ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದೆ. ಬಹುತೇಕ ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆ ಉತ್ತೇಜನ ನೀಡುತ್ತಿವೆ. ಈ ಮೂಲಕ ಹಲವು ದೇಶಗಳು ಪರಿಸರ ಸ್ನೇಹಿಯಾಗಿರಲು ಮುಂದಾಗುತ್ತಿವೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಇದೇ ಸಂದರ್ಭದಲ್ಲಿ ಪ್ರಸಿದ್ಧ ರಾಸಾಯನಿಕ ತಯಾರಕ ಕಂಪನಿಯಾದ ಯಾರಾ ಇಂಟರ್‌ನ್ಯಾಷನಲ್ ಎಲೆಕ್ಟ್ರಿಕ್ ಹಡಗನ್ನು ನಿರ್ಮಿಸುತ್ತಿದೆ ಎಂದು ವರದಿಯಾಗಿದೆ. ಇದು ಸರಕು ಸಾಗಣೆಯ ಹಡಗು. ಇದು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಯುಟಿಲಿಟಿ ಹಡಗು ಸಹ ಹೌದು. ಈ ಮೂಲಕ ಯಾರಾ ಕಂಪನಿಯ ಎಲೆಕ್ಟ್ರಿಕ್ ಕಾರ್ಗೋ ಹಡಗು ವಿಶ್ವದಾದ್ಯಂತವಿರುವ ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳ ಗಮನವನ್ನು ತನ್ನತ್ತ ಸೆಳೆದಿದೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ಬೈಕ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಗಳ ಸಂಚಾರವನ್ನು ನಾವು ದಿನ ನಿತ್ಯವೂ ರಸ್ತೆಯಲ್ಲಿ ಕಾಣಬಹುದು. ಆದರೆ ಇದೇ ಮೊದಲ ಬಾರಿಗೆ ಬ್ಯಾಟರಿ ಚಾಲಿತ ಹಡಗನ್ನು ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಪರಿಚಯಿಸಲಾಗಿದೆ. ವಾಯು ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಈ ಎಲೆಕ್ಟ್ರಿಕ್ ಹಡಗನ್ನು ವಿನ್ಯಾಸಗೊಳಿಸಲಾಗಿದೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಯಾರಾ ಕಂಪನಿಯು ಎಲ್ಲಾ ರಾಸಾಯನಿಕ ಉತ್ಪನ್ನಗಳನ್ನು ರಫ್ತು ಮಾಡಲು ಈ ವಿದ್ಯುತ್ ಚಾಲಿತ ಹಡಗನ್ನು ಶೀಘ್ರದಲ್ಲೇ ಬಳಸುವುದಾಗಿ ಘೋಷಿಸಿದೆ. ಇದು ಕೇವಲ ವಿದ್ಯುತ್ ಚಾಲಿತ ಹಡಗು ಮಾತ್ರವಲ್ಲ, ಸ್ವಂತವಾಗಿ (automatic) ಚಲಿಸುವ ಸಾಮರ್ಥ್ಯವಿರುವ ಸ್ವಾಯತ್ತ ಹಡಗು ಕೂಡ ಆಗಿದೆ. ಆದ್ದರಿಂದ, ಯಾರಾ ಬರ್ಕ್ಲ್ಯಾಂಡ್ ಅನ್ನು ವಿಶ್ವದ ಮೊದಲ ಸ್ವಾಯತ್ತ ಹಡಗು ಎಂದು ಪರಿಗಣಿಸಲಾಗಿದೆ. ಈ ಹಡಗು ಯಾರಾದ ಬೋರ್ಸ್ಕ್ರಾನ್‌ನಲ್ಲಿರುವ ರಾಸಾಯನಿಕ ಸ್ಥಾವರದಿಂದ 14 ಕಿ.ಮೀ ದೂರದಲ್ಲಿರುವ ಬ್ರೆವಿಕ್ ಪ್ರದೇಶಕ್ಕೆ ರಾಸಾಯನಿಕವನ್ನು ಸಾಗಿಸಲಿದೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಈ ಕಂಟೇನರ್ ಹಡಗು ಸುಮಾರು 80 ಮೀಟರ್ ಉದ್ದವಿದ್ದು, ಇದರ ಕಾರ್ಯಾಚರಣೆ ಆರಂಭವಾದರೆ ವಿಶ್ವದ ಮೊದಲ ವಿದ್ಯುತ್ ಚಾಲಿತ ಸ್ವಾಯತ್ತ ಹಡಗು ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಈ ಹಡಗನ್ನು ದಿ ವಾರ್ಡ್ ಎಂಬ ನಾರ್ವೆಯ ಕಂಪನಿಯು ಯಾರಾಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದೆ. ಕಾಂಗ್ಸ್ ಬರ್ಗ್ ಎಂಬ ಕಂಪನಿ ಅಗತ್ಯವಿರುವ ತಂತ್ರಜ್ಞಾನ ಮತ್ತು ಸಂವೇದಕಗಳನ್ನು ಒದಗಿಸಿದೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಯಾರಾ ಪ್ರಸ್ತುತ ಟ್ರಕ್‌ಗಳ ಮೂಲಕ ತನ್ನ ದೊಡ್ಡ ಪ್ರಮಾಣದ ರಾಸಾಯನಿಕಗಳನ್ನು ರಫ್ತು ಮಾಡುತ್ತಿದೆ. ಟ್ರಕ್‌ಗಳ ಬಳಕೆಯಿಂದ ಹೆಚ್ಚಿನ ಪ್ರಮಾಣದ ಇಂಗಾಲವು ಬಿಡುಗಡೆಯಾಗುವುದರ ಜೊತೆಗೆ ಗಾಳಿಯೂ ತೀವ್ರವಾಗಿ ಕಲುಷಿತಗೊಳ್ಳುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ಈ ವಿದ್ಯುತ್ ಹಡಗಿನ ಬಳಕೆಗೆ ಬದಲಾಗುತ್ತಿದೆ ಎಂದು ಯಾರಾ ತಿಳಿಸಿದೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಈ ಹಡಗಿನ ಬಳಕೆಯಿಂದ ವರ್ಷಕ್ಕೆ 1,000 ಟನ್ ಇಂಗಾಲದ ಹೊರಸೂಸುವಿಕೆಯನ್ನು ತಪ್ಪಿಸಬಹುದು ಎಂದು ಕಂಪನಿಯು ವಿಶ್ವಾಸ ವ್ಯಕ್ತಪಡಿಸಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಈ ಹಡಗು ಅಧಿಕ ಶಕ್ತಿಯ ಎಲೆಕ್ಟ್ರಿಕ್ ಕಾರಿಗಿಂತ ಸಾವಿರ ಪಟ್ಟು ಹೆಚ್ಚು ದಕ್ಷತೆಯನ್ನು ಹೊಂದಿದೆ. ಈ ಹಡಗಿನ ಬಳಕೆಯಿಂದ 40,000 ಟ್ರಕ್‌ಗಳ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ. 40 ಸಾವಿರ ಟ್ರಕ್‌ಗಳ ಬಳಕೆಯನ್ನು ಕಡಿಮೆ ಮಾಡುವುದರಿಂದ ಅವುಗಳಿಂದ ಉಂಟಾಗುವ ಮಾಲಿನ್ಯವನ್ನು ಸಹ ಕಡಿಮೆ ಮಾಡಬಹುದು.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಹಡಗು ಸ್ವಾಯತ್ತ ಸೌಲಭ್ಯವನ್ನು ಹೊಂದಿರುವುದರಿಂದ, ಮಾನವರ ಸಹಾಯವಿಲ್ಲದೆ ಕಾರ್ಯನಿರ್ವಹಿಸುತ್ತದೆ. ಸ್ಟೀರಿಂಗ್ ಸ್ವಯಂಚಾಲಿತವಾಗಿ ಜಿಪಿಎಸ್ ಮಾರ್ಗದರ್ಶನದಂತೆ ಚಲಿಸುವುದರ ಜೊತೆಗೆ ಹಡಗು ಸೂಕ್ತ ಸ್ಥಳವನ್ನು ತಲುಪುತ್ತದೆ. ಪ್ರಸ್ತುತ, ಕೆಲವು ಕಾರು ತಯಾರಕರು ಮಾತ್ರ ತಮ್ಮ ಜನಪ್ರಿಯ ಕಾರು ಮಾದರಿಗಳಲ್ಲಿ ಟನಾಟಿಸಿ ಸೌಲಭ್ಯವನ್ನು ನೀಡುತ್ತಿದ್ದಾರೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಈ ಎಲೆಕ್ಟ್ರಿಕ್ ಕಂಟೇನರ್ ಹಡಗು ಶೀಘ್ರದಲ್ಲೇ ಕೆಲಸವನ್ನು ಪ್ರಾರಂಭಿಸಲಿದೆ ಎಂದು ಯಾರಾ ಹೇಳಿಕೊಂಡಿದೆ. ಹಡಗು ವಾರಕ್ಕೆ ಎರಡು ಬಾರಿ ತನ್ನ ಪ್ರಯಾಣವನ್ನು ನಡೆಸಲಿದ್ದು, ಪ್ರಯಾಣದ ಸಮಯದಲ್ಲಿ ಆಟೋಮ್ಯಾಟಿಕ್ ಸಿಸ್ಟಮ್‌ ಮೂಲಕ ಸಮುದ್ರದಲ್ಲಿನ ಅಡೆತಡೆಗಳನ್ನು ಪತ್ತೆಹಚ್ಚಿ ದಿಕ್ಕನ್ನು ಬದಲಾಯಿಸಿಕೊಂಡು ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಹೆಚ್ಚಿನ ಶ್ರೇಣಿಯ ಸಾಮರ್ಥ್ಯವನ್ನು ಒದಗಿಸಲು ಈ ಎಲೆಕ್ಟ್ರಿಕ್ ಹಡಗಿನಲ್ಲಿ 7 ಮೆ.ವ್ಯಾ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಗರಿಷ್ಠ 13 ಕ್ನಾಟ್ ಗಳ ವೇಗವನ್ನು ತಲುಪಿಸುವ ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಮೋಟರ್‌ಗಳನ್ನು ಬೋರ್ಡ್ ನಲ್ಲಿ ನೀಡಲಾಗಿದೆ. ಒಟ್ಟಾರೆಯಾಗಿ ಈ ಎಲೆಕ್ಟ್ರಿಕ್ ಹಡಗು 103 ಕಂಟೇನರ್‌ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ದೂರದ ಪ್ರಯಾಣಕ್ಕಾಗಿ ಹಡಗಿನಲ್ಲಿ ಬಹಳ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಬಳಸಲಾಗಿದೆ. ವರದಿಗಳ ಪ್ರಕಾರ, ಬ್ಯಾಟರಿ ಪ್ಯಾಕ್ 100 ಟೆಸ್ಲಾ ಎಲೆಕ್ಟ್ರಿಕ್ ಕಾರುಗಳಿಗೆ ಸಮನಾಗಿದೆ. ಇದಲ್ಲದೆ ಈ ಬ್ಯಾಟರಿಗಳಿಗಾಗಿಯೇ 8 ಕೋಣೆಗಳನ್ನು ಹಡಗಿನಲ್ಲಿ ಮೀಸಲಿಡಲಾಗಿದೆ. ಆದ್ದರಿಂದ, ವ್ಯಾಪ್ತಿಯು ಸಹ ತುಂಬಾ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸಿದ್ಧವಾಗುತ್ತಿದೆ ಯಾರಾ ಬಿರ್ಕೆಲ್ಯಾಂಡ್ ಹೆಸರಿನ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಈ ಎಲೆಕ್ಟ್ರಿಕ್ ಹಡಗಿನ ಆಗಮನವು ಕೇವಲ ಭೂಮಾರ್ಗವನ್ನು ಮಾತ್ರವಲ್ಲದೆ ಜಲಮಾರ್ಗವನ್ನೂ ಸಹ ಎಲೆಕ್ಟ್ರಿಕ್ ಸಾರಿಗೆ ವಾಹನಗಳಿಂದ ನಿಯಂತ್ರಿಸ ಬಹುದು ಎಂಬುದನ್ನು ಸಾಬೀತು ಪಡಿಸಿದೆ. ಭೂ ಸಾರಿಗೆ, ಜಲ ಸಾರಿಗೆಯ ಜೊತೆಗೆ ಕೆಲವು ವಾಯುಯಾನ ಕಂಪನಿಗಳು ಎಲೆಕ್ಟ್ರಿಕ್ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈಗಾಗಲೇ ಕೆಲವು ವಿಮಾನಯಾನ ಕಂಪನಿಗಳು ಎಲೆಕ್ಟ್ರಿಕ್ ವಿಮಾನಗಳ ಪರೀಕ್ಷಾರ್ಥ ಹಾರಾಟವನ್ನು ಆರಂಭಿಸಿವೆ.

Most Read Articles

Kannada
English summary
First electric cargo ship developed in the name of yara birkeland
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X