Just In
- 46 min ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 1 hr ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 1 hr ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Movies
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
- News
BBC ಸಾಕ್ಷ್ಯಚಿತ್ರಕ್ಕೆ ನಿರ್ಬಂಧ: ಕೇಂದ್ರಕ್ಕೆ ಸುಪ್ರೀಂ ನೋಟೀಸ್
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಅರ್ಧಕೋಟಿಗೂ ಅಧಿಕ ಬೆಲೆಯಲ್ಲಿ ಈ ಹಳೇ ಐಫೋನ್ ಮಾರಾಟ!..ಅದ್ಹೇಗೆ ಸಾಧ್ಯ ಅಂತೀರಾ!?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದುಬಾರಿ ಬೆಂಟ್ಲಿ ಕಾರನ್ನು ಗಿಫ್ಟ್ ಕೊಟ್ಟ ಅಪ್ಪ: ಖುಷಿಯಲ್ಲಿ ಗುಂಡು ಹಾರಿಸಿ ಜೈಲು ಸೇರಿದ ಮಗ
ಸಣ್ಣ ಹ್ಯಾಚ್‌ಬ್ಯಾಕ್ ಆಗಿರಲಿ ಅಥವಾ ದೊಡ್ಡ ಐಷಾರಾಮಿ ಕಾರಾಗಿರಲಿ ಖರೀದಿಸಿದ ಬಳಿಕ ಪ್ರತಿಯೊಬ್ಬರಿಗೂ ಎಲ್ಲಿಲ್ಲದ ಖುಷಿಯಿರುತ್ತದೆ. ಹೊಸ ಕಾರು ಕೈ ಸೇರಿದ ಬಳಿಕ ಸಿಹಿ ಹಂಚಿ ಸಂಭ್ರಮಾಚರಿಸುತ್ತೇವೆ. ಒಬ್ಬೊಬ್ಬರು ವಿವಿಧ ಭಾವನೆಗಳನ್ನು ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಆದರೆ ಇವು ಅತಿಯಾಗಬಾರದು, ಕಾನೂನನ್ನು ಉಲ್ಲಂಘಿಸುವಂತೆಯೂ ಇರಬಾರದು.

ವ್ಯಕ್ತಿಯೊಬ್ಬ ತನ್ನ ತಂದೆಯಿಂದ ದುಬಾರಿ ಕಾರನ್ನು ಉಡುಗೊರೆಯಾಗಿ ಪಡೆದು ಆ ಖುಷಿಯನ್ನು ಆತ ವ್ಯಕ್ತಪಡಿಸಿದ ವಿಧಾನವು ಜೈಲು ಸೇರುವಂತೆ ಮಾಡಿದೆ. ಈ ಘಟನೆ ಮೊಹಾಲಿಯಿಂದ ವರದಿಯಾಗಿದ್ದು, ಶುಭಂ ರಜಪೂತ್ ಎಂಬ ವ್ಯಕ್ತಿ ನಗರದ ಕಾರ್ ಶೋರೂಮ್‌ನ ಹೊರಾಂಗಣದಲ್ಲಿ ಆಕಷಕ್ಕೆ ಗುಂಡು ಹಾರಿಸಿದ್ದಾನೆ.

ಮೊಹಾಲಿಯಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ಷಾಪ್‌ನ ಹೊರಗೆ ಬಳಸಿದ ಬೆಂಟ್ಲಿ ಕಾಂಟಿನೆಂಟಲ್ ಜಿಟಿಯ ವಿತರಣೆಯನ್ನು ತೆಗೆದುಕೊಳ್ಳುತ್ತಿರುವಾಗ ರಜಪೂತ್ ತನ್ನ ಖುಷಿಯನ್ನು ವ್ಯಕ್ತಪಡಿಸುವ ಸುಲುವಾಗಿ ಗುಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ.

