ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ಧೀರ್ಘ ಕಾಲದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್ II ಗುರುವಾರ ಬಾಲ್ಮೋರಲ್ ಕೋಟೆಯಲ್ಲಿ 96 ವರ್ಷ ವಯಸ್ಸಿನಲ್ಲಿ ನಿಧನರಾದರು. ಪ್ರೋಟೋಕಾಲ್ ಪ್ರಕಾರ ರಾಣಿಯ ಹಿರಿಯ ಮಗ ಪ್ರಿನ್ಸ್ ಚಾರ್ಲ್ಸ್ (73) ತಕ್ಷಣವೇ ರಾಜನಾಗಿ ಅಧಿಕಾರ ವಹಿಸಿಕೊಂಡರು.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ರಾಣಿ ಎಲಿಜಬೆತ್ II ಅವರು ಏಳು ದಶಕಗಳ ಹಿಂದೆ ಸಿಂಹಾಸನವನ್ನು ಏರಿದಾಗಿನಿಂದ ಅಪಾರ ಸಂಪತ್ತನ್ನು ಹೊಂದಿದ್ದರು. ಭವ್ಯವಾದ ಕೋಟೆಗಳು ಮತ್ತು ಇತರ ಆಸ್ತಿಗಳನ್ನು ಹೊಂದುವುದರ ಜೊತೆಗೆ, ರಾಣಿಯು ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದರು. ಈ ಬ್ರಿಟಿಷ್ ಮಹಾರಾಣಿ ಅತ್ಯಂತ ಸೊಗಸಾದ ಕಾರುಗಳನ್ನು ಓಡಿಸುವ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ಕುತೂಹಲಕಾರಿಯಾಗಿ, ಚಾಲನಾ ಪರವಾನಗಿ ಇಲ್ಲದೆ ಚಾಲನೆ ಮಾಡಲು ಯುಕೆಯಲ್ಲಿ ಅರ್ಹತೆ ಪಡೆದ ಏಕೈಕ ರಾಣಿಯಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ತನ್ನ ನೆಚ್ಚಿನ ಲ್ಯಾಂಡ್ ರೋವರ್ ಎಸ್‌ಯುವಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇವರು ವಯಸ್ಸಿನಲ್ಲಿದ್ದಾಗಲೂ ಹಲವು ದುಬಾರಿ ಐಷಾರಾಮಿ ಕಾರುಗಳನ್ನು ಓಡಿಸುತ್ತಿದ್ದರು.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ರಾಜಮನೆತನದವರಾದ್ದರಿಂದ ಇವರಿಗಾಗಿ ಕೆಲವು ಕಂಪನಿಗಳು ವಿಶೇಷವಾಗಿ ಕಾರುಗಳನ್ನು ಡಿಸೈನ್ ಮಾಡಿಕೊಡುತ್ತಿದ್ದವು. ಇಂದಿಗೂ ರಾಣಿ ಬಳಸಿರುವ ಹಲವು ಕಾರುಗಳನ್ನು ಭದ್ರವಾಗಿರಿಸಲಾಗಿದೆ. ಹಾಗಾದ್ರೆ ಯಾವೆಲ್ಲಾ ಕಾರುಗಳನ್ನು ಈ ದಿವಂಗತ ಮಹಾರಾಣಿ ಹೊಂದಿದ್ದರು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ಲ್ಯಾಂಡ್ ರೋವರ್ 2022 LR ಡಿಫೆಂಡರ್ 110 TD5

