ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಫೆರಾರಿ ರೋಮಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಸೂಪರ್‌ಕಾರ್ ಗಳಲ್ಲಿ ಒಂದಾಗಿದೆ. ಫೆರಾರಿ ರೋಮಾ ಸೂಪರ್‍‍‍ಕಾರ್ ಟ್ವಿನ್-ಟರ್ಬೊ ವಿ8 ಪವರ್ ಫುಲ್ ಎಂಜಿನ್‌ ಮತ್ತು ಅತ್ಯಾಧುನಿಕ ಫೀಚರ್ಸ್, ತಂತ್ರಜ್ಙಾನಗಳನ್ನು ಒಳಗೊಂಡಿದೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಈ ಸೂಪರ್‌ಕಾರುಗಳು ಹೈವೇಗಳಲ್ಲಿ ಮಿಂಚಿನ ವೇಗದಲ್ಲಿ ಸಾಗುತ್ತದೆ. ಆದರೆ ರಸ್ತೆಗಳಲ್ಲಿ ದೊಡ್ಡ ಹಂಪ್ ಮತ್ತು ಗುಂಡಿಗಳು ಇದ್ದರೆ ಸೂಪರ್‌ಕಾರುಗಳು ಮುಂದೆಸಗಲು ಹೆಣಗಾಡುತ್ತದೆ. ಸೂಪರ್‌ಕಾರುಗಳು ಹೆಚ್ಚು ಹೈವೇಗಳು, ಸಿಟಿಗಳು ಮತ್ತು ಟ್ಯಾಕ್ ರಸ್ತೆಗಳಿಗೆ ಸೂಕ್ತವಾಗಿದೆ. ಆದರೆ ಸಿಟಿಯ ಕೆಲವು ಕಿರಿದಾದ ರಸ್ತೆಗಳಲ್ಲಿ ಹೆಣಗಾಡುತ್ತದೆ. ಏಕೆಂದರೆ ಸೂಪರ್‌ಕಾರುಗಳು ಹೆಚ್ಚು ಉದ್ದವಿರುತ್ತದೆ. ಆದರೂ ಕೆಲವರು ರಿಸ್ಕ್ ತೆಗೆದುಕೊಂಡು ಅಂತಹ ಕಡೆಗಳಲ್ಲಿ ಹೋಗುತ್ತಾರೆ. ಆದರೆ ಕಿರುದಾರಿಯಲ್ಲಿ ಸಾಗಲು ಸಾಹಸಪಡುತ್ತಾರೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಇಟಲಿಯಲ್ಲಿ ಕಿರಿದಾದ ಕಾಲುದಾರಿಯೊಂದರಲ್ಲಿ ಜನಪ್ರಿಯ ಫೆರಾರಿ ರೋಮಾ ಸೂಪರ್‌ಕಾರ್ ಸಿಲುಕಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಕಿರಿದಾದ ಇಟಾಲಿಯನ್ ಗಲ್ಲಿಯಲ್ಲಿ ಸಿಲುಕಿಕೊಂಡಂತೆ ಕಂಡುಬರುತ್ತದೆ ಏಕೆಂದರೆ ಚಾಲಕನು ಬಹುಶಃ ಸೂಪರ್‌ಕಾರ್ ಹೋಗಬಹುದೆಂದು ಅಂದಾಜಿಸಿರಬಹುದು.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಚಾಲಕನು ತನ್ನ ಕಾರನ್ನು ಕಿರಿದಾದ ಇಟಾಲಿಯನ್ ಗಲ್ಲಿಯ ಇನ್ನೊಂದು ಬದಿಗೆ ಹೋಗಬಹುದೆಂದು ಭಾವಿಸಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲವಾದರೂ, ವಿಡಿಯೋದಲ್ಲಿ ಅವನು ತಪ್ಪಿತಸ್ಥನೆಂದು ಸ್ಪಷ್ಟವಾಗುತ್ತದೆ. ಅಷ್ಟು ಬಿಗಿಯಾದ ರಸ್ತೆಯಲ್ಲಿ ಇಷ್ಟು ದೊಡ್ಡ ಗಾತ್ರದ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಈ ಫೆರಾರಿ ರೋಮಾ ಕಾರು 183.3 ಇಂಚು ಉದ್ದ, 77.7 ಇಂಚು ಅಗಲವನ್ನು ಹೊಂದಿದೆ, ಇನ್ನು ಈ ಕಾರು 1,472 ಕೆಜಿ ತೂಕವನ್ನು ಹೊಂದಿದೆ. ಗಲ್ಲಿಯ ಕಿರುದಾದ ಬೀದಿಯಲ್ಲಿ ಹೋಗಲು ಸಾಧ್ಯವಾಗುದಿಲ್ಲವೆಂದು ನೋಡಿದರೂ ತಿಳಿಯುತ್ತದೆ. ಆದರೂ ಅಷ್ಟು ಸೆನ್ಸಾರ್ ಗಳಿರುವ ಈ ಸೂಪರ್ ಕಾರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಇನ್ನು