Expressway Man: ಭಾರತ ಚೀನಾವನ್ನು ಹಿಂದಿಕ್ಕುವಂತೆ ಮಾಡಿದ್ದು ಇವರೇ, 'ಎಕ್ಸ್‌ಪ್ರೆಸ್‌ವೇ ಮ್ಯಾನ್' ರಿಲೀಸ್‌ಗೆ ರೆಡಿ

ಎಕ್ಸ್‌ಪ್ರೆಸ್‌ವೇ ಮ್ಯಾನ್ ಆಫ್ ಇಂಡಿಯಾ (Expressway Man of India) ಎಂದು ಕೇಂದ್ರ ಸಾರಿಗೆ & ಹೆದ್ದಾರಿ ಸಚಿವ (Union Minister for Road Transport and Highways) ನಿತಿನ್ ಗಡ್ಕರಿ (Nitin Gadkari) ಖ್ಯಾತಿಗಳಿಸಿದ್ದಾರೆ. ಅವರ ಜೀವನಾಧಾರಿತ ಸಿನಿಮಾ ಅಕ್ಟೋಬರ್ 27 (October 27)ರಂದು ಬಿಡುಗಡೆಯಾಗುತ್ತಿದೆ.

ಬಿಜೆಪಿ ಕಾರ್ಯಕರ್ತನಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗುವವರೆಗೂ ಗಡ್ಕರಿ ಅವರ ಜೀವನದ ಏಳುಬೀಳುಗಳನ್ನು ಈ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ. ಮರಾಠಿ ಭಾಷೆಯಲ್ಲಿ ರಿಲೀಸ್‌ ಆಗುತ್ತಿರುವ ಚಿತ್ರದಲ್ಲಿ ನಟ ರಾಹುಲ್ ಚೋಪ್ಡಾ, ನಿತಿನ್ ಗಡ್ಕರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನುರಾಗ್ ರಂಜನ್ ಭೂಸಾರಿ ಆಕ್ಷನ್ ಕಟ್ ಹೇಳಿದ್ದು, ಅಕ್ಷಯ್ ಅನಂತ್ ದೇಶಮುಖ್ ಬಂಡವಾಳ ಹೂಡಿದ್ದಾರೆ.

Expressway Man: ಭಾರತ ಚೀನಾವನ್ನು ಹಿಂದಿಕ್ಕುವಂತೆ ಮಾಡಿದ್ದು ಇವರೇ.. ಎಕ್ಸ್‌ಪ್ರೆಸ್‌ವೇ ಮ್ಯಾನ್ ಚಿತ್ರ ರಿಲೀಸ್‌ಗೆ ರೆಡಿ

ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಿತಿನ್ ಗಡ್ಕರಿ, ಮಹಾರಾಷ್ಟ್ರದ ನಾಗ್ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅವರ ನಿರಂತರ ಪರಿಶ್ರಮದ ಫಲವಾಗಿ ಕಳೆದ ಜೂನ್ ತಿಂಗಳಲ್ಲಿ ವಿಶ್ವದಲ್ಲೇ, ಭಾರತ ರಸ್ತೆ ಜಾಲದ ವಿಸ್ತರಣೆಯಲ್ಲಿ ಚೀನಾವನ್ನು ಹಿಂದಿಕ್ಕಿ, ಎರಡನೇ ಸ್ಥಾನಕ್ಕೆ ಬಂದಿತ್ತು. ಮೊದಲ ಸ್ಥಾನದಲ್ಲಿ ಅಮೆರಿಕವಿದೆ. ದೇಶದಲ್ಲಿ, ಪ್ರಸ್ತುತ 1.45 ಲಕ್ಷ ಕಿಲೋಮೀಟರ್ ಉದ್ದದ ರಸ್ತೆಯಿದೆ.

ಭಾರತದಲ್ಲಿ 9 ವರ್ಷಗಳ ಹಿಂದೆ, 91,287 ಕಿಲೋಮೀಟರ್ ರಸ್ತೆಯಿತ್ತು. ಗಡ್ಕರಿ ಅವರು, ಸಾರಿಗೆ ಸಚಿವರಾದ ಮೇಲೆ ದೇಶಾದ್ಯಂತ ಹೆದ್ದಾರಿ ನಿರ್ಮಿಸಲು ಆಸಕ್ತಿ ತೋರಿಸಿದ ಕಾರಣ, 2019ರ ಏಪ್ರಿಲ್‌ನಿಂದ 2023ರ ಜೂನ್ ತಿಂಗಳವರೆಗೆ 30,000 ಕಿಲೋಮೀಟರ್ ಹೆದ್ದಾರಿ ನಿರ್ಮಿಸಲಾಗಿದೆ. ಪ್ರಮುಖವಾಗಿ, ಬೆಂಗಳೂರು - ಮೈಸೂರು, ಮೀರತ್‌ - ದೆಹಲಿ, ಘಾಜಿಪುರ - ಲಕ್ನೋ ಎಕ್ಸ್‌ಪ್ರೆಸ್‌ವೇಗಳು ಸೇರಿವೆ.

