿಸಿ ಜಾರಿ ನಿರ್ದೇಶನಾಲಯವು ರೂ. 20 ಕೋಟಿಗೂ ಹೆಚ್ಚು ಮೌಲ್ಯದ 16 ಕ್ಕೂ ಹೆಚ್ಚು ಕಾರುಗಳನ್ನು ವಶಪಡಿಸಿಕೊಂಡಿದೆ. ಜಾರಿ ನಿರ್ದೇಶನಾಲಯವು ವಶಕ್ಕೆ ಪಡೆದಿರುವ ಎಲ್ಲಾ ವಾಹನಗಳ ಚಿತ್ರಗಳು ಲಭ್ಯವಾಗಿಲ್ಲ. ಆದರೆ ಲಭ್ಯವಿರುವ ಕೆಲವು ಚಿತ್ರಗಳು ಟಾಪ್ ಎಂಡ್ ಕಾರುಗಳನ್ನು ತೋರಿಸುತ್ತವೆ.

25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯವು Mercedes Benz AMG G63, Bentley Bentayga, Mercedes Maybach S Class, Land Rover Range Rover,Bentley Flying Spur, Toyota Fortuner, Isuzu D MaX V Cross ಕಾರುಗಳನ್ನು ವಶಪಡಿಸಿಕೊಂಡಿದೆ. ಇದರ ಜೊತೆಗೆ ಜಾರಿ ನಿರ್ದೇಶನಾಲಯದಅಧಿಕಾರಿಗಳು Lamborghini ಹಾಗೂ ಆಮದು ಮಾಡಿ ಕೊಂಡಿರುವ Cadillac Escalade ಎಸ್‌ಯುವಿಯನ್ನು ಸಹ ವಶಪಡಿಸಿಕೊಂಡಿದ್ದಾರೆ.

25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ವಶಪಡಿಸಿಕೊಂಡಿರುವ ಈ ಎಲ್ಲಾ ವಾಹನಗಳ ಬೆಲೆ ಸುಮಾರು ರೂ. 25 ಕೋಟಿಗಳಾಗುತ್ತದೆ. ಇದರಲ್ಲಿ Mercedes Maybach S Class ಕಾರಿನ ಬೆಲೆ ರೂ. 2 ಕೋಟಿಗಳಾದರೆ, Land Rover Range Rover ಕಾರಿನ ಬೆಲೆ ರೂ. 2 ಕೋಟಿಗಳಾಗಿದೆ. ಇನ್ನು Bentley Flying Spar ಕಾರಿನ ಬೆಲೆ ರೂ. 3.5 ಕೋಟಿ, Bentley Bentayga ಕಾರಿನ ಬೆಲೆ ರೂ. 4.5 ಕೋಟಿಗಳಾದರೆ, G Wagon ರೂ. 3 ಕೋಟಿಗಳಾಗಿದೆ.

25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಇನ್ನು ಎರಡು Toyota Fortuner ಕಾರುಗಳ ಬೆಲೆ ರೂ. 80 ಲಕ್ಷಗಳಾದರೆ, Isuzu D MaX V Cross ಕಾರಿನ ಬೆಲೆ ರೂ. 20 ಲಕ್ಷಗಳಾಗಿದೆ. ಈ ಕಾರುಗಳಲ್ಲದೇ ಜಾರಿ ನಿರ್ದೇಶನಾಲಯವು ಇನ್ನೂ ಹಲವಾರು ಕಾರುಗಳನ್ನು ವಶಕ್ಕೆ ಪಡೆದಿದೆ. ಆದರೆ ಆ ಕಾರುಗಳ ವಿವರ ತಿಳಿದು ಬಂದಿಲ್ಲ. ಈ ಎಲ್ಲಾ ವಾಹನಗಳು ಈಗ ಜಾರಿ ನಿರ್ದೇಶನಾಲಯದ ವಶದಲ್ಲಿವೆ.

25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಈ ಎಲ್ಲಾ ವಾಹನಗಳ ಮಾಲೀಕರು ಸದ್ಯಕ್ಕೆ ದೆಹಲಿಯ ರೋಹಿಣಿ ಜೈಲಿನಲ್ಲಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸುಖೇಶ್ ಚಂದ್ರಶೇಖರ್ ರವರು ಒಂದು ವರ್ಷದ ಅವಧಿಯಲ್ಲಿ ಉದ್ಯಮಿಗಳಿಂದ ರೂ. 200 ಕೋಟಿಗೂ ಹೆಚ್ಚು ಹಣವನ್ನು ಸುಲಿಗೆ ಮಾಡಿದ ಆರೋಪ ಹೊತ್ತಿದ್ದಾರೆ.