ಇದೇ ಫೆರಾರಿ ರೋಮಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಒಂದೇ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಗ್ರಾಹಕರು ತಮ್ಮ ಅಭಿರುಚಿಗೆ ಅನುಗುಣವಾಗಿ ಅದನ್ನು ಕಸ್ಟಮೈಸ್ ಮಾಡಬಹುದು. ಫೆರಾರಿ ರೋಮಾ ಸೂಪರ್‍‍‍ಕಾರ್ ಅನ್ನು ಪೋರ್ಟೊಫಿನೊ ಮಾದರಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಈ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಟ್ವಿನ್-ಟರ್ಬೊ ವಿ8 ಎಂಜಿನ್‌ ಅನ್ನು ಹೊಂದಿದೆ. ಇದು ಪವರ್ ಫುಲ್ ಎಂಜಿನ್ ಆಗಿದ್ದು, ಈ ಎಂಜಿನ್ 7500 ಆರ್‌ಪಿಎಂನಲ್ಲಿ 602 ಬಿಹೆಚ್‌ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 760 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಈ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಕೇವಲ 3.4 ಸೆಕೆಂಡುಗಳಲ್ಲಿ 0 ದಿಂದ 100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಸೆಕೆಂಡುಗಳಲ್ಲಿ 0 ದಿಂದ 200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸೂಪರ್‍‍‍ಕಾರ್ 320 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ರೋಮಾ ಸೂಪರ್‍‍‍ಕಾರ್ ಚುರುಕುತನದ ನಿರ್ವಹಣೆ ಮತ್ತು ತ್ವರಿತ ಸ್ಟೀರಿಂಗ್ ಅನ್ನು ಹೊಂದಿದೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಇದರ ಉತ್ತಮ ನಿರ್ವಹಣೆಗಾಗಿ ರೋಮಾ ಸೈಡ್ ಸ್ಲಿಪ್ ಕಂಟ್ರೋಲ್ 6.0 ಮತ್ತು ಫೆರಾರಿ ಡೈನಾಮಿಕ್ ಎಲೆಕ್ಟ್ರಾನಿಕ್ ಟಾರ್ಕ್ ವೆಕ್ಟರಿಂಗ್ ಸಿಸ್ಟಂ ಅನ್ನು ಸಹ ಹೊಂದಿದೆ. ರೋಮಾದ ಕಾರ್ಯಕ್ಷಮತೆಯು ಸುಂದರವಾದ ಇಟಾಲಿಯನ್ ವಿನ್ಯಾಸ ಮತ್ತು ಗಾಳಿಯ ಎಳೆತವನ್ನು ಕಡಿಮೆ ಮಾಡಲು ಸ್ಲಿಪ್ಪರ್ ಬಾಡಿಯೊಂದಿಗಿನ ಹೊಂದಿಕೆಯನ್ನು ಒಳಗೊಂಡಿದೆ. ಇನ್ನು ಈ ಫೆರಾರಿ ರೋಮಾ ಸೂಪರ್‍‍‍ಕಾರ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಇನ್ನು ಈ ಸೂಪರ್‍‍‍ಕಾರ್ ನಲ್ಲಿ ಎಲ್ಇಡಿ ಲೈಟಿಂಗ್, ಆಕ್ಟಿವ್ ಏರೋ, ಕ್ವಾಡ್ ಎಕ್ಸಾಸ್ಟ್, ಆಕ್ಟಿವ್ ರಿಯರ್ ಸ್ಪಾಯ್ಲರ್, ಫ್ರಂಟ್ & ರಿಯರ್ ಡಿಫ್ಯೂಸರ್ ಮತ್ತು ಇದರಲ್ಲಿ 20 ಇಂಚಿನ ಅಲಾಯ್ ವ್ಹೀಲ್ ಅನ್ನು ನೀಡಲಾಗಿದೆ.ಈ ಹೊಸ ಸ ಫೆರಾರಿ ರೋಮಾ ಸೂಪರ್‍‍‍ಕಾರ್ ಒಳಭಾಗದಲ್ಲಿ ರೋಮಾ, ಬಟನ್-ಲೋಡೆಡ್ ಸ್ಟೀಯರಿಂಗ್ ವ್ಹೀಲ್ ನೊಂದಿಗ್ ರಿಚಿತ ಫೆರಾರಿ ವಿನ್ಯಾಸವನ್ನು ಹೊಂದಿದೆ.

