ಮಹೀಂದ್ರಾ ಎಲೆಕ್ಟ್ರಿಕ್ ಆಟೋ ರಿಕ್ಷಾ ಖರೀದಿಸಿದ ಬಾಲಿವುಡ್ ಖ್ಯಾತ ನಟಿ
ಬಾಲಿವುಡ್ ನಟ-ನಟಿಯರು ಸಾಕಷ್ಟು ಕಾರ್ ಕ್ರೇಜ್ ಹೊಂದಿರುತ್ತಾರೆ. ಅದೇರೀತಿ ನಟಿ, ಮಾಡೆಲ್ ಹಾಗೂ ಉದ್ಯಮಿಯಾಗಿರುವ ಗುಲ್ ಪನಾಗ್ ಆಟೋಮೊಬೈಲ್ ಕ್ಷೇತ್ರದ ಬಗ್ಗೆ ತಮ್ಮದೇ ಆದ ಆಸಕ್ತಿ ಹೊಂದಿದ್ದು, ರೋಡ್ ಟ್ರಿಪ್ ಅನ್ನು ಲೈಕ್ ಮಾಡುತ್ತಾರೆ. ಸದ್ಯ ಮಹೀಂದ್ರಾ ಜೋರ್ ಗ್ರಾಂಡ್ ಎಲೆಕ್ಟ್ರಿಕ್ ಪಿಕ್-ಅಪ್ ಆಟೋ ರಿಕ್ಷಾವನ್ನು ಖರೀದಿಸಿದ್ದಾರೆ.
ಈ ಮೊದಲು ನಟಿ ಗುಲ್ ಪನಾಗ್, ಮಹೀಂದ್ರಾ ಸ್ಕಾರ್ಪಿಯೋ ಗೆಟ್‌ಅವೇಯನ್ನು ಖರೀದಿ ಮಾಡಿದ್ದರು. ಈ ಡ್ಯುಯಲ್-ಕ್ಯಾಬ್ ಪಿಕ್-ಅಪ್ ಅನ್ನು ಆಫ್-ರೋಡಿಂಗ್ ಮತ್ತು ಸಾಹಸ ರೋಡ್ ಟ್ರಿಪ್‌ಗಳಿಗಾಗಿ ಹೆಚ್ಚು ಕಸ್ಟಮೈಸ್ ಮಾಡಲಾಗಿತ್ತು. ಗುಲ್ ಪನಾಗ್, ಕ್ಲೀನ್ ಎನರ್ಜಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಲ್ಲದೆ, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟಾರ್ಟ್‌ಅಪ್ 'ಸನ್‌ಫ್ಯೂಯಲ್ ಎಲೆಕ್ಟ್ರಿಕ್'ನ ಸಹ-ಸಂಸ್ಥಾಪಕರು ಕೂಡ ಆಗಿದ್ದಾರೆ. ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಖರೀದಿ ಮಾಡಿದ್ದು, ಅದು ಎಲ್ಲೆಡೆ ಭಾರೀ ಸುದ್ದಿಯಾಗಿದೆ.

ಮಹೀಂದ್ರಾ ಎಲೆಕ್ಟ್ರಿಕ್‌ನ ಸಿಇಒ ಸುಮನ್ ಮಿಶ್ರಾ ಅವರು, ಹೊಸ ಎಲೆಕ್ಟ್ರಿಕ್ ಆಟೋ ರಿಕ್ಷಾದೊಂದಿಗೆ ನಟಿ ಗುಲ್ ಪನಾಗ್ ನಿಂತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, 'ನಮ್ಮ ಮಹೀಂದ್ರಾ ಕುಟುಂಬಕ್ಕೆ ನಟಿ ಗುಲ್ ಪನಾಗ್ ಅವರಿಗೆ ಸುಸ್ವಾಗತ ಕೋರುತ್ತಿದ್ದೇವೆ. ನೀವು ನಮ್ಮ ಗ್ರಾಹಕರಾಗಿರುವುದಕ್ಕೆ ನಾವು ತುಂಬಾ ರೋಮಾಂಚನಗೊಂಡಿದ್ದೇವೆ. ಈ ಮೂಲಕ ಎಲೆಕ್ಟ್ರಿಕ್ ವಾಹನದೊಂದಿಗೆ ನೀವು ಏನು ಸಾಧಿಸುತ್ತೀರಿ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ನ ಕೆಳಗೆ, ನಟಿ ಹೊಸ ಎಲೆಕ್ಟ್ರಿಕ್ ಆಟೋ ಕಿರಿದಾದ ಹಳ್ಳಿಯ ರಸ್ತೆಯಲ್ಲಿ ಚಾಲನೆ ಮಾಡುವ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ಪ್ರಯಾಣಿಕ ವಾಹನ ವಿಭಾಗಗಳಲ್ಲಿರುವ ಎಲೆಕ್ಟ್ರಿಕ್ ವಾಹನಗಳು (EV), ವಾಣಿಜ್ಯ ವಾಹನ ವಿಭಾಗಕ್ಕೂ ಪ್ರವೇಶಿಸಿವೆ. ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಇವಿ ತಯಾರಕ ಕಂಪನಿಗಳಿವೆ. ಅವು ವಾಣಿಜ್ಯ ವಿಭಾಗದಲ್ಲಿ ನಿರ್ದಿಷ್ಟ ಎಲೆಕ್ಟ್ರಿಕ್ ವಾಹನ ನೀಡುವುದರ ಮೇಲೆ ತಮ್ಮ ಗಮನ ಕೇಂದ್ರೀಕರಿಸಿವೆ. ಮಹೀಂದ್ರಾ, ಈ ವರ್ಷ ಜೋರ್ ಗ್ರಾಂಡ್ ಕಾರ್ಗೋ ಎಲೆಕ್ಟ್ರಿಕ್ ಆಟೋವನ್ನು ಬಿಡುಗಡೆಗೊಳಿಸಿದ್ದು, ವಾಣಿಜ್ಯ ವಾಹನ ವಿಭಾಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
