ಹೈದರಾಬಾದ್‌ನಲ್ಲಿ ಐಟಿ ಸೆಂಟರ್ ಸ್ಥಾಪನೆಗೆ ಅಮೆರಿಕನ್ ಕಂಪನಿಯನ್ನು ಕರೆತಂದ ತೆಲಂಗಾಣ ಸಚಿವ
ತೆಲಂಗಾಣ ರಾಜ್ಯದ ಐಟಿ ಸಚಿವ ಸಚಿವ ಕೆ.ಟಿ.ರಾಮರಾವ್ (ಕೆಟಿಆರ್) ಅವರು ತಮ್ಮ ರಾಜ್ಯಕ್ಕೆ ಮತ್ತೊಂದು ಅಮೇರಿಕನ್ ಕಂಪನಿಯನ್ನು ಕರೆತಂದಿದ್ದಾರೆ. ಅಮೇರಿಕಾದ ಪ್ರಸಿದ್ಧ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ಫಿಸ್ಕರ್ ಐಎನ್‌ಸಿ (ಫಿಸ್ಕರ್ ಇಂಕ್) ಈಗ ಭಾರತದಲ್ಲಿ ತಮ್ಮ ಮೊದಲ ಐಟಿ ಡೆವಲಪ್‌ಮೆಂಟ್ ಸೆಂಟರ್ ಅನ್ನು ಸ್ಥಾಪಿಸಲು ಹೈದರಾಬಾದ್ ನಗರವನ್ನು ಆಯ್ಕೆ ಮಾಡಿಕೊಂಡಿದೆ.

ತೆಲಂಗಾಣ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಕೆಟಿ ರಾಮಾರಾವ್ ಅವರು ಅಮೇರಿಕಾದ ಫಿಸ್ಕರ್ ಇನ್‌ಕಾರ್ಪೊರೇಷನ್‌ನ ಮುಖ್ಯ ಎಗ್ಜಿಕ್ಯೂಟಿವ್ ಹೆನ್ರಿಕ್ ಫಿಸ್ಕರ್, ಮುಖ್ಯ ಫೈನಾನ್ಶಿಯಲ್ ಅಧಿಕಾರಿ ಗೀತಾ ಫಿಸ್ಕರ್, ಮ್ಯಾನೇಜ್ಮೆಂಟ್ ತಂಡದೊಂದಿಗೆ ಸಭೆ ನಡೆಸಿ ಈ ತೀರ್ಮಾನವನ್ನು ಪ್ರಕಟಿಸಲಾಗಿದೆ. ಈ ಮೂಲಕ ಆರಂಭಿಕ ಹಂತದಲ್ಲಿ, ಈ ಕಂಪನಿಯಲ್ಲಿ 300 ಮಂದಿ ಐಟಿ ತಜ್ಞರಿಗೆ ಉದ್ಯೋಗ ದೊರೆಯಲಿದೆ. ಫಿಸ್ಕರ್ ಐಎನ್‌ಸಿಗೆ ಲಾಸ್ ಏಂಜೆಲ್ಸ್‌ನಲ್ಲಿ ಮುಖ್ಯ ಕಚೇರಿಯಿದೆ. ಈ ಬ್ರಾಂಡ್ ಭಾರತದಲ್ಲಿ ತಮ್ಮ ಐಟಿ ಸೆಂಟರ್ ಅನ್ನು ಸ್ಥಾಪಿಸಲು ತೋರುತ್ತಿರುವ ಉತ್ಸಾಹ ನೋಡಿದರೆ ಎರಡು-ಮೂರು ವರ್ಷಗಳಲ್ಲಿ ಈ ಬ್ರಾಂಡ್ ತನ್ನ ಎಲೆಕ್ಟ್ರಿಕ್ ಕಾರ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಪ್ರಬಲವಾಗಿ ನೆಲೆಯೂರುವಂತೆ ಕಾಣುತ್ತಿದೆ.

ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ತೆಲಂಗಾಣ ರಾಜ್ಯ ಗಮ್ಯಸ್ಥಾನವಾಗಲಿದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಕಾರ್ಯಗಳನ್ನು ತಮ್ಮ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಫಿಸ್ಕರ್ ಪ್ರತಿನಿಧಿಗಳಿಗೆ ಸಚಿವ ಕೆಟಿಆರ್ ಭರವಸೆ ನೀಡಿದ್ದಾರೆ. ಭಾರತದಲ್ಲಿ ಫಿಸ್ಕರ್ ತಮ್ಮ ಐಟಿ ಡೆವಲಪ್‌ಮೆಂಟ್ ಸೆಂಟರ್ ಅನ್ನು ಸ್ಥಾಪಿಸಲು ಹೈದರಾಬಾದ್ ನಗರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕೆಟಿಆರ್ ಈ ಅಮೇರಿಕನ್ ಕಂಪನಿಗೆ ಕೃತಜ್ಞತೆ ತಿಳಿಸಿದ್ದಾರೆ. ಈ ಸಭೆಯಲ್ಲಿ ತೆಲಂಗಾಣ ರಾಜ್ಯ ಎಲೆಕ್ಟ್ರಿಕ್ ವಾಹನಗಳ ವಿಷಯದಲ್ಲಿ ಅನುಸರಿಸುತ್ತಿರುವ ನೀತಿ (ಈವಿ ಪಾಲಸಿ) ಬಗ್ಗೆ ಕೆಟಿಆರ್ ವಿವರಿಸಿದರು.

ಸ್ಥಳೀಯ ಈವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಹಕಾರದ ಇತರ ಮಾರ್ಗಗಳನ್ನು ಅನ್ವೇಷಿಸಲು ಫಿಸ್ಕರ್ ತಂಡವು ಶೀಘ್ರದಲ್ಲೇ ಹೈದರಾಬಾದ್‌ಗೆ ಭೇಟಿ ನೀಡಲಿದೆ. ಈ ಸಂಧರ್ಭದಲ್ಲಿ ಕೆಟಿಆರ್ ತಮ್ಮ ರಾಜ್ಯ ಸರ್ಕಾರ ತಂದಿರುವ ಈವಿ ಪಾಲಸಿ ಬಗ್ಗೆ ಚರ್ಚಿಸಿದರು. ಹೈದರಾಬಾದ್ ಕೇಂದ್ರವಾಗಿ ಅನೇಕ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ, ಜೆಡ್ಎಫ್, ಹ್ಯುಂಡಾಯ್ ಮುಂತಾದ ಕೆಲ ಕಂಪನಿಗಳು ಹೈದರಾಬಾದ್ ಕೇಂದ್ರವಾಗಿ ತಮ್ಮ ಟೆಕ್ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಕೆಟಿಆರ್ ತಿಳಿಸಿದರು. ದೇಶದ ಬೆಳವಣಿಗೆಯಲ್ಲಿ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ರಂಗವನ್ನು ತೆಲಂಗಾಣ ಸರ್ಕಾರವು ಅತ್ಯಂತ ಆದ್ಯತೆಯ ರಂಗವಾಗಿ ಗುರುತಿಸಿದೆ ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನ ತಯಾರಿಕಾ ಉದ್ಯಮಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ಒದಗಿಸಲಾಗುವುದು, ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದ ವಿನ್ಯಾಸ, ರೀಸರ್ಚ್ ಮತ್ತು ಡೆವಲಪ್‌ಮೆಂಟ್‌ಗೆ ಹೈದರಾಬಾದ್‌ನಲ್ಲಿ ಅದ್ಭುತ ಅವಕಾಶಗಳಿವೆ. ಇದಕ್ಕಾಗಿ ಮೊಬಿಲಿಟಿ ಕ್ಲಾಸ್ಟರ್ ಅನ್ನು ಕೂಡ ಶೀಘ್ರದಲ್ಲೇ ಸ್ಥಾಪಿಸಲಿದ್ದೇವೆ, ಇದರಲ್ಲಿ ಫಿಸ್ಕರ್ ಕಂಪನಿ ಕೂಡ ಪಾಲುದಾರರಾಗಬೇಕು ಎಂದು ಕೆಟಿಆರ್ ಕೋರಿದರು.

