ತಲೆಯೆತ್ತಲಿದೆ ಜಸ್ಟ್ 850 ಕೋಟಿ ರು. ವೆಚ್ಚದ ಫೆರಾರಿ ಥೀಮ್ ಪಾರ್ಕ್

By Nagaraja

ಬಹುಶ: ಜಗತ್ತಿನ ಅತಿ ದುಬಾರಿ ಥೀಮ್ ಪಾರ್ಕ್‌ಗಳಲ್ಲಿ ಇದು ಮೊದಲನೆಯದ್ದಾಗಿರಬಹುದು. ವಿಶ್ವದ ಐಷಾರಾಮಿ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಫೆರಾರಿ ಬರೋಬ್ಬರಿ 850 ಕೋಟಿ ರು.ಗಿಂತಲೂ ದುಬಾರಿ ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಿಸಲು ಹೊರಟಿದೆ.

ಫಾರ್ಮುಲಾ ಒನ್ ರೇಸ್‌ನಲ್ಲಿ ನೀವೆಲ್ಲರೂ ಫೆರಾರಿ ಕಾರುಗಳನ್ನು ನೋಡಿರುತ್ತೀರಾ ಇದೀಗ ನೈಜ ಫೆರಾರಿ ಥೀಮ್ ಪಾರ್ಕ್ ಮಜಾ ಸವಿಯುವ ಕಾಲ ಸನ್ನಿಹಿತವಾಗಿದೆ. ಅಂದ ಹಾಗೆ 2016ನೇ ಇಸವಿಯಲ್ಲಿ ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ ಪೋರ್ಟ್ ಅವೆಂಚ್ಯುರಾ ರೆಸಾರ್ಟ್‌ನಲ್ಲಿ ನೂತನ ಥೀಮ್ ಪಾರ್ಕ್ ತೆರೆದುಕೊಳ್ಳಲಿದೆ.

ತಲೆಯೆತ್ತಲಿದೆ ಜಸ್ಟ್ 850 ಕೋಟಿ ರು. ವೆಚ್ಚದ ಫೆರಾರಿ ಥೀಮ್ ಪಾರ್ಕ್

ಖಾಸಗಿ ಶೇರು ಬಂಡವಾಳ ಸಂಸ್ಥೆಯಾಗಿರುವ ಇನ್ವೆಸ್ಟ್‌ಇಂಡಸ್ಟ್ರಿಯಲ್ ಹಾಗೂ ಕೆಕೆಆರ್ ಜಂಟಿಯಾಗಿ ಫೆರಾರಿ ಥೀಮ್ ಪಾರ್ಕ್ ನಿರ್ಮಿಸುತ್ತಿದೆ. ಅಲ್ಲದೆ ಈ ಸಂಬಂಧ ಫೆರಾರಿಯ 'ಕುದುರೆ' ಲಾಂಛನವನ್ನು ತಮ್ಮದಾಗಿಸಿಕೊಂಡಿದೆ.

ತಲೆಯೆತ್ತಲಿದೆ ಜಸ್ಟ್ 850 ಕೋಟಿ ರು. ವೆಚ್ಚದ ಫೆರಾರಿ ಥೀಮ್ ಪಾರ್ಕ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಟಲಿ ಮೂಲದ ಇನ್ವೆಸ್ಟ್‌ಇಂಡಸ್ಟ್ರಿಯಲ್ ಹಿರಿಯ ಪಾಲುದಾರ ಆಂಡ್ರಿಯಾ ಬೊನೊಮಿ, ಫೆರಾರಿ ಯೂನಿಕ್ ಸಂಸ್ಥೆ ಆಗಿದ್ದು, ಈ ಪಾರ್ಕ್ ನಿಜವಾಗ್ಲೂ ಯೂನಿಕ್ ಎನಿಸಿಕೊಳ್ಳಲಿದೆ ಎಂದಿದ್ದಾರೆ.

ತಲೆಯೆತ್ತಲಿದೆ ಜಸ್ಟ್ 850 ಕೋಟಿ ರು. ವೆಚ್ಚದ ಫೆರಾರಿ ಥೀಮ್ ಪಾರ್ಕ್

ಐಕಾನಿಕ್ ಆಸ್ಟನ್ ಮಾರ್ಟಿನ್ ಸಂಸ್ಥೆಯಲ್ಲಿ ಶೇಕಡಾ 40ರಷ್ಟು ಶೇರು ಹೊಂದಿರುವ ಇನ್ವೆಸ್ಟ್‌ಇಂಡಸ್ಟ್ರಿಯಲ್ ತವರೂರಾದ ಇಟಲಿಯನ್ನು ಕಡೆಗಣಿಸಿ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನೂತನ ಪಾರ್ಕ್ ನಿರ್ಮಿಸಲು ಹೊರಟಿದೆ. ಯಾಕೆಂದರೆ ಇಲ್ಲಿ ಪೋರ್ಟ್ ಅವೆಂಚ್ಯುರಾ ರಿಸಾರ್ಟ್ ಸ್ಥಿತಗೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆಯುವ ಇರಾದೆ ಹೊಂದಿದೆ.

ತಲೆಯೆತ್ತಲಿದೆ ಜಸ್ಟ್ 850 ಕೋಟಿ ರು. ವೆಚ್ಚದ ಫೆರಾರಿ ಥೀಮ್ ಪಾರ್ಕ್

ಫಿಯೆಟ್ ಗ್ರೂಪ್ ಆಟೋಮೊಬೈಲ್ಸ್ ಭಾಗವಾಗಿರುವ ಫೆರಾರಿ ಥೀಮ್ ಪಾರ್ಕ್, 75,000 ಚದರ ಮೀಟರ್ ಪ್ರದೇಶದಲ್ಲಿ ಸ್ಥಿತಗೊಂಡಿರಲಿದೆ. ಇಲ್ಲಿ 250 ಕೋಣೆಗಳುಳ್ಳ ಪಂಚಾತಾರಾ ಹೋಟೆಲ್ ಸೌಲಭ್ಯವಿರಲಿದೆ.

ತಲೆಯೆತ್ತಲಿದೆ ಜಸ್ಟ್ 850 ಕೋಟಿ ರು. ವೆಚ್ಚದ ಫೆರಾರಿ ಥೀಮ್ ಪಾರ್ಕ್

ಇದು ಮೊದಲ ಬಾರಿಯೇನಲ್ಲ ಫೆರಾರಿ ಥೀಮ್ ಪಾರ್ಕ್ ನಿರ್ಮಿಸುತ್ತಿರುವುದು. ಈ ಹಿಂದೆ 2010ನೇ ಇಸವಿಯಲ್ಲಿ ಅಬುದಾಬಿಯಲ್ಲಿ ಇಂತಹದೊಂದು ಥೀಮ್ ಪಾರ್ಕ್ ರಚಿಸಿತ್ತು. ಇದೀಗ ದುಬೈನಲ್ಲಿ ಲಭಿಸಿರುವ ಅಭೂತಪೂರ್ವ ಪ್ರತಿಕ್ರಿಯೆಯ ಹಿನ್ನಲೆಯಲ್ಲಿ ತನ್ನ ಥೀಮ್ ಪಾರ್ಕ್ ಯೋಜನೆಯನ್ನು ವಿಸ್ತರಿಸಲು ಫೆರಾರಿ ನಿರ್ಧರಿಸಿದೆ.

ತಲೆಯೆತ್ತಲಿದೆ ಜಸ್ಟ್ 850 ಕೋಟಿ ರು. ವೆಚ್ಚದ ಫೆರಾರಿ ಥೀಮ್ ಪಾರ್ಕ್

ಅಷ್ಟಕ್ಕೂ ಫೆರಾರಿ ಥೀಮ್ ಪಾರ್ಕ್ ಯೋಜನಾ ವೆಚ್ಚ ಎಷ್ಟು ಗೊತ್ತೇ? ಜಸ್ಟ್ 850 ಕೋಟಿ ರು. (139 ಮಿಲಿಯನ್ ಅಮೆರಿಕನ್ ಡಾಲರ್).

More from DriveSpark

Article Published On: Saturday, March 15, 2014, 7:03 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+