ನಿಮಗೆ ಗೊತ್ತಿರಲಿ.. ಪ್ರಪಂಚದ ಈ ದೇಶಗಳಲ್ಲಿ ವಿಮಾನ ನಿಲ್ದಾಣವೇ ಇಲ್ಲ

ವಿಶ್ವದಾದ್ಯಂತ ಯಾವುದೇ ದೇಶಗಳ ಅಭಿವೃದ್ಧಿಗೆ ಏರ್ಪೋರ್ಟ್ ನಿರ್ಣಾಯಕ ಪಾತ್ರವಹಿಸುತ್ತವೆ. ಸಾರಿಗೆ ಮೂಲಸೌಕರ್ಯ ಉತ್ತಮವಾಗಿದ್ದರೆ, ರಾಷ್ಟ್ರಗಳು ವೇಗವಾಗಿ ಪ್ರಗತಿ ಕಾಣುತ್ತವೆ. ಆ ನಿಟ್ಟಿನಲ್ಲಿ ಭಾರತ ಎರಡನೇ ಹಂತದ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುತ್ತಿದೆ. ಆದರೆ, ಒಂದೇ ಒಂದು ಏರ್ಪೋರ್ಟ್ ಇಲ್ಲದ ದೇಶಗಳು ಪ್ರಪಂಚದಲ್ಲಿವೆ.

ದಕ್ಷಿಣ ಯುರೋಪ್ ರಾಷ್ಟ್ರವಾಗುವ ಅಂಡೋರಾ, ಪಿರನೀಸ್ ಪರ್ವತಶ್ರೇಣಿಯ ಪೂರ್ವ ಭಾಗದಲ್ಲಿದೆ. ಸ್ಪೇನ್ ಹಾಗೂ ಫ್ರಾನ್ಸ್ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಅಂಡೋರಾ ಪುಟ್ಟ ದೇಶವಾಗಿದ್ದು, 2021 ಮಾಹಿತಿ ಪ್ರಕಾರ, 79 ಸಾವಿರ ಜನರು ವಾಸಿಸುತ್ತಿದ್ದಾರೆ. ಈ ದೇಶದಲ್ಲಿ ಒಂದೇ ಒಂದು ವಿಮಾನ ನಿಲ್ದಾಣವಿಲ್ಲ. ಇಲ್ಲಿನ ಜನರು ವಿದೇಶಗಳಿಗೆ ಪ್ರಯಾಣ ಮಾಡಬೇಕಾದರೆ, ಫ್ರಾನ್ಸ್ ಅಥವಾ ಸ್ಪೇನ್ ದೇಶದ ಏರ್ಪೋರ್ಟ್ ಅನ್ನು ಅವಲಂಬಿಸಬೇಕು.

ನಿಮಗೆ ಗೊತ್ತಿರಲಿ.. ಪ್ರಪಂಚದ ಈ ದೇಶಗಳಲ್ಲಿ ವಿಮಾನ ನಿಲ್ದಾಣವೇ ಇಲ್ಲ

ಒಳ್ಳೆಯ ಪ್ರವಾಸಿ ತಾಣಗಳು ಹಾಗೂ ಸುಂದರ ಭೂ ಭಾಗವನ್ನು ಹೊಂದಿರುವ ರಾಷ್ಟ್ರ ಲಿಚ್ಟೆನ್‌ಸ್ಟೈನ್. ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಜರ್ಮನ್ ಭಾಷಿಕರೇ ಇರುವ ಈ ಲಿಚ್ಟೆನ್‌ಸ್ಟೈನ್ ಪ್ರಪಂಚದ ಆರನೇ ಅತಿ ಚಿಕ್ಕ ರಾಷ್ಟ್ರವಾಗಿದ್ದು, 39,039 (2021) ಜನರಿದ್ದಾರೆ. ಯಾವುದೇ ಏರ್ಪೋರ್ಟ್ ಇಲ್ಲದ ಕಾರಣ, ಇಲ್ಲಿನ ನಿವಾಸಿಗಳು, ವಿಮಾನದಲ್ಲಿ ಪ್ರಯಾಣಿಸಬೇಕಾದರೆ ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಿಗೆ ತೆರಳಬೇಕು.

ಮೊನಾಕೊ ಜಗತ್ತಿನಲ್ಲಿ ಅತ್ಯಧಿಕ ಜನಸಾಂದ್ರತೆಯುಳ್ಳ ದೇಶವಾಗಿದೆ. ಜೊತೆಗೆ 2021ರ ಮಾಹಿತಿ ಪ್ರಕಾರ, ಇಲ್ಲಿನ ಜನಸಂಖ್ಯೆ ಕೇವಲ 36,686. ಇದು ಅದ್ಬುತ ಪ್ರವಾಸಿ ತಾಣವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ದೇಶದ ಜನರ ಮುಖ್ಯ ಭಾಷೆ ಫ್ರೆಂಚ್. ಮೊನಾಕೊದಲ್ಲಿ ವಿಮಾನ ನಿಲ್ದಾಣವಿಲ್ಲ. ಈ ಕಾರಣಕ್ಕೆ ಸ್ಥಳೀಯರು ಸೇರಿದಂತೆ ವಿದೇಶಿಗರು ಫ್ರಾನ್ಸ್ ದೇಶದ ಏರ್ಪೋರ್ಟ್ ಅನ್ನು ಅವಲಂಬಿಸಬೇಕು.

