ಟೋಲ್‌ ದಾಟಲು 90 ರೂ, ಆದರೆ ಫಾಸ್ಟ್ಯಾಗ್ ಬಿಲ್‌ ಹಾಕಿದ್ದು 90 ಕೋಟಿ: ಕಂಗಾಲಾದ ಚಾಲಕ ಮಾಡಿದ್ದೇನು?

ಫಾಸ್ಟ್ಯಾಗ್‌ (Fastag) ಕುರಿತಾದ ದೂರು ದುಮ್ಮಾನುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ಒಂದೆರಡಲ್ಲ. ಪ್ರಸ್ತುತ ದಿನಮಾನಗಳಲ್ಲಿ ಟೋಲ್‌ ಗೇಟ್‌ಗಳಲ್ಲಿ ಫಾಸ್ಟ್ಯಾಗ್‌ಗೆ ಹೆಚ್ಚಿನ ಮನ್ನಣೆಯನ್ನು ನೀಡಲಾಗುತ್ತಿದೆ. ಇದರಿಂದ ಟೋಲ್‌ ಗೇಟ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಹಲವು ಸಮಯಗಳವರೆಗೆ ಕಾಯುವುದು ನಿಂತಿದೆಯಾದರೂ, ಫಾಸ್ಟ್ಯಾಗ್‌ ನಿಂದ ಆಗುವ ಇತರ ಸಮಸ್ಯೆಗಳಿಗೆ ಕಮ್ಮಿಯಿಲ್ಲ.

ಅಂತಹ ಸಮಸ್ಯೆಗಳಲ್ಲಿ ಬಹಳ ವಿಚಿತ್ರವಾದುದು ಎಂದರೆ ಇತ್ತೀಚೆಗೆ ನಡೆದಂತಹ ಈ ಘಟನೆ. ವ್ಯಕ್ತಿಯೊಬ್ಬನ ಫಾಸ್ಟ್ಯಾಗ್‌ ಖಾತೆಯಲ್ಲಿ ಸುಮಾರು ಒಂಬತ್ತು ಕೋಟಿ ರೂಪಾಯಿ ಇಲ್ಲ ಎಂಬ ಕಾರಣದಿಂದ ಆತನ ಫಾಸ್ಟ್ಯಾಗ್‌ ಖಾತೆಯನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಿರುವುದು. ಹೌದು, ನಂಬಲು ಕಷ್ಟ, ಆದರೂ ನೀವು ನಂಬಲೇ ಬೇಕು.

Fastag Charged 9 Crore

ಈ ಘಟನೆ ನಡೆದಿರುವುದು ಹರ್ಯಾಣದಲ್ಲಿ. ಇಲ್ಲಿನ ಟೋಲ್‌ಗೇಟ್‌ ಒಂದರಲ್ಲಿ ವ್ಯಕ್ತಿಯೊಬ್ಬ ಟೋಲ್‌ ಚಾರ್ಜನ್ನು ತನ್ನ ಪೇಟಿಎಂ ಫಾಸ್ಟ್ಯಾಗ್‌ ಖಾತೆಯ ಮೂಲಕವಾಗಿ ಪಾವತಿಸಿ ಟೋಲ್‌ ದಾಟಿ ಮುಂದೆ ನಡೆದಿದ್ದಾನೆ. ಈ ಸಂದರ್ಭದಲ್ಲಿ ಅವನ ಫಾಸ್ಟ್ಯಾಗ್‌ ಖಾತೆಗೆ ಸಂದೇಶವೊಂದು ಬಂದಿದ್ದು ನಿಮ್ಮ ಖಾತೆಯಲ್ಲಿ ಸೂಕ್ತ ಮೊತ್ತ ಇಲ್ಲದ ಕಾರಣ ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.

