ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಮುಖ್ಯ ಸುರಕ್ಷತಾ ಸಾಧನವಾಗಿದೆ. ಗುಣಮಟ್ಟದ ಹೆಲ್ಮೆಟ್ ಧರಿಸಿದ್ದರೇ ಅಪಘಾತವಾದಾಗ ತಲೆಗೆ ಪೆಟ್ಟು ಬೀಳುವುದು ತಪ್ಪುತ್ತದೆ. ಈ ಕಾರಣಕ್ಕೆ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

ಭಾರತದಲ್ಲಿ ಹಲವಾರು ಕಂಪನಿಗಳ ಹೆಲ್ಮೆಟ್'ಗಳಿವೆ. ಅವುಗಳಲ್ಲಿ ಸರಿಯಾದದನ್ನು ಆರಿಸುವುದು ಗ್ರಾಹಕರಿಗೆ ತುಸು ಕಷ್ಟವಾಗುತ್ತದೆ. ಬೈಕಿಗೆ ಒಪ್ಪುವಂತಹ ಬಣ್ಣದ ಹಾಗೂ ಸರಿಯಾದ ಆಕಾರದ ಹೆಲ್ಮೆಟ್ ಆರಿಸುವುದು ಸುಲಭವಲ್ಲ. ಇದರ ಜೊತೆಗೆ ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್'ಗಳಿಗೆ ಸಂಬಂಧಿಸಿದಂತೆ ಕೆಲವು ಮಿಥ್ಯಗಳಿವೆ. ಆ ಮಿಥ್ಯಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

1. ರಸ್ತೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ

ಹೆಲ್ಮೆಟ್ ಧರಿಸಿದರೇ ರಸ್ತೆ ಸರಿಯಾಗಿ ಕಾಣುವುದಿಲ್ಲವೆಂಬ ತಪ್ಪು ಭಾವನೆಗಳಿವೆ. ಹೆಲ್ಮೆಟ್ ಇಡೀ ಮುಖವನ್ನು ಕವರ್ ಮಾಡುವುದರಿಂದ ಹೆಲ್ಮೆಟ್‌ ಧರಿಸಿದ್ದಾಗ ಕೆಳಗೆ ನೋಡುವುದಕ್ಕೆ ಸ್ವಲ್ಪ ಕಷ್ಟವಾಹಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

ಈ ಕಾರಣಕ್ಕೆ ರಸ್ತೆಯೇ ಸರಿಯಾಗಿ ಕಾಣುವುದಿಲ್ಲವೆಂಬ ಅಭಿಪ್ರಾಯ ಸರಿಯಲ್ಲ. ಹೆಲ್ಮೆಟ್‌ಗಳನ್ನು ರಸ್ತೆಗಳು ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಉತ್ಪಾದಿಸಲಾಗಿರುತ್ತದೆ. ಹೆಲ್ಮೆಟ್ ಧರಿಸಿರುವವರು 210 ಆಂಗಲ್ ವೀವ್ ನಲ್ಲಿ ನೋಡಬಹುದು.

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

2. ಹೆಲ್ಮೆಟ್ ಇತರ ವಾಹನಗಳ ಶಬ್ದಗಳನ್ನು ನಿರ್ಬಂಧಿಸುತ್ತದೆ

ಈ ಅಭಿಪ್ರಾಯವೂ ಸಂಪೂರ್ಣ ಸುಳ್ಳು. ಗುಣಮಟ್ಟದ ಹೆಲ್ಮೆಟ್‌ಗಳನ್ನು ಬೇರೆ ವಾಹನಗಳ ಶಬ್ದಗಳನ್ನು ಕೇಳಿಸಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಯಾವುದೇ ವಾಹನವು 100 ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ಸಾಗಿದಾಗ ಬೇರೆ ವಾಹನಗಳ ಶಬ್ದಗಳು ಕೇಳಿಸದೇ ಇರುವುದು ಸಹಜ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

3. ಹೆಲ್ಮೆಟ್ ತಲೆಯ ಉಷ್ಣತೆಯನ್ನು ಹೆಚ್ಚಿಸುತ್ತದೆ

ಈ ಅಭಿಪ್ರಾಯವೂ ಸಹ ಸುಳ್ಳು. ಹೆಲ್ಮೆಟ್‌ನ ಒಳಭಾಗವನ್ನು ಬಬಲ್ ತರಹದ ಶಾಖ-ವಾಹಕ ವಸ್ತುಗಳಿಂದ ತಯಾರಿಸಲಾಗಿರುತ್ತದೆ. ಇದರಿಂದಾಗಿ ಹೊರಗಿನ ಪ್ಲಾಸ್ಟಿಕ್ ಅನ್ನು ಬಿಸಿ ಮಾಡಿದರೂ ಸಹ, ಶಾಖವು ಒಳಬರುವುದಿಲ್ಲ.

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

ಬಹುಶಃ ಭಾರತದಲ್ಲಿ ಮಾತ್ರ ಈ ರೀತಿಯ ಅಭಿಪ್ರಾಯವಿರಬಹುದು. ಬೇಸಿಗೆ ಕಾಲದಲ್ಲಿ ಮುಖವನ್ನು ಪೂರ್ತಿಯಾಗಿ ಮುಚ್ಚಿಕೊಂಡು ನಿಂತರೆ ಯಾರೇ ಆಗಲಿ ಬೆವೆತು ಹೋಗುವುದು ಸಹಜ. ಹಲವು ಕಂಪನಿಗಳು ಎಸಿ ಇರುವ ಹೆಲ್ಮೆಟ್ ಗಳನ್ನು ಉತ್ಪಾದಿಸುತ್ತಿದ್ದರೂ ಅವುಗಳ ಬೆಲೆ ತುಸು ದುಬಾರಿಯಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

4. ಹೆಲ್ಮೆಟ್'ಗಳು ನಗರ ಪ್ರದೇಶಕ್ಕೆ ಸೂಕ್ತವಲ್ಲ

ಅಪಘಾತಗಳು ನಗರ ಪ್ರದೇಶಗಳಲ್ಲಿಯೇ ಹೆಚ್ಚು ಸಂಭವಿಸುತ್ತವೆ. ಈ ಕಾರಣಕ್ಕೆ ಗ್ರಾಮೀಣ ಪ್ರದೇಶದ ರಸ್ತೆಗಳಿಗಿಂತ ನಗರ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಹೆಲ್ಮೆಟ್'ಗಳನ್ನು ಧರಿಸುವುದು ಸೂಕ್ತ. ಗ್ರಾಮೀಣ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ವಾಹನವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸಾಕು.

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

ಆದರೆ ನಗರ ಪ್ರದೇಶಗಳಲ್ಲಿ ವಾಹನವನ್ನು ಗಮನಿಸುವುದರ ಜೊತೆಗೆ ಹಿಂದೆ ಮುಂದೆ ಬರುವ ವಾಹನಗಳನ್ನು ಸಹ ಗಮನಿಸಬೇಕಾಗುತ್ತದೆ. ಸ್ವಲ್ಪ ಪ್ರಮಾಣದ ಅಜಾಗರೂಕತೆಯು ಹೆಚ್ಚಿನ ಹಾನಿಯನ್ನುಂಟು ಮಾಡಬಹುದು. ಈ ಕಾರಣಕ್ಕೆ ನಗರ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸುವುದು ಒಳ್ಳೆಯದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

5. ಅಪಘಾತಗಳಿಗೆ ಹೆಲ್ಮೆಟ್‌ಗಳೇ ಕಾರಣ

ಬಹುತೇಕ ಜನರು ಈ ಅಭಿಪ್ರಾಯವನ್ನು ಹೊಂದಿದ್ದಾರೆ. ಗುಣಮಟ್ಟದ ಹೆಲ್ಮೆಟ್ ಧರಿಸಿದರೇ ಅಪಘಾತಗಳು ಸಂಭವಿಸಿದರೂ ತಲೆಗೆ ತೀವ್ರವಾದ ಪೆಟ್ಟು ಬೀಳುವ ಸಾಧ್ಯತೆಗಳು ಕಡಿಮೆ.

ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕ ಹೆಲ್ಮೆಟ್ ಬಗೆಗಿರುವ ಕೆಲವು ಮಿಥ್ಯಗಳಿವು

ಜನರು ಸೂಕ್ತ ಕಾರಣಗಳಿಲ್ಲದ ಹೇಳಿಕೆಗಳಿಗೆ, ತಪ್ಪು ಗ್ರಹಿಕೆಗಳಿಗೆ ಮನ್ನಣೆ ನೀಡದೇ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಸೂಕ್ತ. ಹೆಲ್ಮೆಟ್ ಧರಿಸುವುದರಿಂದ ಪ್ರಾಣಾಪಾಯವಾಗುವುದು ತಪ್ಪುತ್ತದೆ.

Most Read Articles

Kannada
English summary
Few myths and facts about helmets. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X