ನಿಮಗೆ ಗೊತ್ತಿರಲಿ.. ಪ್ರಪಂಚದ ಈ ದೇಶಗಳಲ್ಲಿ ವಿಮಾನ ನಿಲ್ದಾಣವೇ ಇಲ್ಲ

ಸಾನ್ ಮರಿನೊ ವಿಶ್ವದ ಅತ್ಯಂತ ಪುಟ್ಟ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ದೇಶ ಪ್ರಪಂಚದ ಅತಿ ಪುರಾತನ ಗಣರಾಜ್ಯವೆಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, 61 ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಸಾನ್ ಮರಿನೊದಲ್ಲಿ ಸುಮಾರು 28 ಸಾವಿರ ಜನರ ವಾಸಿಸುತ್ತಾರೆ. ಬಹುತೇಕ ಇಟಲಿ ದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಇಲ್ಲಿಯು ವಿಮಾನ ನಿಲ್ದಾಣವಿಲ್ಲ. ಸಾನ್ ಮರಿನೊ ನಿವಾಸಿಗಳಿಗೆ ಸಮೀಪದ ಏರ್ಪೋರ್ಟ್ ಅಂದರೆ, ಇಟಲಿಯ ರಿಮಿನಿ.

ವ್ಯಾಟಿಕನ್ ಸಿಟಿ ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳವಾಗಿದ್ದು, ಇಲ್ಲಿಯೇ ಕ್ರಿಶ್ಚಿಯನ್ನರ ಧರ್ಮಗುರು ಪೋಪ್ ಇರುತ್ತಾರೆ. ಇಟಲಿಯ ರೋಮ್ ನಗರದ ಮಧ್ಯಭಾಗದಲ್ಲಿರುವ ವ್ಯಾಟಿಕನ್ ಸಿಟಿ ಸ್ವತಂತ್ರ ದೇಶ. 2019ರ ಮಾಹಿತಿ ಪ್ರಕಾರ, ಈ ನಗರದ ಜನಸಂಖ್ಯೆ 825. ಇಲ್ಲಿ ಸಹ ಯಾವುದೇ ವಿಮಾನ ನಿಲ್ದಾಣವಿಲ್ಲ. ಪ್ರವಾಸಿ ತಾಣವಾಗಿರುವ ವ್ಯಾಟಿಕನ್ ಸಿಟಿಗೆ ಸಮೀಪದ ಏರ್ಪೋಟ್ ರೋಮ್ ನಗರದಲ್ಲಿದೆ.

ನಿಮಗೆ ಗೊತ್ತಿರಲಿ.. ಪ್ರಪಂಚದ ಈ ದೇಶಗಳಲ್ಲಿ ವಿಮಾನ ನಿಲ್ದಾಣವೇ ಇಲ್ಲ

ವಿಶ್ವದಲ್ಲಿ 195ಕ್ಕೂ ಹೆಚ್ಚು ದೇಶಗಳಿದ್ದು, ಬಹುತೇಕ ಎಲ್ಲ ದೇಶಗಳು ಏರ್ಪೋರ್ಟ್ ಹೊಂದಿವೆ. ಈ ಪುಟ್ಟ ರಾಷ್ಟ್ರಗಳಲ್ಲಿ ಮಾತ್ರ ವಿಮಾನ ನಿಲ್ದಾಣಗಳಿಲ್ಲ. ಆದರೆ, ಈ ದೇಶಗಳು ಹಿಂದುಳಿದಿವೆ ಅಂದುಕೊಳ್ಳುವುದು ತಪ್ಪು. ಇವೆಲ್ಲ ಮುಂದುವರಿದ ರಾಷ್ಟ್ರಗಳಾಗಿದ್ದು, ಪ್ರವಾಸೋದ್ಯಮ ಕ್ಷೇತ್ರದಿಂದಲೇ ವಿಶ್ವದಾದ್ಯಂತ ಖ್ಯಾತಿಗಳಿಸಿವೆ. ಈ ದೇಶಗಳಲ್ಲಿ ಸ್ಥಳಾವಕಾಶ ಸಮಸ್ಯೆ ಅಥವಾ ಪ್ರಾಕೃತಿಕ ಸೌಂದರ್ಯಕ್ಕೆ ಚ್ಯುತಿ ಬರಬಾರದು ಎಂಬ ಕಾರಣಕ್ಕೆ ವಿಮಾನ ನಿಲ್ದಾಣ ನಿರ್ಮಾಣ ಮಾಡದೇ ಇರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Wednesday, June 14, 2023, 10:17 [IST]
English summary
Five small countries without airport details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+