ಕ್ಲಾಸಿಕ್ 350 ಬೈಕಿಗಿಂತ ಕಡಿಮೆ ಬೆಲೆಯಲ್ಲಿ ತಯಾರಾಯ್ತು ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ನಿಧಾನವಾಗಿ ಬೆಳೆಯುತ್ತಿದೆ. ಜನರು ಎಲೆಕ್ಟ್ರಿಕ್ ವಾಹನಗಳನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ. ಹಲವು ವಾಹನ ತಯಾರಕ ಕಂಪನಿಗಳು ಈಗಾಗಲೇ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ.

ಕ್ಲಾಸಿಕ್ 350 ಬೈಕಿಗಿಂತ ಕಡಿಮೆ ಬೆಲೆಯಲ್ಲಿ ತಯಾರಾಯ್ತು ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಹಲವಾರು ಎಲೆಕ್ಟ್ರಿಕ್ ಕಾರುಗಳಿವೆ. ಆದರೆ ಈ ಕಾರುಗಳ ಬೆಲೆ ಸಾಮಾನ್ಯ ಕಾರುಗಳಿಗಿಂತ ದುಬಾರಿಯಾಗಿದೆ. ಈ ಕಾರಣದಿಂದಾಗಿ ಜನರು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಿಂತ ಕಡಿಮೆ ಬೆಲೆಯನ್ನು ಹೊಂದಿರುವ ಎಲೆಕ್ಟ್ರಿಕ್ ಕಾರಿನ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕ್ಲಾಸಿಕ್ 350 ಬೈಕಿಗಿಂತ ಕಡಿಮೆ ಬೆಲೆಯಲ್ಲಿ ತಯಾರಾಯ್ತು ಎಲೆಕ್ಟ್ರಿಕ್ ಕಾರು

ಟಾಟಾ ನಕಿಟಿಯಾ ಎಂಬ ಹೆಸರಿನ ಈ ಎಲೆಕ್ಟ್ರಿಕ್ ಕಾರು, ಟಾಟಾ ನ್ಯಾನೋ ಕಾರು ಆಗಿದ್ದು, ಇದನ್ನು ಪೆಟ್ರೋಲ್ ಎಂಜಿನ್‌ನಿಂದ ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತಿಸಲಾಗಿದೆ. ಟಾಟಾ ನ್ಯಾನೋ ಕಾರ್ ಅನ್ನು ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾರ್ಪಡಿಸಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕ್ಲಾಸಿಕ್ 350 ಬೈಕಿಗಿಂತ ಕಡಿಮೆ ಬೆಲೆಯಲ್ಲಿ ತಯಾರಾಯ್ತು ಎಲೆಕ್ಟ್ರಿಕ್ ಕಾರು

ಟಾಟಾ ನ್ಯಾನೋ ಕಾರ್ ಆನ್ನು ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತಿಸಲು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗಿಂತ ಕಡಿಮೆ ವೆಚ್ಚವಾಗಿದೆ. ಈ ಕಾರನ್ನು ಮಾಡಿಫೈ ಮಾಡಿದ ತಂಡದ ಹೆಸರು ಇ-ಐಟಂ. ಈ ತಂಡದಲ್ಲಿದ್ದ ಎಲ್ಲರೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು.

ಕ್ಲಾಸಿಕ್ 350 ಬೈಕಿಗಿಂತ ಕಡಿಮೆ ಬೆಲೆಯಲ್ಲಿ ತಯಾರಾಯ್ತು ಎಲೆಕ್ಟ್ರಿಕ್ ಕಾರು

ಈ ವಿದ್ಯಾರ್ಥಿಗಳು ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಅನ್ನು ತಮ್ಮ ಪ್ರಾಜೆಕ್ಟ್‌ಗಾಗಿ ಆಯ್ಕೆ ಮಾಡಿಕೊಂಡಿದ್ದರು. ಈ ತಂಡದ ಹೆಸರು ಎಲೆಕ್ಟ್ರಿಕ್ ವೆಹಿಕಲ್ ಗುಡ್ ಫಾರ್ ಹೆಲ್ತ್. ಈ ವಿದ್ಯಾರ್ಥಿಗಳು ಸಂಪೂರ್ಣ ಕಾರನ್ನು ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗಿಂತ ಕಡಿಮೆ ಬೆಲೆಯಲ್ಲಿ ತಯಾರಿಸಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕ್ಲಾಸಿಕ್ 350 ಬೈಕಿಗಿಂತ ಕಡಿಮೆ ಬೆಲೆಯಲ್ಲಿ ತಯಾರಾಯ್ತು ಎಲೆಕ್ಟ್ರಿಕ್ ಕಾರು

ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.55 ಲಕ್ಷಗಳಾಗುತ್ತದೆ. ಈ ವಿದ್ಯಾರ್ಥಿಗಳು ಟಾಟಾ ನ್ಯಾನೋ ಕಾರ್ ಅನ್ನು ರೂ.41,500ಗಳಿಗೆ ಖರೀದಿಸಿದ್ದಾರೆ. ನಂತರ ಅದನ್ನು ಮಾಡಿಫೈ ಮಾಡಲು ರೂ.96,658 ಖರ್ಚು ಮಾಡಿದ್ದಾರೆ.

ಕ್ಲಾಸಿಕ್ 350 ಬೈಕಿಗಿಂತ ಕಡಿಮೆ ಬೆಲೆಯಲ್ಲಿ ತಯಾರಾಯ್ತು ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ನ್ಯಾನೋ ಕಾರಿನಲ್ಲಿ ಒಬ್ಬ ವ್ಯಕ್ತಿಯು ಪ್ರಯಾಣಿಸಿದರೆ ಈ ಕಾರು 40 ಕಿ.ಮೀ ವ್ಯಾಪ್ತಿ ನೀಡುತ್ತದೆ. ನಾಲ್ಕು ಜನ ಪ್ರಯಾಣಿಸಿದರೆ 35 ಕಿ.ಮೀ ವ್ಯಾಪ್ತಿಯವರೆಗೆ ಚಲಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 40 ಕಿ.ಮೀಗಳಾಗಿದ್ದು, ಈ ಕಾರನ್ನು 6 ಗಂಟೆ 36 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

Most Read Articles

Kannada
English summary
Engineering students from Mysore develops Tata Nano electric. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X