ಶುಭಂ ರಜಪೂತ್ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆತ ಹೊಸದಾಗಿ ಖರೀದಿಸಿದ ಬೆಂಟ್ಲಿ ಬಳಿ ನಿಂತು ಹಲವಾರು ಸುತ್ತು ಗುಂಡುಗಳನ್ನು ಹಾರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಬಿಗ್ ಬಾಯ್ಜ್ ಟಾಯ್ಜ್‌ನಿಂದ ಈ ಕಾರನ್ನು ಖರೀದಿಸಲಾಗಿದೆ, ಇದು ಭಾರತದ ಪ್ರಮುಖ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರು ಡೀಲರ್‌ಶಿಪ್‌ಗಳಲ್ಲಿ ಒಂದಾಗಿದೆ. ವರದಿಗಳ ಪ್ರಕಾರ, ಯುವಕನ ಪೋಷಕರು ಅವನಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮೂಲಗಳ ಪ್ರಕಾರ ವಾಹನದ ಡೆಲಿವರಿ ತೆಗೆದುಕೊಳ್ಳುವಾಗ ಗುಂಡು ಹಾರಿಸಿದ್ದಾನೆ. ವಾಹನದ ಸುತ್ತಲೂ ಅನೇಕರು ನಿಂತಿರುವುದನ್ನು ನಾವು ನೋಡಬಹುದು. ವೀಡಿಯೊ ವೈರಲ್ ಆದ ನಂತರ ಮೊಹಾಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಮೊದಲು ಶೋರೂಂ ಅವರನ್ನು ವಿಚಾರಣಗೆ ಒಳಪಡಿಸಿದ್ದಾರೆ.

ಈ ವೇಳೆ ಶುಭಂ ರಜಪೂತ್ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಪಂಜಾಬ್‌ನ ಮೊಹಾಲಿ ಜಿಲ್ಲೆಯ ಖರಾರ್ ಪಟ್ಟಣದ ಹೆಸರಾಂತ ಬಿಲ್ಡರ್‌ನ ಮಗ ಶುಭಂ ರಜಪೂತ್ ಎಂದು ತಿಳಿದುಬಂದಿದೆ. ವಿಡಿಯೋವನ್ನು ಆಧರಿಸಿ ಆತನನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಲಾಗಿದೆ.

ರಜಪೂತ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 336 ರ ಅಡಿಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಮತ್ತು ಅದನ್ನು ಬಹಿರಂಗವಾಗಿ ಬಳಸಿರುವುದಾಗಿ ಆರೋಪ ಹೊರಿಸಲಾಗಿದೆ. ಸದ್ಯ ಶುಭಂ ಪೊಲೀಸರ ಕಸ್ಟಡಿಯಲ್ಲಿದ್ದಾನೆ.

ಮೊಹಾಲಿ ಪೊಲೀಸರು ಈಗಾಗಲೇ ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಶುಭಂ ಆಯುಧವನ್ನು ಹೇಗೆ ಪಡೆದುಕೊಂಡರು ಮತ್ತು ಮಾನ್ಯ ಪರವಾನಗಿ ಇಲ್ಲದೆ ಅದನ್ನು ಹೇಗೆ ಬಳಸುತ್ತಿದ್ದರು ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಯಾರೋ ಹೊಸ ಕಾರನ್ನು ಖರೀದಿಸಿದ ಖುಷಿಯಲ್ಲಿ ಗುಂಡನ್ನು ಹಾರಿಸುವ ಈ ಘಟನೆ ಹಾಸ್ಯಾಸ್ಪದವಾಗಿ ವಿಲಕ್ಷಣವಾಗಿ ತೋರುತ್ತಿದ್ದರೂ, ಇದು ಅಪಾಯಕಾರಿ ಅಪರಾಧವಾಗಿದೆ. ಅನಧಿಕೃತ ಮತ್ತು ಪರವಾನಗಿ ರಹಿತ ಆಯುಧಗಳನ್ನು ಬಳಸುವುದು ಅಪರಾಧ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ.

ಉತ್ತರ ಭಾರತದ ರಾಜ್ಯಗಳಲ್ಲಿ ಬಹಿರಂಗವಾಗಿ ಗುಂಡು ಹಾರಿಸುವ ಘಟನೆಗಳು ಸಾಮಾನ್ಯವಾಗಿವೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗಮನ ಸೆಳೆಯುವ ಪ್ರಯತ್ನವಾಗಿ ಇವನ್ನು ಮಾಡುತ್ತಾರೆ. ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ದಾಖಲಾಗಿದ್ದವು.
ಉತ್ತರ ಭಾರತದಲ್ಲಿ ಯುವಕರ ಗುಂಪೊಂದು ಕಾರುಗಳನ್ನು ಓಡಿಸುತ್ತಾ ಗಾಳಿಯಲ್ಲಿ ಬಂದೂಕುಗಳನ್ನು ಹಾರಿಸುವ ಮೂಲಕ ಪೊಲೀಸರ ಅಥಿತಿಗಳಾಗಿದ್ದರು. ಕೆಲವರಿಗೆ ಇದು ಅಪರಾಧವೆನಿಸಿದರೂ, ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು.

ಬಂದೂಕುಗಳಿಂದ ಹೊರಹೊಮ್ಮುವ ಬುಲೆಟ್‌ಗಳು ಎಷ್ಟು ಅಪಾಯಕಾರಿಯೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಅಲ್ಲದೇ ಅವನ್ನು ಗಾಳಿಯಲ್ಲಿ ಹಾರಿಸಿದರೆ ಮೇಲಕ್ಕೆ ಹೋದ ವೇಗದಲ್ಲೇ ಕೆಳಕ್ಕೂ ಅಪ್ಪಳಿಸುತ್ತವೆ. ಒಂದು ವೇಳೆ ಅಕ್ಕಪಕ್ಕದಲ್ಲಿ ಯಾರಾದರೂ ಇದ್ದಲ್ಲಿ ಪ್ರಾಣಾಪಾಯ ಖಚಿತ.

ಇಂತಹ ಗುಂಡು ಹಾರಿಸುವ ಸಂಸ್ಕೃತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಬಹುದು. ಅಲ್ಲಿ ಲೈಸನ್ಸ್ ಇಲ್ಲದೇ ಗನ್‌ಗಳು ಸುಲಭವಾಗಿ ಸಿಗುತ್ತವೆ. ಇದನ್ನು ಬಿಂಭಿಸುವಂತೆ ಈಗಾಗಲೇ ಹಲವು ಸಿನಿಮಾಗಳು ಕೂಡ ಬಂದಿವೆ. ಇತ್ತೀಚೆಗೆ ಮಿರ್ಜಾಪುರ್ ಎಂಬ ವೆಬ್ ಸಿರೀಸ್‌ನಲ್ಲಿ ಅಕ್ರಮ ಬಂಧೂಕುಗಳನ್ನು ಹೇಗೆ ಮಾರಾಟ ಮಾಡಲಾಗುತ್ತದೆ ಎಂಬುದನ್ನು ತೋರಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಇಂತಹ ಬಂಧೂಕು ಮಾರಾಟದ ಸಂಸ್ಕೃತಿ ನಮ್ಮ ದಕ್ಷಿಣ ಭಾರತದಲ್ಲಿ ಇಲ್ಲ. ಇದ್ದರೂ ಕರ್ನಾಟಕದಲ್ಲಿ ತೀರಾ ಕಡಿಮೆ ಎಂದು ಹೇಳಬಹುದು. ಲೈಸೆನ್ಸ್ ಇಲ್ಲದೇ ಗನ್‌ಗಳನ್ನು ಮಾರಾಟ ಮಾಡುವುದೇ ಅಪರಾಧ ಅದರಲ್ಲೂ ಭಯವಿಲ್ಲದೇ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿರುವುದರಿಂದ ಅಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದು, ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.