ರಾಣಿ ಎಲಿಜಬೆತ್ II ಅವರ ಗ್ಯಾರೇಜ್‌ನಲ್ಲಿ ಸುಮಾರು 30 ಲ್ಯಾಂಡ್ ರೋವರ್ ಕಾರುಗಳಿವೆ. ಲ್ಯಾಂಡ್ ರೋವರ್ ಸರಣಿ 1 ರಿಂದ ಇತ್ತೀಚಿನ ಲ್ಯಾಂಡ್ ರೋವರ್ ಡಿಫೆಂಡರ್ ವರೆಗೆ ಎಲ್ಲಾ ಸರಣಿಗಳನ್ನು ಹೊಂದಿದ್ದಾರೆ. ಆದರೆ ಅವರಿಗೆ ಲ್ಯಾಂಡ್ ರೋವರ್ 2022 LR ಡಿಫೆಂಡರ್ 110 TD5 ಕಾರೆಂದರೆ ಬಹಳ ಇಷ್ಟವೆಂದು ವರದಿಯಾಗಿದೆ.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ಇತ್ತೀಚೆಗೆ ಲ್ಯಾಂಡ್ ರೋವರ್ ಕಂಪನಿಯು ತನ್ನ ಬ್ರ್ಯಾಂಡ್‌ನೊಂದಿಗಿನ ಸಂಬಂಧವನ್ನು ಸ್ಮರಿಸಲು, ಎಲಿಜಬೆತ್ ಅವರು ರಾಣಿಯಾಗಿ 75 ವರ್ಷಗಳನ್ನು ಪೂರೈಸಿದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬ್ರಿಟಿಷ್ ರೆಡ್‌ಕ್ರಾಸ್‌ಗೆ ಪ್ರಸ್ತುತ-ಪೀಳಿಗೆಯ ಡಿಫೆಂಡರ್ 130 SUV ಅನ್ನು ಉಡುಗೊರೆಯಾಗಿ ನೀಡಿತ್ತು.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ಉಳಿದ ಕಾರು ಸಂಗ್ರಹವನ್ನು ನೋಡುವುದಾದರೆ, ಅವರ ಬಹಳಷ್ಟು ಕಾರುಗಳು ಹೆಚ್ಚಾಗಿ ಬ್ರಿಟಿಷ್ ತಯಾರಕರನ್ನು ಒಳಗೊಂಡಿದೆ. ಲ್ಯಾಂಡ್ ರೋವರ್, ರೋಲ್ಸ್ ರಾಯ್ಸ್, ಜಾಗ್ವಾರ್, ಬೆಂಟ್ಲಿ ಮತ್ತು ಆಸ್ಟನ್ ಮಾರ್ಟಿನ್ ಅನ್ನು ಒಳಗೊಂಡಿದೆ. ಈ ಎಲ್ಲಾ ಬ್ರಾಂಡ್‌ಗಳು ಬ್ರಿಟಿಷ್ ಕಂಪನಿಯದ್ದಾಗಿವೆ. ಅದರ ಹೊರತಾಗಿ ರಾಣಿ ಎಲಿಜಬೆತ್ II ಡೈಮ್ಲರ್ ವಾಹನಗಳನ್ನು ಹೊಂದಿದ್ದರು.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ಬೆಂಟ್ಲಿ ಸ್ಟೇಟ್ ಲಿಮೋಸಿನ್

ಔಪಚಾರಿಕ ಸಂದರ್ಭಗಳಲ್ಲಿ ಹೊರಹೋಗುವಾಗ ರೋಲ್ಸ್-ರಾಯ್ಸ್ ರಾಜಮನೆತನದವರಿಗೆ ಆದ್ಯತೆಯ ಕಾರುಗಳಾಗಿವೆ. 2002 ರಲ್ಲಿ ಕ್ರೂವ್ ತಯಾರಕರಿಂದ ಉಡುಗೊರೆಯಾಗಿ ನೀಡಲ್ಪಟ್ಟ ವಿಶಿಷ್ಟವಾದ ಬೆಂಟ್ಲಿ ಸ್ಟೇಟ್ ಲಿಮೋಸಿನ್ ರಾಣಿಯ ನೆಚ್ಚಿನ ವಾಹನವಾಗಿದೆ. ರಾಣಿಯ ಸಿಂಹಾಸನಾರೋಹಣದ 50 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಈ ವಾಹನವನ್ನು ಉಡುಗೊರೆಯಾಗಿ ನೀಡಲಾಯಿತು.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ಬೆಂಟ್ಲಿ ಸ್ಟೇಟ್ ಲಿಮೋಸಿನ್ ಬೆಂಟ್ಲಿ ಆರ್ನೇಜ್ ಅನ್ನು ಆಧರಿಸಿದೆಯಾದರೂ, ಬಾನೆಟ್‌ನಲ್ಲಿರುವ ಫ್ಲೈಯಿಂಗ್ ಬಿ ಅನ್ನು ಸೇಂಟ್ ಜಾರ್ಜ್ ಡ್ರ್ಯಾಗನ್ ಅನ್ನು ಕೊಲ್ಲುವ ಘನ ಬೆಳ್ಳಿಯ ಶಿಲ್ಪದಿಂದ ಸಂಪೂರ್ಣವಾಗಿ ಕಸ್ಟಮ್ ಮಾಡಲಾಗಿದೆ. ಅದರ ಜೊತೆಗೆ, ಬೆಂಟ್ಲಿ ಸ್ಟೇಟ್ ಲಿಮೋಸಿನ್ ಶಸ್ತ್ರಸಜ್ಜಿತವಾಗಿದೆ. 6.75-ಲೀಟರ್ V8 ಎಂಜಿನ್‌ನಿಂದ ಸುಮಾರು 400bhp ಗರಿಷ್ಠ ಶಕ್ತಿಯನ್ನು ಹೊಂದಿದೆ.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ರೋಲ್ಸ್ ರಾಯ್ಸ್ ಫ್ಯಾಂಟಮ್ IV ಸ್ಟೇಟ್ ಲ್ಯಾಂಡೌಲೆಟ್

