ಭಾರತೀಯನ ಸಾಧನೆ: ಟೊಯೊಟಾ ಇನೋವಾವನ್ನು ಡ್ರೈವರ್ ಇಲ್ಲದ ಕಾರಾಗಿ ಪರಿವರ್ತಿಸಿದ ವ್ಯಕ್ತಿ
ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರುಗಳು ತಾಂತ್ರಿಕವಾಗಿ ಬಹಳ ಮುಂದುವರಿದಿವೆ. ಭಾರತದಲ್ಲಿ ಈಗ ಸಬ್-4 ಮೀಟರ್ ಎಸ್‍ಯುವಿಗಳಲ್ಲಿ ADAS ನಂತಹ ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿವೆ. ಈ ಡ್ರವರ್ ಅಸಿಸ್ಟ ನಂತಹ ಅತ್ಯಾಧುನಿಕ ಫಿಚರ್ಸ್ ಗಳು ಡ್ರೈವರುಗಳಿಗೆ ಹೆಚ್ಚು ಸಹಕಾರವಾಗಲಿದೆ. ಇಂತಹ ಆಧುನಿಕ ಫಿಚರ್ಸ್ ಗಳನ್ನು ಹೊಂದಿರುವ ಕಾರುಗಳು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ.
USA ನಂತಹ ಇತರ ದೇಶಗಳಲ್ಲಿ, ಈಗಾಗಲೇ ಸ್ವಾಯತ್ತ ಚಾಲನೆ ಅಥವಾ ಚಾಲಕರಹಿತ ವಾಹನಗಳನ್ನು ಬಳಸಲು ಪ್ರಾರಂಭಿಸಿರುವ ಕಂಪನಿಗಳಿವೆ. Uber ನಂತಹ ಫ್ಲೀಟ್ ನಿರ್ವಾಹಕರು USA ಯ ಕೆಲವು ಭಾಗಗಳಲ್ಲಿ ಚಾಲಕರಹಿತ ಕಾರುಗಳನ್ನು ಹೊಂದಿದ್ದಾರೆ. ಇಲ್ಲಿ ಭಾರತದಲ್ಲಿ ಒಬ್ಬ ಯುವ ಉದ್ಯಮಿ ಇದ್ದಾರೆ, ಅವರು ವರ್ಷಗಳಿಂದ ಚಾಲಕರಹಿತ ಕಾರುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ವೀಡಿಯೊವನ್ನು Manorama News ಅವರು ತಮ್ಮ YouTube ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೇರಳದ ಉದ್ಯಮಿ ಮತ್ತು ರೊಬೊಟಿಕ್ಸ್ ತಂತ್ರಜ್ಞಾನದಲ್ಲಿ ತಜ್ಞ ರೋಶಿ ಜಾನ್ ಈ ತಂತ್ರಜ್ಞಾನದ ಹಿಂದಿನ ವ್ಯಕ್ತಿ. ಅವರು ಕೇರಳದಲ್ಲಿ ರೋಶಾಯ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಇದು ನಿಜವಾಗಿ ಅವರ ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಯೇ ಈ ಯೋಜನೆಯ ಬಗ್ಗೆ ಯೋಚಿಸಲು ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ. ಒಮ್ಮೆ, ರೋಶಿ ದಕ್ಷಿಣ ಕೊರಿಯಾದಿಂದ ಬೆಂಗಳೂರಿಗೆ ಬಂದರು.
ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಿದಾಗ, ಅವರು ತಮ್ಮ ಮನೆಗೆ ಟ್ಯಾಕ್ಸಿ ಮಾಡಿದರು. ಸುಮಾರು 2 ಗಂಟೆ ಪ್ರಯಾಣದಲ್ಲಿ ಮತ್ತು ಡೈವರ್ ನಿಜವಾಗಿಯೂ ನಿದ್ದೆ ಮಂಪರಿನಲ್ಲಿದ್ದ, ಡೈವರ್ ಬಹುತೇಕ ಡಿವೈಡರ್‌ಗೆ ಡಿಕ್ಕಿ ಹೊಡೆಯುವ ರೀತಿ ಕಾರನ್ನು ಚಾಲಯಿಸುತಿದ್ದನು. ರೋಶಿ ವಾಹನವನ್ನು ನಿಲ್ಲಿಸಲು ಮತ್ತು ಸಹ-ಪ್ರಯಾಣಿಕ ಸೀಟಿನಲ್ಲಿ ಕುಳಿತುಕೊಳ್ಳಲು ಚಾಲಕನನ್ನು ಕೇಳಿದರು. ನಂತರ ರೋಶಿ ಚಾಲಕನಿಗೆ ವಿರಾಮ ತೆಗೆದುಲಕೊಳ್ಳಲು ಹೇಳಿ ಟ್ಯಾಕ್ಸಿ ಕಾರನ್ನು ಓಡಿಸಿ ಮನೆಗೆ ಹೋದರು.

