ಚೀನಾದಲ್ಲಿ ನಕಲಿ ಲಂಬೊರ್ಗಿನಿ ಮಾರಾಟಕ್ಕೆ ಯತ್ನ

By Nagaraja

ಅಂಗಡಿ, ಮಾಲ್‌ಗಳಿಗೆ ಯಾವುದೇ ವಸ್ತುಗಳನ್ನು ಖರೀದಿಸಲು ಹೊರಟನೆ ಚೀನಾ ಬ್ರಾಂಡ್ ಎಂದು ತಿಳಿದಾಗ ಅಂತಹ ವಸ್ತುಗಳ ಖರೀದಿಗೆ ಮುನ್ನ ಒಂದರೆಡು ಬಾರಿ ತಲೆ ಓಡಿಸುತ್ತೇವೆ. ಯಾಕೆಂದರೆ ಚೀನಾ ಬ್ರಾಂಡ್ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು 'ನೊ ಗ್ಯಾರಂಟಿ ನೊ ವಾರಂಟಿ'.

ಹೌದು, ತಂತ್ರಜ್ಞಾನವನ್ನು ನಕಲು ಮಾಡುವುದರಲ್ಲಿ ಚೀನಾದವರು ನಿಸ್ಸೀಮರು ಎಂಬುದರಿಂದಲೇ ಇದರಿಂದ ತಿಳಿಯುತ್ತದೆ. ಸಾಮಾನ್ಯವಾಗಿ ಇಂತಹ ಕಡಿಮೆ ಬೆಲೆಯ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಾರೆ. ಆದರೆ ಇಲ್ಲೊಂದು ವಿಶಿಷ್ಟ ಪ್ರಕರಣ ದಾಖಲಾಗಿದ್ದು, ಚೀನಾದಲ್ಲೇ ಇಂತಹದೊಂದು ನಕಲಿ ಪ್ರಕರಣ ಸುದ್ದಿಯಾಗಿಬಿಟ್ಟಿದೆ.

ವಿಷಯ ಏನೆಂದರೆ, ಬಾರಿ ಬೆಲೆಬಾಳುವ ಲಂಬೊರ್ಗಿನಿ ಸ್ಪೋರ್ಟ್ಸ್ ಕಾರನ್ನು ನಕಲು ಮಾಡಿರುವ ವ್ಯಕ್ತಿಯೊರ್ವ ಅದನ್ನು ಮಾರಾಟ ಮಾಡುವ ಯತ್ನದಲ್ಲಿ ಸಿಕ್ಕಿಬಿದ್ದಿದ್ದಾನೆ. ಸಂಪೂರ್ಣ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಚೀನಾದಲ್ಲಿ ನಕಲಿ ಲಂಬೊರ್ಗಿನಿ ಮಾರಾಟಕ್ಕೆ ಯತ್ನ

ಹಳೆಯ ಹ್ಯುಂಡೈ ಕಾರನ್ನು ಬಳಸಿಕೊಂಡಿರುವ ಈತ ಐಷಾರಾಮಿ ಲಂಬೊರ್ಗಿನಿ ಕಾರಿನ ರೂಪ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಚೀನಾದಲ್ಲಿ ನಕಲಿ ಲಂಬೊರ್ಗಿನಿ ಮಾರಾಟಕ್ಕೆ ಯತ್ನ

ಅಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಕಾರು ಮಾರಾಟದ ಬೋರ್ಡ್ ಹಾಕಿ ಮಾರಾಟ ಮಾಡುವ ಪ್ರಯತ್ನ ಪ್ರಯತ್ನದಲ್ಲಿ ಸಿಕ್ಕಿಬಿದ್ದಿದ್ದಾನೆ.

ಚೀನಾದಲ್ಲಿ ನಕಲಿ ಲಂಬೊರ್ಗಿನಿ ಮಾರಾಟಕ್ಕೆ ಯತ್ನ

ಇಲ್ಲಿ ಕುತೂಹಲಕಾರಿ ಅಂಶವೆಂದರೆ ಪೊಲೀಸರು ಈತನನ್ನು, ನಕಲಿ ಲಂಬೊರ್ಗಿನಿ ಪ್ರಕರಣದಲ್ಲಿ ಬಂಧಿಸಿಲ್ಲ. ಬದಲಾಗಿ ಕಾರಿನಲ್ಲಿ ನಂಬರ್ ಬೋರ್ಡ್ ಲಗತ್ತಿಸಿಲ್ಲವೆಂಬ ಕಾರಣಕ್ಕೆ ಸೆರೆ ಹಿಡಿದಿದ್ದಾರೆ.

ಚೀನಾದಲ್ಲಿ ನಕಲಿ ಲಂಬೊರ್ಗಿನಿ ಮಾರಾಟಕ್ಕೆ ಯತ್ನ

ಅಂದರೆ ಹಳೆ ಹ್ಯುಂಡೈ ಕಾರಿಗೆ ಲಂಬೊರ್ಗಿನಿ ಟಚ್ ನೀಡಿರುವ ಆತ ಎಲ್ಲರನ್ನು ವಂಚಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಚೀನಾದಲ್ಲಿ ನಕಲಿ ಲಂಬೊರ್ಗಿನಿ ಮಾರಾಟಕ್ಕೆ ಯತ್ನ

ಅಂತಿಮವಾಗಿ ಈತ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾನೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಚೀನಾದಲ್ಲಿ ನಕಲಿ ಲಂಬೊರ್ಗಿನಿ ಮಾರಾಟಕ್ಕೆ ಯತ್ನ

ಅಷ್ಟಕ್ಕೂ ನಕಲಿ ಲಂಬೊರ್ಗಿನಿ ಕಾರು ವಾಸ್ತವವಾಗಿ ಕಳವು ಮಾಡಲಾದ ಕಾರೇ ಎಂಬುದನ್ನು ಇದೀಗ ತನಿಖೆ ನಡೆಸಲಾಗುತ್ತಿದೆ.

More from DriveSpark

Article Published On: Monday, September 30, 2013, 13:01 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+