ಅತಿ ಶೀಘ್ರದಲ್ಲೇ ಫೆರಾರಿ ಥೀಮ್ ಪಾರ್ಕ್ ಲೋಕಾರ್ಪಣೆ
ಇಟಲಿಯ ಐಕಾನಿಕ್ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಫೆರಾರಿ, ವಿಶ್ವದಲ್ಲೇ ಅತಿ ದೊಡ್ಡ ದೀಮ್ ಪಾರ್ಕ್ ನಿರ್ಮಾಣಕ್ಕೆ ಕೈ ಹಾಕಿದೆ.
75,000 ಚದರ ಮೀಟರ್ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿರುವ ಫೆರಾರಿ ಥೀಮ್ ಪಾರ್ಕ್ ಬಾರ್ಸಿಲೋನಾದಲ್ಲಿ ತೆಲೆಯೆತ್ತಲಿದೆ. ಇದರಲ್ಲಿ ಜಗತ್ತಿನ ಅತ್ಯಂತ ವೇಗದ ಹಾಗೂ ಅತಿ ದೊಡ್ಡ ರೋಲರ್ ಕೋಸ್ಟರ್ ಇರಲಿದೆ.

ಇದು ಪ್ರವಾಸಿಗಳನ್ನು ಕೈಬೀಸಿ ಕರೆಯಲಿದೆ. ಅಂತೆಯೇ ಫೈವ್ ಸ್ಟಾರ್ ಹೋಟೆಲ್ ಮುಂತಾದ ಗರಿಷ್ಠ ದರ್ಜೆಯ ಸೌಲಭ್ಯಗಳನ್ನು ನೀಡಲಾಗುವುದು.
2010ರಲ್ಲಿ ಯುಎಇನಲ್ಲಿ ಮೊದಲ ಫೆರಾರಿ ಥೀಮ್ ಪಾರ್ಕ್ ಅನ್ನು ನಿರ್ಮಿಸಲಾಗಿತ್ತು. ಇಲ್ಲಿಗೆ ವರ್ಷಂಪ್ರತಿ ನಾಲ್ಕು ದಶಲಕ್ಷ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ.
ಅಬುದಾಬಿಯಲ್ಲಿ ಮೊತ್ತ ಮೊದಲ ಬಾರಿಗೆ ಫಾರ್ಮುಲಾ ಒನ್ ರೇಸ್ ಆಯೋಜನೆಯಾದ ಸಂದರ್ಭದಲ್ಲಿ ಇದನ್ನು ನಿರ್ಮಿಸಲಾಗಿತ್ತು. ಅಷ್ಟಕ್ಕೂ ಫೆರಾರಿ ಥೀಮ್ ಪಾರ್ಕ್ ಯೋಜನಾ ವೆಚ್ಚ ಎಷ್ಟು ಗೊತ್ತೇ? ಜಸ್ಟ್ 850 ಕೋಟಿ ರು. (139 ಮಿಲಿಯನ್ ಅಮೆರಿಕನ್ ಡಾಲರ್).


Click it and Unblock the Notifications








