ಅತೀದೊಡ್ಡ ಸಮುದ್ರ ಸೇತುವೆಯಲ್ಲಿ ಮೊದಲ ಅಪಘಾತ, ಅಟಲ್ ಸೇತುವಿನಲ್ಲಿ ಮಾರುತಿ ಕಾರಿನ ಅಪಖ್ಯಾತಿ!
ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದ್ದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅಥವಾ ಅಟಲ್ ಸೇತು ಎಂಬ ಭಾರತದ ಅತೀ ಉದ್ದದ ಸಮುದ್ರ ಸೇತುವೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಇದು ಉದ್ಘಾಟನೆ ಆದಾಗಿನಿಂದ ಹಲವಾರು ಜನ ಪ್ರತಿನಿತ್ಯ ಇದನ್ನು ನೋಡಲು ದೂರ ದೂರದಿಂದ ಬರುತ್ತಿದ್ದರು.
ಆದರೆ ಇದೀಗ ಅದೆ ಅಟಲ್ ಸೇತು ಸೇತುವೆ ಲೋಕಾರ್ಪಣೆಗೊಂಡ ಕೆಲವು ದಿನಗಳಲ್ಲೇ ಮೊದಲ ಅಪಘಾತ ವರದಿಯಾಗಿದೆ. ಹೌದು, ಅತೀ ವೇಗವಾಗಿ ಮುನ್ನುಗ್ಗುತ್ತಿದ್ದ ಮಾರುತಿ ಸುಜುಕಿ ಇಗ್ನಿಸ್ ಕಾರು ಅಪಘಾತಕ್ಕೆ ಈಡಾಗಿದ್ದು ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ಈ ಲೇಖನದ ಮೂಲಕ ನೋಡಲಿದ್ದು ಇದಕ್ಕೆ ಸಂಭಂಧಪಟ್ಟ ಮೈನವಿರೇಳಿಸುವ ವಿಡಿಯೋವನ್ನು ಸಹ ನಿಮಗೆ ತೋರಿಸಲಿದ್ದೇವೆ.

ಅಪಘಾತದ ಲೈವ್ ವಿಡಿಯೋ ಕಾರಿನ ಡ್ಯಾಶ್ ಕ್ಯಾಮ್ ಒಂದರಲ್ಲಿ ರೆಕಾರ್ಡ್ ಆಗಿದ್ದು, ಅದೇ ಕಾರಿನ ಮುಂಭಾಗದಲ್ಲೇ ವೇಗವಾಗಿ ಬರುತ್ತಿದ್ದ ಇಗ್ನಿಸ್ ಕಾರು ರಸ್ತೆಯ ಬದಿಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಉರುಳಿಕೊಂಡು ಹೋಗುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋ ರೆಕಾರ್ಡ್ ಆಗಿರುವ ಕಾರಿನ ಬಲಬದಿಯಿಂದ ಮಾರುತಿ ಬ್ರೇಝಾ ಓವರ್‌ಟೇಕ್ ಮಾಡಿಕೊಂಡು ಹೋಗುತ್ತಿತ್ತು. ಎಡಗಡೆಯಿಂದ ಇಗ್ನಿಸ್ ಬಂದಿರುವುದನ್ನು ಗಮನಿಸಬಹುದು.
ವಿಡಿಯೋದಲ್ಲಿ ಕಾಣುವಂತೆ ರಸ್ತೆಯ ಬದಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಆನಂತರದಲ್ಲಿ ಮತ್ತೆ ಅದು ಯಥಾ ಸ್ಥಿತಿಗೆ ಬಂದಿರುವದನ್ನು ಕಾಣಬಹುದಾಗಿದೆ. ಇನ್ನು ಈ ಕಾರು ಎಷ್ಟು ಕಿಲೋ ಮೀಟರ್ ವೇಗವಾಗಿ ಹೋಗುತ್ತಿತ್ತು ಎಂದು ತಿಳಿದು ಬಂದಿಲ್ಲ. ಆದರೆ ಅಟಲ್ ಸೇತು ಸೇತುವೆಯಲ್ಲಿ ಕನಿಷ್ಟ ವೇಗಮಿತಿ ನೂರು ಕಿಲೋ ಮೀಟರ್ ಪ್ರತೀ ಗಂಟೆಗೆ. ಹಾಗಾಗಿ ಅಪಘಾತಗೊಂಡ ಮಾರುತಿ ಇಗ್ನಿಸ್ ಕಡಿಮೆ ಅಂದರೂ ನೂರು ಕಿಲೋಮೀಟರ್‌ಗಿಂತಲೂ ವೇಗವಾಗಿತ್ತು ಎಂಬುದು ಖಂಡಿತಾ.

2016ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಸೇತುವೆಗೆ ಶಂಕುಸ್ಥಾಪನೆ ಮಾಡಿದ್ದರು. ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ನೀಡಿರುವ ಕೊಡುಗೆ ಗೌರವಾರ್ಥ ಈ ಸೇತುವೆಗೆ ಅಟಲ್ ಸೇತು (Atal Setu) ಎಂಬ ಹೆಸರನ್ನು ಇಡಲಾಗಿದೆ. ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆ (India Longest Sea Bridge) ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇನ್ನು ಈ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಅಟಲ್ ಸೇತು), ಸೆವ್ರಿ ಹಾಗೂ ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಸ್ತುತವಿರುವ ಪ್ರಯಾಣದ ಅವಧಿಯೂ 2 ಗಂಟೆಯಿಂದ 15-20 ನಿಮಿಷಕ್ಕೆ ಇಳಿಕೆಯಾಗಲಿದೆ. ಜೊತೆಗೆ ಮಹಾರಾಷ್ಟ್ರದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗೂ (Mumbai Pune Expressway) ಕೊಂಡಿಯಾಗಿದೆ.
ಅಟಲ್ ಸೇತುವು ಮುಂಬೈನಿಂದ ಗೋವಾ ಸೇರಿದಂತೆ ಇತರೆಡೆಗೆ ಪ್ರಯಾಣಿಸುವವರಿಗೂ ಹೆಚ್ಚಿನ ಅನುಕೂಲವಾಗಲಿದೆ. ಈ ಸೇತುವೆ 21.8 ಕಿಲೋಮೀಟರ್ ಉದ್ದವಿದ್ದು, 6 ಪಥದ ರಸ್ತೆಯನ್ನು ಹೊಂದಿದೆ. ಸಮುದ್ರದ ಮೇಲೆ 16.50 ಕಿ.ಮೀ ನೆಲದ ಮೇಲೆ 5.50 ಕಿ.ಮೀ ಸೇತುವೆಯನ್ನು ನಿರ್ಮಿಸಲಾಗಿದೆ. ದಿನದಿಂದ ದಿನಕ್ಕೆ ಈ ಸೇತುವೆಗೆ ಭೇಟಿಯಾಗುವವರ ಸಂಖ್ಯೆ ಹೆಚ್ಚಾಗುತ್ತದೆ.
ಈ ಸೇತುವೆಯ ಮೇಲೆ ಅಪಘಾತವನ್ನು ತಪ್ಪಿಸಲು ಬೈಕ್, ಸ್ಕೂಟರ್, ಆಟೋ ರಿಕ್ಷಾ, ಟ್ರ್ಯಾಕ್ಟರ್‌ಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ. ಇಲ್ಲಿ ಪ್ರತಿ ದಿನ 70,000ಕ್ಕೂ ಹೆಚ್ಚು ವಾಹನಗಳು ಓಡಾಟ ನಡೆಸುವ ಸಾಧ್ಯತೆಯಿದೆ. ಒಂದೊಮ್ಮೆ ಸೇತುವೆಯಲ್ಲಿ ವಾಹನಗಳು ಕೆಟ್ಟು ನಿಂತಾಗ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾವನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications