ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು

ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಕಿಂಗ್‌ ರಿಚರ್ಡ್‌ ಶ್ರೀನಿವಾಸನ್ ಬುಧವಾರ ತಡರಾತ್ರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪ್ರಯಾಣಿಸುವಾಗ ಶ್ರೀನಿವಾಸನ್ ಅವರು ಬೈಕ್ ಒಂಟೆಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು

ಕಿಂಗ್‌ ರಿಚರ್ಡ್‌ ಶ್ರೀನಿವಾಸನ್ ಸ್ನೇಹಿತರೊಂದಿಗೆ ಬೈಕ್ ಟ್ರಿಪ್ ತೆರಳಿದ್ದರು. ಜೈಸಲ್ಮೇರ್‌ನಲ್ಲಿ ಪ್ರಯಾಣಿಸುವಾಗ ಶ್ರೀನಿವಾಸನ್ ಅವರು ಮುಂಭಾಗದಲ್ಲಿ ಚಲಿಸುತ್ತಿದ್ದರು ಉಳಿದ ಸ್ನೇಹಿತರ ಹಿಂಭಾಗದಲ್ಲಿ ಬರುತ್ತಿದ್ದರು. ಈ ವೇಳೆ ದಿಢೀರನೇ ಅಡ್ಡ ಬಂದ ಒಂಟೆಗೆ ಗುದ್ದಿದ ಪರಿಣಾಮ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ತಲೆಗೆ ತೀವ್ರವಾದ ಗಾಯಗಳಾಗಿದೆ. ತಕ್ಷಣವೇ ಅವರನ್ನು ಸ್ಥಳಿಯ ಆಸ್ಪೆತ್ರೆಗೆ ದಾಖಲಿಸಿದ್ದಾರೆ .

ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು

ಆದರೆ ತಲೆಯಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ರಾಜಸ್ಥಾನದ ಪೊಲೀಸ್‌ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶ್ರೀನಿವಾಸನ್ ಪಾರ್ಥಿವ ಶರೀರವನ್ನು ರಾಜಸ್ಥಾನದ ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು

ರಿಚರ್ಡ್​ ಶ್ರೀನಿವಾಸ್​ ಜೊತೆ ಬೆಂಗಳೂರಿನ ನಾರಾಯಣ, ಚೆನ್ನೈನ ಡಾ. ವಿಜಯ್ ಮತ್ತು ವೇಣುಗೋಪಾಲ್​ ಇದ್ದರು. ಇವರ ಬೈಕ್ ಟ್ರಿಪ್ ಜನವರಿ 23ರಂದು ಬೆಂಗಳೂರಿನಲ್ಲಿ ಅಂತ್ಯವಾಗಬೇಕಿತ್ತು. ಆದರೆ ರಾಜಸ್ಥನದಲ್ಲೇ ಭೀಕರ ದುರಂತ ಸಂಭವಿಸಿದೆ.

ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು

ಕಿಂಗ್‌ ರಿಚರ್ಡ್‌ ಶ್ರೀನಿವಾಸನ್ ಅವರು ಈ ಹಿಂದೆ ಟ್ರಯಂಫ್ ಟೈಗರ್ ಬೈಕಿನಲ್ಲಿ ಬೆಂಗಳೂರಿನಿಂದ ಹೊರಟು ಏಷ್ಯಾ, ಯುರೋಪ್, ಅಮೆರಿಕಾ ಮತ್ತು ಅಸ್ಟೇಲಿಯಾ ಖಂಡಗಳ ವಿವಿಧ ದೇಶಗಳನ್ನು ಸುತ್ತಿ ಬಂದಿದ್ದಾರೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು

ಅಲ್ಲದೇ ಅವರು ಈ ಪ್ರವಾಸವನ್ನು ಮುಗಿಸಿ ನಂತರ ಅಫ್ರಿಕಾಗೂ ಬೈಕ್ ಟ್ರಿಪ್ ಹೋಗುವ ಪ್ಲಾನ್ ಮಾಡಿದ್ದರಂತೆ, ಅದ್ದಕ್ಕಾಗಿ ಅವರು ಇತ್ತೀಚೆಗೆ ಐಷಾರಾಮಿ ಬಿಎಂಡಬ್ಲ್ಯು ಜಿಎಸ್ ಬೈಕನ್ನು ಖರೀದಿಸಿದ್ದರು ಎನ್ನಾಲಾಗಿದೆ.

ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು

ಇವರ ಬಳಿ ಇದ್ದ ಟ್ರಯಂಫ್ ಟೈಗರ್ 800 ಬೈಕ್ ಬಗ್ಗೆ ಹೇಳುವುದಾದರೆ, ಇದರಲ್ಲಿ 800 ಸಿಸಿ, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,500 ಆರ್‌ಪಿಎಂನಲ್ಲಿ 93.7 ಬಿಒಹೆಚ್‍ಪಿ ಪವರ್ ಮತ್ತು 8,050 ಆರ್‌ಪಿಎಂನಲ್ಲಿ 79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು

ಬೆಂಗಳೂರಿನ ಬೈಕ್ ರೈಡರ್ ರಿಚರ್ಡ್​ ಶ್ರೀನಿವಾಸ್​ ಭಾರತದ ಜನಪ್ರಿಯ ಬೈಕರ್‌ಗಳಲ್ಲಿ ಒಬ್ಬರು. ಎಂತಹ ಕಠಿಣ ಹಾದಿಯಲ್ಲಿಯು ಬೈಕ್ ಓಡಿಸಬಲ್ಲ ನಿಸ್ಸೀಮ ಕಿಂಗ್ ರಿಚರ್ಡ್ ಶ್ರೀನಿವಾಸನ್ ಇದೀಗ ಬೈಕ್ ಅಪಘಾತದಲ್ಲಿ ಕೊನೆಯುಸಿರೆಳೆದಿರುವುದು ನಿಜಕ್ಕೂ ದುರಂತ.

Image Courtesy: King Richard/Instagram

Most Read Articles

Kannada
English summary
Famous Bengaluru Biker Dies After Crashing Into Camel. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X