ಈ ಹಂತದಲ್ಲಿ ಅವರು ಚಾಲಕರಹಿತ ಕಾರಿನ ಕಲ್ಪನೆಯ ಬಗ್ಗೆ ಯೋಚಿಸಿದಾಗ, ಒಬ್ಬ ವ್ಯಕ್ತಿಯು ಸುರಕ್ಷಿತವಾಗಿ ಮನೆಗೆ ತೆರಳಲು ಇನ್ನೊಬ್ಬರನ್ನು ಅವಲಂಬಿಸಬೇಕಾಗಿಲ್ಲ. ರೋಶಿ ಮತ್ತು ಅವರ ತಂಡವು ಈ AI ತಂತ್ರಜ್ಞಾನದಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು ಮತ್ತು ಅವರು ಬಹಳ ದೂರ ಸಾಗಿದ್ದಾರೆ. ಅವರು ಈ AI ತಂತ್ರಜ್ಞಾನವನ್ನು ವಾಹನದಲ್ಲಿ ಕಾರ್ಯಗತಗೊಳಿಸಿದ್ದಾರೆ ಮತ್ತು ಪ್ರಸ್ತುತ ನಿಯಂತ್ರಿತ ಪ್ರದೇಶದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ರೋಶಿ ಮತ್ತು ಅವರ ತಂಡ ಮೊದಲು ಈ ತಂತ್ರಜ್ಞಾನವನ್ನು ಟಾಟಾ ನ್ಯಾನೋದಲ್ಲಿ ಅಳವಡಿಸಿದರು. ಸ್ವಲ್ಪ ಸಮಯದವರೆಗೆ ಅದನ್ನು ನ್ಯಾನೋದಲ್ಲಿ ಪರೀಕ್ಷಿಸಿದ ನಂತರ, ಅವರು ಅದನ್ನು ಟೊಯೋಟಾ ಇನ್ನೋವಾಗೆ ನವೀಕರಿಸಿದರು. ಪ್ರಸ್ತುತ ಕೊಚ್ಚಿಯ ಇನ್ಫೋಪಾರ್ಕ್‌ನ ರಸ್ತೆಗಳಲ್ಲಿ ಕಾರನ್ನು ಪರೀಕ್ಷಿಸಲಾಗುತ್ತಿದೆ. ಕಾರಿನ ಸುತ್ತಲಿನ 360-ಡಿಗ್ರಿ ಕ್ಯಾಮೆರಾ, ರಾಡಾರ್‌ಗಳು ಮತ್ತು ಸೆನ್ಸರ್ ಗಳ ಸಂಯೋಜನೆಯನ್ನು ಬಳಸಿಕೊಂಡು ಸಿಸ್ಟಮ್ ಕಾರ್ಯನಿರ್ವಹಿಸುತ್ತದೆ.

ಈ ಇನ್ಸ್ ಟ್ರೂಮೆಂಟ್ ಕಾರಿನ ಮುಂದೆ ಇರುವ ಅಡೆತಡೆಗಳನ್ನು ಪತ್ತೆಹಚ್ಚುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುತ್ತವೆ. ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನವಾಗಿ ವರ್ತಿಸಲು ಕಾರಿನಲ್ಲಿರುವ ಸಿಸ್ಟಮ್ ಅನ್ನು AI ಕೋಡ್‌ಗಳೊಂದಿಗೆ ಪ್ರೋಗ್ರಾಮ್ ಮಾಡಲಾಗಿದೆ. ಇಲ್ಲಿ ಕಂಡುಬರುವ ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ಕೇವಲ ಮೂಲಮಾದರಿಯಾಗಿದೆ ಮತ್ತು ಉತ್ಪಾದನೆಯಿಂದ ದೂರವಿದೆ. ಇಂತಹ ಕಾರುಗಳಿಗೆ ಪ್ರಸ್ತುತ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆಯೂ ರೋಶಿ ಮಾತನಾಡಿದ್ದಾರೆ.
ಒಮ್ಮೆ ಸರ್ಕಾರ, ವಿಮಾ ಏಜೆನ್ಸಿಗಳು ಮತ್ತು ಇತರ ನಿಯಂತ್ರಕ ಸಂಸ್ಥೆಗಳು ಈ ವಾಹನವನ್ನು ಅನುಮೋದಿಸಿದರೆ ಮತ್ತು ಅದನ್ನು ರಸ್ತೆಗೆ ಯೋಗ್ಯವೆಂದು ಪರಿಗಣಿಸಿದರೆ, ಅವರು ಮುಂದಿನ ಹಂತಕ್ಕೆ ಹೋಗಬಹುದು. ಪ್ರಸ್ತುತ ಭಾರತದಲ್ಲಿ, ಚಾಲಕರಹಿತ ಕಾರು ಅಪಘಾತಕ್ಕೀಡಾದರೆ ಯಾರು ಹೊಣೆಗಾರರಾಗುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಇದು ಖಂಡಿತವಾಗಿಯೂ ಒಂದು ಉತ್ತಮ ಹೆಜ್ಜೆಯಾಗಿದೆ, ಮತ್ತು ಸರ್ಕಾರವು ಇದನ್ನು ಗಮನಿಸುತ್ತದೆ ಮತ್ತು ಭವಿಷ್ಯದಲ್ಲಿ ಇದನ್ನು ಅನುಮೋದಿಸುತ್ತದೆ ಎಂದು ನಾವು ಭಾವಿಸುತ್ತೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications