ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮಾನರಾಗಿ ಹೆಜ್ಜೆ ಹಾಕುತ್ತಿದ್ದಾರೆ. ಪುರುಷರು ಭಾಗವಹಿಸುವ ಬಹುತೇಕ ಎಲ್ಲಾ ಕ್ರೀಡೆಗಳಲ್ಲೂ ಮಹಿಳೆಯರು ಭಾಗವಹಿಸುತ್ತಾರೆ.

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಆದರೆ ರ‍್ಯಾಲಿ ಸೇರಿದಂತೆ ಕೆಲವೊಂದು ಕ್ರೀಡೆಗಳಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಶ್ಮೀರ ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಕಾಶ್ಮೀರ ರಾಜ್ಯ ಸಾರಿಗೆ ಇಲಾಖೆ ಹಾಗೂ ಎನ್‌ಜಿಒ ಒಂದು ಈ ವಿಶೇಷ ಕಾರು ರ‍್ಯಾಲಿಯನ್ನು ಆಯೋಜಿಸಿದ್ದವು. ಮಹಿಳೆಯರಿಗೆ ಕಾರು ಚಾಲನೆ ಮಾಡಲು ಉತ್ತೇಜನ ನೀಡುವ ಮೊದಲ ಹಂತವಾಗಿ ಈ ರ‍್ಯಾಲಿ ನಡೆಯಿತು.

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಈ ರ‍್ಯಾಲಿಯಲ್ಲಿ ಮಹಿಳೆಯರು ಹಾಗೂ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಮಹಿಳಾ ಚಾಲಕರು ಇನ್ನೊಬ್ಬರ ಮೇಲೆ ಅವಲಂಬಿತರಾಗಿದ್ದಾರೆ ಎಂಬುದನ್ನು ಹೋಗಲಾಡಿಸಲು ಎನ್‌ಜಿಒ ಈ ರ‍್ಯಾಲಿಯನ್ನು ಆಯೋಜಿಸಿತ್ತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಮಹಿಳೆಯರು ಸರಿಯಾಗಿ ವಾಹನ ಚಾಲನೆ ಮಾಡುವುದಿಲ್ಲ. ಸ್ಟೀಯರಿಂಗ್ ಅನ್ನು ಯಾವಾಗ, ಹೇಗೆ ತಿರುಗಿಸಬೇಕೆಂದು ಅವರಿಗೆ ತಿಳಿದಿಲ್ಲವೆಂಬ ಹಲವಾರು ತಪ್ಪು ಕಲ್ಪನೆಗಳು ಜನಜನಿತವಾಗಿವೆ.

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಈ ಎಲ್ಲಾ ಕಲ್ಪನೆಗಳನ್ನು ತೊಡೆದು ಹಾಕಲು ಹಾಗೂ ಮಹಿಳೆಯರು ಕೂಡ ವಾಹನಗಳ ಚಾಲನೆಯನ್ನು ಸರಿಯಾಗಿ ಮಾಡಬಲ್ಲರು ಎಂಬುದನ್ನು ತೋರಿಸಲು ಈ ಕಾರ್ ರ‍್ಯಾಲಿ ನಡೆಯಿತು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಕಾರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಸಯ್ಯದ್ ಸಬಾ ಎಂಬುವವರು ಮಾತನಾಡಿ ಮಹಿಳೆಯರು ಉತ್ತಮ ಚಾಲಕರು ಅಲ್ಲ ಎಂಬ ಹೇಳಿಕೆಗಳನ್ನು ಮುರಿಯುವುದು ಈ ರ‍್ಯಾಲಿಯ ಉದ್ದೇಶವಾಗಿದೆ. ಈ ರ‍್ಯಾಲಿಯ ಮೂಲಕ ಮಹಿಳಾ ಚಾಲಕರಿಗೆ ಗೌರವ ನೀಡಲಾಗುತ್ತಿದೆ ಎಂದು ಹೇಳಿದರು.