ಎಲೆಕ್ಟ್ರಿಕ್ ವಾಹನಗಳ ಪಾಲಸಿ ಬಗ್ಗೆ ಕೆಟಿಆರ್ ವಿವರಿಸಿದ ಅಂಶಗಳು, ಆದ್ಯತೆಗಳ ಮೇಲೆ ಫಿಸ್ಕರ್ ಸಂಸ್ಥೆಯ ಪ್ರತಿನಿಧಿಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಸರ್ಕಾರ ಸ್ಥಾಪಿಸಲಿರುವ ಮೊಬಿಲಿಟಿ ಸಂಸ್ಥೆಯಲ್ಲಿ ತಾವೂ ಒಂದಾಗುವುದಾಗಿ ಫಿಸ್ಕರ್ ಕಂಪನಿ ತಿಳಿಸಿದೆ. ಈ ಸಭೆಯಲ್ಲಿ ರಾಜ್ಯ ಕೈಗಾರಿಕಾ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರಟರಿ ಜಯೇಶ್ ರಂಜನ್, ಮುಖ್ಯ ರಿಲೇಷನ್ಸ್ ಅಧಿಕಾರಿ ಅಮರಂತ್ ರೆಡ್ಡಿ ಆತ್ಮಕೂರಿ, ಎಲೆಕ್ಟ್ರಾನಿಕ್ಸ್ ನಿರ್ದೇಶಕ ಸುಜಯ್ ಕರಂಪುರಿ ಭಾಗವಹಿಸಿದ್ದರು.

ತಮ್ಮ ಐಟಿ,ಡಿಜಿಟಲ್ ಡೆವಲಪ್‌ಮೆಂಟ್ ಸೆಂಟರ್ ಅನ್ನು ಸ್ಥಾಪಿಸಲು ವಿಶ್ವದ ಅನೇಕ ರಾಷ್ಟ್ರಗಳು ಮತ್ತು ಭಾರತದಲ್ಲಿನ ಇತರ ರಾಜ್ಯಗಳನ್ನು ಸಹ ನಾವು ಪರಿಶೀಲಿಸಿದ್ದೇವೆ, ಆದಾಗ್ಯೂ, ಭಾರತದಲ್ಲಿನ ಕೈಗಾರಿಕಾ ಮತ್ತು ಆ ಸರ್ಕಾರವು ಅನುಸರಿಸುತ್ತಿರುವ ಟ್ರಾನ್‌ಸಿಟ್ ನೀತಿಗಳು ತಮ್ಮನ್ನು ಬಹಳ ಆಕರ್ಷಿಸಿವೆ, ಹಾಗಾಗಿ ಹೈದರಾಬಾದಿನಲ್ಲಿ ಐಟಿ ಸೆಂಟರ್ ಅನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಫಿಸ್ಕರ್ ಸಂಸ್ಥೆಯ SIO ಹೆನ್ರೀಕ್ ಫಿಶ್ಕರ್ ಹೇಳಿದರು. ರಾಜ್ಯದಲ್ಲಿ ಈ ಡೆವಲಪ್‌ಮೆಂಟ್ ಸೆಂಟರ್ ಸ್ಥಾಪನೆಯೊಂದಿಗೆ ಮೊಬೈಲ್ ಮತ್ತು ಸಾಫ್ಟ್‌ವೇರ್ ರಂಗಗಳಿಗೆ ಸೇರಿದ ಸುಮಾರು 300 ಮಂದಿ ತಂತ್ರಜ್ಞರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಭವಿಷ್ಯದಲ್ಲಿ ಈ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚು ವಿಸ್ತರಿಸಿ ಉದ್ಯೋಗ ಅವಕಾಶಗಳನ್ನು ನೀಡುವುದಾಗಿ ಅವರು ಹೇಳಿದರು. ಈ ಸಂದರ್ಭದಲ್ಲಿ ತಮ್ಮ ಸರ್ಚ್ ಎಂಜಿನಿಯರಿಂಗ್ ಚಟುವಟಿಕೆಗಳಿಗೆ ಸಂಬಂಧಿಸಿದ ವಿವರಗಳನ್ನು ಕಂಪನಿ ಪ್ರತಿನಿಧಿ ತಂಡ ಕೆಟಿಆರ್‌ಗೆ ತಿಳಿಸಿದರು.

ಫಿಶ್ಕರ್ ಕಂಪನಿ ಈಗ ಓಷನ್ (ಫಿಸ್ಕರ್ ಓಷನ್) ಎಂಬ ಓಲೆಕ್ಟ್ರಿಕ್ ಎಸ್‌ಯುವಿಯನ್ನು ತಯಾರಿಸುತ್ತಿದೆ. ಇದು ಈ ಪಟ್ಟಿಯ ಟೆಸ್ಲಾ ಕಾರ್‌ಗಳೊಂದಿಗೆ ಸ್ಪರ್ಧಿಸಲಿದೆ. ಈ ವರ್ಷದ ಕೊನೆಯಯಲ್ಲಿ ಈ ಮಾದರಿಯ ಕಾರುಗಳ ಮಾರಾಟ, ಡೆಲಿವರಿಗಳು ಪ್ರಾರಂಭವಾಗಲಿವೆ. ಫಿಸ್ಕರ್ ಓಷನ್ ಮೂರು ಟ್ರಿಮ್‌ಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಮೊದಲನೆಯದು ಓಷನ್ ಸ್ಪೋರ್ಟ್ ಆಗಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.37,499 ಡಾಲರ್ನಿಂದ (ಸುಮಾರು ರೂ.28.59 ಲಕ್ಷ) ಪ್ರಾರಂಭವಾಗಲಿದೆ. ಇದು ಬೇಸ್ ವೇರಿಯಂಟ್ ಆಗಿದ್ದು ಗರಿಷ್ಠ 440 ರೇಂಜ್ ಅನ್ನು ನೀಡುತ್ತದೆ.

ಫಿಸ್ಕರ್ ಓಷನ್ ಸ್ಪೋರ್ಟ್ 275HP (205kW) ಶಕ್ತಿ ಜನರೇಟ್ ಮಾಡುವ ಸಿಂಗಲ್ ಮೋಟಾರ್ (ಫ್ರಂಟ್ ವೀಲ್ ಡ್ರೈವ್) ಡ್ರೈವ್‌ಟ್ರೈನ್ ಮತ್ತು ಕೇವಲ 6.9 ಸೆಕಂಡ್‌ಗಳಲ್ಲಿಯೇ 100ಕಿ.ಮೀ ವೇಗವನ್ನು ತಲುಪುತ್ತದೆ. ಇನ್ನು ಎರಡನೇ ಟ್ರಿಮ್ ವಿಷಯಕ್ಕೆ ಬಂದರೆ, ಓಷನ್ ಅಲ್ಟ್ರಾ ಇದರ ಮಾರುಕಟ್ಟೆ ಬೆಲೆ 49,999 ಡಾಲರ್ (ಸುಮಾರು ರೂ.38.11 ಲಕ್ಷ)ಇರುತ್ತದೆ. ಇದರಲ್ಲಿ 540HP (400kW) ಪವರ್ ಅನ್ನು ಉತ್ಪಾದಿಸುವ ಡ್ಯುಯಲ್ ಮೋಟಾರ್ (ಆಲ್ ವೀಲ್ ಡ್ರೈವ್) ಡ್ರೈವ್ ಟ್ರೈನ್ ಇರುತ್ತದೆ. ಇದು ಪೂರ್ಣ ಚಾರ್ಜ್ 610 ಕಿಮೀ ರಂಜ್ ಅನ್ನು ಒದಗಿಸುತ್ತದೆ. ಈ ಕಾರು ಕೇವಲ 3.9 ಸೆಕೆಂಡುಗಳಲ್ಲಿಯೇ ಗಂಟೆಗೆ 100 ಕಿಮೀ ವೇಗವನ್ನು ತಲುಪಲಿದೆ.

ಇನ್ನು ಮೂರನೇ ಟ್ರಿಮ್ ಆದ ಓಷನ್ ಎಕ್ಸ್‌ಟ್ರೀಮ್ ವಿಷಯಕ್ಕೆ ಬಂದರೆ, ಇದರ ಬೆಲೆ 68,999 ಡಾಲರ್ ಇದೆ. ಇದು ಪೂರ್ಣ ಚಾರ್ಜ್ಗೆ 630 ಕಿ.ಮೀ ಮೈಲೇಜ್ ನೀಡಲಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 550HP (410kW) ಶಕ್ತಿ ಜನರೇಟ್ ಮಾಡುವ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ (ಆಲ್ ವೀಲ್ ಡ್ರೈವ್) ಡ್ರೈವ್‌ಟ್ರೈನ್ ಇದೆ. ಈ ಕಾರು ಕೇವಲ 3.6 ಸೆಕಂಡ್‌ಗಳಲ್ಲಿಯೇ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಓಷನ್ ಸ್ಪೋರ್ಟ್ ಟ್ರಿಮ್‌ನಲ್ಲಿ ಕಂಪನಿ ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿಗಳನ್ನು ಬಳಸುತ್ತಿದ್ದು, ಇತರ ಟ್ರಿಮ್‌ಗಳಲ್ಲಿ ನಿಕೆಲ್ ಮ್ಯಾಂಗನೀಸ್ ಕೋಬಾಲ್ಟ್ (NMC) ಬ್ಯಾಟರಿಗಳನ್ನು ಬಳಸುತ್ತಿದೆ.


Click it and Unblock the Notifications








