ರೇಸ್ ಟ್ರ್ಯಾಕ್‌ನಲ್ಲಿ ಅಪಘಾತಕ್ಕೀಡಾದ ದುಬಾರಿ ಬೆಲೆಯ ಸೂಪರ್ ಕಾರು
ಫೆರಾರಿ 458, ವಿಶ್ವದ ಅತ್ಯಂತ ದುಬಾರಿ ಬೆಲೆಯ ಸೂಪರ್ ಕಾರುಗಳಲ್ಲಿ ಒಂದಾಗಿದೆ. ಈ ಕಾರು ರೇಸಿಂಗ್'ನಲ್ಲಿ ಭಾಗವಹಿಸಿದ್ದಾಗ ಅಪಘಾತಕ್ಕೀಡಾಗಿದೆ. ಫೆರಾರಿ 458 ಕಾರು ಅಪಘಾತಕ್ಕೀಡಾಗಿರುವ ವೀಡಿಯೊವನ್ನು ಸೂಪರ್ ಕಾರ್ ಫಾಲ್ಸ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಲಾಗಿದೆ.

ರೇಸ್ ಟ್ರ್ಯಾಕ್‌ಗಳಲ್ಲಿ ವಾಹನಗಳನ್ನು ಅತಿ ವೇಗದಲ್ಲಿ ಚಾಲನೆ ಮಾಡಲು ಹಾಗೂ ಸ್ಟಂಟ್ ಮಾಡಲು ಅವಕಾಶ ನೀಡಲಾಗುತ್ತದೆ. ಈ ಕಾರಣಕ್ಕಾಗಿಯೇ ಹಲವಾರು ಜನರು ತಮ್ಮ ಕಾರುಗಳ ಸಾಮರ್ಥ್ಯಗಳನ್ನು ಪ್ರದರ್ಶಿಸಲು ರೇಸ್ ಟ್ರ್ಯಾಕ್‌ಗಳನ್ನು ಬಳಸುತ್ತಾರೆ.

ರೇಸ್ ಟ್ರ್ಯಾಕ್‌ಗಳಲ್ಲಿ ಹೆಚ್ಚು ಸವಾಲಿನ ಹಾದಿಗಳಿರುತ್ತವೆ. ಈ ಹಾದಿಗಳು ಸೂಪರ್ ಕಾರುಗಳ ಚಾಲಕರಿಗೆ ಹಾಗೂ ಸೂಪರ್ ಬೈಕುಗಳ ಸವಾರರಿಗೆ ರೋಮಾಂಚಕ ಅನುಭವವನ್ನು ನೀಡುತ್ತವೆ.

ಅಂತಹ ಒಂದು ಹಾದಿಯಲ್ಲಿ ಅತಿ ವೇಗವಾಗಿ ಚಲಿಸುವಾಗ ಫೆರಾರಿ 458 ಸೂಪರ್ ಕಾರು ಅಪಘಾತಕ್ಕೀಡಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಘಾತಕ್ಕೀಡಾದ ಈ ಕಾರಿನಲ್ಲಿ ಅಳವಡಿಸಿದ್ದ ಕ್ಯಾಮೆರಾದಿಂದ ಈ ದೃಶ್ಯಗಳನ್ನು ಪಡೆಯಲಾಗಿದೆ.

ಈ ರೇಸ್, ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್ ಬಳಿಯ ಸರ್ಕ್ಯೂಟ್ ಡೆಲ್ ಜರಾಮಾದಲ್ಲಿ ನಡೆದಿತ್ತು. ಈ ಅಪಘಾತದಲ್ಲಿ ಸೂಪರ್ ಕಾರು ಚಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲವೆಂದು ವರದಿಯಾಗಿದೆ.

ಫೆರಾರಿ 458 ಮಿಡ್-ಎಂಜಿನ್ ಸ್ಪೋರ್ಟ್ಸ್ ಕಾರ್ ಆಗಿದೆ. ಫೆರಾರಿ ಕಂಪನಿಯು ಎಫ್ 430 ಕಾರಿನ ಬದಲು ಈ ಮಾದರಿಯನ್ನು ಬಿಡುಗಡೆಗೊಳಿಸಿತು. ಈ ಕಾರನ್ನು ಮೊದಲ ಬಾರಿಗೆ 2009ರ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಅನಾವರಣಗೊಳಿಸಲಾಗಿತ್ತು.

ಈ ಕಾರಿನಲ್ಲಿ 4497 ಸಿಸಿ ಸಾಮರ್ಥ್ಯದ 4.5 ಲೀಟರ್ ನ್ಯಾಚುರಲ್ ಆಸ್ಪೈರ್ಡ್ ವಿ 8 ಎಂಜಿನ್ ಅಳವಡಿಸಲಾಗಿದೆ. ಫೆರಾರಿ 458 ಸೂಪರ್ ಕಾರು ಪ್ತತಿ ಗಂಟೆಗೆ 325 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಫೆರಾರಿ 458 ಸೂಪರ್ ಕಾರಿನ ಬೆಲೆ ರೂ.4.80 ಕೋಟಿಗಳಾಗಿದೆ. ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವೆಂದು ತಿಳಿದು ಬಂದಿದೆ. ಇದರಿಂದ ಬಹು ಕೋಟಿ ಬೆಲೆಯ ಕಾರು ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದೆ.

ಈ ಅಪಘಾತದಿಂದಾಗಿ ಕೆಲ ಗಂಟೆಗಳ ಕಾಲ ರೇಸ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಕಾರು ದೊಡ್ಡ ಪ್ರಮಾಣದಲ್ಲಿ ಹಾನಿಗೀಡಾಗಿದ್ದರೂ ಸಹ ಅದೃಷ್ಟವಶಾತ್ ಚಾಲಕಪ್ರಾಣಾಪಾಯದಿಂದ ಪಾರಾಗಿದ್ದಾನೆ.


Click it and Unblock the Notifications