Just In
- 8 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- 11 hrs ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 13 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 1 day ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
Don't Miss!
- News
ಶಿವಸೇನೆ-ಬಿಜೆಪಿ ಮೈತ್ರಿ ಸುಳಿವು ಕೊಟ್ಟ ಕರ್ನಾಟಕದ ಸಚಿವ!
- Sports
ಭಾರತ vs ಐರ್ಲೆಂಡ್: ಮೊದಲ ಟಿ20 ಪಂದ್ಯ, ಟಾಸ್ ಗೆದ್ದ ಭಾರತ, Live ಸ್ಕೋರ್, ಆಡುವ ಬಳಗ
- Movies
ಕೆ.ಎಲ್.ರಾಹುಲ್ ಜೊತೆ ಜರ್ಮನಿಗೆ ಹಾರಿದ ಆತಿಯಾ ಶೆಟ್ಟಿ
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Technology
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ದೆಹಲಿ ಇವಿ ಪಾರ್ಕಿಂಗ್ ಸ್ಪೇಸ್‌ನಲ್ಲಿ ಬೆಂಕಿ ಅವಘಡ: 100ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮ
ರಾಷ್ಟ್ರ ರಾಜಧಾನಿ ದೆಹಲಿಯ ಜಾಮಿಯಾ ನಗರ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಇವಿ ಪಾರ್ಕಿಂಗ್ ಸೌಲಭ್ಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 100ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಈ ದುರ್ಘಟೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.

ಕಳೆದ ಬುಧವಾರ ಮುಂಜಾನೆ ಇವಿ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಪವೃತ್ತರಾಗಿ ಸಂಭವನೀಯ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ 30 ಹೊಸ ಇ-ರಿಕ್ಷಾಗಳು, 50 ಹಳೆಯ ಇ-ರಿಕ್ಷಾಗಳು ಜೊತೆಗೆ 10 ಕಾರುಗಳು, 2 ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್ ಸುಟ್ಟು ಭಸ್ಮವಾಗಿವೆ.

ಸುಮಾರು 100 ವಾಹನಗಳು ಸುಟ್ಟುಹೋಗಿವೆ ಎಂದು ಹೇಳಲಾಗುತ್ತಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಇದು ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿರಬಹುದು ಎನ್ನಲಾಗಿದೆ. ಭಾರೀ ಬೆಂಕಿಯಿಂದಾಗಿ ಹಾಗೂ ಬಹುತೇಕ ಸುಟ್ಟುಹೋಗಿರುವ ಕಾರಣ ಅನೇಕ ವಾಹನಗಳನ್ನು ಇನ್ನು ಗುರುತಿಸಿಲ್ಲ. ಸಂಪೂರ್ಣ ಹತೋಟಿಗೆ ಬಂದ ಬಳಿಕವಷ್ಟೇ ಈ ಬಗ್ಗೆ ಒಂದು ಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸದ್ದಾರೆ.

ಅದೃಷ್ಟವಶಾತ್ ಬೆಂಕಿಯು ಯಾವುದೇ ಜೀವಗಳನ್ನು ಬಲಿತೆಗೆದುಕೊಳ್ಳದಿದ್ದರೂ, ಅನೇಕ ವಾಹನಗಳು, ಇ-ರಿಕ್ಷಾಗಳನ್ನು ಸುಟ್ಟುಹಾಕಿದೆ. ಈ ಪ್ರದೇಶದಲ್ಲಿ ನಿಲುಗಡೆ ಮಾಡಿರುವ ವಾಹನಗಳ ಸಂಖ್ಯೆಯನ್ನು ಪರಿಗಣಿಸಿ ದೆಹಲಿ ಅಗ್ನಿಶಾಮಕ ದಳದ ತ್ವರಿತ ಪ್ರತಿಕ್ರಿಯೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಒಂದು ವೇಳೆ ಅಗ್ನಿ ಶಾಮಕ ದಳ ಸ್ವಲ್ಪ ತಡ ಮಾಡಿದ್ದರೂ ಪರಿಸ್ಥಿತಿ ಘೋರವಾಗಿರುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ಸಂಭವಿಸಿದ ಬೆಂಕಯ ಘಟನೆಯು ಬಹುಶಃ ದೇಶದಲ್ಲಿ ವರದಿಯಾದ ಅತ್ಯಂತ ದೊಡ್ಡ ಇವಿ ಸಂಬಂಧಿತ ಬೆಂಕಿ ಅವಘಡ ಎಂದೇ ಹೇಳಬಹುದು. ಬೆಂಕಿಯ ಕಾರಣವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಇದು EV ಪಾರ್ಕಿಂಗ್ ಪ್ರದೇಶದಲ್ಲಿ ಸಂಭವಿಸಿದೆ ಎಂಬ ಅಂಶವು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ದೊಡ್ಡ ಆಘಾತ ನೀಡಿದೆ.

ಈಗಾಗಲೇ ಕಳೆದ 2-3 ತಿಂಗಳುಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ, ಇದರಿಂದ ಕಂಗೆಟ್ಟಿರುವ ಇವಿ ಕಂಪನಿಗಳಿಗೆ ಈ ದುರ್ಘಟನೆ ಭಾರೀ ಹೊಡೆತ ನೀಡಿದೆ ಎಂದು ಹೇಳಬಹುದು. ಇದು ಇವಿ ವಾಹನ ಮಾರುಕಟ್ಟೆಯ ಮೇಲೆ ಹೆಚ್ಚಾಗಿ ಪ್ರಭಾವ ಭೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ, ಕೇಂದ್ರ ಸರ್ಕಾರವು ಘಟನೆಗಳ ಬಗ್ಗೆ ತನಿಖೆ ನಡೆಸುವಂತೆ DRDOಗೆ ಆದೇಶಿಸಿದೆ. ಒಂದು ವೇಳೆ ವಾಹನ ತಯಾರಿಯಲ್ಲಿ ತಯಾರಕರ ಲೋಪ ದೋಷಗಳು ಕಂಡುಬಂದಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಲಿದೆ. ಈಗಾಗಲೇ ಈ ಕುರಿತು ತನಿಖೆ ಮತ್ತಷ್ಟು ವೇಗಗೊಂಡಿದೆ.

ಕಳಪೆ ಬ್ಯಾಟರಿ ವಿನ್ಯಾಸ ಮತ್ತು EV ಮಾಡ್ಯೂಲ್‌ಗಳಲ್ಲಿನ ಗಂಭೀರ ದೋಷಗಳು ವಿದ್ಯುತ್ ವಾಹನಗಳಿಗೆ ಸಂಬಂಧಿಸಿದ ಬೆಂಕಿಗೆ ಕಾರಣವಾಗಿ ಎಂದು DRDO ಮತ್ತು ಪರಿಸರ ಸುರಕ್ಷತೆ ಕೇಂದ್ರ (CFEES) ನಡೆಸಿದ ತನಿಖೆಯಿಂದ ತಿಳಿದುಬಂದಿದೆ. ತನಿಖೆಯ ವರದಿಗಳ ಆಧಾರದ ಮೇಲೆ ಸರ್ಕಾರವು ಓಲಾ, ಓಕಿನಾವಾ ಮತ್ತು ಪ್ಯೂರ್ ಇವಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಮೊದಲು ಘಟನೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುವಂತೆ ಆದೇಶಿಸಿದೆ.

ಎಲೆಕ್ಟ್ರಿಕಲ್ ವಾಹನಕ್ಕೆ ಬೆಂಕಿ ಬಿದ್ದರೆ ಏನು ಮಾಡಬೇಕು? ನೀವು ಮಾಡಬೇಕಾದ ಮೊದಲನೆಯದು ಬೆಂಕಿಯ ಮೇಲೆ ನೀರನ್ನು ಸುರಿಯಬಾರದು, ವಿಶೇಷವಾಗಿ ಬ್ಯಾಟರಿ ಪ್ಯಾಕ್‌ಗೆ ಬೆಂಕಿ ಬಿದ್ದಿದ್ದರೆ. ಲಿಥಿಯಂ-ಐಯಾನ್ ಬ್ಯಾಟರಿಯ ಬೆಂಕಿಯನ್ನು ನಂದಿಸಲು ನೀರನ್ನು ಬಳಸುವುದರಿಂದ ಹೈಡ್ರೋಜನ್ ಅನಿಲದ ಬಿಡುಗಡೆಗೆ ಕಾರಣವಾಗುತ್ತದೆ, ಇದು ಇನ್ನೂ ಹೆಚ್ಚು ಸ್ಫೋಟಕ್ಕೆ ಕಾರಣವಾಗಬಹುದು.

ಬದಲಿಗೆ, ಮೊದಲು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ, ಬೆಂಕಿಯು ತುಂಬಾ ತೀವ್ರವಾಗಿದ್ದರೆ ದೂರವಿರಿ. ಯಾವುದೇ ಕಾರನಕ್ಕೂ ಹತ್ತಿರ ಹೋಗುವುದು, ನೀರು ಹಾಕುವುದು ಮಾಡುವುದರಿಂದ ನಿಮ್ಮ ಜೀವಕ್ಕೆ ಆಪತ್ತು ಬರಬಹುದು. ವಾಹನ ಬೆಂಕಿಗೆ ಆಹುತಿಯಾದರೆ ಅಧಿಕಾರಿಗಳಿಗೆ ತಿಳಿಸಿ ವಿಮೆ ಪಡೆದುಕೊಳ್ಳಿ. ನಿಮ್ಮ ವಾಹನ ನಿಮ್ಮ ಜೀವಕ್ಕಿಂತ ಹೆಚ್ಚೇನಲ್ಲ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ದಿನ ಕಳೆದಂತೆ ಇವಿ ವಾಹನಗಳಿಗೆ ಸಂಬಂಧಿಸಿದಂತೆ ಹಲವು ಬೆಂಕಿ ಅವಘಡಗಳು ಸಂಭವಿಸುತ್ತಿವೆ. ಇದೀಗ ದಾಖಲಾಗಿರುವ ಪ್ರಕರಣದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲವಾದರೂ, ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭಿರವಾಗಿ ಪರಿಗಣಿಸಬೇಕಿದೆ. ಮುಂದಿನ ದಿನಗಳಲ್ಲಿ ಇದು ಜನರ ಜೀವಕ್ಕೆ ಕುತ್ತು ತರಬಹುದು. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಇವಿ ಕಂಪನಿಗಳಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು.