Shivamogga: ಬೆಂಗಳೂರು, ತಿರುಪತಿ ಸೇರಿ ಈ ನಗರಗಳಿಗೆ ವಿಮಾನದಲ್ಲೇ ಹೋಗಬಹುದು.. ಟಿಕೆಟ್ ದರವು ಕಮ್ಮಿ!

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ (Shivamogga)ದಿಂದ ಬೆಂಗಳೂರು (Bengaluru), ಹೈದರಾಬಾದ್ (Hyderabad), ತಿರುಪತಿ (Tirupati) ಮತ್ತು ಗೋವಾ (Goa)ಕ್ಕೆ ನೇರ ವಿಮಾನ ಸೇವೆಯಿದೆ. ಈ ಮಾರ್ಗದಲ್ಲಿ ಕಾರ್ಯಚರಣೆ ನಡೆಸುವ ವಿಮಾನಗಳ ವೇಳಾಪಟ್ಟಿ (Time table) ಹಾಗೂ ಟಿಕೆಟ್ ದರ (Ticket fare)ದ ಬಗ್ಗೆ ಇಲ್ಲಿ ವಿವರಿಸಿದ್ದೇವೆ.

ಬೆಂಗಳೂರು - ಶಿವಮೊಗ್ಗ ನಡುವೆ ಇಂಡಿಗೋ (IndiGo) ಸಂಸ್ಥೆ ವಿಮಾನ ಓಡಾಟ ನಡೆಸುತ್ತಿದೆ. ಬೆಂಗಳೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಡುವ ವಿಮಾನ, 2.20ಕ್ಕೆ ಶಿವಮೊಗ್ಗ ತಲುಪುತ್ತದೆ. ಪ್ರಯಾಣದ ಅವಧಿ 1 ಗಂಟೆ 15 ನಿಮಿಷವಿದೆ. ಶಿವಮೊಗ್ಗದಿಂದ ಮಧ್ಯಾಹ್ನ 2.20ಕ್ಕೆ ಸಂಚಾರ ಆರಂಭಿಸಲಿದ್ದು, 3.50ಕ್ಕೆ ಬೆಂಗಳೂರಿಗೆ ಬರುತ್ತದೆ. ಟಿಕೆಟ್ ದರ ರೂ.2,857 ಇದೆ.

Shivamogga: ಬೆಂಗಳೂರು, ತಿರುಪತಿ ಸೇರಿ ಈ ನಗರಗಳಿಗೆ ವಿಮಾನದಲ್ಲೇ ಹೋಬಹುದು.. ಟಿಕೆಟ್ ದರವು ಕಮ್ಮಿ!

ಶಿವಮೊಗ್ಗ - ತಿರುಪತಿ ನಡುವೆ ಸ್ಟಾರ್ ಏರ್ (Star Air) ವಿಮಾನ ಕಾರ್ಯಾಚರಣೆ ನಡೆಸುತ್ತಿದೆ. ಬೆಳಗ್ಗೆ 11ಕ್ಕೆ ಶಿವಮೊಗ್ಗದಿಂದ ಸಂಚಾರ ಆರಂಭಿಸುವ ವಿಮಾನ, ಮಧ್ಯಾಹ್ನ 12ಕ್ಕೆ ತಿರುಪತಿ ತಲುಪುತ್ತದೆ. ಪ್ರಯಾಣದ ಅವಧಿ ಕೇವಲ 1 ಗಂಟೆಯಿದೆ. ಅಲ್ಲಿಂದ ಮಧ್ಯಾಹ್ನ 12.25ಕ್ಕೆ ಹೊರಡಲಿದ್ದು, 1.30ಕ್ಕೆ ಶಿವಮೊಗ್ಗಕ್ಕೆ ಬರಲಿದೆ. ಟಿಕೆಟ್‌ವೊಂದರ ಬೆಲೆ ರೂ.1999ರಿಂದ ಆರಂಭವಾಗಲಿದೆ.

ಶಿವಮೊಗ್ಗದಿಂದ ಮಧ್ಯಾಹ್ನ 1.55ಕ್ಕೆ ಸ್ಟಾರ್ ಏರ್ ಸಂಸ್ಥೆಯ ವಿಮಾನ ಸಂಚಾರವನ್ನು ಪ್ರಾರಂಭಿಸಿ, ಮಧ್ಯಾಹ್ನ 2.45ರ ಸುಮಾರಿಗೆ ಗೋವಾವನ್ನು ತಲುಪುತ್ತದೆ. ಇವೆರೆಡು ನಗರಗಳ ನಡುವಿನ ಪ್ರಯಾಣದ ಅವಧಿ ಕೇವಲ 50 ನಿಮಿಷಗಳು. ಗೋವಾದಿಂದ ಮಧ್ಯಾಹ್ನ 3.15ಕ್ಕೆ ಹೊರಡುವ ವಿಮಾನವು 4.15ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಇಲ್ಲಿಯೂ ರೂ.1999 ಟಿಕೆಟ್ ದರವಿದೆ.

Shivamogga: ಬೆಂಗಳೂರು, ತಿರುಪತಿ ಸೇರಿ ಈ ನಗರಗಳಿಗೆ ವಿಮಾನದಲ್ಲೇ ಹೋಬಹುದು.. ಟಿಕೆಟ್ ದರವು ಕಮ್ಮಿ!

ಶಿವಮೊಗ್ಗ - ಹೈದರಾಬಾದ್ ಮಧ್ಯೆಯೂ ಸ್ಟಾರ್ ಏರ್ ವಿಮಾನ ಓಡಾಟವನ್ನು ನಡೆಸುತ್ತದೆ. ಹೈದರಾಬಾದ್ ನಿಂದ ಬೆಳಗ್ಗೆ 9.30ಕ್ಕೆ ಹೊರಡುವ ವಿಮಾನವು 10:35ಕ್ಕೆ ಶಿವಮೊಗ್ಗಕ್ಕೆ ಬರಲಿದೆ. ಇಲ್ಲಿಂದ ಸಂಜೆ 4:30 ರಿಂದ ಹೊರಡುವ ವಿಮಾನ, 5.35ಕ್ಕೆ ಹೈದರಾಬಾದ್ ತಲುಪುತ್ತದೆ. ಪ್ರಯಾಣದ ಅವಧಿ 1 ಗಂಟೆ 5 ನಿಮಿಷಯಿದೆ. ಟಿಕೆಟ್ ಬೆಲೆ ರೂ.1999 ಇದ್ದು, ಸೀಟುಗಳ ಲಭ್ಯತೆ ಆಧಾರದ ಮೇಲೆ ವ್ಯತ್ಯಯವಾಗಬಹುದು.

ಶಿವಮೊಗ್ಗದಿಂದ ಈ ನಗರಗಳಿಗೆ ವಿಮಾನಯಾನ ಸೇವೆಯಿರುವುದರಿಂದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅದೇ ಶಿವಮೊಗ್ಗದಿಂದ ಬೆಂಗಳೂರು, ತಿರುಪತಿ, ಗೋವಾಗೆ ರಸ್ತೆ ಮುಖಾಂತರ ತಲುಪಬೇಕೆಂದರೆ ಹೆಚ್ಚಿನ ಸಮಯಾವಕಾಶ ಬೇಕು. ಸೋಗಾನೆಯಲ್ಲಿರುವ ಕುವೆಂಪು ವಿಮಾನ ನಿಲ್ದಾಣ ಶಿವಮೊಗ್ಗ ನಗರದಿಂದ 8.8 ಕಿ.ಮೀ, ಭದ್ರಾವತಿಯಿಂದ 8.2 ಕಿ.ಮೀ ಅಂತರದಲ್ಲಿದೆ.

ಈ ವಿಮಾನ ನಿಲ್ದಾಣದಲ್ಲಿ ಇಲ್ಲಿನ ಸಿಬ್ಬಂದಿ, ಗಂಟೆಗೆ ಬರೋಬ್ಬರಿ 300 ಪ್ರಯಾಣಿಕರನ್ನು ನಿಭಾಯಿಸುವಷ್ಟು ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡ ಸುಸಜ್ಜಿತವಾಗಿದೆ. ಉಡಾನ್ ಯೋಜನೆಯಡಿ ಕೇಂದ್ರ ಸರ್ಕಾರ 662.38 ಎಕರೆ ಪ್ರದೇಶದಲ್ಲಿ ರೂ.450 ಕೋಟಿ ವ್ಯಯಿಸಿ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ಮಿಸಿದೆ. ಕೆಂಪೇಗೌಡ ಏರ್‌ಪೋರ್ಟ್‌ (Kempegowda International Airport) ನಂತರ, ರಾಜ್ಯದ ಅತಿ ಉದ್ದದ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 737, ಏರ್‌ಬಸ್ A320ನಂತಹ ದೊಡ್ಡ ವಿಮಾನಗಳನ್ನು ಲ್ಯಾಂಡ್ ಮಾಡಬಹುದು. ಇನ್ನು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದೇಶ, ವಿದೇಶಗಳಿಗೆ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಏರ್‌ಪೋರ್ಟ್‌ ಮೇಲೆ ಒತ್ತಡ ಕಡಿಮೆ ಮಾಡಲು ತುಮಕೂರು ಸಮೀಪ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಕೆಲವೇ ದಿನಗಳ ಹಿಂದೆ ವರದಿಯಾಗಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, January 13, 2024, 15:10 [IST]
English summary
Flight from shivamogga to bangalore hyderabad tirupati goa ticket price very low
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+