ಲಾಕ್‌ಡೌನ್ ಎಫೆಕ್ಟ್: ಮಗನ ಔಷಧಿಗಾಗಿ 300 ಕಿ.ಮೀ ಸೈಕಲ್ ತುಳಿದ ಅಪ್ಪ

ಕೊರೋನಾ ಸೋಂಕಿನ ಆರ್ಭಟ ಹೆಚ್ಚಾಗಿ ಜನರು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರಿಂದ ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಆದರೆ ಲಾಕ್​ಡೌನ್​ ಜಾರಿಯಾದ ಕಾರಣ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರು, ಜನಸಾಮಾನ್ಯರು ಜೀವನ ನಡೆಸಲು ಪರದಾಡುತ್ತಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಮಗನ ಔಷಧಿಗಾಗಿ 300 ಕಿ.ಮೀ ಸೈಕಲ್ ತುಳಿದ ಅಪ್ಪ

ಇಂತಹ ಸಂದರ್ಭದಲ್ಲಿ ತಂದೆಯೊಬ್ಬರು ತನ್ನ ಮಗನಿಗೆ ಔಷಧಿ ತರಲು ಸುಮಾರು 300 ಕಿ.ಮೀ ಸೈಕಲ್​ ತುಳಿದಿದ್ದಾರೆ. ಈ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ಗಾರೆ ಕೆಲಸಗಾರ ಆನಂದ್‌ ತಮ್ಮ ಮಗನ ಔಷಧಿಗಾಗಿ ಸತತ ಮೂರು ದಿನಗಳ ಕಾಲ ಸೈಕಲ್​ ತುಳಿದಿದ್ದಾರೆ. ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಮಾನಸಿಕ ವಿಶೇಷ ಚೇತನ ಮಗನಿಗೆ ಚಿಕಿತ್ಸೆ ಕೊಡಿಸಿ 10 ವರ್ಷಗಳಿಂದ ಮಾತ್ರೆ ನೀಡುತ್ತಿದ್ದರು.

ಲಾಕ್‌ಡೌನ್ ಎಫೆಕ್ಟ್: ಮಗನ ಔಷಧಿಗಾಗಿ 300 ಕಿ.ಮೀ ಸೈಕಲ್ ತುಳಿದ ಅಪ್ಪ

ಲಾಕ್​ಡೌನ್​ ಸಂದರ್ಭದಲ್ಲಿ ಮಗನ ಮಾತ್ರೆಗಳು ಮುಗಿದಿದೆ, ಇದನ್ನು ನೀಡಲೇ ಬೇಕಾದ ಅನಿವಾರ್ಯತೆ ಕೂಡ ಎದುರಾಗಿತ್ತು. ಈ ಮಾತ್ರೆಯನ್ನು ಸಾಕಷ್ಟು ಹುಡುಕಾಟ ನಡೆಸಿದರೂ ಮಾತ್ರೆಗಳು ಬೇರೆ ಎಲ್ಲೂ ಸಿಗದ ಕಾರಣ ಅವರು ಬೆಂಗಳೂರಿನ ನಿಮಾನ್ಸ್​ಗೆ ತೆರಳಬೇಕಾಯಿತು.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಲಾಕ್‌ಡೌನ್ ಎಫೆಕ್ಟ್: ಮಗನ ಔಷಧಿಗಾಗಿ 300 ಕಿ.ಮೀ ಸೈಕಲ್ ತುಳಿದ ಅಪ್ಪ

ಈ ಮಾತ್ರೆಗಳನ್ನು ನೀಡುವುದನ್ನು ಒಮ್ಮೆ ತಪ್ಪಿಸಿದರೆ ಇದರಿಂದ ತೊಂದರೆಯಾಗಲಿದೆ. ಅಲ್ಲದೇ ಮಗ ಗುಣಮುಖ ಆಗಲು 18 ವರ್ಷಗಳ ಕಾಲ ಈ ಮಾತ್ರೆಯನ್ನು ಮಗನಿಗೆ ನೀಡಬೇಕಾಗುತ್ತದೆ. ಇದರಿಂದ ಇವರಿಗೆ ನಿಮಾನ್ಸ್​ ಹೋಗಲೇ ಬೇಕಾದ ಅನಿವಾರ್ಯ ಎದುರಾಯಿತು