Expressway Man: ಭಾರತ ಚೀನಾವನ್ನು ಹಿಂದಿಕ್ಕುವಂತೆ ಮಾಡಿದ್ದು ಇವರೇ.. ಎಕ್ಸ್‌ಪ್ರೆಸ್‌ವೇ ಮ್ಯಾನ್ ಚಿತ್ರ ರಿಲೀಸ್‌ಗೆ ರೆಡಿ

ಇವುಗಳು ಮಾತ್ರವಲ್ಲದೆ, ದೇಶದ ಮೊದಲ 8 ಪಥದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಕೂಡ ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೆ ಸಿದ್ದವಾಗುತ್ತಿದೆ. 27.6 ಕಿಮೀ ಉದ್ದದ ರಸ್ತೆ ಇದಾಗಿದ್ದು, ಈ ಹೆದ್ದಾರಿ, ದೆಹಲಿಯ ದ್ವಾರಕಾ, ಹರಿಯಾಣದ ಗುರುಗ್ರಾಮದ ಖೇರ್ಕಿ ದೌಲಾ ಟೋಲ್ ಪ್ಲಾಜಾಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮೂಲಕ ದೆಹಲಿ ಹಾಗೂ ಹರಿಯಾಣದ ಜನರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ.

ಕರ್ನಾಟಕದ ಎಕ್ಸ್‌ಪ್ರೆಸ್‌ವೇ ವಿಚಾರಕ್ಕೆ ಬರುವುದಾದರೆ, ಬೆಂಗಳೂರು - ಮೈಸೂರು ನಡುವೆಯಿರುವ ದಶಪಥ ಎಕ್ಸ್‌ಪ್ರೆಸ್‌ವೇಯಿಂದ ಈ ಭಾಗದವರಿಗೆ ಸಾಕಷ್ಟು ಸಹಾಯವಾಗಿದೆ. 118 ಕಿಲೋಮೀಟರ್​ ಉದ್ದದ ರಸ್ತೆಯಿದಾಗಿದ್ದು, 2 ಕಡೆ ತಲಾ ಮೂರು ಪಥ ಹೊಂದಿರುವ 6 ಪಥದ ಎಕ್ಸ್‌ಪ್ರೆಸ್‌ವೇ, ಉಳಿದೆರೆಡು ಕಡೆಯಲ್ಲಿ ತಲಾ ಎರಡು ಪಥದ ಸರ್ವಿಸ್‌ ರಸ್ತೆಯಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂ.8172 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ.

ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru Chennai Expressway) ಕಾಮಗಾರಿಯೂ ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಹೆದ್ದಾರಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. 262 ಕಿಮೀ ಉದ್ದದ ರಸ್ತೆ ಇದಾಗಿದ್ದು, ಎರಡು ನಗರಗಳ ನಡುವೆ ಈಗಿರುವ 5 - 6 ಗಂಟೆ ಪ್ರಯಾಣದ ಅವಧಿ 3 ಗಂಟೆಗೆ ಇಳಿಕೆಯಾಗಲಿದ್ದು, 4 ಪಥದ ಹೆದ್ದಾರಿ ಇದಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹಾದು ಹೋಗುತ್ತದೆ.

ಬೆಂಗಳೂರು ಪುಣೆ ನಡುವೆ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಸಿದ್ದತೆಯನ್ನು ನಡೆಸುತ್ತಿದೆ. ಕರ್ನಾಟಕದ 9 ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ 3 ಜಿಲ್ಲೆಯಲ್ಲಿ ಈ ಹೆದ್ದಾರಿ ಹಾದುಹೋಗಲಿದೆ. 719.26 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ಇದಾಗಿರಲಿದ್ದು, ಮೊದಲಿಗೆ 6 ಪಥದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಹೆದ್ದಾರಿಗೆ ನಿರ್ಮಾಣಗೊಂಡರೆ, ಬೆಂಗಳೂರಿನಿಂದ ಪುಣೆಗೆ ಕೇವಲ 7 ಗಂಟೆಗಳಲ್ಲಿ ತೆರಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 17, 2023, 12:50 [IST]
English summary
Expressway man of india nitin gadkari biopic release on oct 27
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+