ಇದರಿಂದ ಗಾಬರಿಗೊಂಡ ವ್ಯಕ್ತಿಯು ಇದರ ಹಿಂದಿನ ಕಾರಣವೇನೆಂದು ತಿಳಿಯಲು ಪ್ರಯತ್ನಿಸಿದಾಗ, ವ್ಯಕ್ತಿಯ ಖಾತೆಯಲ್ಲಿ ಸೂಕ್ತ ಹಣವಿಲ್ಲದ ಕಾರಣ ಸುಮಾರು 900000000/ಒಂಬತ್ತು ಕೋಟಿ ರೂಪಾಯಿಗಳನ್ನು ಚಾರ್ಜ್‌ ಮಾಡಲಾಗಿದೆ ಎಂಬ ಸತ್ಯ ತಿಳಿದು ಬಂದಿದೆ. ಇದರಿಂದ ಗಲಿಬಿಲಿಗೊಂಡ ವ್ಯಕ್ತಿ ಹರ್ಯಾಣ ಎಕ್ಸ್‌ಪ್ರೆಸ್‌ ವೇ ಯಲ್ಲಿ ಟೋಲ್‌ ದಾಟುವ ಬೆಲೆಯನ್ನು ಪರಿಶೀಲಿಸಿದ್ದಾನೆ.

Fastag Charged 9 Crore

ಈ ವೇಳೆ ಹರ್ಯಾಣ ಎಕ್ಸ್‌ಪ್ರೆಸ್‌ ವೇ ದಾಟಲು 90 ರೂಪಾಯಿಗಳು ಎಂದು ತಿಳಿದು ಬಂದಿದ್ದು, 90 ರೂಪಾಯಿಗಳನ್ನು ಚಾರ್ಜ್‌ ಮಾಡುವ ಬದಲು ತಪ್ಪಾಗಿ ಒಂಬತ್ತು ಕೋಟಿ ರೂಪಾಯಿಗಳನ್ನು ಚಾರ್ಜ್‌ ಮಾಡಿ ವ್ಯಕ್ತಿಯ ಖಾತೆಯನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತಾಗಿ ವ್ಯಕ್ತಿಯು ಪೇಟಿಎಂ ಫಾಸ್ಟ್ಯಾಗ್‌ ಸಹಾಯವಾಣಿ ನಂಬರ್‌ಗೆ ಕರೆಮಾಡಲು ಪ್ರಯತ್ನಿಸಿದ್ದು, ಸಂಪರ್ಕ ಸಾಧ್ಯವಾಗಿಲ್ಲ. ಜೊತೆಗೆ ಆನ್‌ಲೈನ್‌ ಮೂಲಕ ದೂರು ನೀಡಿದರೂ ಯಾವುದೇ ಉಪಯೋಗವಾಗಿಲ್ಲ. ಇದರಿಂದ ರೋಸಿ ಹೋದ ವ್ಯಕ್ತಿಯು ಟೀಂ ಬಿಹೆಚ್‌ಪಿ ಮೂಲಕ ತನ್ನ ಸಂಕಷ್ಟವನ್ನು ತೋಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಫಾಸ್ಟ್ಯಾಗ್‌ ನಲ್ಲಿ ಈ ರೀತಿಯ ಸಮಸ್ಯೆಯನ್ನು ಹಲವರು ಎದುರಿಸುತ್ತಿದ್ದು, ಈ ಕುರಿತಾಗಿ ದೂರಾಗಳನ್ನು ದಾಖಲಿಸಲು ಯಾವುದೇ ಪೇಟಿಎಂ ವ್ಯವಸ್ಥೆಯಿಲ್ಲ. ಇದರಿಂದ ಹಲವರು ಸಂಕಷ್ಟಕ್ಕೆ ಒಳಗಾಗಿದ್ದು ಪೇಟಿಎಂ ಫಾಸ್ಟ್ಯಾಗ್‌ ಸಂಸ್ಥೆಯು ಗ್ರಾಹಕರ ಅಳಲನ್ನು ಆಲಿಸಿ ಪರಿಹಾರ ಒದಗಿಸುವತ್ತ ಗಮನ ಹರಿಸಬೇಕಾಗಿದೆ ಎಂಬುದು ಹಲವರ ಅಭಿಪ್ರಾಯ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source:https:https://www.team-bhp.com/news/fastag-charged-me-whopping-rs-9-crore-insufficient-balance

Article Published On: Monday, June 19, 2023, 12:43 [IST]
English summary
Fastag charged 9 crore to a car owner instead of 90 rupees
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+