ಮಗನ ಪರೀಕ್ಷೆಗೆ ಸಾಥ್ ನೀಡಿದ ಅಪ್ಪ, ಸೈಕಲ್ ಮೂಲಕವೇ 105 ಕಿ.ಮೀ ಸಾಗಿದ ತಂದೆ-ಮಗ

ಕರೋನಾ ವೈರಸ್ ಹರಡುವುದನ್ನು ತಡೆಯಲು ಜಾರಿಗೊಳಿಸಲಾದ ಲಾಕ್‌ಡೌನ್‌ ಅವಧಿಯಲ್ಲಿ ನಾನಾ ರೀತಿಯ ಸುದ್ದಿಗಳು ವರದಿಯಾಗಿದ್ದವು. ಈ ಸುದ್ದಿಗಳಲ್ಲಿ ಹೊರ ಊರುಗಳಲ್ಲಿ ಸಿಲುಕಿದ್ದ ಜನರು ತಮ್ಮ ಮನೆಗಳಿಗೆ ಮರಳಲು ಸೈಕಲ್‌ನಲ್ಲಿ ನೂರಾರು ಕಿ.ಮೀ ಪ್ರಯಾಣಿಸಿದ್ದಾರೆ.

ಮಗನ ಪರೀಕ್ಷೆಗೆ ಸಾಥ್ ನೀಡಿದ ಅಪ್ಪ, ಸೈಕಲ್ ಮೂಲಕವೇ 105 ಕಿ.ಮೀ ಸಾಗಿದ ತಂದೆ-ಮಗ

ಲಾಕ್‌ಡೌನ್‌ನಿಂದಾಗಿ ಬಸ್‌, ಆಟೊ ಸೇರಿದಂತೆ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಕಾರಣಕ್ಕೆ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುವಂತಾಗಿದೆ. ಈಗ ಇಂತಹುದೇ ಮತ್ತೊಂದು ಸುದ್ದಿ ಮಧ್ಯಪ್ರದೇಶದ ಧಾರ್‌ನಿಂದ ವರದಿಯಾಗಿದೆ. ತಂದೆಯೊಬ್ಬರು ಮಗನ ಪೂರಕ ಪರೀಕ್ಷೆಗಾಗಿ 105 ಕಿ.ಮೀ ಸೈಕಲ್ ತುಳಿದಿದ್ದಾರೆ. ಬಸ್ ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣಕ್ಕೆ 38 ವರ್ಷದ ಶೋಭಾರಂ ತಮ್ಮ ಮಗನ ಪರೀಕ್ಷೆಗಾಗಿ ಆತನನ್ನು ಕೂರಿಸಿಕೊಂಡು ಸೈಕಲ್ ತುಳಿದಿದ್ದಾರೆ.

ಮಗನ ಪರೀಕ್ಷೆಗೆ ಸಾಥ್ ನೀಡಿದ ಅಪ್ಪ, ಸೈಕಲ್ ಮೂಲಕವೇ 105 ಕಿ.ಮೀ ಸಾಗಿದ ತಂದೆ-ಮಗ

ಶೋಭಾರಂ ಇರುವ ಗ್ರಾಮದಿಂದ ಧಾರ್ 105 ಕಿ.ಮೀ ದೂರದಲ್ಲಿದೆ. ಧಾರ್ ತಲುಪಲು ತನಗೆ 2 ದಿನ ಬೇಕಾಯಿತು ಎಂದು ಶೋಭಾರಂ ಹೇಳಿದ್ದಾರೆ. ಅವರು ಮನೆಯಿಂದ ಹೊರಡುವಾಗ 3 ದಿನಗಳಿಗೆ ಬೇಕಾಗುವಷ್ಟು ಆಹಾರ ಹಾಗೂ ನೀರನ್ನು ತೆಗೆದುಕೊಂಡಿದ್ದರು. ಪರೀಕ್ಷೆಯ ದಿನ ತಮ್ಮ ಮಗನೊಂದಿಗೆ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾರೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಮಗನ ಪರೀಕ್ಷೆಗೆ ಸಾಥ್ ನೀಡಿದ ಅಪ್ಪ, ಸೈಕಲ್ ಮೂಲಕವೇ 105 ಕಿ.ಮೀ ಸಾಗಿದ ತಂದೆ-ಮಗ

