ದುಬಾರಿ ಏರ್‌ಪಾಡ್... ಬೆಂಗಳೂರು ಆಟೋ ಚಾಲಕ ಮಾಡಿದ್ದೇನು?

'ಖಾಕಿ' ಹಾಕುವ ಚಾಲಕರು ಪ್ರಾಮಾಣಿಕರೆಂದು ಹೇಳಲು ಈ ಘಟನೆ ಸಾಕ್ಷಿ. ಕ್ಯಾಬ್, ಆಟೋ ಚಾಲಕರು ತಮ್ಮ ವಾಹನದಲ್ಲಿ ತೆರಳುವ ಪ್ರಯಾಣಿಕರು ವಸ್ತುಗಳನ್ನು ಮರೆತರೆ ಅದನ್ನು ಹಿಂದಿರುಗಿಸುವುದನ್ನು ನೋಡಿದ್ದೇವೆ.

ಕೆಲವರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ತಾವು ಕಳೆದುಕೊಂಡ ವಸ್ತು ಹುಡುಕಿಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ಕಾಣಬಹುದು. ಆದರೆ, ಇಲ್ಲೊಬ್ಬ ಆಟೋ ಚಾಲಕ ಎಲ್ಲರಿಗೂ ಮಾದರಿಯಾಗಿದ್ದಾನೆ. ತನ್ನ ಪ್ರಯಾಣಿಕರೊಬ್ಬರಿಗೆ ಏರ್‌ಪಾಡ್‌ಗಳನ್ನು ವಾಪಸ್ ಮಾಡಲು ಟೆಕ್ನಾಲಜಿ ಮೊರೆಹೋಗಿದ್ದಾನೆ.

image for representation purposes only
ಬೆಂಗಳೂರು ಮೂಲದ ಟೆಕ್ಕಿ ಶಿಡಿಕಾ ಉಬ್ರ್ ಆಪಲ್ ಏರ್‌ಪಾಡ್‌ಗಳನ್ನು ಕಳೆದುಕೊಂಡ ಮಹಿಳೆ ಆಗಿದ್ದಾರೆ. ಅವರ ಏರ್‌ಪಾಡ್‌ಗಳನ್ನು ಹೇಗೆ ಮರಳಿ ಪಡೆದರು ಎಂಬುದನ್ನು ವಿವರಿಸುವ ಪೋಸ್ಟ್ ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ. ಶಿಡಿಕಾ ಅವರ ಟ್ವಿಟ್ಟರ್ ಪೋಸ್ಟ್ ಪ್ರಕಾರ, ಆಟೋದಲ್ಲಿ ತನ್ನ ಕಚೇರಿಗೆ ಪ್ರಯಾಣಿಸಿ, ಚಾಲಕನಿಗೆ ಪೇಮೆಂಟ್ ಮಾಡುವ ಭರಾಟೆಯಲ್ಲಿ ಏರ್‌ಪಾಡ್‌ಗಳನ್ನು ಅಲ್ಲಿಯೇ ಮರೆತು ಬಿಟ್ಟು ಹೋಗಿದ್ದಾರೆ.

ಆಟೋದಲ್ಲಿ ಏರ್‌ಪಾಡ್‌ಗಳು ಬಿದ್ದಿರುವುದನ್ನು ಗಮನಿಸಿದ ಆಟೋ ಚಾಲಕ. ಅದನ್ನು ಹೇಗಾದರೂ ಮಾಡಿ, ಆ ಪ್ರಯಾಣಿಕರಿಗೆ ಹಿಂತಿರುಗಿಸಬೇಕೆಂದು ತೀರ್ಮಾನಿಸಿ, ಅವರನ್ನು ಪತ್ತೆಹಚ್ಚಲು ಪ್ರಾರಂಭಿಸುತ್ತಾನೆ. ಈ ಆಟೋ ಚಾಲಕ ಟೆಕ್ನಾಲಜಿಯನ್ನು ಕೊಂಚ ಮಟ್ಟಿಗೆ ಅರಿತುಕೊಂಡಿರುತ್ತಾನೆ. ಹಾಗಾಗಿ, ಆತ ತನ್ನ ಮೊಬೈಲ್‌ಗೆ ಏರ್‌ಪಾಡ್‌ಗಳನ್ನು ಕನೆಕ್ಟ್ ಮಾಡಲು ಪ್ರಯತ್ನಿಸುತ್ತಾನೆ. ಆಗ ಆತನ ಸ್ಕ್ರಿನ್ ಮೇಲೆ ಮಾಲೀಕರ ಹೆಸರು ಕಾಣಿಸಿಸುತ್ತದೆ. ಇದರಿಂದ ಆಟೋ ಚಾಲಕನಿಗೆ ಸುಲಭವಾಗಿ ಏರ್‌ಪೋಡ್‌ಕಳೆದುಕೊಂಡ ಪ್ರಯಾಣಿಕರ ಹೆಸರು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಪ್ರಯಾಣಿಕರ ಹೆಸರನ್ನು ಕಂಡುಕೊಂಡ ಆಟೋ ಚಾಲಕ ಅವರಿಂದ ಆನ್‌ಲೈನ್ ಪೇಮೆಂಟ್ ಪಡೆದಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನ್ನ ಫೋನ್‌ನಲ್ಲಿ ಅವರ ಹೆಸರನ್ನು ಪರಿಶೀಲಿಸಲು ಪ್ರಾರಂಭಿಸುತ್ತಾನೆ. ಬಳಿಕ ಟ್ರಾನ್ಸಾಕ್ಷನ್ ಲಿಸ್ಟ್‌ನಲ್ಲಿ ಅವರ ಹೆಸರನ್ನು ಗುರುತಿಸಿ, ಕೇವಲ ಅರ್ಧ ಗಂಟೆಯೊಳಗೆ ಆ ಆಟೋ ಚಾಲಕ ಟೆಕ್ಕಿ ಶಿಡಿಕಾ ಕೆಲಸ ಮಾಡುವ ಕಚೇರಿಗೆ ತೆರಳಿ, ಏರ್‌ಪೋಡ್‌ಗಳನ್ನು ಅಲ್ಲಿನ ಸೆಕ್ಯುರಿಟಿ ಗಾರ್ಡ್ ಕೈಗೆ ಒಪ್ಪಿಸಿ ಹೊರಟು ಹೋಗುತ್ತಾನೆ.

ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಬರೋಬ್ಬರಿ 10,000 ಲೈಕ್ಸ್ ಮತ್ತು ನೂರಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಏರ್‌ಪೋಡ್‌ಗಳನ್ನು ಹಿಂದಿರುಗಿಸಲು ಆಟೋ ಚಾಲಕ ಮಾಡಿದ ಪ್ರಯತ್ನವನ್ನು ನೆಟ್ಟಿಗರು ಶ್ಲಾಘಿಸಿದ್ದು, ಈ ಪೋಸ್ಟ್‌ ಅಡಿ ವ್ಯಕ್ತಿಯೊಬ್ಬರು, 'ಕೆಲವೊಮ್ಮೆ ಬೆಂಗಳೂರು ಆಟೋ ಚಾಲಕರು ನಮ್ಮೆಲ್ಲರಿಗಿಂತ ಹೆಚ್ಚು ಟೆಕ್ನಾಲಜಿಯಲ್ಲಿ ಪರಿಣಿತಿ ಹೊಂದಿದ್ದರೆಂದು ನನಗೆ ಅನಿಸುತ್ತದೆ' ಎಂದು ಬರೆದಿದ್ದಾರೆ.

ಪ್ರಾಮಾಣಿಕ ಆಟೋ ಮತ್ತು ಕ್ಯಾಬ್ ಚಾಲಕರು ಎಲೆಕ್ಟ್ರಾನಿಕ್ ವಸ್ತುಗಳನ್ನು ಅದರ ಮಾಲೀಕರಿಗೆ ಹಿಂದಿರುಗಿಸಿದಂತಹ ಅನುಭವಗಳನ್ನು ತಿಳಿಸಲು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಕೆಲವು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಉಬರ್ ಚಾಲಕನೊಬ್ಬ ತೀವ್ರವಾಗಿ ದಣಿದಿದ್ದ ಪ್ರಯಾಣಿಕರೊಬ್ಬರನ್ನು ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ, ತಾನೇ ಸ್ವತಃ ತಿಂಡಿ ಕೊಡಿಸಿದ್ದನ್ನು ನಾವು ನೋಡಬಹುದು.

ಇದೇ ಮೊದಲಲ್ಲ, ಬೆಂಗಳೂರು ಮಹಾನಗರಿಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಸ್ಮಾರ್ಟ್‌ಫೋನ್‌ ಹಾಗೂ ಟೆಕ್ನಾಲಜಿ ನಮ್ಮ ಜೀವನದ ಒಂದು ಭಾಗವಾಗಿದೆ. ಅವುಗಳಿಲ್ಲದೆ ಒಂದು ನಿಮಿಷವು ಯೋಚಿಸಲು ಸಾಧ್ಯವಾಗುವುದಿಲ್ಲ. ಈ ಆಟೋ ಚಾಲಕನ ಐಡಿಯಾವನ್ನು ಮೆಚ್ಚಲೇಬೇಕು. ಆತ ಏರ್‌ಪಾಡ್‌ಗಳನ್ನು ಸುಲಭವಾಗಿ ಹತ್ತಿರದ ಪೊಲೀಸ್ ಠಾಣೆಗೆ ನೀಡಬಹುದಿತ್ತು. ಆದರೆ, ತನ್ನ ಆನ್‌ಲೈನ್ ವಹಿವಾಟಿನ ಮೂಲಕ ಮಾಲೀಕರನ್ನು ಪತ್ತೆ ಮಾಡಿ, ಅವರಲ್ಲಿಯೇ ತೆರಳಿ, ಅದನ್ನು ಹಿಂತಿರುಗಿಸಿ ಎಲ್ಲರಿಗೂ ಮಾದರಿಯಾಗಿದ್ದಾನೆ. ಒಂದು ವೇಳೆ ಆತನಲ್ಲಿ ಏರ್‌ಪೋಡ್‌ಗಳನ್ನು ಇಟ್ಟುಕೊಳ್ಳಬಹುದಿತ್ತು. ಆದರೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿರುವ ಬಗ್ಗೆ ಕಮೆಂಟ್ ಮಾಡಿ.. ಸದ್ಯಕ್ಕೆ ಈ ಆಟೋ ಚಾಲಕನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Most Read Articles

Kannada
English summary
Expensive airpod what did the bangalore auto driver do
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X