ಹೊಸ ಕಾರು ಖರೀದಿಸಿದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಕುಟುಂಬ: ನಿಜವಾದ ಪ್ರತಿಫಲ ಎಂದ ಆನಂದ್ ಮಹೀಂದ್ರಾ
ಎಲ್ಲಾರಿಗೂ ಸ್ವಂತ ಕಾರನ್ನು ಖರೀದಿಸಬೇಕೆಂಬ ಕನಸು ಇರುತ್ತದೆ. ಬಹಳ ಕಾತರದಿಂದ ಕಾಯುತ್ತಿದ್ದ ಕಾರಿನ ವಿತರಣೆ ದಿನದಂದು ಹಬ್ಬದ ರೀತಿಯ ಸಂಭ್ರಮ. ಕಾರಿನ ವಿತರಣೆ ಪಡೆಯುವ ವೇಳೆ ಕೆಲವರು ಭಾವನೆಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಾನೆ. ಇತ್ತೀಚೆಗೆ ಒಂದು ಕುಟುಂಬವು ತಮ್ಮ ಹೊಚ್ಚಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್ ವಿತರಣೆ ವೇಳೆ ಡಾನ್ಸ್ ಮಾಡಿರುವ ವೀಡಿಯೊ ವೈರಲ್ ಆಗಿದೆ.
ಇತೀಚೆಗೆ ಹೊಚ್ಚಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್ ವಿತರಣೆ ತೆಗೆದುಕೊಳ್ಳುವಾಗ ಕುಟುಂಬವು ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಡೀಲರ್‌ಶಿಪ್‌ನ ಕೆಲವು ಜನರೊಂದಿಗೆ ಇಡೀ ಕುಟುಂಬವು ಈ ಅವಿಸ್ಮರಣೀಯ ಕ್ಷಣವನ್ನು ಸಂಭ್ರಮಿಸಿದ್ದಾರೆ. ತಮ್ಮ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿತರಣೆಯ ಸಮಯದಲ್ಲಿ ಕುಟುಂಬವು ಡ್ಯಾನ್ಸ್ ಮಾಡುವ ವೀಡಿಯೊವನ್ನು ಮನೀಶ್ ರಾಜ್ ಸಿಂಘಾನಿಯಾ ಅವರು ತಮ್ಮ ಪ್ರೊಫೈಲ್‌ನಲ್ಲಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಸದಾ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿರುವ ಉದ್ಯಮಿ ಹಾಗೂ ಮಹೀಂದ್ರ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಈ ವಿಡಿಯೋವನ್ನು ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ಇದು ಭಾರತದ ಆಟೋ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಿಕ್ಕಿದ ನಿಜವಾದ ಕೊಡುಗೆ ಹಾಗೂ ಉಡುಗೊರೆ ಎಂದು ಬರೆದುಕೊಂಡಿದ್ದಾರೆ.
ಇನ್ನು ವರದಿಗಳ ಪ್ರಕಾರ, ಮಹೀಂದ್ರಾ ಡೀಲರ್‌ಶಿಪ್ ಛತ್ತೀಸ್‌ಗಢದ ರಾಯ್‌ಪುರದಲ್ಲಿರುವುದು. ಪೋಷಕರ 23ನೇ ವಿವಾಹ ವಾರ್ಷಿಕೋತ್ಸವದ ನೆನಪಿಗಾಗಿ ಕುಟುಂಬವು ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ-ಎನ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಪೋಷಕರು ತಮ್ಮ ಮಕ್ಕಳೊಂದಿಗೆ ಹಳೆಯ ಸೂಪರ್ ಹಿಟ್ ಭಾರತೀಯ ಹಾಡುಗಳಿಗೆ ಡ್ಯಾನ್ಸ್ ಮಾಡುವುದನ್ನು ವೀಡಿಯೊದಲ್ಲಿ ಕಾಣಬಹುದು. ಡೀಲರ್‌ಶಿಪ್ ಸಿಬ್ಬಂದಿಯೊಂದಿಗೆ ಇಡೀ ಕುಟುಂಬವು ಈ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.
ಈ ಕುಟುಂಬ ಖರೀದಿಸಿದ ಮಹೀಂದ್ರಾ ಸ್ಕಾರ್ಪಿಯೊ ಬಗ್ಗೆ ಹೇಳುವುದಾದರೆ, ಸ್ವದೇಶಿ ಮಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ ಎರಡೂ ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಕಂಪನಿಯ ಎಸ್‍ಯುವಿಗಳ ಸರಣೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ, ಮಾರಾಟದಲ್ಲಿ ಮಹೀಂದ್ರಾ ಕಂಪನಿಗೆ ಇಂದಿಗೂ ಹೆಚ್ಚಿನ ಕೊಡುಗೆಯನ್ನು ನೀಡುವುದನ್ನು ಮುಂದುವರೆಸಿರುವುದು ವಿಶೇಷ.
ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಎಸ್‍ಯುವಿಯನ್ನು ನ್ಯೂ ಜನರೇಷನ್ ಸ್ಕಾರ್ಪಿಯೋ-ಎನ್ ಜೊತೆಗೆ ಮಾರಾಟ ಮಾಡಲಾಗುತ್ತದೆ, ಈ ಎರಡೂ ಎಸ್‍ಯುವಿಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ, ಎಲ್ಲಾ ಎಸ್‍ಯುವಿಗಳ ಬಿಗ್ ಡ್ಯಾಡಿ ಸ್ಕಾರ್ಪಿಯೋ ಬೇಡಿಕೆ ಹೆಚ್ಚಾಗಿರುವುದರಿಂದ ಇದರ ಕಾಯುವ ಅವಧಿ ಕೂಡ ಹೆಚ್ಚಾಗುತ್ತದೆ.
ಇನ್ನು ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಮಹೀಂದ್ರಾ ಸ್ಕಾರ್ಪಿಯೊ-ಎನ್ ಎಸ್‍ಯುವಿಯ ಮುಂಭಾಗದಲ್ಲಿ ಮಹೀಂದ್ರಾ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ನೀಡಲಾಗಿದೆ. ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಸಿ ಮತ್ತು ಡಿ-ಪಿಲ್ಲರ್ ಪ್ರದೇಶಗಳಲ್ಲಿ ವಿಂಡೋ ಕ್ರೋಮ್ ಫ್ರೇಮ್‌ನಲ್ಲಿ ಸ್ಕಾರ್ಪಿಯನ್ ಸ್ಟಿಂಗ್ ಅಂಶವನ್ನು ಹೊಂದಿದೆ.
ಇನ್ನು ಈ ಎಸ್‍ಯುವಿ ಹೊಸ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ನೊಂದಿಗೆ 18 ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಅನ್ನು ಹೊಂದಿದೆ. ಸ್ಕಾರ್ಪಿಯೋ-ಎನ್ ಮಧ್ಯಂತರ ವೆರಿಯೆಂಟ್ ನಂತರದಲ್ಲಿ ಲಭ್ಯವಾಗುವಂತೆ ಸನ್‌ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದ್ದು, ಹೊಸ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ.


Click it and Unblock the Notifications