ಫೆರಾರಿ ಕೈಕೆಟುಗುವುದಿಲ್ಲವೇ? ಚಿಂತೆ ಬಿಡಿ ಪೆನ್ನು ತಗ್ಗೊಳ್ಳಿ
ಈ ಜನ್ಮದಲ್ಲಂತೂ ಫೆರಾರಿ ಸೂಪರ್ ಕಾರು ತಮ್ಮದಾಗಿಸುವಕೊಳ್ಳುವ ಕನಸು ಅಸಾಧ್ಯದ ಮಾತು. ಚಿಂತೆ ಬಿಡಿ ಇದೀಗ ಫೆರಾರಿಯಿಂದ ಬಂದಿದೆ ಆಕರ್ಷಕ ಲೇಖನಿ. ಫೆರಾರಿ ಕಾರನ್ನು ತಮ್ಮದಾಗಿಸಿಕೊಳ್ಳುವ ಕನಸು ಹೊತ್ತುಕೊಂಡಿರುವವರು ಕನಿಷ್ಠ ಪಕ್ಷ ಫೆರಾರಿ ಪೆನ್ನಿನಿಂದ ಸಂತೃಪ್ತಿಪಟ್ಟುಕೊಳ್ಳಬಹುದು.
ಇಂಡಿಯನ್ ಗ್ರ್ಯಾನ್ ಪ್ರಿಕ್ಸ್ ಮೂರನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳ ಮುಂಚಿತವಾಗಿ ಐಷಾರಾಮಿ ಬರವಣಿಗೆ ಬ್ರಾಂಡ್ ಆಗಿರುವ ಶೀಆಫ್ಟರ್ (sheafter), ತನ್ನ ಅಧಿಕೃತ ಸ್ಕೂಡೆರಿಯಾ ಫೆರಾರಿ ಕಲೆಕ್ಷನ್‌ಗಳನ್ನು ಪ್ರದರ್ಶನಕ್ಕಿರಿಸಿದೆ.

ಫೆರಾರಿ ವಿಎಫ್‌ಎಂ, ಫೆರಾರಿ 100, ಫೆರಾರಿ 300 ಹಾಗೂ ಫೆರಾರಿ 500 ಎಂಬ ಲೇಖನಿ ಕಲೆಕ್ಷನ್‌ಗಳು ಲಭ್ಯವಿರುತ್ತದೆ. ಇದರಲ್ಲಿ ಫೌಂಟೆನ್, ರಾಲರ್ ಬಾಲ್ ಹಾಗೂ ಬಾಲ್ ಪಾಯಿಂಟ್‌ಗಳೆಂಬ ಲೇಖನಿ ಮೊನೆಗಳು ಸೇರಿವೆ.

ಸ್ಟೇನ್ಲೆಸ್ ಸ್ಟೀಲ್ ಶೇಆಫ್ಟರ್ ನಿಬ್ಬಿನ ಪ್ರಮುಖ ವಿಶೇಷಯತೆಯಾಗಿದೆ. ಪ್ರತಿಯೊಂದು ಕಲೆಕ್ಷನ್ ಗರಿಷ್ಠ ಗುಣಮಟ್ಟತೆಯೊಂದಿಗೆ ತಯಾರಿಸಲಾಗಿದೆ. ಉದ್ಯಮಿಗಳಿಗೆ ಇದು ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಲು ನೆರವಾಗಲಿದೆ.

ಈ ಫೆರಾರಿ ಪೆನ್ನುಗಳು 3,000 ರು.ಗಳಿಂದ ಹಿಡಿದು 5,000 ರು.ಗಳಷ್ಟು ದುಬಾರಿಯಾಗಿದೆ. ಇದು ಭಾರತದಲ್ಲಿ ವಿಲಿಯನ್ ಪೆನ್ ಔಟ್ಲೆಟ್‌ಗಳಲ್ಲಿ ಲಭ್ಯವಿರಲಿದೆ.

ಫೆರಾರಿ 500
- ಲೇಖನಿ ಮೊನೆ - ಬಾಲ್ ಪಾಯಿಂಟ್
- ಲಗ್ಷುರಿ ಗಿಫ್ಟ್ ಬಾಕ್ಸ್
- 1 ವರ್ಷದ ವಾರಂಟಿ ಸೌಲಭ್ಯ
- ಲೇಖನಿಯ ಮೊನೆ- ಫೌಂಟೆನ್ ಪೆನ್ನು, ರೋಲರ್ ಬಾಲ್ ಅಥವಾ ಬಾಲ್ ಬಾಯಿಂಟ್
- ಲಗ್ಷುರಿ ಗಿಫ್ಟ್ ಬಾಕ್ಸ್
- 1 ವರ್ಷದ ವಾರಂಟಿ
- ಲೇಖನಿಯ ಮೊನೆ- ಫೌಂಟೆನ್ ಪೆನ್ನು, ರೋಲರ್ ಬಾಲ್ ಅಥವಾ ಬಾಲ್ ಬಾಯಿಂಟ್ ಹಾಗೂ ಪೆನ್ಸಿಲ್
- ಲಗ್ಷುರಿ ಗಿಫ್ಟ್ ಬಾಕ್ಸ್
- 1 ವರ್ಷದ ವಾರಂಟಿ
- ಲೇಖನಿಯ ಮೊನೆ- ಬಾಲ್ ಬಾಯಿಂಟ್
- ಲಗ್ಷುರಿ ಗಿಫ್ಟ್ ಬಾಕ್ಸ್
- 1 ವರ್ಷದ ವಾರಂಟಿ

ಫೆರಾರಿ 300

ಫೆರಾರಿ 100

ಫೆರಾರಿ ವಿಎಫ್‌ಎಂ

ಇಟಲಿಯ ದೈತ್ಯ ವಾಹನ ತಯಾರಕ ಸಂಸ್ಥೆಯಾದ ಫೆರಾರಿ ಸೂಪರ್ ಕಾರುಗಳು 3ರಿಂದ 5 ಕೋಟಿ ರು.ಗಳಷ್ಟು ದುಬಾರಿಯಾಗಿದೆ. ಹಾಗಿರುವಾಗ ಫೆರಾರಿ ಬ್ರಾಂಡ್ ತಮ್ಮದಾಗಿಸಿಕೊಳ್ಳುಲು ಇಚ್ಛಿಸುವವರು ಈ ಲೇಖನಿಯನ್ನು ಖರೀದಿಸಬಹುದಾಗಿದೆ.


Click it and Unblock the Notifications