ಪೂರಕ ಪರೀಕ್ಷೆಗಾಗಿ ಮಧ್ಯಪ್ರದೇಶ ಸರ್ಕಾರವು ನೋ ಸ್ಟಾಪಿಂಗ್ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯನ್ವಯ ಮೊದಲ ಬಾರಿಗೆ ಪರೀಕ್ಷೆ ಬರೆಯಲು/ಉತ್ತೀರ್ಣರಾಗಲು ವಿಫಲರಾದ ಮಕ್ಕಳಿಗೆ ಮರು ಪರೀಕ್ಷೆ ನಡೆಸಲಾಗುತ್ತದೆ.

ಮಗನ ಪರೀಕ್ಷೆಗೆ ಸಾಥ್ ನೀಡಿದ ಅಪ್ಪ, ಸೈಕಲ್ ಮೂಲಕವೇ 105 ಕಿ.ಮೀ ಸಾಗಿದ ತಂದೆ-ಮಗ

ಈ ಬಾರಿ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪದಿದ್ದರೆ ತನ್ನ ಮಗನ ಭವಿಷ್ಯ ಒಂದು ವರ್ಷ ಹಾಳಾಗುತ್ತಿತ್ತು. ಮತ್ತೆ ಪರೀಕ್ಷೆ ಬರೆಯಲು ಇನ್ನೂ ಒಂದು ವರ್ಷ ಕಾಯಬೇಕಾಗುತ್ತಿತ್ತು ಎಂದು ಶೋಭಾರಂ ಹೇಳಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮಗನ ಪರೀಕ್ಷೆಗೆ ಸಾಥ್ ನೀಡಿದ ಅಪ್ಪ, ಸೈಕಲ್ ಮೂಲಕವೇ 105 ಕಿ.ಮೀ ಸಾಗಿದ ತಂದೆ-ಮಗ

ಯಾವುದೇ ಪರಿಸ್ಥಿತಿಯಲ್ಲಿಯೂ ತಮ್ಮ ಮಗನ ಭವಿಷ್ಯ ಒಂದು ವರ್ಷ ವ್ಯರ್ಥವಾಗುವುದನ್ನು ಅವರು ಇಷ್ಟಪಡಲಿಲ್ಲ. ಹಲವರ ಬಳಿ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ. ಯಾರಿಂದಲೂ ಸಹಾಯ ಸಿಗದ ಕಾರಣ ಸೈಕಲ್‌ ಮೂಲಕ ಪರೀಕ್ಷಾ ಕೇಂದ್ರಕ್ಕೆ ತೆರಳಲು ನಿರ್ಧರಿಸಿದ್ದಾರೆ.

ಮಗನ ಪರೀಕ್ಷೆಗೆ ಸಾಥ್ ನೀಡಿದ ಅಪ್ಪ, ಸೈಕಲ್ ಮೂಲಕವೇ 105 ಕಿ.ಮೀ ಸಾಗಿದ ತಂದೆ-ಮಗ

ತಮ್ಮ ಬಳಿ ಬೈಕ್ ಇಲ್ಲ, ಬೈಕ್ ಖರೀದಿಸಲು ಹಣವೂ ಇಲ್ಲ ಎಂದು ಶೋಭಾರಂ ಹೇಳಿದ್ದಾರೆ. ಸೋಮವಾರ ಬೆಳಿಗ್ಗೆ ಮನೆಯಿಂದ ಹೊರಟ ಅವರು ಮಾನವಾರ್ ನಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದು, ಮಂಗಳವಾರ ಬೆಳಿಗ್ಗೆ ಪರೀಕ್ಷೆ ಆರಂಭವಾಗುವ ಮೊದಲು ಧಾರ್ ನಲ್ಲಿರುವ ಪರೀಕ್ಷಾ ಕೇಂದ್ರವನ್ನು ತಲುಪಿದರು.

Most Read Articles

Kannada
English summary
Father rides bicycle for 105 kms for his son to write 10th exams. Read in Kannada.
Story first published: Thursday, August 20, 2020, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X