ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಕರೋನಾ ವೈರಸ್ ಹಾಗೂ ಅದರ ಕಾರಣಕ್ಕೆ ಜಾರಿಗೊಳಿಸಲಾದ ಲಾಕ್‌ಡೌನ್ ಜನ ಜೀವನದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿದೆ. ಕರೋನಾ ವೈರಸ್ ಕಾರಣದಿಂದಾಗಿ ಹಲವು ದೇಶಗಳ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ.

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಇದು ಕರೋನಾ ವೈರಸ್'ನ ಒಂದು ಮುಖವಾದರೆ, ಕರೋನಾ ವೈರಸ್ ಕಾರಣಕ್ಕೆ ಜನರು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವಂತಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಬಂಧಿಯಾಗಿದ್ದ ಹಲವಾರು ಜನರು ತಮ್ಮಲ್ಲಿದ್ದ ಪ್ರತಿಭೆಯನ್ನು ಹೊರಹಾಕಿದ್ದಾರೆ. ಹಲವಾರು ಜನರು ಲಾಕ್‌ಡೌನ್ ಅವಧಿಯಲ್ಲಿ ಹೊಸ ಹೊಸ ವಾಹನಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಲಾಕ್‌ಡೌನ್'ನಿಂದಾಗಿ ಮನೆಯಲ್ಲಿಯೇ ಬಂಧಿಯಾಗಿದ್ದ ರೈತರೊಬ್ಬರು ಪೆಟ್ರೋಲ್ ಅಥವಾ ಡೀಸೆಲ್ ಅಗತ್ಯವಿಲ್ಲದ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಾಹನವು ಸೋಲಾರ್'ನಿಂದ ಚಲಿಸುತ್ತದೆ ಎಂಬುದು ವಿಶೇಷ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಈ ವಾಹನವನ್ನು ಸೋಲಾರ್ ಪ್ಯಾನೆಲ್ ಹಾಗೂ ಚಾರ್ಜಿಂಗ್ ಪಾಯಿಂಟ್ ಮೂಲಕವೂ ಚಾರ್ಜ್ ಮಾಡಬಹುದು. ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಇದ್ದಾಗ ಯೂಟ್ಯೂಬ್ ಹಾಗೂ ಪುಸ್ತಕಗಳಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ವಾಹನವನ್ನು ನಿರ್ಮಿಸಿದ್ದೇನೆ ಎಂದು ಈ ವಾಹನವನ್ನು ಅಭಿವೃದ್ಧಿಪಡಿಸಿರುವವರು ಹೇಳಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಒಡಿಶಾದ ಕಾರಂಜಿಯಾ ಜಿಲ್ಲೆಯ ಸುಶೀಲ್ ಅಗರ್ವಾಲ್ ಎಂಬುವವರೇ ಈ ಸೋಲಾರ್ ವಾಹನವನ್ನು ಅಭಿವೃದ್ಧಿಪಡಿಸಿರುವ ರೈತ. ಈ ವಾಹನದಲ್ಲಿ ಅವರು 850 ವ್ಯಾಟ್ ಮೋಟಾರ್ ಹಾಗೂ 100 ಎಹೆಚ್ / 54 ವೋಲ್ಟ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ವಾಹನವು 300 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಅವರು ಹೇಳಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ, ನಾನು ನನ್ನದೇ ಆದ ವರ್ಕ್ ಶಾಪ್ ಹೊಂದಿದ್ದೇನೆ.

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಈ ವರ್ಕ್ ಶಾಪ್ ಮೂಲಕ ಈ ಸೌರ ವಾಹನವನ್ನು ನಿರ್ಮಿಸಿದ್ದೇನೆ. ಈ ವಾಹನದಲ್ಲಿ ಅಳವಡಿಸಿರುವ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು 8.30 ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಈ ವಾಹನದಲ್ಲಿ ಸುದೀರ್ಘ ಅವಧಿಯವರೆಗೆ ಬಾಳಿಕೆ ಬರುವ ಬ್ಯಾಟರಿಯನ್ನು ಬಳಸಲಾಗಿದೆ. ಈ ಬ್ಯಾಟರಿ 10 ವರ್ಷಗಳವರೆಗೆ ಇರುತ್ತದೆ ಎಂದು ಅವರು ಹೇಳಿದ್ದಾರೆ. ಅಂದ ಹಾಗೆ ಸುಶೀಲ್ ಅಗರ್ವಾಲ್ ರವರು ಅಭಿವೃದ್ಧಿಪಡಿಸಿರುವುದು ನಾಲ್ಕು ಚಕ್ರದ ವಾಹನವನ್ನು.

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಈ ವಾಹನಕ್ಕೆ ಅಗತ್ಯವಾದ ಬಿಡಿಭಾಗಗಳನ್ನು ತಾವೇ ವಿನ್ಯಾಸಗೊಳಿಸಿದ್ದಾರೆ. ಎಲ್ಲಾ ರೀತಿಯ ಪೇಂಟಿಂಗ್, ಎಲೆಕ್ಟ್ರಿಕಲ್ ಫಿಟ್ಟಿಂಗ್ ಹಾಗೂ ಇತರ ಪ್ರಮುಖ ಕೆಲಸಗಳನ್ನು ತಾವೇ ಸ್ವಯಂ ಮಾಡಿಕೊಂಡಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಈ ವಾಹನವನ್ನು ಅಭಿವೃದ್ಧಿಪಡಿಸುವ ಮೂಲಕ ತಾವು ರೈತರು ಮಾತ್ರವಲ್ಲದೇ ತಮ್ಮೊಳಗೆ ಒಬ್ಬ ಕ್ರಿಯಾಶೀಲ ವ್ಯಕ್ತಿ ಇದ್ದಾನೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ವರದಿಗಳ ಪ್ರಕಾರ, ಆರ್‌ಟಿಒ ಅಧಿಕಾರಿಗಳೇ ಅವರ ಈ ಆವಿಷ್ಕಾರವನ್ನು ನೋಡಿ ಅಚ್ಚರಿಗೊಂಡಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಸೋಲಾರ್ ವಾಹನ ಅಭಿವೃದ್ಧಿಪಡಿಸಿದ ರೈತ

ಈ ಬಗ್ಗೆ ಮಾತನಾಡಿರುವ ಆರ್‌ಟಿಒ ಅಧಿಕಾರಿ ಮಯೂರ್ಭಂಜ್ ಗೋಪಾಲ್ ಕೃಷ್ಣ, ಈ ರೀತಿಯ ವಾಹನಗಳು ಪರಿಸರ ಸ್ನೇಹಿಯಾಗಿವೆ ಎಂದು ಹೇಳಿದ್ದಾರೆ.ಆರ್‌ಟಿಒ ಈ ವಾಹನಕ್ಕೆ ಪ್ರಮಾಣಪತ್ರ ನೀಡುತ್ತದೆಯೇ ಎಂಬುದು ತಿಳಿದು ಬಂದಿಲ್ಲ.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Farmer from Odisha develops solar vehicle during lockdown. Read in Kannada.
Story first published: Tuesday, March 16, 2021, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X