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಡಾ.ಶರ್ಮಿಲ್ ಎಂಬುವವರು ಮಾತನಾಡಿ ಈ ರೀತಿಯ ರ‍್ಯಾಲಿಗಳನ್ನು ನಿಯಮಿತವಾಗಿ ನಡೆಸಬೇಕು. ಇದರಿಂದಾಗಿ ಮಹಿಳಾ ಚಾಲಕರಿಗೆ ಉತ್ತೇಜನ ನೀಡಿದಂತಾಗುತ್ತದೆ. ಇದು ಮಹಿಳೆಯರ ಸಬಲೀಕರಣಕ್ಕೂ ಕಾರಣವಾಗುತ್ತದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಚಾಲಕರಿಗಾಗಿ ರ‍್ಯಾಲಿ ನಡೆಸಲಾಗಿದೆ ಎಂದು ಹೇಳಿದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಕಾರು ರ‍್ಯಾಲಿಯ ಸಂಘಟಕರಾದ ಸೈಯದ್ ಸಿಪ್ಟನ್ ಖತ್ರಿರವರು ಮಾತನಾಡಿ, ಪುರುಷ ಚಾಲಕರಿಗಿಂತ ಮಹಿಳಾ ಚಾಲಕರಿಂದ ಸಂಭವಿಸುವ ಅಪಘಾತಗಳ ಸಂಖ್ಯೆ ಕಡಿಮೆ. ಆದ್ದರಿಂದ ಮಹಿಳಾ ಚಾಲಕರನ್ನು ಹೆಚ್ಚು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಈ ರೀತಿಯ ರ‍್ಯಾಲಿಗಳು ಮುಂಬರುವ ದಿನಗಳಲ್ಲಿ ದೇಶಾದ್ಯಂತ ಜರುಗುವ ನಿರೀಕ್ಷೆಗಳಿವೆ. ಈ ರ‍್ಯಾಲಿಯು ಮಹಿಳಾ ಚಾಲಕರ ಬಗೆಗಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕುವ ಪ್ರಯತ್ನವಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಮಹಿಳೆಯರು ಪ್ರಪಂಚದ ಹಲವು ಭಾಗಗಳಲ್ಲಿ ಭಾರೀ ವಾಹನಗಳಿಂದ ಹಿಡಿದು ವಿಮಾನಗಳವರೆಗೆ ಎಲ್ಲಾ ರೀತಿಯ ವಾಹನಗಳನ್ನು ಚಾಲನೆ ಮಾಡುತ್ತಾರೆ. ಭಾರತದಲ್ಲಿ ಮಹಿಳೆಯರು ದ್ವಿಚಕ್ರ ವಾಹನ, ಆಟೋ ಹಾಗೂ ಬಸ್ಸುಗಳ ಚಾಲನೆಯನ್ನು ಮಾಡುತ್ತಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾರು ರ‍್ಯಾಲಿ ಆಯೋಜಿಸಿದ ಎನ್‌ಜಿಒ

ಇದೇ ವೇಳೆ ಸರ್ಕಾರಗಳೂ ಸಹ ರೈಲು ಹಾಗೂ ವಿಮಾನಗಳ ಕಾರ್ಯಾಚರಣೆಗೆ ಮಹಿಳಾ ಚಾಲಕರನ್ನು ನೇಮಿಸಿ ಕೊಳ್ಳುತ್ತಿವೆ. ಈಗ ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರಿಗಾಗಿ ಕಾಶ್ಮೀರದಲ್ಲಿ ಕಾರ್ ರ‍್ಯಾಲಿ ನಡೆಸಲಾಗಿದೆ. ಇಂಗ್ಲಿಷ್ ಸುದ್ದಿ ಸಂಸ್ಥೆ ಎಎನ್‌ಐ ಈ ಬಗ್ಗೆ ವರದಿ ಮಾಡಿದೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
First ever women car rally held in Kashmir. Read in Kannada.
Story first published: Saturday, October 3, 2020, 15:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X