ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾಗುತ್ತಾರಾ ಕೈಗಳಿಲ್ಲದ ಈ ಮಹಿಳೆ?

ಈ ಜಗತ್ತಿನಲ್ಲಿರುವ ಅನೇಕ ಜನರಿಗೆ ದಿನ ನಿತ್ಯದ ಜೀವನ ಅಷ್ಟು ಸುಲಭವಲ್ಲ. ಅದಕ್ಕೆ ಕಾರಣ ಅವರಲ್ಲಿರುವ ಅಂಗವಿಕಲತೆ. ಅಂತಹವರಲ್ಲಿ ಒಬ್ಬರು 28 ವರ್ಷದ ಜಿಲ್ಲುಮೋಲ್ ಮ್ಯಾರಿಯಟ್ ಥಾಮಸ್. ಇವರಿಗೆ ಹುಟ್ಟಿನಿಂದಲೂ ಎರಡೂ ಕೈಗಳಿಲ್ಲ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾಗುತ್ತಾರಾ ಕೈಗಳಿಲ್ಲದ ಈ ಮಹಿಳೆ?

ಜಿಲ್ಲುಮೋಲ್ ರವರು, ಥಾಲಿಡೋಮೈಡ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಎರಡೂ ಕೈಗಳಿಲ್ಲ. ಆದರೆ ಈಗ ಜಿಲ್ಲುಮೋಲ್ ರವರು ತಮ್ಮ ಪ್ರಚಂಡ ವಿಶ್ವಾಸದಿಂದಾಗಿ ಸಾಧನೆ ಮಾಡಿ, ಹೊಸದಾದ ವಿಭಿನ್ನವಾದ ಗುರುತನ್ನು ಪಡೆದಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾಗುತ್ತಾರಾ ಕೈಗಳಿಲ್ಲದ ಈ ಮಹಿಳೆ?

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಳ ಪ್ರಕಾರ ಜಿಲ್ಲುಮೋಲ್ ರವರು ಕೈಗಳಿಲ್ಲದಿದ್ದರೂ ತಮ್ಮ ಕಾರನ್ನು ಚಾಲನೆ ಮಾಡುತ್ತಾರೆ. ಅವರು ತಮ್ಮ ಕಾಲುಗಳಿಂದಲೇ ಕಾರನ್ನು ಚಾಲನೆ ಮಾಡುತ್ತಾರೆ. ಜಿಲ್ಲುಮೋಲ್ ರವರು ಕೇರಳದ ತೊಡುಪುಳ ಬಳಿಯ ಕರಿಮಾನೂರು ಗ್ರಾಮಕ್ಕೆ ಸೇರಿದವರು.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾಗುತ್ತಾರಾ ಕೈಗಳಿಲ್ಲದ ಈ ಮಹಿಳೆ?

ಜಿಲ್ಲುಮೋಲ್ ರವರು ಬಾಲ್ಯದಿಂದಲೂ, ತಮ್ಮ ಕಾರನ್ನು ಕಾಲುಗಳಿಂದಲೇ ಚಾಲನೆ ಮಾಡುತ್ತಾರೆ. ತಮ್ಮ ಸುತ್ತ ಮುತ್ತಲ ಪ್ರದೇಶದಲ್ಲಿ ಸುತ್ತಾಡುವ ಅವರು ಕಾರನ್ನು ಸುಲಭವಾಗಿ ನಿಯಂತ್ರಿಸುತ್ತಾರೆ. ಜಿಲ್ಲುಮೋಲ್ ರವರು 2014ರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆರ್‌ಟಿಒನಲ್ಲಿ ಅರ್ಜಿ ಸಲ್ಲಿಸಿದ್ದರು.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾಗುತ್ತಾರಾ ಕೈಗಳಿಲ್ಲದ ಈ ಮಹಿಳೆ?

ಆರ್‌ಟಿಒದಲ್ಲಿ ಅರ್ಜಿ ಸಲ್ಲಿಸಿದ ಅವರಿಗೆ, ಭಾರತದಲ್ಲಿ ಕೈಗಳಿಲ್ಲದಿದ್ದರೂ ಡ್ರೈವಿಂಗ್ ಲೈಸೆನ್ಸ್ ಯಾರಾದರೂ ಪಡೆದಿದ್ದಾರೆಯೇ ಎಂಬುದನ್ನು ತಿಳಿಸುವಂತೆ ಕೇಳಲಾಯಿತು.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾಗುತ್ತಾರಾ ಕೈಗಳಿಲ್ಲದ ಈ ಮಹಿಳೆ?

ಜಿಲ್ಲುಮೋಲ್ ಇದಕ್ಕಾಗಿ ಹುಡುಕಾಟವನ್ನು ಆರಂಭಿಸಿದರು. ಕೊನೆಗೂ ಕೈಗಳಿಲ್ಲದಿದ್ದರೂ ಡ್ರೈವಿಂಗ್ ಲೈಸೆನ್ಸ್ ಪಡೆದ ವ್ಯಕ್ತಿಯನ್ನು ಪತ್ತೆಹಚ್ಚಿದರು. ಕೈಗಳಿಲ್ಲದಿದ್ದರೂ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದ ವ್ಯಕ್ತಿಯ ಹೆಸರು ವಿಕ್ರಮ್ ಅಗ್ನಿಹೋತ್ರಿ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾಗುತ್ತಾರಾ ಕೈಗಳಿಲ್ಲದ ಈ ಮಹಿಳೆ?

ಇದಾದ ನಂತರವೂ ಅವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಲಾಯಿತು. ಈ ಕಾರಣಕ್ಕೆ ಅವರು 2018ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ನಂತರ ಅವರಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಿತು ಸದ್ಯಕ್ಕೆ ಅವರಿಗೆ ಲರ್ನರ್ ಲೈಸೆನ್ಸ್ ನೀಡಲಾಗಿದೆ.

ಈಗ ಅಲ್ಲಿನ ರಾಜ್ಯ ಸರ್ಕಾರವು ಜಿಲ್ಲುಮೋಲ್‌ರವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುತ್ತದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಲೈಸೆನ್ಸ್ ಟೆಸ್ಟ್ ವೇಳೆ ಕೆಲವು ಅನುಮಾನಗಳು ಉಂಟಾದ ಕಾರಣಕ್ಕೆ ಲೈಸೆನ್ಸ್ ನೀಡಲು ನಿರಾಕರಿಸಲಾಗಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾಗುತ್ತಾರಾ ಕೈಗಳಿಲ್ಲದ ಈ ಮಹಿಳೆ?

ಈ ಬಗ್ಗೆ ಮಾತನಾಡಿರುವ ಅವರು ದೌರ್ಬಲ್ಯ ಹೊಂದಿರುವ ಮನುಷ್ಯನು, ತನ್ನ ದೌರ್ಬಲ್ಯವನ್ನು ದೂಷಿಸಿ ಅರ್ಧದಲ್ಲೇ ಕೈಬಿಡುತ್ತಾನೆ. ಇನ್ನೂ ಕೆಲವು ಮನುಷ್ಯರು ದೌರ್ಬಲ್ಯಗಳ ನಡುವೆಯೂ ಯಶಸ್ವಿಯಾಗಲು ಪ್ರಯತ್ನಿಸುತ್ತಾರೆ. ನಾನು ಎರಡನೆಯ ವಿಧಕ್ಕೆ ಸೇರಿದವಳು ಎಂದು ಹೇಳಿದ್ದಾರೆ.

Most Read Articles

Kannada
English summary
First Indian lady without hands to receive driving licence. Read in Kannada.
Story first published: Tuesday, April 7, 2020, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more