We’ll, IMO, best kind of Brand Ambassadors are the paying kind.😀
— Gul Panag (@GulPanag) December 27, 2022
You’d be surprised with the uses, it has for me, and are those like me, who run establishments that focus on clean energy. pic.twitter.com/UV3KotPT15
ಜೋರ್ ಗ್ರ್ಯಾಂಡ್ ಬಿಡುಗಡೆಯೊಂದಿಗೆ ಮಹೀಂದ್ರಾ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡಲು ಎದುರು ನೋಡುತ್ತಿದೆ. ಮಹೀಂದ್ರಾದ ಎಲೆಕ್ಟ್ರಿಕ್ ಆಟೋ ರಿಕ್ಷಾದ ಎಕ್ಸ್ ಶೋರೂಂ ಬೆಲೆ 3.60 ಲಕ್ಷ ರೂ. ಇದ್ದು, ಜೋರ್ ಗ್ರ್ಯಾಂಡ್ 10.24 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಲಿದ್ದು, ಅದು 12 kW ಎಲೆಕ್ಟ್ರಿಕ್ ಮೋಟಾರ್ ಪವರ್ ಅನ್ನು ನೀಡುತ್ತದೆ. ಎಲೆಕ್ಟ್ರಿಕ್ ಆಟೋ ರಿಕ್ಷಾವು ಗರಿಷ್ಠ 50 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಯಾವುದೇ ಸಮಸ್ಯೆಗಳಿಲ್ಲದೆ ಕಡಿದಾದ ರಸ್ತೆಗಳಲ್ಲಿಯೂ ಸುಲಭವಾಗಿ ಓಡಿಸಲು ಸಾಧ್ಯವಾಗುತ್ತದೆ.
ಮಹೀಂದ್ರಾ ಝೋರ್ ಗ್ರಾಂಡ್ 153 ಕಿ.ಮೀಗಳ ಪ್ರಮಾಣೀಕೃತ ಡ್ರೈವಿಂಗ್ ರೇಂಜ್ ಹೊಂದಿದೆ. ಆದರೆ, ನೈಜ-ಪ್ರಪಂಚದ ಪರಿಸ್ಥಿತಿಗಳಲ್ಲಿ ಈ ಆಟೋ ರಿಕ್ಷಾವು ಒಂದೇ ಚಾರ್ಜ್‌ನಲ್ಲಿ ಸುಮಾರು 100 ಕಿ.ಮೀ ಮೈಲೇಜ್ ನೀಡಬಹುದು. ಆಟೋದ ಬ್ಯಾಟರಿಯನ್ನು 4 ಗಂಟೆಗಳ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಅಲ್ಲದೆ, ಜೋರ್ ಗ್ರ್ಯಾಂಡ್‌ನ ಗರಿಷ್ಠ ವೇಗವು 50 kmphಗೆ ಸೀಮಿತವಾಗಿದೆ. ಮಾರುಕಟ್ಟೆಲಿರುವ ಡೀಸೆಲ್ ಮತ್ತು ಸಿಎನ್‌ಜಿ ಆಟೋ ರಿಕ್ಷಾಗಳಿಗೆ ಇದು ಖಂಡಿತವಾಗಿಯೂ ಪರ್ಯಾಯವಾಗಿದೆ. ICE ಆವೃತ್ತಿಗಳಿಗೆ ಹೋಲಿಸಿದರೆ ಇದರ ವೆಚ್ಚವು ಕಡಿಮೆ ಇರುತ್ತದೆ.
ನಟಿ ಗುಲ್ ಪನಾಗ್ ಬೈಕ್ ಮತ್ತು ಎಸ್‌ಯುವಿಗಳ ಉತ್ತಮ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಇದು ಆಕೆಯ ಮೊದಲ ಎಲೆಕ್ಟ್ರಿಕ್ ವಾಹನವಲ್ಲ. ಅವರು, ಮಹೀಂದ್ರಾ E20ಯನ್ನು ಹೊಂದಿದ್ದಾರೆ. ಇದನ್ನು ಭಾರತೀಯ ಮಾರುಕಟ್ಟೆಗೆ 2013ರಲ್ಲಿ ಬಿಡುಗಡೆ ಮಾಡಿದ ಸಣ್ಣ ಸಿಟಿ ಎಲೆಕ್ಟ್ರಿಕ್ ಕಾರ್ ಆಗಿತ್ತು. ಈ ಕಾರನ್ನು ಗುಲ್ ಪನಾಗ್ ಅವರಿಗೆ ಜನ್ಮದಿನದ ಪ್ರಯುಕ್ತ ಅವರ ಪತಿ ಉಡುಗೊರೆಯಾಗಿ ನೀಡಿದ್ದರು. E20 ಹೊರತುಪಡಿಸಿ, ನಟಿ ತಮ್ಮ ಗ್ಯಾರೇಜ್‌ನಲ್ಲಿ ಮಹೀಂದ್ರಾ ಥಾರ್, ಅಲ್ಟುರಾಸ್ G4, BMW F650 Funduro, ರಾಯಲ್ ಎನ್‌ಫೀಲ್ಡ್, Jawa 42ನಂತಹ ವಾಹನಗಳನ್ನೂ ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications