10 ವರ್ಷದ ಮಗನಿಗಾಗಿ ವಿಶಿಷ್ಟ ರೀತಿಯ ಕಾರು ತಯಾರಿಸಿದ ಅಪ್ಪ

ಜೀಪ್ ಕಂಪನಿಯು ತನ್ನ ವಿಲ್ಲೀಸ್ ಆಫ್ ರೋಡರ್ ಕಾರ್ ಅನ್ನು ಹಲವು ವರ್ಷಗಳಿಂದ ಭಾರತದಲ್ಲಿ ಮಾರಾಟ ಮಾಡುತ್ತಿದೆ. ಈಗ ಸಣ್ಣ ಜೀಪ್ ವಿಲ್ಲೀಸ್ ಕಾರಿನ ವೀಡಿಯೊವೊಂದು ಹೊರಬಂದಿದೆ. ಈ ವಿಲ್ಲೀಸ್ ಸಾಮಾನ್ಯ ವಿಲ್ಲೀಸ್ ಕಾರಿಗಿಂತ ಚಿಕ್ಕದಾಗಿದೆ. ಈ ಕಾರ್ ಅನ್ನು ಕೇರಳ ಮೂಲದ ಅರುಣ್ ಕುಮಾರ್ ಎಂಬುವವರು ತಯಾರಿಸಿದ್ದಾರೆ.

10 ವರ್ಷದ ಮಗನಿಗಾಗಿ ವಿಶಿಷ್ಟ ರೀತಿಯ ಕಾರು ತಯಾರಿಸಿದ ಅಪ್ಪ

ಅರುಣ್ ಕುಮಾರ್ ತಮ್ಮ 10 ವರ್ಷದ ಮಗನಿಗಾಗಿ ಈ ಕಾರ್ ಅನ್ನು ತಯಾರಿಸಿದ್ದಾರೆ. ಹತ್ತು ವರ್ಷದ ಅವರ ಮಗ ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಪಟ್ಟಣದಲ್ಲಿ ವಾಸಿಸುತ್ತಿದ್ದು, ಆತನಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ನಟ ಮೋಹನ್ ಲಾಲ್ ರವರ ಚಿತ್ರವೊಂದರಿಂದ ಸ್ಫೂರ್ತಿ ಪಡೆದು ಈ ಕಾರ್ ಅನ್ನು ತಯಾರಿಸಲಾಗಿದೆ.

10 ವರ್ಷದ ಮಗನಿಗಾಗಿ ವಿಶಿಷ್ಟ ರೀತಿಯ ಕಾರು ತಯಾರಿಸಿದ ಅಪ್ಪ

ಈ ವಿಲ್ಲೀಸ್‌ ಕಾರಿನ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಈ ಕಾರಿನ ಫೀಚರ್ ಗಳ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ ಈ ವಿಲ್ಲೀಸ್ ಕಾರನ್ನು ಹೇಗೆ ಸಿದ್ಧಪಡಿಸಲಾಗಿದೆ ಎಂಬುದನ್ನು ಹೇಳಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

10 ವರ್ಷದ ಮಗನಿಗಾಗಿ ವಿಶಿಷ್ಟ ರೀತಿಯ ಕಾರು ತಯಾರಿಸಿದ ಅಪ್ಪ

ಈ ಕಾರನ್ನು ಸಂಪೂರ್ಣವಾಗಿ ತಯಾರಿಸಲು ಏಳರಿಂದ ಎಂಟು ತಿಂಗಳುಗಳು ಬೇಕಾಯಿತೆಂದು ಅರುಣ್ ಕುಮಾರ್ ಹೇಳಿದ್ದಾರೆ. ಬಿಡುವಿನ ವೇಳೆಯಲ್ಲಿ ಈ ಕಾರನ್ನು ನಿರ್ಮಿಸಿದ ಕಾರಣಕ್ಕೆ ಇಷ್ಟು ಸಮಯ ಬೇಕಾಯಿತೆಂದು ಅವರು ಹೇಳಿದ್ದಾರೆ.

10 ವರ್ಷದ ಮಗನಿಗಾಗಿ ವಿಶಿಷ್ಟ ರೀತಿಯ ಕಾರು ತಯಾರಿಸಿದ ಅಪ್ಪ

ಸುಮಾರು 75 ಕೆ.ಜಿ ತೂಕವನ್ನು ಹೊಂದಿರುವ ಈ ಕಾರು, ಅದಕ್ಕಿಂತ ಎರಡು ಪಟ್ಟು ಹೆಚ್ಚು ತೂಕವನ್ನು ತಡೆದುಕೊಳ್ಳಬಲ್ಲದು. ಈ ಮಿನಿ ವಿಲ್ಲೀಸ್‌ನ ಚಾಸಿಸ್ ಅನ್ನು ಸ್ವತಃ ಅರುಣ್ ರವರೇ ಸಾಮಾನ್ಯ ಜಿಎ ಪೈಪುಗಳನ್ನು ಬಳಸಿ ತಯಾರಿಸಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇದರ ಜೊತೆಗೆ ಈ ಕಾರಿನಲ್ಲಿ ರಾಯಲ್ ಎನ್‌ಫೀಲ್ಡ್ ಅನಲಾಗ್ ಕನ್ಸೋಲ್ ಹಾಗೂ ಲೀಫ್ ಸಸ್ಪೆಂಷನ್ ಗಾಗಿ ಮೆಟಲ್ ಪ್ಲೇಟ್ ಗಳನ್ನು ಬಳಸಿದ್ದಾರೆ. ಇವುಗಳನ್ನು ಚೈನ್ ಸಾಕೆಟ್ ಸಿಸ್ಟಂ ಮೂಲಕ ಕಾರಿನ ಹಿಂಭಾಗದ ಆಕ್ಸಲ್ ಗಳಿಗೆ ಕನೆಕ್ಟ್ ಮಾಡಲಾಗಿದೆ.

10 ವರ್ಷದ ಮಗನಿಗಾಗಿ ವಿಶಿಷ್ಟ ರೀತಿಯ ಕಾರು ತಯಾರಿಸಿದ ಅಪ್ಪ

ಕಾರಿನಲ್ಲಿ ರಾಕ್ ಹಾಗೂ ಪಿಲಿಯನ್ ಸೀಟ್ ಗಳನ್ನು ನೀಡಲಾಗಿದೆ. ಈ ರೀತಿಯ ಚಿಕ್ಕ ಕಾರುಗಳಿಗೆ ಮಾರುಕಟ್ಟೆಯಲ್ಲಿ ಸ್ಟರ್ಲಿಂಗ್ ವ್ಹೀಲ್ ಸಿಸ್ಟಂ ದೊರಕದ ಕಾರಣಕ್ಕೆ ಸ್ವತಃ ಅರುಣ್ ರವರೇ ಅದನ್ನು ತಯಾರಿಸಿದ್ದಾರೆ. ಈ ಚಿಕ್ಕ ಕಾರಿಗೆ ನಿಜವಾದ ಜೀಪ್ ವಿಲ್ಲೀಸ್ ಲುಕ್ ನೀಡಲು ಫೋಲ್ಡ್ ಮಾಡಬಹುದಾದ ಫ್ಯಾಬ್ರಿಕ್ ರೂಫ್ ಅಳವಡಿಸಲಾಗಿದೆ.

ಮೂಲ: ಅರುಣ್ ಕುಮಾರ್ ಕ್ರಿಯೆಟಿವಿಟಿ

Most Read Articles

Kannada
English summary
Father builds Jeep Willys miniature car for his 10 year old son in Kerala. Read in Kannada.
Story first published: Monday, June 29, 2020, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X