ಲಾಕ್‌ಡೌನ್ ಎಫೆಕ್ಟ್: ಮಗನ ಔಷಧಿಗಾಗಿ 300 ಕಿ.ಮೀ ಸೈಕಲ್ ತುಳಿದ ಅಪ್ಪ

ಇದರಿಂದ ಲಾಕ್​ಡೌನ್​ ಸಂಕಷ್ಟದ ನಡುವೆಯೂ ಮಗನ ಔಷಧಿಗಾಗಿ ಬೆಂಗಳೂರಿಗೆ ಹೊರಡಲು ಸಿದ್ಧವಾಗಿದ್ದರು. ಇದಕ್ಕಾಗಿ ಕಾರುಗಳು​ ಸೇರಿದಂತೆ ಇತರೆ ವಾಹನಗಳನ್ನು ಬಾಡಿಗೆಗೆ ಪಡೆಯಲು ಹಲವು ಕಡೆಗಳಲ್ಲಿ ಕೇಳಿ ನೋಡಿದ್ದಾರೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಲಾಕ್‌ಡೌನ್ ಎಫೆಕ್ಟ್: ಮಗನ ಔಷಧಿಗಾಗಿ 300 ಕಿ.ಮೀ ಸೈಕಲ್ ತುಳಿದ ಅಪ್ಪ

ಆದರೆ ಅವರಿಗೆ ಯಾವುದೇ ವಾಹನಗಳು ಬಾಡಿಗೆಗೆ ಲಭಿಸುವುದಿಲ್ಲ. ಕೊನೆಗೆ ಅವರು ತಮ್ಮ ಸ್ನೇಹಿತ ಜೊತೆ ಮತ್ತು ಪರಿಚಯಸ್ಥರ ಬಳಿಯು ಬೈಕ್​ ನೀಡುವಂತೆ ಸಹಾಯ ಕೇಳಿದರು. ಆದರೆ ಲಾಕ್​ಡೌನ್​ ನಿಂದ ಬೈಕ್​ ಸೀಜ್​ ಅಗುತ್ತೆ ಅನ್ನುವ ಭಯದಲ್ಲಿ ಯಾವ ಸ್ನೇಹಿತರು ಕೂಡ ಸಹಾಯ ಮಾಡಲು ಹಿಂಡೇಟು ಹಾಕಿದ್ದಾರೆ.

ಕೊನೆಗೆ ದಿಕ್ಕು ತೋಚದೆ ಅವರು ಮಗನಿಗಾಗಿ ತಮ್ಮ ಗ್ರಾಮದಿಂದ ಬೆಂಗಳೂರಿಗೆ ಸೈಕಲ್​ನಲ್ಲಿಯೇ ಹೋಗಲು ನಿರ್ಧಾರ ಮಾಡಿದ್ದಾರೆ. ಇವರು ಭಾನುವಾರ ಬೆಂಗಳೂರಿಗೆ ಪ್ರಯಾಣವನ್ನು ಆರಂಭಿಸುತ್ತಾರೆ. ಆನಂದ್​ ನಿತ್ಯ 70 ಕಿ.ಮೀಗೂ ಹೆಚ್ಚು ಸೈಕಲ್ ತುಳಿದಿದ್ದಾರೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಲಾಕ್‌ಡೌನ್ ಎಫೆಕ್ಟ್: ಮಗನ ಔಷಧಿಗಾಗಿ 300 ಕಿ.ಮೀ ಸೈಕಲ್ ತುಳಿದ ಅಪ್ಪ

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಈ ಔಷಧಗಳನ್ನು ಉಚಿತವಾಗಿ ನೀಡುತ್ತಾರೆ. ಹೀಗಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ಬೆಂಗಳೂರಿಗೆ ಹೋಗಿ ಪಡೆಯುತ್ತಿದೆ. ಇನ್ನು ಬುಧವಾರ ವೇಳೆಗೆ ಔಷಧಗಳು ಖಾಲಿಯಾಗುತ್ತೆ ಎಂದು ನಾನು ಭಾನುವಾರ ನನ್ನ ಪ್ರಯಾಣವನ್ನು ಆರಂಭಿಸಿದೆ. ನಂತರ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆದು ಮಂಗಳವಾರ ಊರು ತಲುಪಿದೆ ಎಂದು ಆನಂದ್ ಹೇಳಿದ್ದಾರೆ.

Most Read Articles

Kannada
English summary
Father Of Special Child Pedals 300 Km To Get Medicine For Him. Read In Kananda.
Story first published: Tuesday, June 1, 2021, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X