ರಾಣಿಯ ಗ್ಯಾರೇಜ್‌ನಲ್ಲಿ ಬೆಂಟ್ಲಿ ಸ್ಟೇಟ್ ಲಿಮೋಸಿನ್ ಆಗಮನಕ್ಕೂ ಮೊದಲು, ರೋಲ್ಸ್ ರಾಯ್ಸ್ ಫ್ಯಾಂಟಮ್ IV ಸ್ಟೇಟ್ ಲ್ಯಾಂಡೌಲೆಟ್ ಇತ್ತು. ಈ ನಿರ್ದಿಷ್ಟ ಮಾದರಿಯು 1955 ರಿಂದ ಸೇವೆಯಲ್ಲಿದೆ. ಬಳಿಕ ಇದನ್ನು 2022 ರಲ್ಲಿ ರೋಲ್ಸ್ ರಾಯ್ಸ್‌ಗೆ ಹಿಂತಿರುಗಿಸಲಾಯಿತು.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ವಾಸ್ತವವಾಗಿ, ರೋಲ್ಸ್ ರಾಯ್ಸ್‌ನಿಂದ ಈ ಲ್ಯಾಂಡ್‌ಯುಲೆಟ್ ಮಾದರಿಗಳ ಕೇವಲ 18 ಘಟಕಗಳನ್ನು ನಿರ್ಮಿಸಲಾಗಿರುವುದರಿಂದ ಇದು ವಿಶ್ವದ ಅಪರೂಪದ ಕಾರುಗಳಲ್ಲಿ ಒಂದಾಗಿದೆ. ಈ ಮಾದರಿಗಳನ್ನು ಕೇವಲ ಕೆಲವು ರಾಷ್ಟ್ರದ ಮುಖ್ಯಸ್ಥರಿಗೆ ಮಾರಾಟ ಮಾಡಲಾಗಿದೆ. ಒಳಭಾಗದಲ್ಲಿ ಗಾಢ ನೀಲಿ ಮತ್ತು ಬೂದು ಬಣ್ಣದ ಅಂಶಗಳನ್ನು ಇದು ಹೊಂದಿದೆ.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ಹೊರಭಾಗದಲ್ಲಿ, ಈ ನಿರ್ದಿಷ್ಟ ರೋಲ್ಸ್ ರಾಯ್ಸ್ ಫ್ಯಾಂಟಮ್ IV ಸ್ಟೇಟ್ ಲ್ಯಾಂಡೌಲೆಟ್ ಅನ್ನು ಕ್ಲಾರೆಟ್ ಮತ್ತು ಕಪ್ಪು ಬಣ್ಣದಲ್ಲಿ ಚಿತ್ರಿಸಲಾಗಿದೆ. ಪವರ್‌ಟ್ರೇನ್‌ಗೆ ಬರುವುದಾದರೆ, ರೋಲ್ಸ್-ರಾಯ್ಸ್ ಫ್ಯಾಂಟಮ್ IV 5.7-ಲೀಟರ್, ನ್ಯಾಚುರಲ್-ಆಸ್ಪಿರೇಟೆಡ್, ಸ್ಟ್ರೈಟ್-8 ಎಂಜಿನ್‌ನಿಂದ ಚಾಲಿತವಾಗಿದೆ.

ಕ್ವೀನ್ ಎಲಿಜಬೆತ್ II ಅವರಿಗೆ ಹಲವು ಐಷಾರಮಿ ಕಾರುಗಳಿದ್ರೂ ಆ ಒಂದು ಕಾರಂದ್ರೆ ಬಹಳ ಇಷ್ಟ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ರಾಣಿ ಎಲಿಜಬೆತ್ II ಅವರ ನಿಧನದಿಂದಾಗಿ ಬ್ರಿಟನ್‌ಗೆ ಖಂಡಿತವಾಗಿಯೂ ತುಂಬಲಾಗದ ನಷ್ಟವಾಗಿದೆ. ರಾಣಿ ಎಲಿಜಬೆತ್ II ವಿರಳವಾಗಿ ಸಂದರ್ಶನಗಳನ್ನು ನೀಡಿದ್ದರೂ, ಅವರ ವೈಯಕ್ತಿಕ ಭಾವನೆಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲವಾದರೂ, ಅವರು ಧಾರ್ಮಿಕ ಮತ್ತು ನಾಗರಿಕ ಕರ್ತವ್ಯದ ಆಳವಾದ ಪ್ರಜ್ಞೆಯನ್ನು ಹೊಂದಿದ್ದರು.

Most Read Articles

Kannada
English summary
Even though Queen Elizabeth II has many luxury cars she likes that one very much
Story first published: Friday, September 9, 2022, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X