ವಿವಿಧ ಡ್ರೈವ್ ಮೋಡ್‌ಗಳಿಂದ ಆಯ್ಕೆ ಮಾಡಲು ಡಯಲ್ ಸೇರಿದಂತೆ ಹೆಚ್ಚಿನ ಕಂಟ್ರೋಲ್ ಗಳು ಸ್ಟೀರಿಂಗ್ ವ್ಹೀಲ್‌ನಲ್ಲಿವೆ. ಈ ಕಾರಿನಲ್ಲಿ ಕಂಫರ್ಟ್, ಸ್ಪೋರ್ಟ್, ರೇಸ್ ಮತ್ತು ಇಎಸ್‌ಸಿ-ಆಫ್ ಎಂಬ ಡ್ರೈವ್ ಮೋಡ್‌ಗಳನ್ನು ಹೊಂದಿವೆ. ಈ ಸೂಪರ್‍‍‍ಕಾರ್ ಇಂಟಿರಿಯರ್ ನಲ್ಲಿ 16 ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 8.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು 8.8-ಇಂಚಿನ ಪ್ಯಾಸೆಂಜರ್ ಡಿಸ್ ಪ್ಲೇಯನ್ನು ಹೊಂದಿದೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಇನ್ನು ಇಫೆರಾರಿ ತನ್ನ ಹೊಸ 296 ಜಿಟಿಬಿ ಕಾರನ್ನು ಈ ವರ್ಷದ ಅರಂಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಈ ಫೆರಾರಿ 296 ಜಿಟಿಬಿ ಕಾರು ಮಿಡ್-ಮೌಂಟೆಡ್ ವಿ8 ಬದಲಿಗೆ ಎಲ್ಲಾ ಹೊಸ ಹೈಬ್ರಿಡ್ ವಿ6 ಎಂಜಿನ್ ಅನ್ನು ಪಡೆದುಕೊಂಡಿದೆ. ಫೆರಾರಿ ತನ್ನ ಪ್ರಮುಖ ಸ್ಪೋರ್ಟ್ಸ್‌ಕಾರ್ ಲೈನ್‌ಗಾಗಿ ವಿ8 ಎಂಜಿನ್ ನಿಂದ ವಿ6ಗೆ ಬದಲಾಯಿಸಿದೆ.

ಗಲ್ಲಿಯಲ್ಲಿ ತಗಲಾಕಿಕೊಂಡ ಕೋಟಿ ಮೌಲ್ಯದ ಫೆರಾರಿ ಸೂಪರ್‌ಕಾರ್

ಇದರಲ್ಲಿ ಕ್ಲೈಮೆಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಅಡ್ಜೆಸ್ಟ್ ಮಾಡುವ ರೇಸಿಂಗ್ ಸೀಟುಗಳು ಮತು ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯನ್ನು ಹೊಂದಿದೆ. ಇಂತಹ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿರುವ ಕಾರು ಇಟಲಿಯ ಗಲ್ಲಿಯಲ್ಲಿ ಸಿಲುಕಿಕೊಂಡಿತ್ತು. ಸೆನ್ಸಾರ್ ಅಲರ್ಟ್ ಗಳಿದ್ದರೂ ಆ ಡ್ರೈವರ್ ಸಾಹಸ ಮಾಡಲು ಮುಂದಾಗಿ ಸೂಪರ್‍‍‍ಕಾರ್ ಸಿಲುಕಿಕೊಂಡಿರಬಹುದು.

Most Read Articles

Kannada
English summary
Ferrari supercar stuck in a narrow street here is a video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X