25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಅವರ ವಿರುದ್ಧ 20 ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳನ್ನು ದಾಖಲಿಸ್ಲಾಗಿದೆ. ಚಂದ್ರಶೇಖರ್ ಜೈಲಿನೊಳಗೆ ಇದ್ದು ಕೊಂಡೇ ಮೊಬೈಲ್ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸುಖೇಶ್ ಚಂದ್ರಶೇಖರ್ ಅವರೊಂದಿಗೆ ಜೈಲಿನಲ್ಲಿರುವ ಲೀನಾ ಮರಿಯಾ ಪಾಲ್ ಅವರನ್ನು ಸಹ ವಿಚಾರಣೆಗೆ ಒಳಪಡಿಸಿದೆ.

25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಲೀನಾ ಮರಿಯಾ ಪಾಲ್ ನಟಿಯಾಗಿದ್ದು, ವರ್ಷಗಳ ಹಿಂದೆ ಬ್ಯಾಂಕ್ ಹಗರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆಕೆ ಬ್ಯಾಂಕಿನಿಂದ ಪಡೆದ ಹಣವನ್ನು ಹಿಂಪಡೆಯಲು ಪೊಲೀಸರು ಆಕೆಯ ದೆಹಲಿ ಫಾರ್ಮ್ ಹೌಸ್ ನಿಂದ ಹಲವಾರು ಅತ್ಯಾಧುನಿಕ ಕಾರುಗಳನ್ನು ವಶಪಡಿಸಿಕೊಂಡಿದ್ದರು. ಆಕೆಯಿಂದ ವಶಪಡಿಸಿಕೊಂಡ ಕಾರುಗಳಲ್ಲಿ Rolls Royce Phantom ಸಹ ಸೇರಿದೆ.

25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಸುಖೇಶ್ ಚಂದ್ರಶೇಖರ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿದೆ. ಪೊಲೀಸರ ಪ್ರಕಾರ, ಚಂದ್ರಶೇಖರ್ ಹಲವು ಉದ್ಯಮಿಗಳೊಂದಿಗೆ ಸಂಪರ್ಕದಲ್ಲಿದ್ದರು. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಸಹಾಯ ಮಾಡುವುದಾಗಿ ಹೇಳಿ ಅವರು ಉದ್ಯಮಿಗಳಿಂದ ಹಣ ಸುಲಿಗೆ ಮಾಡಿದ್ದಾರೆ.

ಜಾರಿ ನಿರ್ದೇಶನಾಲಯ ಹಾಗೂ ಪೊಲೀಸರು ಚಾರ್ಜ್ ಶೀಟ್ ತಯಾರಿಸುತ್ತಿದ್ದಾರೆ. ಸುಲಿಗೆ ಮಾಡಲಾದ ಹಣವನ್ನು ಹಿಂಪಡೆಯಲು ಜಾರಿ ನಿರ್ದೇಶನಾಲಯವು ಈ ವಾಹನಗಳನ್ನು ಹರಾಜು ಮಾಡಲು ನ್ಯಾಯಾಲಯದ ಅನುಮತಿ ಕೋರಲಿದೆ. ಬಹುತೇಕ ಪ್ರಕರಣಗಳಲ್ಲಿ ತೀರ್ಪು ಬರುವವರೆಗೂ ವಶಪಡಿಸಿಕೊಂಡ ವಾಹನಗಳನ್ನು ಹರಾಜು ಹಾಕಲಾಗುವುದಿಲ್ಲ.

25 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಕೆಲವು ಪ್ರಕರಣಗಳಲ್ಲಿ ತೀರ್ಪು ಬರಲು ಹಲವಾರು ವರ್ಷಗಳು ಬೇಕಾಗುತ್ತವೆ. ಅಲ್ಲಿಯವರೆಗೆ ಈ ರೀತಿಯ ದುಬಾರಿ ಬೆಲೆಯ ಕಾರುಗಳು ಹಾನಿಗೊಳಗಾಗುತ್ತವೆ.ಪೊಲೀಸರ ವಶದಲ್ಲಿ ಉಳಿದು ಈ ಕಾರುಗಳ ಮೌಲ್ಯವೂ ಸಹ ಕಡಿಮೆಯಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ವಶ ಪಡಿಸಿಕೊಂಡ ವಾಹನಗಳನ್ನು ನಿರ್ವಹಣೆ ಮಾಡುವುದೇ ಇಲ್ಲ. ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ಅಮಿತಾಬ್ ಬಚ್ಚನ್ ರವರಿಗೆ ಸೇರಿದ್ದ ಐಷಾರಾಮಿ ಕಾರು ಖರೀದಿಸಿದ್ದ ವ್ಯಕ್ತಿಯಿದ್ದ ಆ ಕಾರ್ ಅನ್ನು ವಶಕ್ಕೆ ಪಡೆಯಲಾಗಿತ್ತು.

ಮೂಲ: ಇಂಡಿಯಾ ಟುಡೆ

ಗಮನಿಸಿ: ಈ ಚಿತ್ರದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Enforcement directorate seizes 16 cars worth rs 25 crore video details
Story first published: Friday, August 27, 2021, 18:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X