30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಮಹಾರಾಷ್ಟ್ರದ ಭಿವಾಂಡಿಯ ರೈತರೊಬ್ಬರು ಹೆಲಿಕಾಪ್ಟರ್ ಖರೀದಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇವರು ಕೃಷಿಯ ಜೊತೆಗೆ ಹಲವು ವ್ಯವಹಾರಗಳನ್ನು ನಡೆಸುತ್ತಾರೆ. ಅವರು ತಮ್ಮ ಡೈರಿ ವ್ಯವಹಾರದ ಸಲುವಾಗಿ ದೇಶಾದ್ಯಂತ ಪ್ರಯಾಣಿಸಬೇಕಾಗಿದೆ.

30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಇದಕ್ಕಾಗಿಯೇ ಅವರು ಹೆಲಿಕಾಪ್ಟರ್ ಖರೀದಿಸಿದ್ದಾರೆ. ಜನಾರ್ಧನ್ ಬೋಯಿರ್ ಎಂಬುವವರೇ ಹೆಲಿಕಾಪ್ಟರ್ ಖರೀದಿಸಿರುವ ರೈತ. ಇವರು ಇತ್ತೀಚೆಗೆ ಡೈರಿ ಉದ್ಯಮಕ್ಕೆ ಪ್ರವೇಶಿಸಿದ್ದಾರೆ. ಈ ಹೊಸ ಉದ್ಯಮದಿಂದಾಗಿ ಜನಾರ್ಧನ್ ಬೋಯಿರ್ ಭಾರತದ ವಿವಿಧ ಊರುಗಳಿಗೆ ಪ್ರಯಾಣಿಸಬೇಕಾಗಿದೆ.

30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಈ ಹಿನ್ನೆಲೆಯಲ್ಲಿ ಜನಾರ್ಧನ್ ಬೋಯಿರ್ ರೂ.30 ಕೋಟಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಡೈರಿ ಉದ್ಯಮದ ಕಾರಣಕ್ಕೆ ತಾವು ಪಂಜಾಬ್, ಹರಿಯಾಣ, ರಾಜಸ್ಥಾನ,ಗುಜರಾತ್‌ಗಳಿಗೆ ಆಗಾಗ್ಗೆ ಪ್ರಯಾಣಿಸಬೇಕಾಗುತ್ತದೆ, ಕೃಷಿಯ ಜೊತೆಗೆ ನನ್ನ ಡೈರಿ ವ್ಯವಹಾರವನ್ನೂ ನಾನು ನೋಡಿಕೊಳ್ಳಬೇಕು. ಎಂದು ಜನಾರ್ಧನ್ ಬೋಯಿರ್ ಹೇಳಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಹಲವು ಊರುಗಳಲ್ಲಿ ವಿಮಾನ ನಿಲ್ದಾಣಗಳು ಇಲ್ಲದೇ ಇರುವುದರಿಂದ ಹೆಚ್ಚು ಸಮಯ ಪ್ರಯಾಣಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಜನಾರ್ಧನ್ ಬೋಯಿರ್ ಹೆಲಿಕಾಪ್ಟರ್ ಖರೀದಿಸಲು ನಿರ್ಧರಿಸಿದರು.

30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಈ ಬಗ್ಗೆ ಅವರ ಸ್ನೇಹಿತರೊಬ್ಬರು ಅವರಿಗೆ ಸಲಹೆ ನೀಡಿದ್ದರು ಎಂದು ಹೇಳಲಾಗಿದೆ. ಕಳೆದ ಭಾನುವಾರ ಈ ಹೆಲಿಕಾಪ್ಟರ್ ಅನ್ನು ಜನಾರ್ಧನ್ ಬೋಯಿರ್'ರವರ ಗ್ರಾಮಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಜನಾರ್ಧನ್ ಬೋಯಿರ್ ಆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಅವಕಾಶವನ್ನು ತಮ್ಮ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡಿದರು. ಜನಾರ್ಧನ್ ಬೋಯಿರ್ ಅವರು 2.5 ಎಕರೆ ಜಮೀನಿನಲ್ಲಿ ಭದ್ರತಾ ಗೋಡೆಯೊಂದಿಗೆ ಹೆಲಿಪ್ಯಾಡ್ ನಿರ್ಮಿಸುವ ವ್ಯವಸ್ಥೆ ಮಾಡಿದ್ದಾರೆ ಎಂಬುದು ವಿಶೇಷ.

30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಹೆಲಿಕಾಪ್ಟರ್ ನಿಲುಗಡೆ ಮಾಡಲು ಇಲ್ಲಿ ಗ್ಯಾರೇಜ್ ಇರಲಿದೆ. ಜೊತೆಗೆ ಪೈಲಟ್ ಹಾಗೂ ಟೆಕ್ನಿಶಿಯನ್'ಗಳ ಕೊಠಡಿಯೂ ಇರಲಿದೆ. ಮಾರ್ಚ್ 15ರಂದು ಹೆಲಿಕಾಪ್ಟರ್ ಇಲ್ಲಿಗೆ ಬಂದು ತಲುಪಲಿದೆ ಎಂದು ಜನಾರ್ಧನ್ ಬೋಯಿರ್ ತಿಳಿಸಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಜನಾರ್ಧನ್ ಬೋಯಿರ್ ಸುಮಾರು ರೂ.100 ಕೋಟಿ ಆಸ್ತಿ ಹೊಂದಿದ್ದಾರೆಂದು ಎಂಬುದು ಗಮನಾರ್ಹ. ಜನಾರ್ಧನ್ ಬೋಯಿರ್ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಮಾತ್ರವಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ.

30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಭಿವಾಂಡಿ ಪ್ರದೇಶದಲ್ಲಿ ದೊಡ್ಡ ದೊಡ್ಡ ಕಂಪನಿಗಳ ಗೋದಾಮುಗಳಿವೆ. ಆ ಗೋದಾಮುಗಳನ್ನು ಬಾಡಿಗೆಗೆ ನೀಡಿರುವವರು ದೊಡ್ಡ ಕಂಪನಿಗಳಿಂದಹೆಚ್ಚು ಬಾಡಿಗೆಯನ್ನು ಪಡೆಯುತ್ತಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ರೈತ

ಇದರಿಂದಾಗಿ ಈ ಪ್ರದೇಶದ ಹಲವು ಜನರು ಶ್ರೀಮಂತರಾಗಿದ್ದು, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಕಂಪನಿಗಳ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾರೆ.ಜನಾರ್ಧನ್ ಬೋಯಿರ್ ಸಹ ಹಲವಾರು ಗೋದಾಮುಗಳನ್ನು ಹೊಂದಿದ್ದು, ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Farmer from Maharashtra buys helicopter worth Rs 30 crore. Read in Kannada.
Story first published: Tuesday, February 16, 2021, 20:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X