ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್

ಭಾರತೀಯರು ಭೋಜನ ಪ್ರಿಯರು. ಭಾರತದ ಪ್ರತಿಯೊಂದು ಮೂಲೆಯಲ್ಲೂ ವಿಭಿನ್ನ ಭಕ್ಷ್ಯಗಳನ್ನು ನೀಡಲಾಗುತ್ತದೆ. ಈಗ ವಿಭಿನ್ನ ಬಗೆಯ ಭಕ್ಷ್ಯವೊಂದನ್ನು ನೀಡಲಾಗುತ್ತಿದೆ. ಆ ಭಕ್ಷ್ಯದ ಹೆಸರು ಬುಲೆಟ್ ಥಾಲಿ.

ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್

ಈ ಬುಲೆಟ್ ಥಾಲಿಯನ್ನು ನಿಗದಿಪಡಿಸಿದ ಸಮಯದಲ್ಲಿ ತಿಂದು ಮುಗಿಸುವವರಿಗೆ ರಾಯಲ್ ಎನ್‌ಫೀಲ್ಡ್‌ನ ಬೈಕ್‌ ಅನ್ನು ಉಚಿತವಾಗಿ ನೀಡಲಾಗುತ್ತದೆ. ಪುಣೆಯಲ್ಲಿರುವ ರೆಸ್ಟೋರೆಂಟ್‌ ಗ್ರಾಹಕರನ್ನು ಆಕರ್ಷಿಸಲು ಊಟದ ಸವಾಲ್ ಅನ್ನು ನೀಡುತ್ತಿದೆ. ಈ ಸವಾಲನ್ನು ಪೂರ್ಣಗೊಳಿಸುವ ಗ್ರಾಹಕರಿಗೆ ಬುಲೆಟ್ ಬೈಕ್ ಅನ್ನು ನೀಡಲಾಗುವುದು.

ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್

ಈ ರೆಸ್ಟೋರೆಂಟ್‌'ಗೆ ಬರುವ ಗ್ರಾಹಕರಿಗಾಗಿ ಈ ವಿಶಿಷ್ಟವಾದ ಥಾಲಿಯನ್ನು ಪರಿಚಯಿಸಲಾಗಿದೆ. ಈ ಥಾಲಿಗೆ ಬುಲೆಟ್ ಥಾಲಿ ಎಂಬ ಹೆಸರಿಡಲಾಗಿದೆ. ಈ ಥಾಲಿಯನ್ನು ಒಂದು ಗಂಟೆಯೊಳಗೆ ತಿಂದು ಮುಗಿಸುವವರಿಗೆ ರೆಸ್ಟೋರೆಂಟ್ ಬುಲೆಟ್ ಬೈಕ್ ಅನ್ನು ಉಚಿತವಾಗಿ ನೀಡಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್

ಆದರೆ ಈ ಥಾಲಿಯನ್ನು ತಿಂದು ಮುಗಿಸುವುದು ಅಷ್ಟು ಸುಲಭವಲ್ಲ. ಈ ಬುಲೆಟ್ ಥಾಲಿಯಲ್ಲಿ 4 ಕೆ.ಜಿ ಮಟನ್ ಹಾಗೂ ಹುರಿದ ಮೀನು ಸೇರಿದಂತೆ ಸುಮಾರು 12 ಬಗೆಯ ವಿವಿಧ ಭಕ್ಷ್ಯಗಳನ್ನು ನೀಡಲಾಗುತ್ತದೆ. ಈ ವಿಶಿಷ್ಟವಾದ ಥಾಲಿಯನ್ನು ತಯಾರಿಸಲು 55 ಜನರು ಕೆಲಸ ಮಾಡುತ್ತಾರೆ.

ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್

ಬುಲೆಟ್ ಪ್ಲೇಟ್ ಚಾಲೆಂಜ್ ಎರಡು ಆಯ್ಕೆಗಳನ್ನು ಹೊಂದಿದೆ

ಈ ಬುಲೆಟ್ ಥಾಲಿ ಚಾಲೆಂಜ್‌ನಲ್ಲಿ ಎರಡು ಆಯ್ಕೆಗಳಿವೆ. ಮೊದಲನೇ ಆಯ್ಕೆಯಲ್ಲಿ ರೂ.4444 ಬೆಲೆಯ ದೊಡ್ಡ ಬುಲೆಟ್ ಪ್ಲೇಟ್ ಖರೀದಿಸಿ ಇಬ್ಬರು ಅದನ್ನು ಒಂದು ಗಂಟೆಯಲ್ಲಿ ತಿಂದು ಮುಗಿಸಿದರೆ, ಹೊಸ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಉಚಿತವಾಗಿ ಕೊಂಡೊಯ್ಯಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್

ಎರಡನೇ ಆಯ್ಕೆಯಲ್ಲಿ ರೂ.2500 ಮೌಲ್ಯದ ಸಣ್ಣ ಬುಲೆಟ್ ಪ್ಲೇಟ್ ಖರೀದಿಸಿ ಅದನ್ನು ಒಂದು ಗಂಟೆಯಲ್ಲಿ ತಿಂದು ಮುಗಿಸಿದರೆ, ಹೊಸ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಕೊಂಡೊಯ್ಯಬಹುದು.

ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್

ಕೋವಿಡ್ -19 ಹಿನ್ನೆಲೆಯಲ್ಲಿ ರೆಸ್ಟೋರೆಂಟ್'ಗಳು ಗ್ರಾಹಕರ ಕೊರತೆಯನ್ನು ಎದುರಿಸುತ್ತಿವೆ. ಈ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ಈ ರೆಸ್ಟೋರೆಂಟ್‌ ಬುಲೆಟ್ ಥಾಲಿ ಸ್ಪರ್ಧೆಯನ್ನು ಆರಂಭಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್

ಈ ಸ್ಪರ್ಧೆಗಾಗಿ ರೆಸ್ಟೋರೆಂಟ್‌ನ ಹೊರಗೆ 5 ಬುಲೆಟ್ ಬೈಕ್‌ಗಳನ್ನು ನಿಲ್ಲಿಸಲಾಗಿದೆ. ರೆಸ್ಟೋರೆಂಟ್‌ನಲ್ಲಿ ಆರಂಭಿಸಿರುವ ಬುಲೆಟ್ ಥಾಲಿ ಚಾಲೆಂಜ್ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಈ ಸವಾಲನ್ನು ಪ್ರಯತ್ನಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ.

ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್

ಇದುವರೆಗೆ ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿಯಾದ ಸೋಮನಾಥ್ ಪವಾರ್ ಎಂಬುವವರು ಮಾತ್ರ ಒಂದು ಗಂಟೆಯೊಳಗೆ ಬುಲೆಟ್ ಥಾಲಿಯನ್ನು ಪೂರ್ತಿಯಾಗಿ ತಿಂದು ಮುಗಿಸಲು ಯಶಸ್ವಿಯಾಗಿದ್ದಾರೆ. ಅವರಿಗೆ ಬುಲೆಟ್ ಬೈಕ್ ಅನ್ನು ಬಹುಮಾನವಾಗಿ ನೀಡಲಾಗಿದೆ.

Most Read Articles

Kannada
English summary
Finish this bullet thali in one hour and get royal enfield bike for free. Read in Kannada.
Story first published: Wednesday, January 20, 2021, 19:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X